900 ಕಿ.ಮೀ ಕೇವಲ 3 ಗಂಟೆ ಪ್ರಯಾಣ: ಮತ್ತೆರಡು ನಗರಗಳಿಗೆ ಬುಲೆಟ್ ರೈಲು, ಮುನ್ನುಗ್ಗುತ್ತಿದೆ ಭಾರತ!

ಭಾರತದಲ್ಲಿ ಮಹತ್ವಾಕಾಂಕ್ಷೆಯ ಬುಲೆಟ್‌ ರೈಲು ಯೋಜನೆಯು ಹಲವು ಅಡೆತಡೆಗಳ ನಡುವೆಯೂ ವೇಗವನ್ನು ಪಡೆದುಕೊಂಡಿದೆ. ದೇಶದ ಮೊದಲ ಬುಲ್ಲೆಟ್ ರೈಲು ಮುಂಬೈ-ಅಹ್ಮದಾಬಾದ್ ನಡುವೆ ಸಂಚರಿಸಲು ಯೋಜಿಸಿದ್ದು, ಇದೀಗ ಅಹಮದಾಬಾದ್‌ನಿಂದ ಮತ್ತೊಂದು ಪ್ರಮುಖ ನಗರ ಬುಲ್ಲೆಟ್ ರೈಲನ್ನು ಪಡೆಯಲು ಸಜ್ಜಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.

ಮುಂಬೈಗೆ ಬುಲೆಟ್ ರೈಲು ಸೇವೆಯನ್ನು ಯಶಸ್ವಿಯಾಗಿ ಭದ್ರಪಡಿಸಿದ ನಂತರ ಅಹಮದಾಬಾದ್‌ನಿಂದ ದೆಹಲಿಗೆ ಸಂಪರ್ಕಿಸುವ ಮತ್ತೊಂದು ಹೈಸ್ಪೀಡ್ ರೈಲು ಯೋಜನೆ ಮುನ್ನಲೆಗೆ ಬಂದಿದೆ. ಸದ್ಯ ಅಹ್ಮದಾಬಾದ್‌ನಿಂದ ಮುಂಬೈಗೆ ಬರೋಬ್ಬರಿ 12 ಗಂಟೆಗಳ ಪ್ರಯಾಣದ ಸಮಯವಿದ್ದು, ಮುಂಬರಲಿರುವ ಬುಲ್ಲೆಟ್ ರೈಲು ಸಮಯವನ್ನು 3.5 ಗಂಟೆಗಳಿಗೆ ಇಳಿಸಲಿದೆ. ಅಂದರೆ ಹೊಸ ಬುಲ್ಲೆಟ್ ರೈಲು ಈ ಎರಡೂ ನಗರಗಳ ನಡುವಿನ ಎಲಿವೇಟೆಡ್ ಕಾರಿಡಾರ್‌ನಲ್ಲಿ ಗಂಟೆಗೆ 250 ಕಿ.ಮೀ ವೇಗದಲ್ಲಿ ಸಂಚರಿಸಲಿದೆ. ಎಲ್ಲವೂ ಅಂದುಕೊಂಡಂತಾದರೆ ಭಾರತದ ಉತ್ತರ, ದಕ್ಷಿಣ ಮತ್ತು ಪೂರ್ವ ಪ್ರದೇಶಗಳಲ್ಲಿ ತಲಾ ಒಂದು ಬುಲೆಟ್ ರೈಲು ಹೊಂದುವ ಗುರಿಯಿದೆ.

ahmedabad-delhi-new-bullet-train-project-details

ಈ ಬೆಳವಣಿಗೆಯು ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯೊಂದಿಗೆ ಹೊಂದಿಕೆಯಾಗುತ್ತದೆ. ರೈಲ್ವೆಯ ಅಂತಿಮ ಯೋಜನಾ ವರದಿಯಲ್ಲಿ ವಿವರಿಸಲಾದ ಪ್ರಸ್ತಾವಿತ ರೈಲು ಮಾರ್ಗವು ಹಿಮ್ಮತ್ ನಗರ, ಉದಯಪುರ, ಭಿಲ್ವಾರಾ, ಚಿತ್ತೋರ್‌ಗಢ, ಅಜ್ಮೀರ್, ಕಿಶನ್‌ಗಡ್, ಜೈಪುರ, ರೇವಾರಿ ಮತ್ತು ಮನೇಸರ್ ಸೇರಿದಂತೆ ಪ್ರಮುಖ ನಿಲ್ದಾಣಗಳನ್ನು ಒಳಗೊಂಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಯೋಜನಾ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ವೈಮಾನಿಕ ಲಿಡಾರ್ ಸಮೀಕ್ಷೆಗಳನ್ನು ನಡೆಸಲಾಗಿದ್ದು, ಇದು ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳಿಗೆ ಕನಿಷ್ಠ ಅಡಚಣೆಯನ್ನು ಖಚಿತಪಡಿಸಿದೆ. ಹಾಗೆಯೇ ಅಹಮದಾಬಾದ್ ಮತ್ತು ದೆಹಲಿ ನಡುವಿನ ಸುಮಾರು 900 ಕಿ.ಮೀ ಎಲಿವೇಟೆಡ್ ಕಾರಿಡಾರ್ ಪ್ರಯಾಣದ ಸಮಯವನ್ನು ಸುಮಾರು 9 ಗಂಟೆಗಳಷ್ಟು ಕಡಿಮೆ ಮಾಡಿ ಕೇವಲ 3.5 ಗಂಟೆಗಳಲ್ಲಿ ಗಮ್ಯ ಸ್ಥಳವನ್ನು ತಲುಪಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ahmedabad-delhi-new-bullet-train-project-details

ಈ ಹೊಸ ಅಹಮದಾಬಾದ್-ದೆಹಲಿ ಬುಲೆಟ್ ರೈಲು ಸಂಪರ್ಕವನ್ನು ಹೆಚ್ಚಿಸುವ ಜೊತೆಗೆ ಪ್ರವಾಸೋದ್ಯಮದ ಉತ್ತೇಜನದ ಉದ್ದೇಶದಿಂದ ದೇಶಾದ್ಯಂತ ಆರು ಹೊಸ ಹೈಸ್ಪೀಡ್ ರೈಲು ಯೋಜನೆಗಳನ್ನು ಪರಿಚಯಿಸುವ ಸರ್ಕಾರದ ಯೋಜನೆಯ ಭಾಗವಾಗಿದೆ. ಸೆಪ್ಟೆಂಬರ್ 2020 ರಲ್ಲಿ ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮ (ಎನ್ಎಚ್ಎಸ್ಆರ್‌ಸಿ) ಪ್ರಾರಂಭಿಸಿದ ಈ ಯೋಜನೆಯು ಪ್ರಸ್ತುತ ಕೇಂದ್ರದಿಂದ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ. ಅಹಮದಾಬಾದ್ - ಮುಂಬೈ ಬುಲೆಟ್ ರೈಲು ಸೇವೆ ಜುಲೈ 2026 ರ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದ್ದರೆ, ಈಗ ಎಲ್ಲರ ಕಣ್ಣುಗಳು ಅಹಮದಾಬಾದ್ - ದೆಹಲಿ ಬುಲೆಟ್ ರೈಲಿನ ವೇಗದ ಪ್ರಾರಂಭದತ್ತ ನೆಟ್ಟಿವೆ.

ಇದು ಈ ಎರಡು ಪ್ರಮುಖ ನಗರಗಳ ನಡುವಿನ ಪ್ರಯಾಣದಲ್ಲಿ ಕ್ರಾಂತಿಯನ್ನುಂಟು ಮಾಡಲು ಸಜ್ಜಾಗಿದೆ. ಭೂಸ್ವಾಧೀನವನ್ನು ಕಡಿಮೆ ಮಾಡಲು ಮತ್ತು ಅಂತಹ ಮೆಗಾ ಯೋಜನೆಗಳಿಗೆ ಸಂಬಂಧಿಸಿದ ದೀರ್ಘ ಕಾನೂನು ಹೋರಾಟಗಳನ್ನು ತಪ್ಪಿಸಲು ಅಸ್ತಿತ್ವದಲ್ಲಿರುವ ರೈಲ್ವೆ ಜಾಲದೊಂದಿಗೆ ಹಳಿಗಳ ಜೋಡಣೆಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ.

ahmedabad-delhi-new-bullet-train-project-details

ಮಲ್ಟಿಮೋಡಲ್ ಹಬ್ ಹೊಂದಿರುವ ಸಬರಮತಿ ನಿಲ್ದಾಣದಿಂದ ಈ ಸೇವೆ ಪ್ರಾರಂಭವಾಗಲಿದ್ದು, ಗಂಟೆಗೆ ಗರಿಷ್ಠ 350 ಕಿ.ಮೀ ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಕೆಲವೇ ದಿನಗಳಲ್ಲಿ ಈ ಹೊಸ ಮಾರ್ಗದ ಬುಲ್ಲೆಟ್ ರೈಲಿನ ಕುರಿತು ಹೆಚ್ಚಿನ ಮಾಹಿತಿ ಹೊರಬರಲಿದೆ. ಭಾರತದಲ್ಲಿ ಬುಲ್ಲೆಟ್ ರೈಲುಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, April 17, 2024, 15:38 [IST]
English summary
Ahmedabad delhi new bullet train project details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+