ಈ ತಿಂಗಳಲ್ಲಿ ಕೈಗೆಟಕುವ ಬೆಲೆಯ ಎಸ್‌ಯುವಿಗಳು: ಮಿಸ್ ಮಾಡಬೇಡಿ, ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಭಾರತದಲ್ಲಿ ಎಸ್‌ಯುವಿ ಮಾರುಕಟ್ಟೆ ಎಷ್ಟರ ಮಟ್ಟಿಗೆ ಇದೆ ಎಂದರೆ ದಿನಕ್ಕೊಂದು ಎಸ್‌ಯುವಿ ಮಾಡೆಲ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗುತ್ತಿದೆ. ಈಗಾಗಲೇ ಬಹುತೇಕ ಎಲ್ಲಾ ಕಂಪನಿಗಳು ಸಹ ಕೈಗೆಟಕುವ ಬೆಲೆಯಲ್ಲಿ ಎಸ್‌ಯುವಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ್ದು, ಮಾರ್ಚ್ ತಿಂಗಳಲ್ಲಿ ಯಾವ ಎಸ್‌ಯುವಿಗಳನ್ನು ಕೊಳ್ಳಬಹುದು (Affordable SUV) ಎಂದು ನೋಡೋಣ.
1. ಹ್ಯುಂಡೈ ಎಕ್ಸ್‌ಟರ್: ಮಾರ್ಚ್‌ನಲ್ಲಿ ನೀವು ಖರೀದಿ ಮಾಡಬಹುದಾದ ಕಾರುಗಳಲ್ಲಿ ಇದು ಸಹ ಒಂದು. ಹ್ಯುಂಡೈ ಎಕ್ಸ್‌ಟರ್ ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.6,12,800 ಆಗಿದೆ. ಈ ಎಕ್ಸ್‌ಟರ್ ಎಸ್‌ಯುವಿಗೆ ಭಾರೀ ಬೇಡಿಕೆಯನು ಹೊಂದಿರುವುದರಿಂದ ರೂಪಾಂತರಗಳ ಅನುಗುಣವಾಗಿ ಕಾಯುವ ಅವಧಿಯನ್ನು ಹೊಂದಿದೆ. ಹ್ಯುಂಡೈ ಎಕ್ಸ್‌ಟರ್ ಕಾರಿನಲ್ಲಿ 1.2-ಲೀಟರ್, 4-ಸಿಲಿಂಡರ್ ಎಂಜಿನ್‌ನೊಂದಿಗೆ ಬಂದಿದೆ. ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ.

2. ರೆನಾಲ್ಟ್ ಕಿಗರ್: ರೆನಾಲ್ಟ್ ಕಂಪನಿಯ ಪ್ರಸಿದ್ದ ಕಿಗರ್ ಕಾರಿನ ಆರಂಭಿಕ ಬೆಲೆ ೬ ಲಕ್ಷ ರೂಪಾಯಿಗಳು. ಈ ಕಿಗರ್ ಕಾರು, 1 - ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದೆ.
ರೂಪಾಂತರಗಳ ಅನ್ವಯ 18.24 - 20.5 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. 8 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಕಿಗರ್, ರೂ.6 ಲಕ್ಷದಿಂದ ರೂ.11.23 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.

3. ನಿಸ್ಸಾನ್ ಮ್ಯಾಗ್ನೈಟ್: ಮ್ಯಾಗ್ನೈಟ್ ಎರಡು ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಯಲ್ಲಿ ದೇಶೀಯ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, 1.0 - ಲೀಟರ್ 3 - ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಹಾಗೂ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್. ಟರ್ಬೊ ಎಂಜಿನ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ 5 ಸ್ವೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿದೆ.
ಎಎಂಟಿ ಗೇರ್‌ಬಾಕ್ಸ್ ಪಡೆದುಕೊಂಡಿರುವುದರಿಂದ ಮ್ಯಾಗ್ನೈಟ್ ಈ ರೂಪಾಂತರಕ್ಕೆ 'ಇಝಡ್-ಶಿಫ್ಟ್' ಎಂಬ ಹೆಸರು ಬಂದಿದೆ. ಹಿಂಭಾಗದಲ್ಲಿ ಇಝಡ್-ಶಿಫ್ಟ್ (EZ-Shift) ಬ್ಯಾಡ್ಜ್ ಹೊಂದಿದೆ. ಸಿವಿಟಿ (CVT) ಗೇರ್‌ಬಾಕ್ಸ್ ಆಯ್ಕೆಯೊಂದಿರುವ ರೂಪಾಂತರಕ್ಕೆ ಹೋಲಿಸಿದರೆ, ಸ್ವಲ್ಪ ಭಿನ್ನವಾದ ಶಿಫ್ಟರ್ ಹೊಂದಿದ್ದು, ಹೊಸ ಲಿವರ್, ಅದರ ಶೈನಿ ಕ್ರೋಮ್ ಸೆಂಟರ್ ನಲ್ಲಿ ವಿಭಿನ್ನ ಮೋಡ್‌ಗಳನ್ನು ಪಡೆದಿದೆ.

4. ಟಾಟಾ ಪಂಚ್: ಟಾಟಾ ಪಂಚ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. 6.13 ಲಕ್ಷ ರೂಗಳಿಂದ ಆರಂಭವಾಗುವ ಈ ಕಾರು ಎಲ್ಲರ ನೆಚ್ಚಿನ ಎಸ್‌ಯುವಿ. ಸಿಎನ್‌ಜಿ ಚಾಲಿತ ಟಾಟಾ ಪಂಚ್ ಎಸ್‌ಯುವಿ, 1.2 ಲೀಟರ್, 3 ಸಿಲಿಂಡರ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 74 bhp ಗರಿಷ್ಠ ಪವರ್ ಹಾಗೂ 95 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ರೂ.7.10 ಲಕ್ಷ ಆರಂಭಿಕ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications