ಹೊಸ ಸೈಕಲ್‌ ಖರೀದಿಸಿದ ಬಹುಭಾಷಾ ನಟಿ ತ್ರಿಷಾ ಕೃಷ್ಣನ್

ಅದ್ಭುತ ನಟನೆಯಿಂದ ಸಿನಿರಸಿಕರ ಮನಗೆದ್ದ ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ಇತ್ತೀಚೆಗೆ ಹೊಸ ಸೈಕಲ್ ಅನ್ನು ಖರೀದಿಸಿದ್ದಾರೆ. ನಟಿ ತ್ರಿಷಾ ಅವರು ಸೈಕ್ಲಿಂಗ್ ತನ್ನ ಹೊಸ ಹವ್ಯಾಸ ಎಂದು ಸೈಕಲ್‌ ಏರಿದ ಚಿತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಹೊಸ ಸೈಕಲ್‌ ಖರೀದಿಸಿದ ಬಹುಭಾಷಾ ನಟಿ ತ್ರಿಷಾ ಕೃಷ್ಣನ್

ಸೈಕ್ಲಿಂಗ್ ತಮ್ಮ ಮೋಡ್ ಅನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. ಇದು ನನ್ನ ಹೊಸ ವಿಷಯ ಎಂದು ಟ್ವಿಟರ್ ನಲ್ಲಿ ಹಂಚಿಕೊಂಡ ಚಿತ್ರದಲ್ಲಿ ಬರೆದುಕೊಂಡಿದ್ದಾರೆ.ಈ ಚಿತ್ರದ ಕೆಳಗೆ ಕೆಲವರು ಪೆಟ್ರೋಲ್ ಬೆಲೆ ಏರಿಕೆಯಿಂದ ಸೈಕಲ್ ಖರೀದಿಸಿರುವುದ ಎಂದು ಪ್ರಶ್ನಿಸಿದ್ದಾರೆ. ಅದ್ಭುತ ನಟನೆ ಮತ್ತು ಬೋಲ್ಡ್​​ ಲುಕ್​​ನಿಂದಲೇ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿರುವ ತ್ರಿಷಾ ಕೃಷ್ಣನ್ ಕಾಲಿವುಡ್​​​​ ಮಾತ್ರವಲ್ಲದೆ ಸ್ಯಾಂಡಲ್ ವುಡ್, ಟಾಲಿವುಡ್​​, ಬಾಲಿವುಡ್​​​​ ಸೇರಿದಂತೆ ಮಾಲಿವುಡ್​ನಲ್ಲಿಯೂ ಮಿಂಚಿದ ನಟಿ.

ಹೊಸ ಸೈಕಲ್‌ ಖರೀದಿಸಿದ ಬಹುಭಾಷಾ ನಟಿ ತ್ರಿಷಾ ಕೃಷ್ಣನ್

16ನೇ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ತ್ರಿಷಾ ಕೃಷ್ಣನ್ ತಮಿಳು ಚಿತ್ರರಂಗದಲ್ಲಿ ತಮ್ಮ ಅದ್ಬುತ ನಟನೆಯಿಂದ ಚಿತ್ರರಸಿಕ ಮನಗೆದ್ದಿದ್ದರು. ಅಲ್ಲದೇ ತನ್ನ ಪ್ರತಿಭೆಯಿಂದಲೇ ಭಾರತೀಯ ಚಿತ್ರರಂಗದಲ್ಲಿಯೇ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಹೊಸ ಸೈಕಲ್‌ ಖರೀದಿಸಿದ ಬಹುಭಾಷಾ ನಟಿ ತ್ರಿಷಾ ಕೃಷ್ಣನ್

ಸದ್ಯ ತ್ರಿಷಾ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ. ಮಾತ್ರವಲ್ಲ ಬ್ಯಾಕ್​ ಟು ಬ್ಯಾಕ್​ ಹಿಟ್ ಸಿನಿಮಾಗಳಲ್ಲಿ ನಟನೆಯನ್ನು ಮಾಡಿದ ನಟಿ. 2010ರಲ್ಲಿ ಬಿಡುಗಡೆಯಾಗಿದ್ದ ವಿನೈತಾಂಡಿ ವರುವಯಾ ಎನ್ನುವ ತಮಿಳು ಚಿತ್ರವನ್ನು ನೋಡಿದರೆ ಈ ನಟಿಯನ್ನು ಮರೆಯಲು ಸಾಧ್ಯವಿಲ್ಲ. ಕಾಲಿವುಡ್​ ಚಿತ್ರರಂಗದಲ್ಲಿ ರೋಮ್ಯಾಂಟಿಕ್​ಗೆ ಹೊಸ ಭಾಷ್ಯ ಬರೆದ ಈ ಸಿನಿಮಾದಲ್ಲಿ ಅದ್ಭುತವಾಗಿ ತ್ರಿಷಾ ನಟಿಸಿದ್ದರು.

ಹೊಸ ಸೈಕಲ್‌ ಖರೀದಿಸಿದ ಬಹುಭಾಷಾ ನಟಿ ತ್ರಿಷಾ ಕೃಷ್ಣನ್

ಇನ್ನು ಬಾಲಿವುಡ್​ ಸೆಲೆಬ್ರಿಟಿಗಳು ತಮ್ಮ ಫಿಟ್ನೆಸ್​ಗಾಗಿ ಸಾಕಷ್ಟು ಕಸರತ್ತುಗಳನ್ನು ಮಾಡುತ್ತಾರೆ. ಅದಕ್ಕಾಗಿ ಹಲವು ಸ್ಟಾರ್ ಗಳು ಸೈಕ್ಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ಹಲವು ಬಾಲಿವುಡ್ ಸೆಲಬ್ರಿಟಿಗಳು ಸೈಕ್ಲಿಂಗ್ ಮಾಡುವ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು,

ಹೊಸ ಸೈಕಲ್‌ ಖರೀದಿಸಿದ ಬಹುಭಾಷಾ ನಟಿ ತ್ರಿಷಾ ಕೃಷ್ಣನ್

ಇತ್ತೀಚೆಗೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಮತ್ತು ಅವರ ತಂಗಿ ಫಿಟ್ ಆಗಿರಲು ಸೈಕಲ್‌ಗಳಲ್ಲಿ ಮುಂಬೈನ ಲೋಖಂಡ್ವಾಲಾದಲ್ಲಿ ಕೆಲ ಕಾಲ ಸುತ್ತಾಡಿದ್ದಾರೆ. ಆದರೆ ಅಷ್ಟರಲ್ಲಿ ಪಾಪರಾಜಿಗಳು ಇವರನ್ನು ಗುರುತಿಸಿ ಸುತ್ತಮುತ್ತ ಓಡಾಡುತ್ತಿದ್ದರಿಂದ ಅವರಿಗೆ ಅಸಮಾಧನಾವಾಗಿ ಮನೆಗೆ ಹಿಂತಿರುಗಿದರು.

ಹೊಸ ಸೈಕಲ್‌ ಖರೀದಿಸಿದ ಬಹುಭಾಷಾ ನಟಿ ತ್ರಿಷಾ ಕೃಷ್ಣನ್

ಇನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೈಕಲ್‌ನೊಂದಿಗೆ ನಿಂತಿರುವ ಚಿತ್ರದಲ್ಲಿ ಕೊನೆಗೂ 100ರ ಗಡಿ ದಾಟಿಯೇ ಬಿಟ್ಟಿತು. ನಿಮ್ಮ ಆರೋಗ್ಯ ನೀವು ಕಾಪಾಡಿಕೊಳ್ಳಿ ಎಂದು ಸನ್ನಿ ಲಿಯೋನ್‌ ಟ್ವೀಟ್ ಮಾಡಿದ್ದರು. ಇನ್ನು ಸನ್ನಿ ಲಿಯೋನ್‌ ಈ ಟ್ವೀಟ್‌ಗೆ ಕಾಮೆಂಟ್ ಮಾಡಿರುವ ಹಲವರು ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಮಾತನಾಡಿ ಸರ್ಕಾರವನ್ನು ಟೀಕಿಸಿರುವ ಸನ್ನಿ ಧೈರ್ಯಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಹೊಸ ಸೈಕಲ್‌ ಖರೀದಿಸಿದ ಬಹುಭಾಷಾ ನಟಿ ತ್ರಿಷಾ ಕೃಷ್ಣನ್

ಒಟ್ಟಿನಲ್ಲಿ ಹಲವು ಸೆಲಬ್ರಿಟಿಗಳು ಇತ್ತೀಚೆಗೆ ಸೈಕಲ್ ಖರೀದಿಸುತ್ತಿದ್ದಾರೆ. ಸೈಕಲ್ ತುಳಿಯುವುದರಿಂದ ಹಲವು ಪ್ರಯೋಜನಗಳಿವೆ, ದೇಹದ ಹಲವಾರು ಭಾಗಗಳಿಗೆ ವ್ಯಾಯಾಮ ಸಿಗುವುದು ಮತ್ತು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಸೈಕ್ಲಿಂಗ್ ನಡೆಸಿದರೆ ಒತ್ತಡ, ಅತಿಯಾದ ತೂಕ, ಅಧಿಕ ಕೊಲೆಸ್ಟ್ರಾಲ್ ಅಥವಾ ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸಬಹುದಾಗಿದೆ.

ಹೊಸ ಸೈಕಲ್‌ ಖರೀದಿಸಿದ ಬಹುಭಾಷಾ ನಟಿ ತ್ರಿಷಾ ಕೃಷ್ಣನ್

ಕೈಗೆಟಕುವ ದರದಲ್ಲಿ ಸಿಗುವಂತಹ ಸೈಕಲ್ ಪರಿಸರ ಸ್ನೇಹಿ ಕೂಡ ಆಗಿದೆ. ಅಲ್ಲದೇ ಇಂಧನ ಬೆಲೆ ಏರಿಕೆಯ ಬಳಿಕ ಹೆಚ್ಚೆಚ್ಚು ಬಳಸಲು ಪ್ರೋತ್ಸಾಹಿಸಲಾಗುತ್ತಿದೆ. ಸೈಕಲ್ ತುಳಿಯುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

Most Read Articles

Kannada
English summary
Trisha Krishnan Picks Up Cycling As New Hobby. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X