ಏರೋ ಎಕ್ಸ್ - ಗಾಳಿಯಲ್ಲಿ ತೇಲುವ ಮೋಟಾರ್‌ಸೈಕಲ್

By Nagaraja

ನೀವು ಹಾಲಿವುಡ್ ಸಿನೆಮಾಗಳಲ್ಲಿ ಹಾರುವ ಮೋಟಾರುಸೈಕಲ್‌ಗಳನ್ನು ನೋಡಿರಬಹುದು. ಇನ್ನು ಬೈಕ್‌ಗಳಲ್ಲಿ ಸ್ಟಂಟ್ ಪ್ರದರ್ಶನ ಸಾಮಾನ್ಯ ವಿಚಾರ. ಆದರೆ ಕ್ಯಾಲಿಫೋರ್ನಿಯಾ ತಲಹದಿಯ ಏರೋಫೆಕ್ಸ್ ಸಂಸ್ಥೆಯು ಗಾಳಿಯಲ್ಲಿ ತೇಲುವ ಮೋಟಾರುಸೈಕಲ್‌ವೊಂದನ್ನು ನಿರ್ಮಿಸಿದೆ.

ಇದನ್ನು ದಿಟ್ಟಿಸಿ ನೋಡಿದಾಗ ಇದು ಬೈಕೇ? ಎಂಬ ಸಂಶಯ ನಿಮ್ಮಲ್ಲಿ ಮೂಡಬಹುದು. ಹೌದು, ಇದು ವಿಶಿಷ್ಟ ರೀತಿಯಲ್ಲಿ ವಿನ್ಯಾಸಿತ ಏರೋ ಎಕ್ಸ್ ಮೋಟಾರ್‌ಸೈಕಲ್ ಆಗಿದೆ. ಇತರೆಲ್ಲ ಫ್ಯೂಚರ್ ಬೈಕ್‌ಗಳಿಗಿಂತ ಭಿನ್ನವಾಗಿರುವ ಈ ಹಾರುವ ಬೈಕ್ 2017ರಲ್ಲಿ ಲಾಂಚ್ ಆಗಲಿದೆ.

ಏರೋ ಎಕ್ಸ್ - ಗಾಳಿಯಲ್ಲಿ ತೇಲುವ ಮೋಟಾರ್‌ಸೈಕಲ್

ಅಷ್ಟೇ ಯಾಕೆ ನೀವು ಬಯಸಿದ್ದಲ್ಲಿ ಏರೋ ಎಕ್ಸ್ ಮೋಟಾರ್‌ಸೈಕಲ್‌ಗೆ ಬುಕ್ಕಿಂಗ್ ಮಾಡಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಈ ವೆಬ್‌ಸೈಟ್‌ಗೆ ಭೇಟಿ ಕೊಡಿರಿ

ಏರೋ ಎಕ್ಸ್ - ಗಾಳಿಯಲ್ಲಿ ತೇಲುವ ಮೋಟಾರ್‌ಸೈಕಲ್

ಏರೋ ಎಕ್ಸ್‌ನಲ್ಲಿ ಇಬ್ಬರಿಗೆ ಮಾತ್ರ ಸಂಚರಿಸಬಹುದಾಗಿದೆ. ಇದು ಚಕ್ರಗಳ ಬದಲು ನೆಲಕ್ಕೆ ಸಮಾಂತರವಾದ ಎರಡು ಫೈಬರ್ ರೋಟರ್‌ಗಳನ್ನು ಪಡೆದುಕೊಂಡಿದೆ.

ಏರೋ ಎಕ್ಸ್ - ಗಾಳಿಯಲ್ಲಿ ತೇಲುವ ಮೋಟಾರ್‌ಸೈಕಲ್

ಹೆಲಿಕಾಪ್ಟರ್‌ನಂತೆಯೇ ಇದರಲ್ಲಿರುವ ರೋಟರ್ ತಿರುಗುವಾಗ ನಿಧಾನವಾಗಿ ಮೇಲಕ್ಕೆ ಚಲಿಸಲಿದೆ. ಇದು ನೆಲದಿಂದ ಗರಿಷ್ಠ 9 ಫೀಟ್ ಎತ್ತರದಲ್ಲಿ ಸುತ್ತಾಡಲಿದೆ.

ಏರೋ ಎಕ್ಸ್ - ಗಾಳಿಯಲ್ಲಿ ತೇಲುವ ಮೋಟಾರ್‌ಸೈಕಲ್

ಈ ಹೋವರ್ ಮೋಟಾರುಸೈಕಲ್ 346 ಕೆ.ಜಿ ಭಾರವನ್ನು ಹೊಂದಿದ್ದು 140 ಕೆ.ಜಿ ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಏರೋ ಎಕ್ಸ್ - ಗಾಳಿಯಲ್ಲಿ ತೇಲುವ ಮೋಟಾರ್‌ಸೈಕಲ್

ಹಾಗೆಯೇ ಗಂಟೆಗೆ 68 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಏರೋ ಎಕ್ಸ್ - ಗಾಳಿಯಲ್ಲಿ ತೇಲುವ ಮೋಟಾರ್‌ಸೈಕಲ್

ಇದನ್ನು ಚಾಲಕ ಬಯಸಿದ ರೀತಿಯಲ್ಲಿ ಮುಂದಕ್ಕೆ ಹಿಂದಕ್ಕೆ ಬಾಗುವ ಮೂಲಕ ನಿಯಂತ್ರಿಸಬಹುದಾಗಿದೆ. ಹಾಗೆಯೇ ಮೋಟಾರುಸೈಕಲ್ ಶೈಲಿಯ ಸ್ಟೀರಿಂಗ್ ಹ್ಯಾಂಡಲ್ ಇದರಲ್ಲಿರಲಿದೆ.

ಏರೋ ಎಕ್ಸ್ - ಗಾಳಿಯಲ್ಲಿ ತೇಲುವ ಮೋಟಾರ್‌ಸೈಕಲ್

ಏರೋಫೆಕ್ಸ್ ಸ್ಥಾಪಕ ಮಾರ್ಡ್ ಡೆ ರೋಚೆ ಪ್ರಕಾರ ಒಂದು ವಾರದೊಳಗೆ ಚಾಲಕ ಏರೋ ಎಕ್ಸ್ ಸಮತೋಲನವನ್ನು ಕಂಡುಕೊಳ್ಳಬಹುದಾಗಿದೆ ಎಂದಿದ್ದಾರೆ.

ಏರೋ ಎಕ್ಸ್ - ಗಾಳಿಯಲ್ಲಿ ತೇಲುವ ಮೋಟಾರ್‌ಸೈಕಲ್

ಅಂದ ಹಾಗೆ ಏರೋ ಎಕ್ಸ್ 85,000 ಅಮೆರಿಕನ್ ಡಾಲರುಗಳಷ್ಟು ದುಬಾರಿಯಾಗಿದೆ. ಸದ್ಯ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿರಿ.

Article Published On: Friday, May 23, 2014, 16:56 [IST]
English summary
Aero-X is a vehicle straight out of Hollywood sci-fi movies. Being developed by a california based company called Aerofex, the Aero-X is a flying motorcycle or rather a hoverbike.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+