ರಸ್ತೆಯಲ್ಲಿ ಸಾಗುತ್ತಿದೆ ಬೃಹತ್‌ ವಿಮಾನ... ಅಪರೂಪದ ದೃಶ್ಯನೋಡಲು ಜನ ಕ್ಯೂ...

ಟ್ರಕ್‌ಗಳಲ್ಲಿ ದೊಡ್ಡ ದೊಡ್ಡ ವಸ್ತುಗಳನ್ನು ಸಾಗಿಸುತ್ತಿರುವುದು ನಾವು ಪ್ರತ್ಯಕ್ಷವಾಗಿ ಮತ್ತು ಹಲವಾರು ವಿಡಿಯೋಗಳಲ್ಲಿ ನೋಡಿದ್ದೇವೆ. ಹಲವಾರು ವೋಲ್ವೋ ಎಫ್‌ಎಮ್‌ಎಕ್ಸ್‌ ಸೀರೀಸ್‌ ಹೆವಿ ಡ್ಯೂಟಿ ಟ್ರಕ್‌ಗಳು ತಮ್ಮ ಸರಕುಗಳೊಂದಿಗೆ ತಲುಪಲು ಕೆಲವೊಮ್ಮೆ ತಿಂಗಳುಗಳೇ ಹಿಡಿಯುತ್ತವೆ.

ರಸ್ತೆಯಲ್ಲಿ ಸಾಗುತ್ತಿದೆ ಬೃಹತ್‌ ವಿಮಾನ... ಅಪರೂಪದ ದೃಶ್ಯನೋಡಲು ಜನ ಕ್ಯೂ...

ದೊಡ್ಡ ದೊಡ್ಡ ಸರಕುಗಳನ್ನು ವಿಮಾನ ಮತ್ತು ರೈಲುಗಳಲ್ಲಿ ತಲುಪಿಸುವುದು ಕೊಂಚ ದುಬಾರಿಯೇ ಸರಿ. ನಾವೀಗಾಗಲೇ ಟ್ರಕ್‌‌ಗಳಲ್ಲಿ ಕಾರ್ಖಾನೆಯ ದೊಡ್ಡ ದೊಡ್ಡ ಬಿಡಿ ಭಾಗಗಳನ್ನು ಸಾಗಿಸಿರುವುದರ ಜೊತೆಗೆ, ದೊಡ್ಡ ದೊಡ್ಡ ವಿಮಾನಗಳು ಟ್ರಕ್‌ಗಳನ್ನು ಸಾಗಿಸಿರುವುದೂ ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಟ್ರಕ್ ಒಂದರಲ್ಲಿ ವಿಮಾನವನ್ನೇ ಸಾಗಿಸುತ್ತಿರುವ ದೃಶ್ಯ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ರಸ್ತೆಯಲ್ಲಿ ಸಾಗುತ್ತಿದೆ ಬೃಹತ್‌ ವಿಮಾನ... ಅಪರೂಪದ ದೃಶ್ಯನೋಡಲು ಜನ ಕ್ಯೂ...

ಪ್ರತಿಷ್ಟಿತ ಮಾಧ್ಯಮವೊಂದರಲ್ಲಿ ಅಪ್‌ಲೋಡ್‌ ಆದ ಈ ದೃಶ್ಯವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಟ್ರಕ್‌ ಒಂದು ಏರ್‌ ಇಂಡಿಯಾಗೆ ಸಂಭಂಧಿಸಿದ ಹಳೆಯ ವಿಮಾನದ ಬಿಡಿ ಭಾಗವೊಂದನ್ನು ಹೊತ್ತೊಯ್ಯಲಾಗುತ್ತಿದೆ.

ರಸ್ತೆಯಲ್ಲಿ ಸಾಗುತ್ತಿದೆ ಬೃಹತ್‌ ವಿಮಾನ... ಅಪರೂಪದ ದೃಶ್ಯನೋಡಲು ಜನ ಕ್ಯೂ...

ಕೇರಳದ ತಿರುವನಂತಪುರಂ ನಿಂದ ಸಾಗುತ್ತಿರುವ ಈ ವಿಮಾನವನ್ನು ಹೈದರಾಬಾದ್‌ಗೆ ಕೊಂಡೊಯ್ಯಲಾಗುತ್ತಿದೆ. ಹೈದರಾಬಾದ್‌ ಮೂಲದ ವ್ಯಕ್ತಿಯೊಬ್ಬ ಹರಾಜಿನ ಮೂಲಕ ಈ ವಿಮಾನವನ್ನು ಖರೀದಿಸಿದ್ದು, ಇದೀಗ ರಸ್ತೆ ಮೂಲಕವಾಗಿ ಹೈದರಾಬಾದ್‌ನತ್ತ ಇದು ಸಾಗುತ್ತಿದೆ.

ರಸ್ತೆಯಲ್ಲಿ ಸಾಗುತ್ತಿದೆ ಬೃಹತ್‌ ವಿಮಾನ... ಅಪರೂಪದ ದೃಶ್ಯನೋಡಲು ಜನ ಕ್ಯೂ...

ಇನ್ನು ರಸ್ತೆ ಮುಖಾಂತರವಾಗಿ ಟ್ರಕ್‌ನಲ್ಲಿ ವಿಮಾನ ಸಾಗುತ್ತಿರುವುದು ತುಂಬಾ ಅಪರೂಪದ ದೃಶ್ಯವಾಗಿದ್ದು, ದಾರಿಯುದ್ದಕ್ಕೂ ಜನರು ಇದನ್ನು ನೋಡುವುದಕ್ಕಾಗಿ ಮುಗಿ ಬೀಳುತ್ತಿದ್ದು ಆಶ್ಚರ್ಯದಿಂದ ಈ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ರಸ್ತೆಯಲ್ಲಿ ಸಾಗುತ್ತಿದೆ ಬೃಹತ್‌ ವಿಮಾನ... ಅಪರೂಪದ ದೃಶ್ಯನೋಡಲು ಜನ ಕ್ಯೂ...

ವಿಡಿಯೋದಲ್ಲಿ ಈ ಅಪರೂಪದ ದೃಶ್ಯವನ್ನು ನೋಡಿರುವ ಜನ ತಮ್ಮ ಕುತೂಹಲವನ್ನು ಹಂಚಿಕೊಂಡಿದ್ದು, ಈ ರೀತಿಯ ದೃಶ್ಯ ನಮ್ಮ ಜೀವಮಾನದಲ್ಲಿಯೇ ನೋಡಿಲ್ಲ. ವಿಮಾನವನ್ನು ನಾವು ಆಕಾಶದಲ್ಲಿ ಹಾರುವಾಗ ಸಣ್ಣ ಗಾತ್ರದಲ್ಲಿ ನೋಡಿದ್ದೇವೆ. ಆದರೆ ರಸ್ತೆಯಲ್ಲಿ ಈ ರೀತಿಯಾಗಿ ಚಲಿಸುತ್ತಿರುವ ವಿಮಾನವನ್ನು ನೋಡಿಲ್ಲ. ವಿಷಯ ತಿಳಿದ ಕೂಡಲೇ ಉಟ್ಟ ಬಟ್ಟೆಯಲ್ಲೇ ಧಾವಿಸಿ ಈ ದೃಶ್ಯವನ್ನು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

ರಸ್ತೆಯಲ್ಲಿ ಸಾಗುತ್ತಿದೆ ಬೃಹತ್‌ ವಿಮಾನ... ಅಪರೂಪದ ದೃಶ್ಯನೋಡಲು ಜನ ಕ್ಯೂ...

ಇನ್ನು ಏರ್‌ ಇಂಡಿಯಾದ Airbus A320 ವಿಮಾನದ ಭಾಗ ಇದಾಗಿದ್ದು, ಕೇರಳದ ಕೊಲ್ಲಂ ಜಿಲ್ಲೆಗೆ ಈ ಟ್ರಕ್‌ ಆಗಮಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನಸಮೂಹ ಆಗಮಿಸುತ್ತಿರುವುದರಿಂದ ಹಲವೆಡೆ ಟ್ರಾಫಿಕ್‌ ಜಾಮ್‌ ಸಂಭವಿಸುತ್ತಿದೆ. ಆದರೂ ಸಹ ಜನರು ವಿಮಾನ ರಸ್ತೆಯಲ್ಲಿ ಸಾಗುತ್ತಿರುವುದನ್ನು ಕಾಣಲು ಹರಿದು ಬರುತ್ತಿದ್ದಾರೆ.

ರಸ್ತೆಯಲ್ಲಿ ಸಾಗುತ್ತಿದೆ ಬೃಹತ್‌ ವಿಮಾನ... ಅಪರೂಪದ ದೃಶ್ಯನೋಡಲು ಜನ ಕ್ಯೂ...

ಮೂಲಗಳ ಪ್ರಕಾರ ವಿಮಾನದ ಈ ಭಾಗವನ್ನು ಸಾಗಿಸುತ್ತಿರುವ ಮುಖ್ಯ ಕಾರಣವೇನೆಂದರೆ, ವಿಮಾನದ ಮಾದರಿಯಲ್ಲಿರುವಂತಹ ರೆಸ್ಟಾರೆಂಟ್‌ ನಿರ್ಮಿಸಲು. ದೇಶದ ಹಲವಾರು ಕಡೆ ವಿಮಾನದ ಮಾದರಿಯಲ್ಲಿರುವ ರೆಸ್ಟಾರೆಂಟ್‌ಗಳನ್ನು ನಾವೀಗಾಗಲೇ ನೋಡಿದ್ದೇವೆ. ಅದೇ ಮಾದರಿಯಲ್ಲಿ ಈ ವಿಮಾನದ ಭಾಗವನ್ನು ಬಳಸಿ ರೆಸ್ಟಾರೆಂಟ್‌ ನಿರ್ಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

ರಸ್ತೆಯಲ್ಲಿ ಸಾಗುತ್ತಿದೆ ಬೃಹತ್‌ ವಿಮಾನ... ಅಪರೂಪದ ದೃಶ್ಯನೋಡಲು ಜನ ಕ್ಯೂ...

ಇನ್ನು ತಿರುನಂತಪುರದಿಂದ ಹೈದರಾಬಾದ್‌ಗೆ ವಿಮಾನವನ್ನು ಸಾಗಿಸುತ್ತಿರುವ ಈ ಟ್ರಕ್‌ ನಿಧಾನವಾಗಿ ಚಲಿಸುತ್ತಿದ್ದು, ಇದೇ ಕಾರಣದಿಂದ ಜನರಿಗೆ ಇದನ್ನು ನೋಡಲು ಕೊಂಚ ಸಮಯಾಕಾಶವೂ ಸಿಗುತ್ತಿದೆ.

ರಸ್ತೆಯಲ್ಲಿ ಸಾಗುತ್ತಿದೆ ಬೃಹತ್‌ ವಿಮಾನ... ಅಪರೂಪದ ದೃಶ್ಯನೋಡಲು ಜನ ಕ್ಯೂ...

ಇನ್ನು ರಸ್ತೆ ಮಾರ್ಗವಾಗಿ ಇಂತಹ ದೊಡ್ಡ ದೊಡ್ಡ ವಸ್ತುಗಳನ್ನು ಸಾಗಿಸುವಾಗ ಕೆಲವೊಂದು ವಿಷಯಗಳ ಬಗ್ಗೆ ಎಚ್ಚರ ವಹಿಸಬೇಕಾಗುತ್ತದೆ. ಉದಾಹರಣೆಗೆ ಸಾಮಾನ್ಯ ಟ್ರಕ್‌ಗಳನ್ನು ರಸ್ತೆಯಲ್ಲಿ ಓಡಿಸುವಂತೆ ಈ ಟ್ರಕ್‌ ಓಡಿಸಲು ಸಾಧ್ಯವಿಲ್ಲ, ಹಾಗೂ ರಸ್ತೆಯಲ್ಲಿ ಚಲಿಸುವಾಗ ಯಾವುದೇ ಅಪಘಾತವಾಗದಂತೆ ಒಂದು ನಿರ್ಧಿಷ್ಟ ವೇಗದಲ್ಲಿ ಚಲಿಸಬೇಕಾಗುತ್ತದೆ.

ರಸ್ತೆಯಲ್ಲಿ ಸಾಗುತ್ತಿದೆ ಬೃಹತ್‌ ವಿಮಾನ... ಅಪರೂಪದ ದೃಶ್ಯನೋಡಲು ಜನ ಕ್ಯೂ...

ಇನ್ನು ಈ ಟ್ರಕ್‌ನೊಂದಿಗೆ ಸುಮಾರು 10 ರಿಂದ 15 ಜನರ ಒಂದು ತಂಡವಿರುತ್ತದೆ. ಅವರು ದಾರಿಮಧ್ಯೆ ಸಂಭವಿಸಬಹುದಾದಂತಹ ಟ್ರಾಫಿಕ್‌ ಜಾಮನ್ನು ಸರಿಪಡಿಸುವತ್ತ ಗಮನ ಹರಿಸುತ್ತಾರೆ. ಯಾಕೆಂದರೆ ಟ್ರಕ್‌ನಲ್ಲಿರುವ ವಸ್ತುವು ಯಾವುದೇ ತಕರಾರಿಲ್ಲದೇ ಸಾಗಲು ಇವರ ಪಾತ್ರವೂ ಪ್ರಮುಖವಾಗಿರುತ್ತದೆ.

ರಸ್ತೆಯಲ್ಲಿ ಸಾಗುತ್ತಿದೆ ಬೃಹತ್‌ ವಿಮಾನ... ಅಪರೂಪದ ದೃಶ್ಯನೋಡಲು ಜನ ಕ್ಯೂ...

ಹೈದರಾಬಾದ್‌ನ ವ್ಯಾಪಾರಿಯೊಬ್ಬ ಈ ವಿಮಾನದ ಭಾಗವನ್ನು ಹರಾಜಿನಲ್ಲಿ ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆಯಷ್ಟೇ ಬಿಟ್ಟರೆ ಎಷ್ಟು ಮೊತ್ತವನ್ನು ಪಾವತಿಸಿ ಖರೀದಿಸಿದ್ದಾರೆ ಎಂದು ತಿಳಿದು ಬಂದಿಲ್ಲ. ವಿಮಾನದ ಮುಂಭಾಗ ಮತ್ತು ರೆಕ್ಕೆಗಳನ್ನು ಬೇರ್ಪಡಿಸಲಾಗಿದೆ.

ರಸ್ತೆಯಲ್ಲಿ ಸಾಗುತ್ತಿದೆ ಬೃಹತ್‌ ವಿಮಾನ... ಅಪರೂಪದ ದೃಶ್ಯನೋಡಲು ಜನ ಕ್ಯೂ...

ರಸ್ತೆಯಲ್ಲಿ ರೆಕ್ಕೆಯೊಂದಿಗೆ ವಿಮಾನವನ್ನು ಸಾಗಿಸುವುದು ಅಸಾಧ್ಯವಾದ ಕೆಲಸ. ಯಾಕೆಂದರೆ ರೆಕ್ಕೆಗಳೊಂದಿಗೆ ವಿಮಾನದ ಅಗಲ ತುಂಬಾ ಹೆಚ್ಚಾಗಿರುತ್ತದೆ. ಇದೇ ಕಾರಣಕ್ಕಾಗಿ ಇಲ್ಲೂ ಸಹ ವಿಮಾದ ರೆಕ್ಕೆಗಳನ್ನು ಕಳಚಿಟ್ಟು ಸಾಗಿಸಲಾಗುತ್ತಿದೆ.

ರಸ್ತೆಯಲ್ಲಿ ಸಾಗುತ್ತಿದೆ ಬೃಹತ್‌ ವಿಮಾನ... ಅಪರೂಪದ ದೃಶ್ಯನೋಡಲು ಜನ ಕ್ಯೂ...

ಇನ್ನು ವರದಿಯ ಪ್ರಕಾರ ಈ ಟ್ರಕ್‌ ತಿರುವನಂತಪುರದಿಂದ ಹೈದರಾಬಾದ್‌ ತಲುಪಲು ಸುಮಾರು ಒಂದು ತಿಂಗಳು ಬೇಕಾಗುತ್ತದೆ ಎಂದು ತಿಳಿದು ಬಂದಿದೆ. ಟ್ರಕ್‌ಗೆ ತುಂಬಾ ಜಾಗರೂಕತೆಯಿಂದ ಈ ವಿಮಾನದ ಭಾಗವನ್ನು ಜೋಡಿಸಲಾಗಿದ್ದು, ಯಾವುದೇ ರೀತಿಯ ರಸ್ತೆಯಲ್ಲೂ ಇದು ಬಿದ್ದು ಹೋಗದಂತೆ ಎಚ್ಚರ ವಹಿಸಿ ಜೋಡಿಸಿಡಲಾಗಿದೆ.

ರಸ್ತೆಯಲ್ಲಿ ಸಾಗುತ್ತಿದೆ ಬೃಹತ್‌ ವಿಮಾನ... ಅಪರೂಪದ ದೃಶ್ಯನೋಡಲು ಜನ ಕ್ಯೂ...

ಹಲವಾರು ಲಾಜಿಸ್ಟಿಕ್‌ ಕಂಪೆನಿಗಳು ಸಹ ಈ ರೀತಿಯ ದೊಡ್ಡ ದೊಡ್ಡ ವಸ್ತುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತವೆ. ಕಳೆದ ವರ್ಷವೂ ಸಹ ಏರ್‌ ಇಂಡಿಯಾದ ಹಳೆಯ ವಿಮಾನವೊಂದು ದೆಹಲಿ-ಗುರುಗಾವ್‌ ಹೆದ್ದಾರಿಯಲ್ಲಿ ಸಾಗಿಸುತ್ತಿರುವಾಗ ಸೇತುವೆಯ ಕೆಳಗೆ ಸಿಕ್ಕಿಹಾಕಿಕೊಂಡ ಘಟನೆ ವರದಿಯಾಗಿತ್ತು. ಸರಿಯಾದ ನಿರ್ವಾಹಕ ಸಿಬ್ಬಂದಿಗಳಿಲ್ಲದೇ ಸಾಗಿಸಿದರೆ ಈ ರೀತಿಯಾದ ಘಟನೆಗಳು ಸಹ ನಡೆಯುತ್ತವೆ.

ರಸ್ತೆಯಲ್ಲಿ ಸಾಗುತ್ತಿದೆ ಬೃಹತ್‌ ವಿಮಾನ... ಅಪರೂಪದ ದೃಶ್ಯನೋಡಲು ಜನ ಕ್ಯೂ...

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ

ಟ್ರಕ್‌ ಸಹಾಯದಿಂದ ರಸ್ತೆಮಾರ್ಗವಾಗಿ ವಿಮಾನಗಳನ್ನು ಸಾಗಿಸುವುದು ಅಪರೂಪದ ದೃಶ್ಯವೇ ಸರಿ. ಈ ರೀತಿಯಲ್ಲಾದರೂ ವಿಮಾನವನ್ನು ನೇರವಾಗಿ ನೋಡದೇ ಇರುವಂತಹ ಹಲವರಿಗೆ ಅದನ್ನು ನೊಡುವ ಭಾಗ್ಯ ದೊರಕಿರುವುದು ವಿಮಾನವನ್ನು ಒಮ್ಮೆಯಾದರೂ ನೊಡಬೇಕು ಎನ್ನುವ ಕನಸು ನಿಜವಾಗಿರುವುದು ನಿಜಕ್ಕೂ ಸಂತೋಷದ ವಿಚಾರ. ಯಾವುದೇ ಅಡೆತಡೆಯಿಲ್ಲದೆ ಈ ಟ್ರಕ್‌ ತನ್ನ ಗುರಿಯನ್ನು ತಲುಪಲಿ ಎನ್ನುವುದೇ ಡ್ರೈವ್‌ಸ್ಪಾರ್ಕ್‌ ಆಶಯ.

Most Read Articles

Kannada
English summary
Aeroplane being transported on a truck from trivandrum to hyderabad
Story first published: Wednesday, November 9, 2022, 18:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X