ನೇಪಾಳ ದೊರೆಗೆ ಸರ್ವಾಧಿಕಾರಿ ಹಿಟ್ಲರ್ ಉಡುಗೊರೆ
ಹಳತು ಅಂದರೆ ಹಾಗೆನೇ. ಸುಮ್ಮನಿದ್ದರೆ ಮೂಲೆ ಸೇರುತ್ತದೆ. ಕೆದಕಿದರೆ ಕಥೆ ಹೇಳುತ್ತದೆ. ವಿಂಟೇಜ್ ಕಾರುಗಳು ಸಹ ಕೇವಲ ಸೌಂದರ್ಯ ಮಾತ್ರವಲ್ಲದೇ ಯಾವುದೋ ಇತಿಹಾಸಕ್ಕೆ ಸಾಕ್ಷಿಯಾಗಿರುತ್ತದೆ.
ನಾಥೂರಾಂ ಗೋಡ್ಸೆ ಕಾರು ನೋಡಿದಾಗ ಯಾವುದೋ ಇತಿಹಾಸ ಕಣ್ಣೆದುರಿಗೆ ಬರುತ್ತದೆ. ವಿಂಟೇಜ್ ಕಾರನ್ನು ಯಾರು ಬಳಸಿದ್ದರು ಎನ್ನುವುದರ ಮೇಲೆ ಹಳೆಯ ಕಾರುಗಳು ದುಬಾರಿ ಬೆಲೆಗೆ ಬಿಕರಿಯಾಗುತ್ತವೆ.
ಸೌಂದರ್ಯ, ದೀರ್ಘಾಯಸ್ಸು ಮತ್ತು ಕ್ಲಾಸಿಕ್ ಲುಕ್ಕಿನಿಂದ ಗಮನಸೆಳೆಯುವ 1939ರ ಮರ್ಸಿಡಿಸ್ ಬೆಂಝ್ ಕಾರನ್ನು ನಾಜಿದೊರೆ ಅಡಾಲ್ಫ್ ಹಿಟ್ಲರ್ ನೇಪಾಳದ ರಾಜನೊಬ್ಬನಿಗೆ ಉಡುಗೊರೆಯಾಗಿ ನೀಡಿದ್ದನು.
ನೇಪಾಳದ ರಾಜ ತ್ರಿಭುವನ್(ಜಿತೇಂದ್ರನ ತಾತ)ಗೆ ಹಿಟ್ಲರ್ ಈ ಕಾರನ್ನು ಹಿಟ್ಲರ್ ಗಿಫ್ಟ್ ನೀಡಿದ್ದ. ಈ ಕಾರು ಸದ್ಯ ಕಾಠ್ಮಂಡು ಎಂಜಿನಿಯರಿಂಗ್ ಕಾಲೇಜೊಂದರಲ್ಲಿದೆ. ಶೀಘ್ರದಲ್ಲಿ ಇದು ಅಲ್ಲಿನ ರಾಯಲ್ ಮ್ಯೂಸಿಯಂಗೆ ಪ್ರಯಾಣ ಬೆಳೆಸಲಿದೆಯಂತೆ.
ಈ ಕಾರನ್ನು ಒರಿಜಿನಲ್ ಕಂಡಿಷನಿಗೆ ತರಲು ಬೇಕಾದಷ್ಟು ಹಣ ತಮ್ಮಲ್ಲಿಲ್ಲವೆಂದು ಆ ಎಂಜಿನಿಯರಿಂಗ್ ಸಂಸ್ಥೆ ಹೇಳಿದೆ. ಇತಿಹಾಸ ಸಾರುವ ಇಂತಹ ಕಾರುಗಳನ್ನು ಉಳಿಸಿಕೊಂಡರೆ ಮುಂದಿನ ಪೀಳಿಗೆಯವರಿಗೆ ತೋರಿಸಬಹುದು. (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications









