ಕಾರುಗಳಲ್ಲಿರುವ ಸನ್‌ರೂಫ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

By Manoj Bk

ಈಗ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ ಕಾರುಗಳು ಆಧುನಿಕ ಫೀಚರ್'ಗಳನ್ನು ಹೊಂದಿವೆ. ಇದರ ಭಾಗವಾಗಿ ಹಲವು ಕಾರುಗಳಲ್ಲಿ ಕಾರುಗಳಲ್ಲಿ ಸನ್ ರೂಫ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಹೊಸ ಕಾರುಗಳಲ್ಲಿ ಎಲೆಕ್ಟ್ರಾನಿಕ್ ಚಾಲಿತ ಸನ್ ರೂಫ್ ಗಳನ್ನು ಕಾರುಗಳಲ್ಲಿ ನೀಡಲಾಗುತ್ತಿದೆ.

ಕಾರುಗಳಲ್ಲಿರುವ ಸನ್‌ರೂಫ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಹಳೆಯ ಕಾರುಗಳಲ್ಲಿ ಮ್ಯಾನುಯಲ್ ಆಗಿ ಕಾರ್ಯನಿರ್ವಹಿಸುವ ಸನ್ ರೂಫ್ ಗಳನ್ನು ನೀಡಲಾಗುತ್ತಿತ್ತು. ಸನ್‌ ರೂಫ್‌ಗಳು ವಿವಿಧ ಆಕಾರಗಳು, ಗಾತ್ರ ಹಾಗೂ ಶೈಲಿಗಳನ್ನು ಹೊಂದಿವೆ. ಕಾರು ಖರೀದಿಸ ಬಯಸುವವರು ಸನ್ ರೂಫ್ ಇರುವ ಕಾರುಗಳನ್ನು ಖರೀದಿಸುವುದು ಉತ್ತಮವೇ ಅಥವಾ ಸನ್ ರೂಫ್ ಇಲ್ಲದ ಕಾರುಗಳನ್ನು ಖರೀದಿಸುವುದು ಉತ್ತಮವೇ ಎಂಬ ಗೊಂದಲದಲ್ಲಿರುತ್ತಾರೆ.

ಕಾರುಗಳಲ್ಲಿರುವ ಸನ್‌ರೂಫ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಈ ಲೇಖನದಲ್ಲಿ ಕಾರುಗಳಲ್ಲಿರುವ ಸನ್ ರೂಫ್ ಗಳಿಂದಾಗುವ ಅನುಕೂಲಗಳೇನು, ಅನಾನುಕೂಲಗಳೇನು ಎಂಬುದನ್ನು ನೋಡೋಣ. ಮೊದಲಿಗೆ ಕಾರುಗಳಲ್ಲಿ ಸನ್ ರೂಫ್ ಇರುವುದರ ಪ್ರಯೋಜನಗಳನ್ನು ನೋಡೋಣ.

ಕಾರುಗಳಲ್ಲಿರುವ ಸನ್‌ರೂಫ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಸನ್ ರೂಫ್ ಇದ್ದರೆ ಕಾರು ಆಕರ್ಷಕ ನೋಟವನ್ನು ಪಡೆಯುತ್ತದೆ. ಇದು ಮೊದಲ ಅನುಕೂಲ. ಸನ್ ರೂಫ್ ಕಾರು ಚಾಲನೆ ವೇಳೆ ತಾಜಾ ಗಾಳಿಯು ಕ್ಯಾಬಿನ್ ಒಳಗೆ ಹೋಗಲು ಅನುವು ಮಾಡಿಕೊಡುತ್ತದೆ. ಇದರಿಂದ ಮನಸ್ಸು ಪ್ರಶಾಂತವಾಗಿರುತ್ತದೆ.

ಕಾರುಗಳಲ್ಲಿರುವ ಸನ್‌ರೂಫ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಸನ್ ರೂಫ್ ತೆರೆಯುವುದರಿಂದ ಕ್ಯಾಬಿನ್'ನಾದ್ಯಂತ ಗಾಳಿಯಾಡಲಿದೆ. ಸನ್ ರೂಫ್ ತೆರೆಯುವುದರಿಂದ ಉಂಟಾಗುವ ಶಬ್ದವು ವಿಂಡೋಗಳನ್ನು ತೆರೆಯುವುದರಿಂದ ಉಂಟಾಗುವ ಶಬ್ದಕ್ಕಿಂತ ಕಡಿಮೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.

ಕಾರುಗಳಲ್ಲಿರುವ ಸನ್‌ರೂಫ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಸನ್ ರೂಫ್ ಕಾರಿನ ರೂಫ್ ಮೇಲೆ ಇರುವ ಗಾಜಿನ ರಚನೆಯಾಗಿದೆ. ಮಳೆ ಬಂದಾಗ ಹನಿಗಳು ರೂಫ್ ಮೇಲೆ ಬೀಳುವುದನ್ನು ನೋಡುವುದು ಮನಸ್ಸಿಗೆ ಆಹ್ಲಾದಕರ ಅನುಭವವನ್ನು ನೀಡುತ್ತದೆ.

ಕಾರುಗಳಲ್ಲಿರುವ ಸನ್‌ರೂಫ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಹಾಗೆಯೇ ಸನ್ ರೂಫ್ ಹೊಂದುವುದು ಕಾರಿನ ಮೌಲ್ಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಕಾರುಗಳನ್ನು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಿದರೆ ಉತ್ತಮ ಬೆಲೆ ಪಡೆಯುವ ಸಾಧ್ಯತೆಗಳಿವೆ. ಇನ್ನು ಕಾರಿನಲ್ಲಿ ಸನ್ ರೂಫ್ ಇರುವುದರಿಂದ ಎದುರಾಗುವ ಸಮಸ್ಯೆಗಳನ್ನು ನೋಡೋಣ.

ಕಾರುಗಳಲ್ಲಿರುವ ಸನ್‌ರೂಫ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಕೆಲವರು ಸನ್ ರೂಫ್ ಇರುವ ಹೊಸ ಕಾರನ್ನು ಖರೀದಿಸಿದ ಕೆಲವು ದಿನಗಳ ನಂತರ ಕಾರಿನಲ್ಲಿ ಸನ್ ರೂಫ್ ಇದೆ ಎಂಬುದನ್ನು ಮರೆತು ಬಿಡುತ್ತಾರೆ. ಪ್ರತಿಯೊಬ್ಬರೂ ಹಾಗೆ ಮಾಡುತ್ತಾರೆ ಎಂದು ಹೇಳಲು ಸಾಧ್ಯವಾಗದಿದ್ದರೂ ಬಹುತೇಕ ಜನ ಹಾಗೆ ಮಾಡುತ್ತಾರೆ.

ಕಾರುಗಳಲ್ಲಿರುವ ಸನ್‌ರೂಫ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಹೆಚ್ಚು ತಾಪಮಾನವಿರುವ ನಗರಗಳಲ್ಲಿ ಸನ್ ರೂಫ್ ಬಳಕೆ ತುಂಬಾ ಕಡಿಮೆ. ಹೆಚ್ಚಿನ ವೇಗದಲ್ಲಿ ಪ್ರಯಾಣಿಸುವಾಗ ಸನ್ ರೂಫ್ ತೆರೆದಿದ್ದರೆ ಅದು ಕಾರಿನ ಏರೋ ಡೈನಾಮಿಕ್ ಮೇಲೆ ಪರಿಣಾಮ ಬೀರುತ್ತದೆ.

ಕಾರುಗಳಲ್ಲಿರುವ ಸನ್‌ರೂಫ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಸನ್ ರೂಫ್ ಹೆಚ್ಚು ತೂಕವನ್ನು ಹೊಂದಿರುತ್ತದೆ. ಸನ್ ರೂಫ್ ಬಳಕೆಯು ಕಾರಿನ ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಸಾಮಾನ್ಯ ಸನ್ ರೂಫ್ ಗಳು 25 ರಿಂದ 35 ಕೆ.ಜಿ ತೂಕವನ್ನು ಹೊಂದಿರುತ್ತವೆ.

ಕಾರುಗಳಲ್ಲಿರುವ ಸನ್‌ರೂಫ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಇದೇ ವೇಳೆ ಪನೋರಾಮಿಕ್ ಸನ್ ರೂಫ್ ನ ಸುಮಾರು 90 ಕೆ.ಜಿ ಗಳಷ್ಟು ತೂಕವನ್ನು ಹೊಂದಿರುತ್ತದೆ. ಸನ್ ರೂಫ್ ಗಳನ್ನು ಗಾಜುಗಳಿಂದ ತಯಾರಿಸಲಾಗಿರುತ್ತದೆ. ಇದರಿಂದ ಸನ್ ರೂಫ್ ಗಳು ಒಡೆಯುವ ಸಾಧ್ಯತೆಗಳು ಹೆಚ್ಚು.

ಕಾರುಗಳಲ್ಲಿರುವ ಸನ್‌ರೂಫ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಸನ್ ರೂಫ್ ಒಡೆದು ಹೋದರೆ ಅದನ್ನು ಸರಿಪಡಿಸಲು ಹೆಚ್ಚು ವೆಚ್ಚವಾಗುತ್ತದೆ. ಕಾರು ಹಳೆಯದಾದಂತೆ ಸನ್ ರೂಫ್ ಸೋರಿಕೆಯಾಗುವ ಸಾಧ್ಯತೆಗಳಿರುತ್ತವೆ. ಇದರಿಂದ ಮಳೆಗಾಲದಲ್ಲಿ ಹಾಗೂ ಕಾರನ್ನು ತೊಳೆಯುವ ಸಮಯದಲ್ಲಿ ಸಮಸ್ಯೆಗಳು ಉದ್ಭವಿಸಬಹುದು.

ಕಾರುಗಳಲ್ಲಿರುವ ಸನ್‌ರೂಫ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಕಾರು ಹೊಸದಾಗಿದ್ದಾಗ ಮಾತ್ರ ಸನ್ ರೂಫ್ ಯಾವುದೇ ತೊಂದರೆಗಳಿಲ್ಲದೆ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. ಕಾರು ಹಳೆಯದಾದಂತೆ ಸನ್ ರೂಫ್ ಸಮಸ್ಯೆಗಳನ್ನು ಉಂಟು ಮಾಡಬಹುದು. ಇಂತಹ ಸಂದರ್ಭದಲ್ಲಿ ಕಾರನ್ನು ಮಾರಾಟ ಮಾಡಲು ಬಯಸಿದರೆ ಸನ್ ರೂಫ್ ನಿಂದಾಗಿ ಸಮಸ್ಯೆಗಳು ಎದುರಾಗುತ್ತವೆ.

ಕಾರುಗಳಲ್ಲಿರುವ ಸನ್‌ರೂಫ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಸನ್ ರೂಫ್ ಅನುಕೂಲ ಹಾಗೂ ಅನಾನುಕೂಲಗಳನ್ನು ಹೊಂದಿದೆ. ಸನ್ ರೂಫ್ ಇರುವ ಕಾರನ್ನು ಖರೀದಿಸ ಬೇಕೇ ಅಥವಾ ಬೇಡವೇ ಎಂಬುದು ಸಂಪೂರ್ಣವಾಗಿ ನಿಮ್ಮ ಅಗತ್ಯಗಳನ್ನು ಅವಲಂಬಿಸಿದೆ.

Most Read Articles

Kannada
English summary
Advantages and disadvantages of sunroof feature in cars details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X