ಕಣಿವೆಯಿಂದ ಉರುಳಿಬಿದ್ದ ಕಾರು, ಖ್ಯಾತ ನಟಿ ವೈಭವಿ ಇನ್ನಿಲ್ಲ: ಸಾಯುವ ಮುನ್ನ ಜೀವ ಉಳಿಸಿಕೊಳ್ಳಲು ಶತಪ್ರಯತ್ನ
ಸಾರಾಭಾಯಿ Vs ಸಾರಾಭಾಯಿ ಟಿವಿ ಶೋನಲ್ಲಿ 'ಮಲ್ಲಿಗೆ' ಪಾತ್ರದ ಮೂಲಕ ಸಖತ್ ಫೇಮಸ್ ಆಗಿದ್ದ ಕಿರುತೆರೆ ನಟಿ ವೈಭವಿ ಉಪಾಧ್ಯಾಯ (30) ಕಾರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಹಿಮಾಚಲ ಪ್ರದೇಶದ ಬಂಜಾರ್‌ನಲ್ಲಿ ಈ ದುರ್ಘಟನೆ ನಡೆದಿದೆ. ಸಾಯುವ ಮೊದಲು ಜೀವ ಉಳಿಸಿಕೊಳ್ಳಲು ನಟಿ ಶತಪ್ರಯತ್ನ ನಡೆಸಿದ್ದರು.
ನಟಿ ವೈಭವಿ ಉಪಾಧ್ಯಾಯ ತಮ್ಮ ಭಾವಿ ಪತಿಯೊಂದಿಗೆ ಟೊಯೊಟಾ ಫಾರ್ಚುನರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಬಂಜಾರ್ ಬಳಿಯ ಸಿಧ್ವಾ ಎಂಬಲ್ಲಿ ಕಡಿದಾದ ತಿರುವಿನಲ್ಲಿ ಕಾರು ನಿಯಂತ್ರಣ ಕಳೆದುಕೊಂಡು, 50 ಅಡಿ ಆಳದ ಕಣಿವೆಯಲ್ಲಿ ಬಿದ್ದಿದೆ. ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ವೈಭವಿ ಬದುಕುಳಿಯಲಿಲ್ಲ.

ಮೃತ ನಟಿ ವೈಭವಿ, ಟ್ರಾವೆಲ್ ಅನ್ನು ಹೆಚ್ಚು ಇಷ್ಟಪಡುತ್ತಾರೆ. ಅದಕ್ಕಾಗಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದರು ಎಂದು ಹೇಳಲಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಲು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಾಕ್ಷಿ ವರ್ಮಾ, 'ಕಾರು ಕಣಿವೆಯಲ್ಲಿ ಉರುಳಿಬಿದ್ದ ತಕ್ಷಣ ನಟಿ, ಕಾರಿನ ಕಿಟಕಿ ಗಾಜು ಒಡೆದು ಹೊರಬರಲು ಪ್ರಯತ್ನಿಸಿದ್ದಾರೆ. ಆಗ ಅವರ ತಲೆಗೆ ತೀವ್ರ ಗಾಯಗಳಾಯಿತು' ಎಂದು ಹೇಳಿದ್ದಾರೆ.
ವೈಭವಿ ಅವರ ಮರಣೋತ್ತರ ಪರೀಕ್ಷೆಯನ್ನು ನಡೆಸಿದ ಪೊಲೀಸರು ಸಂಬಂಧಿಕರಿಗೆ ಮೃತದೇಹದ ಹಸ್ತಾಂತರಿಸಿದ್ದಾರೆ. ಮುಂಬೈನಲ್ಲಿ ಇಂದು ಅಂತ್ಯಕ್ರಿಯೆಗಳು ನಡೆಯಲಿದ್ದು, ಯುವ ನಟಿಯ ದಾರುಣ ಅಂತ್ಯಕ್ಕೆ ವಿವಿಧ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಸದ್ಯ, ಹಿಮಾಚಲ ಪೊಲೀಸರು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ಕೆಲವೇ ದಿನಗಳಲ್ಲಿ ನಿಖರವಾದ ಕಾರಣ ತಿಳಿಯಲಿದೆ.
ಹಿಮಾಚಲ ಪ್ರದೇಶ ಸೇರಿದಂತೆ ಇತರೆ ಯಾವುದೇ ರಾಜ್ಯದ ಕಣಿವೆ ಪ್ರದೇಶದ ಪ್ರಯಾಣಿಸಬೇಕಾದರೆ, ಮುನ್ನೆಚ್ಚರಿಕೆ ಅಗತ್ಯ. ಇಂತಹ ರಸ್ತೆಗಳಲ್ಲಿ ಹೆಚ್ಚಿನ ತಿರುವುಗಳು ಇರುತ್ತವೆ. ನೀವು ವಾಹನಗಳನ್ನು ತೀರಾ ಅಂಚಿನಲ್ಲಿ ಓಡಿಸಬೇಡಿ. ಇಲ್ಲಿ ಕೊಂಚ ಎಚ್ಚರ ತಪಿದ್ರು ಅಪಾಯವಾಗುವುದು ಖಚಿತ. ಈ ರಸ್ತೆಗಳಲ್ಲಿ ನಿರ್ದಿಷ್ಟ ವೇಗಮಿತಿಯಲ್ಲಿ ವಾಹನ ಚಲಾಯಿಸಬೇಕೆಂದು ಸಂಬಂಧಪಟ್ಟ ಇಲಾಖೆಗಳಿಂದ ಫಲಕಗಳನ್ನು ಹಾಕಲಾಗಿರುತ್ತದೆ. ಅದನ್ನೇ ಅನುಸರಿಸಿ.
ಮುಖ್ಯವಾಗಿ ಇಂತಹ ರಸ್ತೆಯಲ್ಲಿ ತಿರುವುಗಳ ಹೆಚ್ಚಿರುವುದರಿಂದ ಮುಂದೆ ಬರುವ ವಾಹನಗಳು ಒಂದೊಮ್ಮೆ ಹಾರ್ನ್ ಮಾಡುವುದಿಲ್ಲ ನೀವು ಹಾರ್ನ್ ಮಾಡುವುದನ್ನು ಮರೆಯಬೇಡಿ. ಇದಿಷ್ಟೇ ಅಲ್ಲದೆ, ಸಾಮಾನ್ಯ ಹೆದ್ದಾರಿಗಳಲ್ಲಿ ವಾಹನ ಚಲಾಯಿಸುವುದು ಕಷ್ಟ. ಅಂತಹದರಲ್ಲಿ ಈ ರೋಡ್ ಗಳಲ್ಲಿ ಯಾವುದೇ ಕಾರಣಕ್ಕೂ ಮಧ್ಯಪಾನ, ಫೋನ್ ನಲ್ಲಿ ಮಾತನಾಡಿಕೊಂಡು ಕಾರು ಸೇರಿದಂತೆ ಯಾವುದೇ ವಾಹನಗಳನ್ನು ಓಡಿಸಬೇಡಿ. ತಪ್ಪದೇ ಸೀಟ್ ಬೆಲ್ಟ್ ಧರಿಸಿರಿ.
ಇನ್ನು, ಕಡಿದಾದ ತಿರುವಿನಲ್ಲಿ ಕಾರು ನಿಯಂತ್ರಣ ಕಳೆದುಕೊಂಡ ಪರಿಣಾಮ ಬಾಳಿ ಬದುಕಬೇಕಾದ ನಟಿ ವೈಭವಿ ಉಪಾಧ್ಯಾಯ ಇಹಲೋಕ ತ್ಯಜಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಕೆಲವೇ ದಿನಗಳಲ್ಲಿ ಅಪಘಾತಕ್ಕೆ ಕಾರಣವೇನೆಂಬುದು ಗೊತ್ತಾಗಲಿದೆ. ಯಾರೇ ಆಗಲಿ ವಾಹನ ಚಲಾಯಿಸುವಾಗ ಸಂಚಾರಿ ನಿಯಮವನ್ನು ಪಾಲಿಸಿದರೆ ದೊಡ್ಡ ಮಟ್ಟದಲ್ಲಿ ಅಪಘಾತವಾಗುವುದನ್ನು ತಪ್ಪಿಸಬಹುದು. ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications