ಎರಡನೇ ಬುಲೆಟ್ ರೈಲು ಮಾರ್ಗಕ್ಕೆ ವೈಮಾನಿಕ ಸಮೀಕ್ಷೆ ಆರಂಭಿಸಿದ ಹೈ ಸ್ಪೀಡ್ ರೈಲು ನಿಗಮ

ಭಾರತದ ಸರಕು ಸಾಗಣೆಯಲ್ಲಿ ರೈಲು ಸೇವೆ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಕೆಲವು ಊರುಗಳಿಗೆ ಸಾಗಲು ಹಲವಾರು ಗಂಟೆಗಳ ಕಾಲ ಸಂಚರಿಸಬೇಕಾಗುತ್ತದೆ. ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸಲು ಕೇಂದ್ರ ಸರ್ಕಾರವು ಬುಲೆಟ್ ರೈಲು ಯೋಜನೆಯನ್ನು ಅನುಷ್ಠಾನಕ್ಕೆ ತರಲು ಮುಂದಾಗಿದೆ.

ಎರಡನೇ ಬುಲೆಟ್ ರೈಲು ಮಾರ್ಗಕ್ಕೆ ವೈಮಾನಿಕ ಸಮೀಕ್ಷೆ ಆರಂಭಿಸಿದ ಹೈ ಸ್ಪೀಡ್ ರೈಲು ನಿಗಮ

ಅಹಮದಾಬಾದ್ - ಮುಂಬೈ ನಡುವಿನ ಭಾರತದ ಮೊದಲ ಬುಲೆಟ್ ರೈಲು ಯೋಜನೆಯನ್ನು ಜಪಾನ್ ಸಹಾಯದಿಂದ ಜಾರಿಗೆ ತರಲಾಗುತ್ತಿದೆ. ಈ ಯೋಜನೆಯನ್ನು ಪೂರ್ಣಗೊಳಿಸಲು 2023ರ ವೇಳೆಗೆ ಗಡುವು ನೀಡಲಾಗಿತ್ತು. ಆದರೆ ನಿಗದಿತ ಗಡುವಿನೊಳಗೆ ಈ ಯೋಜನೆಯು ಪೂರ್ಣಗೊಳ್ಳಲು ಹಲವಾರು ಸಮಸ್ಯೆಗಳು ಎದುರಾಗಿವೆ.

ಎರಡನೇ ಬುಲೆಟ್ ರೈಲು ಮಾರ್ಗಕ್ಕೆ ವೈಮಾನಿಕ ಸಮೀಕ್ಷೆ ಆರಂಭಿಸಿದ ಹೈ ಸ್ಪೀಡ್ ರೈಲು ನಿಗಮ

ಇದರ ನಡುವೆಯೇ ಭಾರತದ ಎರಡನೇ ಬುಲೆಟ್ ರೈಲು ಯೋಜನೆಗೆ ವೈಮಾನಿಕ ಸಮೀಕ್ಷೆ ನಡೆಸಲಾಗುತ್ತಿದೆ. ಮುಂಬೈ - ನಾಗ್ಪುರ ನಡುವೆ ಭಾರತದ ಎರಡನೇ ಬುಲೆಟ್ ರೈಲು ಯೋಜನೆ ಜಾರಿಗೆ ಬರಲಿದೆ. ಎರಡನೇ ಬುಲೆಟ್ ರೈಲು ಮಾರ್ಗವನ್ನು ಪರಿಶೀಲಿಸುವ ಕಾರ್ಯವು ಈ ತಿಂಗಳ 12ರಿಂದ ಆರಂಭವಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಎರಡನೇ ಬುಲೆಟ್ ರೈಲು ಮಾರ್ಗಕ್ಕೆ ವೈಮಾನಿಕ ಸಮೀಕ್ಷೆ ಆರಂಭಿಸಿದ ಹೈ ಸ್ಪೀಡ್ ರೈಲು ನಿಗಮ

ಈ ಬುಲೆಟ್ ರೈಲಿನ ಪಥವನ್ನು ಲೈಡರ್ ಎಂಬ ಲೇಸರ್ ತಂತ್ರಜ್ಞಾನದಿಂದ ಅಧ್ಯಯನ ಮಾಡಲಾಗುತ್ತದೆ. ಲೈಡರ್ ಲೇಸರ್ ತಂತ್ರಜ್ಞಾನವು ಬುಲೆಟ್ ರೈಲು ಮಾರ್ಗ, ಮಾರ್ಗದಲ್ಲಿ ಎದುರಾಗುವ ಅರಣ್ಯ, ಪರ್ವತ, ನದಿ, ಜಲಮೂಲ ಸೇರಿದಂತೆ ವಿವಿಧ ಅಂಶಗಳನ್ನು ಅಧ್ಯಯನ ನಡೆಸಲಿದೆ.

ಎರಡನೇ ಬುಲೆಟ್ ರೈಲು ಮಾರ್ಗಕ್ಕೆ ವೈಮಾನಿಕ ಸಮೀಕ್ಷೆ ಆರಂಭಿಸಿದ ಹೈ ಸ್ಪೀಡ್ ರೈಲು ನಿಗಮ

100 ಮೆಗಾಪಿಕ್ಸೆಲ್ ಕ್ಯಾಮೆರಾ ಹಾಗೂ ವಿಮಾನದಲ್ಲಿ ಅಳವಡಿಸಲಾಗುವ ಸೆನ್ಸಾರ್ ಸೇರಿದಂತೆ ಹಲವು ಉಪಕರಣಗಳೊಂದಿಗೆ ಅಧ್ಯಯನ ನಡೆಸಲಾಗುತ್ತದೆ. ಈ ತಂತ್ರಜ್ಞಾನವು ಅತ್ಯಂತ ನಿಖರವಾದ ಮಾಹಿತಿಯನ್ನು ನೀಡಲಿದೆ. ಜೊತೆಗೆ ಹೆಚ್ಚು ಸೂಕ್ತವಾದ ಮಾರ್ಗವನ್ನು ಆಯ್ಕೆ ಮಾಡಲು ಸಹಕಾರಿಯಾಗಲಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಎರಡನೇ ಬುಲೆಟ್ ರೈಲು ಮಾರ್ಗಕ್ಕೆ ವೈಮಾನಿಕ ಸಮೀಕ್ಷೆ ಆರಂಭಿಸಿದ ಹೈ ಸ್ಪೀಡ್ ರೈಲು ನಿಗಮ

ಸಾಮಾನ್ಯವಾಗಿ ಸಂಶೋಧನಾ ಅಧ್ಯಯನ ಕಾರ್ಯಗಳನ್ನು ಪೂರ್ಣಗೊಳಿಸಲು 10ರಿಂದ 12 ತಿಂಗಳು ಬೇಕಾಗುತ್ತದೆ. ಆದರೆ ಈ ತಾಂತ್ರಿಕ ಅಧ್ಯಯನ ಕಾರ್ಯ ಪೂರ್ಣಗೊಳ್ಳಲು ಕೇವಲ 3 ರಿಂದ 4 ತಿಂಗಳು ಸಾಕಾಗುತ್ತದೆ ಎಂದು ರೈಲ್ವೆ ಆಡಳಿತ ತಿಳಿಸಿದೆ.

ಎರಡನೇ ಬುಲೆಟ್ ರೈಲು ಮಾರ್ಗಕ್ಕೆ ವೈಮಾನಿಕ ಸಮೀಕ್ಷೆ ಆರಂಭಿಸಿದ ಹೈ ಸ್ಪೀಡ್ ರೈಲು ನಿಗಮ

ಹೊಸ ಬುಲೆಟ್ ರೈಲು ಮಾರ್ಗವು ಮುಂಬೈನಿಂದ ನಾಗ್ಪುರಕ್ಕೆ ಒಟ್ಟು 736 ಕಿ.ಮೀಗಳ ಮಾರ್ಗವನ್ನು ಹೊಂದಿರಲಿದೆ. ಈ ಮಾರ್ಗವು ಶಹನ್‌ಪುರ, ಇಗತ್‌ಪುರಿ, ನಾಸಿಕ್, ಮಕರ, ಮಾಲೆಗಾಂವ್, ಬಲ್ಗಾನ್, ವಾರ್ಧಾ ಹಾಗೂ ಕ್ಯಾಪ್ರಿ ಮೂಲಕ ಹಾದುಹೋಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಎರಡನೇ ಬುಲೆಟ್ ರೈಲು ಮಾರ್ಗಕ್ಕೆ ವೈಮಾನಿಕ ಸಮೀಕ್ಷೆ ಆರಂಭಿಸಿದ ಹೈ ಸ್ಪೀಡ್ ರೈಲು ನಿಗಮ

ಅಧ್ಯಯನ ಕಾರ್ಯ ಮುಗಿಯುತ್ತಿದ್ದಂತೆ ಹೊಸ ತಂತ್ರಜ್ಞಾನದೊಂದಿಗೆ ತೆಗೆದ ಚಿತ್ರಗಳ ಆಧಾರದ ಮೇಲೆ ಮಾರ್ಗವನ್ನು ಆಯ್ಕೆ ಮಾಡಲಾಗುತ್ತದೆ. ಇದರ ಆಧಾರದ ಮೇಲೆ ಭೂಸ್ವಾಧೀನ ಕಾರ್ಯ ನಡೆಯಲಿದ್ದು, ನಂತರ ಕಾಮಗಾರಿ ಆರಂಭಿಸಲಾಗುತ್ತದೆ.

ಎರಡನೇ ಬುಲೆಟ್ ರೈಲು ಮಾರ್ಗಕ್ಕೆ ವೈಮಾನಿಕ ಸಮೀಕ್ಷೆ ಆರಂಭಿಸಿದ ಹೈ ಸ್ಪೀಡ್ ರೈಲು ನಿಗಮ

ಮುಂಬೈ-ನಾಗ್ಪುರ ಮಾರ್ಗದ ನಂತರ ದೆಹಲಿ-ಅಮೃತಸರ, ವಾರಣಾಸಿ-ಹೌರಾ, ದೆಹಲಿ-ವಾರಣಾಸಿ, ದೆಹಲಿ-ಅಹಮದಾಬಾದ್, ಮುಂಬೈ-ಹೈದರಾಬಾದ್ ಹಾಗೂ ಚೆನ್ನೈ-ಮೈಸೂರು ಮಾರ್ಗಗಳಲ್ಲಿ ಬುಲೆಟ್ ರೈಲುಗಳನ್ನು ಆರಂಭಿಸಲು ಅಧ್ಯಯನ ನಡೆಸಲಾಗುತ್ತಿದೆ. ಈ ಎಲ್ಲಾ ಮಾರ್ಗಗಳಲ್ಲಿ ಬುಲೆಟ್ ರೈಲು ಹಳಿಯ ಪ್ರಾಥಮಿಕ ನಿರ್ಮಾಣ ಕಾರ್ಯವು ಮುಂದಿನ ಒಂದೆರಡು ವರ್ಷಗಳಲ್ಲಿ ಆರಂಭವಾಗುವ ನಿರೀಕ್ಷೆಗಳಿವೆ.

Most Read Articles

Kannada
English summary
Aerial survey started for India's second bullet train project. Read in Kannada.
Story first published: Monday, March 15, 2021, 18:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X