ಮನಸೊರೆಗೈದ ವಿಮಾನ ಶೈಲಿಯ ವಿಂಟೇಜ್ ವಾಹನ

By Nagaraja

ಶತಮಾನಕ್ಕೂ ಹೆಚ್ಚು ಇತಿಹಾಸವನ್ನು ಹೊಂದಿರುವ ವಾಹನ ಲೋಕದಲ್ಲಿ ಅನೇಕ ಚಿತ್ರ-ವಿಚಿತ್ರಗಳ ವಾಹನಗಳ ನಿರ್ಮಾಣವಾಗಿದೆ. ಇವುಗಳಲ್ಲಿ ಹಲವು ವಾಹನಗಳು ವಿಶಿಷ್ಟತೆಯನ್ನು ಮೂಡಿಸಿದರೂ ವಾಹನ ತಂತ್ರಜ್ಞಾನದ ಅಭಿವೃದ್ಧಿಗೆ ಪೂರಕವಾಗಿದೆ.

ವಾಹನ ಕ್ಷೇತ್ರದಲ್ಲಿ ವಿಭಿನ್ನತೆ ಸೃಷ್ಟಿಸಿರುವ ಇಂತಹದೊಂದು ವಾಹನವನ್ನು ನಾವಿಂದು ಪರಿಚಯಿಸಲಿದ್ದೇವೆ. ಇದರ ಹೆಸರೇ 'ಸಮ್ ಥಿಂಗ್'. ಮೊದಲ ನೋಟದಲ್ಲೇ ಇದು ವಾಹನ ಪ್ರೇಮಿಗಳ ಮನಸೊರೆಗೈಯುತ್ತಿದೆ.

ಮನಸೊರೆಗೈದ ವಿಮಾನ ಶೈಲಿಯ ವಿಂಟೇಜ್ ವಾಹನ

1962ರ ಕಾಲಘಟ್ಟದಲ್ಲಿ ಡ್ರೈ ಲೇಕ್ ರೇಸ್ ನಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಜೆರ್ರಿ ಸಿಲ್ವರ್ ಸ್ಟೈನ್, ಜೂಲಿಯನ್ ಡೋಟಿ ಮತ್ತು ಅರ್ನಾಲ್ಡ್ ಬಿರ್ನರ್ ಎಂಬವರು ಸೇರಿ ಸಮ್ ಥಿಂಗ್ ವಾಹನವನ್ನು ನಿರ್ಮಿಸಿದ್ದರು.

ಮನಸೊರೆಗೈದ ವಿಮಾನ ಶೈಲಿಯ ವಿಂಟೇಜ್ ವಾಹನ

ಬಳಿಕ 1989ರ ವರೆಗೆ ರೇಸ್ ಗಳಲ್ಲಿ ಭಾಗವಹಿಸಿರುವ ಈ ವಾಹನವು, ವಾಹನ ಲೋಕದ ಬೆಲೆಬಾಳುವ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು, ಪ್ರಸ್ತುತ ಹರಾಜಿಗಿಡಲಾಗಿದೆ.

ಮನಸೊರೆಗೈದ ವಿಮಾನ ಶೈಲಿಯ ವಿಂಟೇಜ್ ವಾಹನ

ವಿಮಾನ ಶೈಲಿಯ ವಿನ್ಯಾಸ ಪ್ರಮುಖ ಆಕರ್ಷಣೆಯಾಗಿದ್ದು, ವಾಹನದೊಳಗೂ ಬೇಕಾದಷ್ಟು ಸ್ಥಳಾವಕಾಶವನ್ನು ಕೊಡಲಾಗಿದೆ. ವಿಮಾನ ಶೈಲಿಯ ಕಾಕ್ ಪಿಟ್ ಸಹ ಇದರಲ್ಲಿದೆ.

ಮನಸೊರೆಗೈದ ವಿಮಾನ ಶೈಲಿಯ ವಿಂಟೇಜ್ ವಾಹನ

ಇವೆಲ್ಲದರ ಹೊರತಾಗಿ ಇದೊಂದು ನೈಜ ರೇಸ್ ಕಾರು ಎಂಬುದು ಗಮನಾರ್ಹವೆನಿಸುತ್ತದೆ.

ಮನಸೊರೆಗೈದ ವಿಮಾನ ಶೈಲಿಯ ವಿಂಟೇಜ್ ವಾಹನ

ವಿಂಟೇಜ್ ವಾಹನಗಳ ಸಾಲಿಗೆ ಸೇರಿರುವ ಸಮ್ ಥಿಂಗ್ ವಾಹನದಲ್ಲಿ ಸಮಕಾಲೀನ ಸುರಕ್ಷಾ ವೈಶಿಷ್ಟ್ಯಗಳಿರುವುದಿಲ್ಲ. ಅಂದರೆ ಏರ್ ಬ್ಯಾಗ್ ಆಗಲಿ, ಮಿರರ್ ಅಥವಾ ಹೆಡ್ ಲೈಟ್ ಗಳ ಸೇವೆ ಇದರಲ್ಲಿಲ್ಲ.

ಮನಸೊರೆಗೈದ ವಿಮಾನ ಶೈಲಿಯ ವಿಂಟೇಜ್ ವಾಹನ

ಎರಡನೇ ಮಹಾಯುದ್ಧದಿಂದ ಸ್ಪೂರ್ತಿ ಪಡೆದ ಟ್ಯಾಂಕ್ ರಚನೆಯನ್ನು ನೀಡಲಾಗಿದೆ. ವರ್ಧಿತ ಟ್ಯೂಬ್ ಲರ್ ಫ್ರೇಮ್ ಜೊತೆಗೆ ಪ್ಯಾನೆಲ್ ಗಳಿರಲಿದೆ.

ಮನಸೊರೆಗೈದ ವಿಮಾನ ಶೈಲಿಯ ವಿಂಟೇಜ್ ವಾಹನ

1989ನೇ ಇಸವಿಯ ಬಳಿಕ ಓಡಾಟ ನಡೆಸದಿದ್ದರೂ ಈಗಲೂ ತನ್ನ ಮಹತ್ವವನ್ನು ಕಾಪಾಡಿಕೊಂಡಿರುವ ವಾಹನವು ಇಲ್ಲಿಯ ವರೆಗೂ ಅಸ್ತಿತ್ವವನ್ನು ಕಾಪಾಡುತ್ತಾ ಬಂದಿದೆ.

ಮನಸೊರೆಗೈದ ವಿಮಾನ ಶೈಲಿಯ ವಿಂಟೇಜ್ ವಾಹನ

ಸದ್ಯ ಕಾರನ್ನು ಹರಾಜಿಡಲಾಗಿದ್ದು, ಭಾರಿ ಮೊತ್ತವನ್ನು ಸಂಗ್ರಹಿಸುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

Most Read Articles

Kannada
English summary
This Lake Racer From Outer Space Is for Sale
Story first published: Wednesday, August 3, 2016, 17:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X