New Trend: ಬೈಕ್ ಟ್ಯಾಂಕ್ ಮೇಲೆ ಕುಳಿತು ತಬ್ಬಿಕೊಂಡು ಸವಾರಿ ಮಾಡುವ ಹೊಸ ಟ್ರೆಂಡ್
ಇದು ಸೋಷಿಯಲ್ ಮೀಡಿಯಾ ಕಾಲ, ಯಾವುದು ಯಾವಾಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವುದು ಎಂದು ಹೇಳಲಾಗುವುದಿಲ್ಲ, ಸೋಷಿಯಲ್ ಮೀಡಿಯಾಗಳ ಮೂಲಕ ಅನೇಕರು ಸ್ಟಾರ್ ಗಳಾಗುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಚಿತ್ರ ವಿಚಿತ್ರ ಟ್ರೆಂಡ್ ಗಳು ಪ್ರಾರಂಭಿಸುತ್ತಾರೆ. ನಂತರ ಇತರರು ಕೂಡ ಅದೇ ರೀತಿಯ ವೀಡಿಯೊಗಳನ್ನು ಮಾಡುತ್ತಾರೆ
ಇತ್ತೀಚೆಗೆ ಬೈಕ್ ಫ್ಯೂಯಲ್ ಟ್ಯಾಂಕ್ ಮೇಲೆ ಹುಡುಗಿಯರು ಕುಳಿತುಕೊಂಡು ಸವಾರಿ ಮಾಡುವುದು ಬಾರೀ ಟ್ರೆಂಡ್ ಆಗಿದೆ. ಇನ್ನು ಕೆಲವರು ಬೈಕ್ ಟ್ಯಾಂಕ್ ಮೇಲೆ ಕೂರಿಸಿ ರೋಮಾನ್ಸ್ ಮಾಡುವ ವಿಡಿಯೋ ಕೂಡ ವೈರಲ್ ಆಗಿದೆ. ಇನ್ನು ಬೈಕಿನ ಟ್ಯಾಂಕ್ ಮೇಲೆ ಕುಳಿತು ಪ್ರಿಯಕರನ್ನು ತಬ್ಬಿಕೊಂಡು ಸವಾರಿ ಮಾಡಿ ರೀಲ್ ಮಾಡಲು ಪ್ರಾರಂಭವಾಗಿದೆ, ನಟಿ ತೇಜಸ್ವಿ ಪ್ರಕಾಶ್ ಅವರು ಬೈಕ್ ಟ್ಯಾಂಕ್ ಮೇಲೆ ಕುಳಿತು ವೀಡಿಯೊ ಮಾಡಿದ್ದಾರೆ.

ಇದೇ ರೀತಿ ಹೆಲ್ಮೆಟ್ ಧರಿಸದೇ ಪ್ರಿಯಕರನ ಜೊತೆ ತಬ್ಬಿಕೊಂಡು ಸವಾರಿ ಮಾಡಿದವರಿಗೆ ಪೊಲೀಸರು ದಂಡವನ್ನು ವಿಧಿಸಿದ್ದರು. ಇದೀಗ ಸೆಲೆಬ್ರಿಟಿಗಳು ಸಹ ಅದೇ ರೀತಿ ಮಾಡುತ್ತಿರುವುದು ಕಂಡುಬಂದಿದೆ. ಅನೇಕ ಮರಾಠಿ ಚಲನಚಿತ್ರಗಳು ಮತ್ತು ಹಿಂದಿ ಸೀರಿಸ್ ಗಳಲ್ಲಿ ನಟಿಸಿರುವ ತೇಜಸ್ವಿ ಪ್ರಕಾಶ್, ರಾಯಲ್ ಎನ್‌ಫೀಲ್ಡ್ ಬೈಕ್‌ನ ಇಂಧನ ಟ್ಯಾಂಕ್ ಮೇಲೆ ಕುಳಿತಉ ಯುವಕನ ತಬ್ಬಿಕೊಂಡು ಸವಾರಿ ಮಾಡಿದ್ದಾರೆ.
ತೇಜಸ್ವಿ ಪ್ರಕಾಶ್ ಅವರ ಈ ವೀಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಸಿನಿಮಾ ಚಿತ್ರೀಕರಿಸುತ್ತಿರುವ ಸಾಧ್ಯತೆಗಳು ಕೂಡ ಇದೆ. ನಟಿಯ ಜೊತೆ ಇರುವ ಯುವಕನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ತೇಜಸ್ವಿ ಬೈಕ್ ಮೇಲೆ ಕುಳಿತು ಸ್ವಲ್ಪ ದೂರ ಸಾಗಿದರು. ಒಂದು ಸೇತುವೆಯ ಮೇಲೆ ಬೈಕಿನಲ್ಲಿ ಸಾಗಿದರು. ಈ ಸ್ಥಳದ ಬಗ್ಗೆಯು ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.
ಬೈಕಿನಲ್ಲಿ ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಇದು ಹೊಸ ವೀಡಿಯೊ ಅಲ್ಲ. ಆದರೆ, ಇಬ್ಬರ ಮೇಲೆ ಪೊಲೀಸರು ಕ್ರಮ ಕೈಗೊಂಡಿಲ್ಲವಂತೆ. ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ದೃಶ್ಯ ಚಿತ್ರೀಕರಣಕ್ಕೆ ಪೂರ್ವಾನುಮತಿ ಪಡೆದಿರುವ ಸಾಧ್ಯತೆ ಇದೆ. ಅನೇಕ ಯುವಕರು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಲು ಕಾರುಗಳು ಮತ್ತು ಮೋಟಾರ್‌ಸೈಕಲ್‌ಗಳಲ್ಲಿ ವಿಚಿತ್ರ ಸಾಹಸಗಳನ್ನು ಮಾಡಲು ಪ್ರಯತ್ನಿಸುತ್ತಾರೆ.
ಸಾರ್ವಜನಿಕ ರಸ್ತೆಗಳಲ್ಲಿ ಈ ಸಾಹಸಗಳನ್ನು ಪ್ರದರ್ಶಿಸುವ ಅಪಾಯ ಮತ್ತು ಕಾನೂನುಬಾಹಿರವಾಗಿದೆ. ಇಂತಹ ಅಪಾಯಕಾರಿ ಸಾಹಸಗಳನ್ನು ಪ್ರೋತ್ಸಾಹಿಸಬಾರದು. ಈ ರೀತಿಯಾಗಿ ವಾಹನ ಚಲಾಯಿಸುವುದರಿಂದ ಖುದ್ದಾಗಿ ಆ ಜೋಡಿಯ ಪ್ರಾಣ ಅಪಾಯದಲ್ಲಿ ಇರುವುದಲ್ಲದೇ, ಅಪಘಾತವೇನಾದರೂ ಸಂಭವಿಸಿದರೆ ಇತರರ ಪ್ರಾಣಕ್ಕೂ ಇವರು ಹೊಣೆಯಾಗಬೇಕಾಗುತ್ತದೆ. ಇದೇ ಕಾರಣದಿಂದಾಗಿ ಈ ರೀತಿಯಾದ ಅಪಾಯಕಾರಿ ಸ್ಟಂಟ್‌ಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ನಿಷೇಧ ಮಾಡಿರುವುದು.
2015ರಲ್ಲಿ ಇದೇ ರೀತಿಯ ಘಟನೆಯೊಂದು ಗೋವಾದಲ್ಲಿ ವರದಿಯಾಗಿತ್ತು. ಈ ಘಟನೆಯು ಆಗಿನ ಕಾಲದಲ್ಲೇ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡಿತ್ತು. ಮಧ್ಯ ಪ್ರದೇಶ ಮೂಲದ ಜೋಡಿಯೊಂದು ಮೇಲೆ ತಿಳಿಸಿದ ಜೋಡಿಗಳ ರೀತಿಯಲ್ಲಿಯೇ ಮೋಟಾರ್ ಸೈಕಲನ್ನು ಓಡಿಸುತ್ತಾ ಹೋಗುತ್ತಿದ್ದುದು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿತ್ತು. ವಿಡಿಯೋ ವೈರಲ್ ಆದ ಕೂಡಲೇ ಗೋವಾ ಪೊಲೀಸರು ಸ್ವಯಂ ಪ್ರೇರಿತವಾಗಿ ಆ ಜೋಡಿಯ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ನಂತರ ಪೊಲೀಸರು ಜೊಡಿಯನ್ನು ಬಂಧಿಸಿ ಅವರಿಂದ 1000 ರೂಗಳ ದಂಡವನ್ನು ಕಟ್ಟಿಸಿಕೊಂಡಿದ್ದರು. ಇನ್ನು ರಾಜಸ್ಥಾನದ ಇತ್ತೀಚಿನ ಘಟನೆ ಗಮನಿಸಿದರೆ ವಿಡಿಯೋದಲ್ಲಿ ಯುವಕ ಮತ್ತು ಯುವತಿ ಇಬ್ಬರೂ ಸಹ ಯಾವುದೇ ರೀತಿಯ ಹೆಲ್ಮೆಟ್‌ಗಳನ್ನು ಧರಿಸದೇ ಬೈಕಿನಲ್ಲಿ ಸವಾರಿ ಮಾಡಿದ್ದಾರೆ. ಇನ್ನು ಕರ್ನಾಟದಲ್ಲಿ ಇದೇ ರೀತಿ ಘಟನೆಗಳಿ ನಡೆದಿದ್ದು, ವೀಡಿಯೊಗಳು ಬಾರೀ ವೈರಲ್ ಆಗಿತ್ತು.


Click it and Unblock the Notifications