ಅಡಾಲ್ಫ್ ಹಿಟ್ಲರ್ - ವಾಯುಯಾನವಾಗಿ ಪ್ರಚಾರ ನಡೆಸಿದ ಮೊದಲ ರಾಜಕಾರಣಿ
ಜರ್ಮನಿಯ 'ನಾಜಿ' ಪಕ್ಷವೆಂದೇ ಖ್ಯಾತವಾದ ನ್ಯಾಶನಲ್ ಸೋಷಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿಯ ನೇತಾರನಾಗಿರುವ ನಿರಕುಂಶವಾದಿ ಆಡಳಿತವಾಧಿ ಅಡಾಲ್ಪ್ ಹಿಟ್ಲರ್ 1933ರಿಂದ 1945ರ ವರೆಗೆ ಜರ್ಮನಿಯ ಚಾನ್ಸೆಲರ್ ಆಗಿ ಮತ್ತು 1934ರಿಂದ 1945ರ ವರೆಗೆ ರಾಷ್ಟ್ರದ ಮುಖ್ಯಸ್ಥನಾಗಿ ಆಡಳಿತ ನಡೆಸಿದ್ದನು. ತನ್ನ ಮಾತುಗಾರಿಕೆ ಹಾಗೂ ಚತುರ ರಾಜಕೀಯದಿಂದ ಹಿಟ್ಲರ್ ಭಾರಿ ಜನಬೆಂಬಲ ಗಿಟ್ಟಿಸಿಕೊಂಡನು.
ಕಾರ್ಲ್ ಬೆಂಝ್ - ದಿ ಗಾಡ್ ಆಫ್ ಆಟೋಮೊಬೈಲ್ಸ್
ಏಕಪಕ್ಷೀಯ ಸರ್ವಾಧಿಕಾರ ಧೋರಣೆಯನ್ನು ಸ್ಥಾಪಿಸಿದ ಹಿಟ್ಲರ್ ಎರಡನೇ ಮಹಾಯುದ್ಧದ ಪ್ರಧಾನ ರುವಾರಿ ಎನ್ನಲಾಗುತ್ತಿದೆ. ಅಮೆರಿಕ ಸೇರಿದ ಮಿತ್ರ ರಾಷ್ಟ್ರಗಳ ವಿರುದ್ಧ ಜಪಾನ್ ಮತ್ತು ಇಟಲಿಯ ನೆರವಿನಿಂದ ಆಕ್ಸಿಸ್ ಶಕ್ತಿಯನ್ನು ಹಿಟ್ಲರ್ ರೂಪಿಸಿದ್ದರು.

ವಾಯುಯಾನವಾಗಿ ಚುನಾವಣಾ ಪ್ರಚಾರ ಮಾಡಿದ ಮೊದಲ ರಾಜಕಾರಣಿ ಎಂಬ ಖ್ಯಾತಿಗೆ ಹಿಟ್ಲರ್ ಪಾತ್ರವಾಗಿದ್ದಾರೆ. 1932ರಲ್ಲಿ ಜರ್ಮನಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಹಿಟ್ಲರ್ವಿಮಾನವನ್ನು ಬಳಕೆ ಮಾಡಿದ್ದರು.

1933ರಲ್ಲಿ ಜರ್ಮನಿಯ ಚಾನ್ಸೆಲರ್ ಆದ ಹಿಟ್ಲರ್ ತಮ್ಮ ಮೊದಲ ಖಾಸಗಿ ವಿಮಾನವಾದ 'ಜಂಕರ್ಸ್ ಜು 52/3Zಎಂ' ಖರೀದಿಸಿದ್ದರು.

ಹಿಟ್ಲರ್ ಖಾಸಗಿ ವಿಮಾನವು ಡಿ-2600 ಎಂಬ ದಾಖಲಾತಿ ನಂಬರ್ ಪಡೆದಿತ್ತು.

ಬಿಎಂಡಬ್ಲ್ಯು 132 ಪರವಾನಗಿಯ ಪ್ರಾಟ್ ಮತ್ತು ವಿಟ್ನಿ ರೇಡಿಕಲ್ ಎಂಜಿನ್ ಗಳಿಂದ ಇದು ನಿಯಂತ್ರಿಸಲ್ಪಡುತ್ತಿದೆ.

ಹಿಟ್ಲರ್ ಇದಕ್ಕೆ ಮೊದಲ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿರುವ ಜರ್ಮನಿಯ ಮೊದಲ ನುರಿತ ಪೈಲಟ್ ಮ್ಯಾಕ್ಸ್ ಇಮ್ಮೆಲ್ ಮ್ಯಾನ್ (Max Immelmann) ಅವರ ಗೌರವಾರ್ಥವಾಗಿ ಇಮ್ಮೆಲ್ ಮ್ಯಾನ್ II ಎಂಬ ಹೆಸರನ್ನಿಟ್ಟಿದ್ದರು.

ವಿಮಾನದಲ್ಲಿ ಹಿಟ್ಲರ್ ನೆಚ್ಚಿನ ಜಾಗವಾಗಿರುವ ಬಲಬದಿಯಲ್ಲಿ ಆಸನ ವ್ಯವಸ್ಥೆ ಒದಗಿಸಲಾಗಿತ್ತು. ಜೊತೆಗೆ ಮಾಪಕ, ಏರ್ ಸ್ಪೀಡ್ ಇಂಡಿಕೇಟರ್, ಗಡಿಯಾರ ಮುಂತಾದ ವ್ಯವಸ್ಥೆಗಳನ್ನು ಕೊಡಲಾಗಿತ್ತು.

ಹಿಟ್ಲರ್ ಖಾಸಗಿ ವಿಮಾನವನ್ನು ನುರಿತ ಪೈಲಟ್ ಹ್ಯಾನ್ಸ್ ಬೌರ್ (Hans Baur) ನಿರ್ವಹಿಸುತ್ತಿದ್ದರು. ಹಿಟ್ಲರ್ ವೈಯಕ್ತಿಕ ಪೈಲಟ್ ಎನಿಸಿಕೊಂಡಿರುವ ಅವರು 1930ರ ದಶಕದಲ್ಲಿ ಚುನಾವಣಾ ಪ್ರಚಾರದ ವೇಳೆ ಜೊತೆಗಿದ್ದರು.

ಜಂಕರ್ಸ್ ಜು 52 ವಿಮಾನದ ಬಗ್ಗೆ ವಿವರಿಸುವುದಾದ್ದಲ್ಲಿ 1931ರಿಂದ 1952ರ ಅವಧಿಯ ವರೆಗೆ ನಿರ್ಮಾಣಗೊಂಡಿತ್ತು. 1930ರಿಂದ 1940ರ ಅವಧಿಯಲ್ಲಿ ನಾಗರಿಕ ಮತ್ತು ಮಿಲಟರಿ ಅವಶ್ಯಕತೆಗಳಿಗಾಗಿ ಬಳಕೆ ಮಾಡಲಾಗಿತ್ತು.

ಚುನಾವಣಾ
ಪ್ರಚಾರದ ವೇಳೆ ರೈಲಿಗಿಂತಲೂ ವಿಮಾನ ಸೇವೆ ಹೆಚ್ಚು ಅನುಕೂಲ ಎಂಬುದನ್ನು ಮನಗಂಡಿರುವ ಹಿಟ್ಲರ್ ವಿಮಾನಯಾನಕ್ಕೆ ಒತ್ತು ಕೊಟ್ಟಿದ್ದರು.

ಚುನಾವಣಾ ಪ್ರದೇಶಗಳಿಗೆ ಅತಿ ವೇಗವಾಗಿ ತಲುಪುವ ಮೂಲಕ ಸಮಯದ ಲಾಭದ ಮುಖಾಂತರ ಪ್ರಚಾರಕ್ಕೆ ಆವೇಗ ನೀಡುವುದು ಹಿಟ್ಲರ್ ಉದ್ದೇಶವಾಗಿತ್ತು.

ಬಳಿಕ ಜರ್ಮನಿಯಲ್ಲಿ ನಿರಂಕುಶ ಪ್ರಭುತ್ವದ ಆಡಳಿತವನ್ನು ಮೆರೆದ ಹಿಟ್ಲರ್ 50 ರಷ್ಟು ವಿಮಾನಗಳನ್ನು ತಮ್ಮದಾಗಿಸಿಕೊಂಡಿದ್ದರು.

ಕೊನೆಗೆ 1939ರಲ್ಲಿ ಪೈಲಟ್ ಬೌರ್ ನಿರ್ದೇಶನದಂತೆ ಇಮ್ಮೆಲ್ ಮ್ಯಾನ್ II ವಿಮಾನದ ಬದಲಿಯಾಗಿ ಫೋಕ್ ವೂಲ್ಪ್ ಎಫ್ ಡಬ್ಲ್ಯು 200 ಕೊಂಡಾರ್ ವಿಮಾನವನ್ನು ಬಳಕೆ ಮಾಡಿದ್ದರು. ಆದರೂ ಎರಡನೇ ಮಹಾಯುದ್ಧಕ್ಕೂ ಸಹಾಯಿ ವಿಮಾನವಾಗಿ ಉಳಿದುಕೊಂಡಿತ್ತು.

ಜಗತ್ತನ್ನೇ ಆಳಿದ ನಿರಂಕುಶ ಪ್ರಭುಗಳ ನಿರ್ಭೀತಿಯ ಕಾರುಗಳು

ವಾಹನಗಳಿಗೆ ಸಂಬಂಧಿಸಿದ 10 ರೋಚಕ ಸತ್ಯಗಳು


Click it and Unblock the Notifications








