ಚಲಿಸುತ್ತಿರುವ ಟ್ರಕ್ ಮೇಲೆ ಶಕ್ತಿಮಾನ್‌ನಂತೆ ಸಾಹಸ: ಬಿದ್ದು ಕೈ-ಕಾಲು ಮುರಿದುಕೊಂಡ ವಿಡಿಯೋ ವೈರಲ್

ಭಾರತದಲ್ಲಿ ಸ್ಟಂಟ್‌ ಮಾಡುವವರೇನೂ ಕಡಿಮೆಯಿಲ್ಲ, ಹುಡಿಕಿದರೆ ಏರಿಯಾಗೊಬ್ಬರಂತೆ ಸಿಗುತ್ತಾರೆ. ಆದರೆ ಇವರ್ಯಾರು ಸುರಕ್ಷತೆಗಳನ್ನು ನೋಡಿಕೊಳ್ಳುವುದಿಲ್ಲ. ರಾಜಧಾನಿ ಬೆಂಗಳೂರಿನಲ್ಲೂ ವರ್ಷಕ್ಕೆ ನೂರಾರು ಮಂದಿ ಯುವಕರು ರೇಸ್‌ ಆಡುವುದು, ವೀಲಿಂಗ್ ನಂತಹ ಸ್ಟಂಟ್‌ ಮಾಡುವ ಮೂಲಕ ಜೀವ ಕಳೆದುಕೊಂಡಿರುವ ಉದಾಹರಣೆಗಳು ಇವೆ.

 ಚಲಿಸುತ್ತಿರುವ ಟ್ರಕ್ ಮೇಲೆ ಶಕ್ತಿಮಾನ್‌ನಂತೆ ಸಾಹಸ: ಬಿದ್ದು ಕೈ-ಕಾಲು ಮುರಿದುಕೊಂಡ ವಿಡಿಯೋ ವೈರಲ್

ಹಾಗಾಗಿಯೇ ವೀಲಿಂಗ್ ಮಾಡುವುದು ಹಾಗೂ ಅಧಿಕೃತ ಆದೇಶವಿಲ್ಲದೇ ರೇಸಿಂಗ್ ನಡೆಸುವುದು ಕಂಡುಬಂದರೆ ಸರ್ಕಾರ ಕಠಿಣ ಕ್ರಮಗಳಿಗೆ ಆದೇಶಿಸಿದೆ. ಆದರೂ ಇದ್ಯಾವುದನ್ನೂ ಲೆಕ್ಕಿಸದೆ ಸ್ಟಂಟ್‌ಗಳು ಮಾಡುವುದು ಆಗ್ಗಾಗೆ ಬೆಳಕಿಗೆ ಬರುತ್ತಲೇ ಇರುತ್ತವೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಯುವಕನೊಬ್ಬ ಟ್ರಕ್ ಮೇಲೆ ನಿಂತು ಸ್ಟಂಟ್ ಮಾಡಲು ಹೋಗಿ ಬಿದ್ದು ಗಂಭೀರ ಗಾಯಗಳಾಗಿರುವ ವಿಡಿಯೋ ವೈರಲ್ ಆಗಿದೆ.

 ಚಲಿಸುತ್ತಿರುವ ಟ್ರಕ್ ಮೇಲೆ ಶಕ್ತಿಮಾನ್‌ನಂತೆ ಸಾಹಸ: ಬಿದ್ದು ಕೈ-ಕಾಲು ಮುರಿದುಕೊಂಡ ವಿಡಿಯೋ ವೈರಲ್

ಚಲಿಸುವ ಲಾರಿ ಮೇಲೆ ಶಕ್ತಿಮಾನ್ ಸ್ಟೈಲ್‌ನಲ್ಲಿ ಸಾಹಸ

ಎಡಿಸಿಪಿ ಶ್ವೇತಾ ಶ್ರೀವಾಸ್ತವ ಅವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಶರ್ಟ್‌ಲೆಸ್ ವ್ಯಕ್ತಿಯೊಬ್ಬ ಚಲಿಸುವ ಟ್ರಕ್ ಮೇಲೆ ನಿಂತು ಸಾಹಸಗಳನ್ನು ಪ್ರದರ್ಶಿಸುವುದನ್ನು ಕಾಣಬಹುದು. ಈ ಘಟನೆ ಯುಪಿಯ ಲಕ್ನೋದ ಗೋಮತಿ ನಗರದಲ್ಲಿ ನಡೆದಿದೆ. ಮೊದಲು ಟ್ರಕ್ ಮೇಲೆ ನಿಂತು ಸೂಪರ್‌ಹೀರೋ ಸ್ಟೈಲ್‌ನಲ್ಲಿ ನಿಂತಿರುವುದು ಕಂಡುಬರುತ್ತದೆ.

 ಚಲಿಸುತ್ತಿರುವ ಟ್ರಕ್ ಮೇಲೆ ಶಕ್ತಿಮಾನ್‌ನಂತೆ ಸಾಹಸ: ಬಿದ್ದು ಕೈ-ಕಾಲು ಮುರಿದುಕೊಂಡ ವಿಡಿಯೋ ವೈರಲ್

ನಂತರ ಅವನು ಡಿಪ್ಸ್ ಹೊಡೆದು ಎದ್ದು ನಿಲ್ಲುತ್ತಾನೆ. ಬಳಿಕ ನಿಲ್ಲಲಾಗದೇ ತನ್ನ ಬ್ಯಾಲೆನ್ಸ್ ಕಾಪಾಡಿಕೊಳ್ಳಲು ಹೆಣಗಾಡುತ್ತಾ ನೇರವಾಗಿ ನಿಲ್ಲುತ್ತಾನೆ. ವಿಡಿಯೋ ಕೊನೆಗೊಳ್ಳುವ ಮೊದಲು ತನ್ನ ಬ್ಯಾಲೆನ್ಸ್ ಕಳೆದುಕೊಂಡು ಜಾರಿ ಬೀಳುವುದನ್ನು ಕಾಣಬಹುದು. ವಿಡಿಯೋದಲ್ಲಿ ಚಾಲನೆಯಲ್ಲಿರುವ ಟ್ರಕ್ ಕೂಡ ಹೆಚ್ಚು ವೇಗವಾಗಿ ಚಲಿಸುತ್ತಿರುವುದನ್ನು ಕಾಣಬಹುದು.

 ಚಲಿಸುತ್ತಿರುವ ಟ್ರಕ್ ಮೇಲೆ ಶಕ್ತಿಮಾನ್‌ನಂತೆ ಸಾಹಸ: ಬಿದ್ದು ಕೈ-ಕಾಲು ಮುರಿದುಕೊಂಡ ವಿಡಿಯೋ ವೈರಲ್

ಕಟ್ ಮಾಡಿದ್ರೆ ಮುಂದಿನ ಷಾಟ್‌ನಲ್ಲಿ ಬಿದ್ದು ಮೈ ಮುರಿದುಕೊಂಡ ಯುವಕ ನೆಲದ ಮೇಲೆ ಮಲಗಿರುವುದನ್ನು ನೋಡಬಹುದು. ಎಡಿಸಿಪಿ ಶ್ವೇತಾ ಶ್ರೀವಾಸ್ತವ್ ಅವರು ಮೂಲತಃ ತಮ್ಮ ಟ್ವಿಟರ್ ಪೇಜ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಸಾರ್ವಜನಿಕರಿಗೆ ಅನಾವಶ್ಯಕ ಸ್ಟಂಟ್‌ಗಳನ್ನು ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

 ಚಲಿಸುತ್ತಿರುವ ಟ್ರಕ್ ಮೇಲೆ ಶಕ್ತಿಮಾನ್‌ನಂತೆ ಸಾಹಸ: ಬಿದ್ದು ಕೈ-ಕಾಲು ಮುರಿದುಕೊಂಡ ವಿಡಿಯೋ ವೈರಲ್

ಲಕ್ನೋದ ಗೋಮತಿನಗರದಲ್ಲಿ ನಿನ್ನೆ ರಾತ್ರಿಯ ದೃಶ್ಯವಿದು - ಶಕ್ತಿಮಾನ್‌ನಂತೆ ಸ್ಟಂಟ್ ಮಾಡಲು ಹೋದವನು ಇದೀಗ ಕೆಲವು ದಿನಗಳವರೆಗೆ ಕುಳಿತುಕೊಳ್ಳಲು ಕೂಡ ಸಾಧ್ಯವಿಲ್ಲ! ಎಚ್ಚರಿಕೆ: ದಯವಿಟ್ಟು ಇಂತಹ ಮಾರಣಾಂತಿಕ ಸಾಹಸಗಳನ್ನು ಮಾಡಬೇಡಿ!' ಎಂದು ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.

ವಿಡಿಯೋಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, 'ಶಕ್ತಿಮಾನ್ ಸೆ ಗಂಗಾಧರ್ ಬನ್ ಗಯೇ' ಎಂದು ಒಬ್ಬ ಕಮೆಂಟ್ ಮಾಡಿದರೆ. 'ಮೇಡಂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ' ಎಂದು ಮತ್ತೊಬ್ಬರು ಬರೆದಿದ್ದಾರೆ. ಇನ್ನೂ ಕೆಲವರು ಶಕ್ತಿಮಾನ್ ಹಾಡು ಹಿನ್ನಲೆಯಲ್ಲಿ ಬರುತ್ತಿರುವುದು ಮಜವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

 ಚಲಿಸುತ್ತಿರುವ ಟ್ರಕ್ ಮೇಲೆ ಶಕ್ತಿಮಾನ್‌ನಂತೆ ಸಾಹಸ: ಬಿದ್ದು ಕೈ-ಕಾಲು ಮುರಿದುಕೊಂಡ ವಿಡಿಯೋ ವೈರಲ್

27 ಮಂದಿಯನ್ನು ಆಟೋದಲ್ಲಿ ಕೂರಿಸಿಕೊಂಡು ಸಿಕ್ಕಿಬಿದ್ದ

ಆಟೋ ರಿಕ್ಷಾದಲ್ಲಿ ಅಬ್ಬಬ್ಬಾ ಅಂದ್ರೆ ಎಷ್ಟು ಜನ ಕುಳಿತುಕೊಳ್ಳಬಹುದು? ಮೂರು ಅಥವಾ ನಾಲ್ಕು, ಏಕೆಂದರೆ ಆಟೋದಲ್ಲಿ ಚಾಲಕನನ್ನು ಹೊರತುಪಡಿಸಿ ಮೂರು ಜನರಿಗೆ ಕುಳಿತುಕೊಳ್ಳಲು ಅವಕಾಶವಿರುತ್ತದೆ. ಆದರೆ ಇಲ್ಲೊಬ್ಬ ಭೂಪ 27 ಮಂದಿಯನ್ನು ಕೂರಿಸಿಕೊಂಡಿದ್ದಾನೆ.

 ಚಲಿಸುತ್ತಿರುವ ಟ್ರಕ್ ಮೇಲೆ ಶಕ್ತಿಮಾನ್‌ನಂತೆ ಸಾಹಸ: ಬಿದ್ದು ಕೈ-ಕಾಲು ಮುರಿದುಕೊಂಡ ವಿಡಿಯೋ ವೈರಲ್

ಒಬ್ಬರ ಹಿಂದೆ ಒಬ್ಬರಂತೆ ಆಟೋದಿಂದ ಹೊರಬಂದಾಗ ಪೊಲೀಸರೇ ದಂಗಾಗಿಬಿಟ್ಟಿದ್ದಾರೆ. ಉತ್ತರ ಪ್ರದೇಶದ ಫತೇಪುರ್‌ನ ಬಿಂಡ್ಕಿ ಕೊಟ್ವಾಲಿಯಲ್ಲಿ, ಲಾಲೌಲಿ ಮೂಲಕ ವೇಗವಾಗಿ ಆಟೋ ಹಾದು ಹೋಗುತ್ತಿರುವುದನ್ನು ಕಂಡ ಪೊಲೀಸರು, ಆಟೋ ನಿಲ್ಲಿಸುವಂತೆ ಸೂಚಿಸಿದರೂ ಆಟೋ ನಿಲ್ಲಲಿಲ್ಲ. ಇದರಿಂದ ಪೊಲೀಸರೇ ಓಡಿ ಬಂದು ಆಟೋ ಚಾಲಕನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದ್ದಾರೆ.

ಆಗ ಆಟೋ ಚಾಲಕ ನಿಯಮಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪೊಲೀಸರು ಪ್ರಯಾಣಿಕರನ್ನು ಕೆಳಗಿಳಿಸಲು ಹೇಳಿದಾಗ ಒಂದು ಕ್ಷಣ ಪೊಲೀಸರೇ ದಂಗಾಗಿದ್ದಾರೆ. ಆಟೋದಲ್ಲಿ ಮಕ್ಕಳು, ದೊಡ್ಡವರು ಸೇರಿ ಒಟ್ಟು 27 ಮಂದಿಯಿದ್ದು, ಕೆಲವರು ಸೀಟಿನ ಮೇಲೆ ಕುಳಿತಿದ್ದರೆ ಇನ್ನು ಕೆಲವರು ಒಬ್ಬರ ಮೇಲೊಬ್ಬರು ಕುಳಿತಿದ್ದರು.

 ಚಲಿಸುತ್ತಿರುವ ಟ್ರಕ್ ಮೇಲೆ ಶಕ್ತಿಮಾನ್‌ನಂತೆ ಸಾಹಸ: ಬಿದ್ದು ಕೈ-ಕಾಲು ಮುರಿದುಕೊಂಡ ವಿಡಿಯೋ ವೈರಲ್

ಆಟೊ ಸವಾರ ಹಾಗೂ ಆತನ ಸಂಬಂಧಿಕರು ಬಿಂಡ್ಕಿಯಲ್ಲಿ ಬಕ್ರೀದ್ ಪ್ರಾರ್ಥನೆ ಸಲ್ಲಿಸಿ ಮನೆಗೆ ತೆರಳುತ್ತಿರುವುದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿದು ಬಂದಿದೆ. ಕ್ರಮ ಕೈಗೊಂಡ ಪೊಲೀಸರು ಆಟೋ ರಿಕ್ಷಾವನ್ನು ವಶಪಡಿಸಿಕೊಂಡು ಠಾಣೆಗೆ ಕಳುಹಿಸಿದ್ದಾರೆ. ಸದ್ಯ ಆಟೋದಲ್ಲಿ 27 ಮಂದಿ ಕುಳಿತಿದ್ದಾದರೂ ಹೇಗೆ ಎಂದು ಆ ಭಾಗದ ಜನರು ಚರ್ಚಿಸುತ್ತಿದ್ದಾರೆ.

 ಚಲಿಸುತ್ತಿರುವ ಟ್ರಕ್ ಮೇಲೆ ಶಕ್ತಿಮಾನ್‌ನಂತೆ ಸಾಹಸ: ಬಿದ್ದು ಕೈ-ಕಾಲು ಮುರಿದುಕೊಂಡ ವಿಡಿಯೋ ವೈರಲ್

ಫತೇಪುರ್ ಪೊಲೀಸರ ಪ್ರಕಾರ, ಆಟೋ ಚಾಲಕನ ಮೇಲೆ ಕ್ರಮ ಕೈಗೊಳ್ಳುವಾಗ 11,500 ರೂ.ಗಳ ಚಲನ್ ನೀಡಲಾಗಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಸುಪ್ರೀಂ ಕೋರ್ಟ್ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಕೂಡ ಹಂಚಿಕೊಂಡಿದ್ದಾರೆ, ಇದುವರೆಗೆ 2.5 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ.

 ಚಲಿಸುತ್ತಿರುವ ಟ್ರಕ್ ಮೇಲೆ ಶಕ್ತಿಮಾನ್‌ನಂತೆ ಸಾಹಸ: ಬಿದ್ದು ಕೈ-ಕಾಲು ಮುರಿದುಕೊಂಡ ವಿಡಿಯೋ ವೈರಲ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸೋಷಿಯಲ್ ಮೀಡಿಯಾದಿಂದಾಗಿ ಇಂತಹ ಘಟನೆಗಳು ಬಹುಬೇಗ ವೈರಲ್ ಆಗುತ್ತಿವೆ. ಅದೆಷ್ಟೋ ಮಂದಿ ನಿತ್ಯ ಇಂತಹ ಘಟನೆಗಳು ಹಾಗೂ ಇವುಗಳಿಂದ ಆಗಿರುವ ಅನಾಹುತಗಳನ್ನು ನೋಡುತ್ತಿದ್ದಾರೆ. ಆದರೂ ವಾಹನಗಳಲ್ಲಿ ಇಂತಹ ಸ್ಟಂಟ್‌ಗಳನ್ನು ಮಾಡಿ ಜೀವುಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಪೊಲೀಸರು ಕೂಡ ಈ ಬಗ್ಗೆ ಕಠಿಣ ಕ್ರಮ ಕೈಗೊಂಡರೂ ಅಲ್ಲಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

Article Published On: Tuesday, July 19, 2022, 12:16 [IST]
English summary
Adventure like Shaktimaan on a moving lorry The video of him falling gone viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+