Just In
- 31 min ago
ಅನಾವರಣವಾಯ್ತು 2021ರ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಕಾರು
- 2 hrs ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 4 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 14 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
Don't Miss!
- News
ವಿಜಯನಗರ ಜಿಲ್ಲೆ; ಮೇಲುಸ್ತುವಾರಿಗೆ ಐಎಎಸ್ ಅಧಿಕಾರಿ ನೇಮಕ
- Movies
ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಣಿಪುರದಿಂದ ಸಿಂಗಾಪುರಕ್ಕೆ ಸಂಚರಿಸಲಿದೆ ಈ ಟೂರಿಸ್ಟ್ ಬಸ್
ಹರಿಯಾಣದ ಗುರುಗ್ರಾಮ ಮೂಲದ ಖಾಸಗಿ ಕಂಪನಿಯೊಂದು ಭಾರತದಿಂದ ಸಿಂಗಾಪುರಕ್ಕೆ ಬಸ್ ಸೇವೆಯನ್ನು ಆರಂಭಿಸುವ ಯೋಜನೆಯನ್ನು ಪ್ರಕಟಿಸಿದೆ. ಈ ಬಸ್ ಮೂರು ದೇಶಗಳ ಮೂಲಕ ಪ್ರಯಾಣಿಸಲಿದೆ.

ಈ ಯೋಜನೆಗೆ ಬಸ್'ನಲ್ಲಿ ಪ್ರಯಾಣ ಕೈಗೊಳ್ಳುವ ಉತ್ಸಾಹಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಡ್ವೆಂಚರ್ಸ್ ಓವರ್‌ಲ್ಯಾಂಡ್ ಕಂಪನಿಯು ಭಾರತದಿಂದ ಸಿಂಗಾಪುರಕ್ಕೆ ಬಸ್ ಸೇವೆಯನ್ನು ನೀಡಲಿದೆ. ಈ ಬಸ್ ಸೇವೆ ನವೆಂಬರ್ 14ರಂದು ಮಣಿಪುರದ ಇಂಫಾಲ್'ನಿಂದ ಆರಂಭವಾಗಲಿದೆ.

ಅಡ್ವೆಂಚರ್ಸ್ ಓವರ್‌ಲ್ಯಾಂಡ್ ಈ ಪ್ರವಾಸಕ್ಕಾಗಿ ಟಿಕೆಟ್ ಕಾಯ್ದಿರಿಸಲು ಪ್ರಯಾಣಿಕರನ್ನು ಆಹ್ವಾನಿಸುತ್ತಿದೆ. ಸಿಂಗಾಪುರಕ್ಕೆ ಪ್ರವೇಶಿಸುವ ಮುನ್ನ ಈ ಬಸ್ ಮ್ಯಾನ್ಮಾರ್, ಥೈಲ್ಯಾಂಡ್ ಹಾಗೂ ಮಲೇಷ್ಯಾಗಳಲ್ಲಿ ಸಂಚರಿಸಲಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಬಸ್ ಪ್ರಯಾಣಿಸುವ ಪ್ರಮುಖ ನಗರಗಳಲ್ಲಿ ಮ್ಯಾನ್ಮಾರ್‌ನ ಕೇಲ್, ಯಾಂಗೊನ್, ಬ್ಯಾಂಕಾಕ್ ಮತ್ತು ಥೈಲ್ಯಾಂಡ್‌ನ ಕ್ರಾಬಿ ಹಾಗೂ ಮಲೇಷ್ಯಾದ ಕೌಲಾಲಂಪುರ್'ಗಳು ಸೇರಿವೆ. ಈ ಬಸ್ ಸೇವೆ ಭಾರತದಿಂದ ಸಿಂಗಾಪುರಕ್ಕೆ ಹಾಗೂ ಸಿಂಗಾಪುರದಿಂದ ಭಾರತಕ್ಕೆ ಲಭ್ಯವಿರಲಿದೆ.

ಪ್ರತಿ ಟ್ರಿಪ್'ನಲ್ಲಿ 20 ಸೀಟುಗಳ ವ್ಯವಸ್ಥೆ ಇರಲಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ಬುಕ್ಕಿಂಗ್ ಸ್ವೀಕರಿಸಲಾಗುತ್ತದೆ. ಈ ಪ್ರಯಾಣದ ಪ್ರತಿ ಹಂತವನ್ನು ಪೂರ್ಣಗೊಳಿಸಲು ಬಸ್ ಸುಮಾರು 20 ದಿನಗಳನ್ನು ತೆಗೆದುಕೊಳ್ಳುತ್ತದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ನೀಡಲು ಈ ಬಸ್‌ನಲ್ಲಿ ಎಲ್ಲಾ ಸೌಲಭ್ಯಗಳನ್ನು ಅಳವಡಿಸಲಾಗುವುದು ಎಂದು ಅಡ್ವೆಂಚರ್ಸ್ ಓವರ್‌ಲ್ಯಾಂಡ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬಸ್ 3 ದೇಶಗಳ ಮೂಲಕ ಪ್ರಯಾಣಿಸಲಿದೆ. ಈ ಬಸ್'ನಲ್ಲಿ ಸಂಚರಿಸುವ ಪ್ರಯಾಣಿಕರು ರಸ್ತೆಯ ಮೂಲಕ ಸುಮಾರು 4,500 ಕಿ.ಮೀ ಪ್ರಯಾಣಿಸಬಹುದು. ಈ ದೂರವನ್ನು ವಿಮಾನದ ಮೂಲಕ ಕೆಲವೇ ಗಂಟೆಗಳಲ್ಲಿ ಸಂಚರಿಸಬಹುದಾದರೂ, ರಸ್ತೆ ಪ್ರಯಾಣವು ಪ್ರಯಾಣಿಕರಿಗೆ ವಿಭಿನ್ನ ಅನುಭವವನ್ನು ನೀಡಲಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಇದೇ ಅಡ್ವೆಂಚರ್ಸ್ ಓವರ್‌ಲ್ಯಾಂಡ್ ಕಂಪನಿಯು ಕೆಲ ತಿಂಗಳ ಹಿಂದೆ ದೆಹಲಿಯಿಂದ ಇಂಗ್ಲೆಂಡ್ ರಾಜಧಾನಿ ಲಂಡನ್‌ಗೆ ಬಸ್ ಸೇವೆ ಒದಗಿಸುವ ಯೋಜನೆಯನ್ನು ಪ್ರಕಟಿಸಿತ್ತು. ಈ ಪ್ರಯಾಣವು ವಿಶ್ವದ ಅತಿ ಉದ್ದದ ರಸ್ತೆ ಪ್ರಯಾಣಗಳಲ್ಲಿ ಒಂದಾಗಿದೆ.

ವಿಶ್ವದಾದ್ಯಂತ ಸುಮಾರು 195 ದೇಶಗಳ ಪ್ರವಾಸಿಗರು ದೆಹಲಿಯಿಂದ ಲಂಡನ್‌ಗೆ ತೆರಳುವ ಬಸ್'ನಲ್ಲಿ ಸಂಚರಿಸಲು ಮುಂದಾಗಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಇಂತಹ ದೂರದ ಪ್ರಯಾಣವು ಪ್ರಯಾಣಿಕರಿಗೆ ಹೊಸ ಅನುಭವವನ್ನು ನೀಡುತ್ತದೆ.