ಈ ವ್ಯಕ್ತಿಯ ಬಳಿಯಿವೆ ಮೂರೂವರೆ ಕೋಟಿ ಮೌಲ್ಯದ 20ಕ್ಕೂ ಹೆಚ್ಚು ಕ್ರೂಸರ್ ಬೈಕ್‌ಗಳು

ಹಲವರಿಗೆ ವಿವಿಧ ಬೈಕುಗಳನ್ನು ಚಾಲನೆ ಮಾಡುವುದರ ಜೊತೆಗೆ ಅವುಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ಭಾರತದಲ್ಲಿ ಅನೇಕ ಕ್ರಿಕೆಟಿಗರು, ಬಾಲಿವುಡ್ ತಾರೆಯರು, ಉದ್ಯಮಿಗಳು ಒಂದಕ್ಕಿಂತ ಹೆಚ್ಚು ಬೈಕುಗಳನ್ನು ಹೊಂದಿದ್ದಾರೆ.

ಈ ವ್ಯಕ್ತಿಯ ಬಳಿಯಿವೆ ಮೂರೂವರೆ ಕೋಟಿ ಮೌಲ್ಯದ 20ಕ್ಕೂ ಹೆಚ್ಚು ಕ್ರೂಸರ್ ಬೈಕ್‌ಗಳು

ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ವ್ಯಕ್ತಿಯೊಬ್ಬರು ಸುಮಾರು ರೂ.3.5 ಕೋಟಿ ಮೌಲ್ಯದ 20ಕ್ಕೂ ಹೆಚ್ಚು ಬೈಕುಗಳ ಸಂಗ್ರಹವನ್ನು ಹೊಂದಿದ್ದಾರೆ.ಇವೆಲ್ಲವೂ ಕ್ರೂಸರ್ ಬೈಕುಗಳು ಎಂಬುದು ವಿಶೇಷ. ಇವರು ಬಜಾಜ್ ಅವೆಂಜರ್'ನಿಂದ ಹಾರ್ಲೆ ಡೇವಿಡ್ಸನ್‌ವರೆಗೆ ಹಲವು ಬೈಕುಗಳನ್ನು ಹೊಂದಿದ್ದಾರೆ.

ಈ ವ್ಯಕ್ತಿಯ ಬಳಿಯಿವೆ ಮೂರೂವರೆ ಕೋಟಿ ಮೌಲ್ಯದ 20ಕ್ಕೂ ಹೆಚ್ಚು ಕ್ರೂಸರ್ ಬೈಕ್‌ಗಳು

ತಾವು 2002ರಿಂದ ಕ್ರೂಸರ್ ಬೈಕ್‌ಗಳ ಸಂಗ್ರಹವನ್ನು ಆರಂಭಿಸಿದ್ದಾಗಿ ಅವರು ತಿಳಿಸಿದ್ದಾರೆ. ಅವರ ಬಳಿ ಭಾರತದ ರಸ್ತೆಗಳಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಹಲವಾರು ಕ್ರೂಸರ್ ಬೈಕ್‌ಗಳಿವೆ. ಅವರ ಬಳಿಯಿರುವ ಬೈಕುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಈ ವ್ಯಕ್ತಿಯ ಬಳಿಯಿವೆ ಮೂರೂವರೆ ಕೋಟಿ ಮೌಲ್ಯದ 20ಕ್ಕೂ ಹೆಚ್ಚು ಕ್ರೂಸರ್ ಬೈಕ್‌ಗಳು

ಇಂಡಿಯನ್ ರೋಡ್ ಮಾಸ್ಟರ್

ಇಂಡಿಯನ್ ರೋಡ್ ಮಾಸ್ಟರ್ ಆರಾಮದಾಯಕ ಕ್ರೂಸರ್ ಬೈಕ್‌ಗಳಲ್ಲಿ ಒಂದಾಗಿದೆ. ಈ ವ್ಯಕ್ತಿಯ ಪ್ರಕಾರ ಇಂಡಿಯನ್ ರೋಡ್ ಮಾಸ್ಟರ್ ಕ್ರೂಸರ್ ಬೈಕ್ ಮೋಟರ್ ಸೈಕಲ್ ಜಗತ್ತಿನಲ್ಲಿ ರೋಲ್ಸ್ ರಾಯ್ಸ್‌ನಂತಿದೆ. ಇವರು ಕೆಂಪು ಬಣ್ಣದ ಇಂಡಿಯನ್ ರೋಡ್ ಮಾಸ್ಟರ್ ಕ್ರೂಸರ್ ಬೈಕ್ ಹೊಂದಿದ್ದಾರೆ.

ಈ ವ್ಯಕ್ತಿಯ ಬಳಿಯಿವೆ ಮೂರೂವರೆ ಕೋಟಿ ಮೌಲ್ಯದ 20ಕ್ಕೂ ಹೆಚ್ಚು ಕ್ರೂಸರ್ ಬೈಕ್‌ಗಳು

ಬಜಾಜ್ ಅವೆಂಜರ್

ಈ ಸೆಗ್ ಮೆಂಟಿನ ಮೊದಲ ಕ್ರೂಸರ್ ಬೈಕ್‌ಗಳಲ್ಲಿ ಬಜಾಜ್ ಅವೆಂಜರ್ ಸಹ ಒಂದು. ಅವರು ಫ್ಲೇರ್ ಯೆಲ್ಲೊ ಬಣ್ಣದ ಬಜಾಜ್ ಅವೆಂಜರ್ ಬೈಕ್ ಹೊಂದಿದ್ದಾರೆ. ಈ ಬೈಕ್ ಸಾಕಷ್ಟು ಹಳೆಯದಾದರೂ ಇನ್ನೂ ಉತ್ತಮವಾದ ಪರ್ಫಾಮೆನ್ಸ್ ನೀಡುತ್ತದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಈ ವ್ಯಕ್ತಿಯ ಬಳಿಯಿವೆ ಮೂರೂವರೆ ಕೋಟಿ ಮೌಲ್ಯದ 20ಕ್ಕೂ ಹೆಚ್ಚು ಕ್ರೂಸರ್ ಬೈಕ್‌ಗಳು

ಹಾರ್ಲೆ ಡೇವಿಡ್ಸನ್ ಬ್ರೇಕ್ ಔಟ್

ಭಾರತದಲ್ಲಿರುವ ಕೆಟ್ಟ ರಸ್ತೆಗಳಿಂದಾಗಿ ಹಾರ್ಲೆ ಡೇವಿಡ್ಸನ್ ಕಂಪನಿಯ ಈ ಬೈಕ್ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲಿಲ್ಲ. ಈ ಬೈಕ್ ಅನ್ನು ಕಂಪನಿಯು 2017ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತು.

ಈ ವ್ಯಕ್ತಿಯ ಬಳಿಯಿವೆ ಮೂರೂವರೆ ಕೋಟಿ ಮೌಲ್ಯದ 20ಕ್ಕೂ ಹೆಚ್ಚು ಕ್ರೂಸರ್ ಬೈಕ್‌ಗಳು

ಆದರೆ ಕಡಿಮೆ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದ ಕಾರಣಕ್ಕೆ 1.5 ವರ್ಷಗಳ ನಂತರ ಈ ಬೈಕಿನ ಮಾರಾಟವನ್ನು ನಿಲ್ಲಿಸಲಾಯಿತು. ಕಡಿಮೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಕಾರಣಕ್ಕೆ ಈ ಬೈಕ್ ಭಾರತದ ರಸ್ತೆಗಳಿಗೆ ಸೂಕ್ತವಾಗಿಲ್ಲ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಈ ವ್ಯಕ್ತಿಯ ಬಳಿಯಿವೆ ಮೂರೂವರೆ ಕೋಟಿ ಮೌಲ್ಯದ 20ಕ್ಕೂ ಹೆಚ್ಚು ಕ್ರೂಸರ್ ಬೈಕ್‌ಗಳು

ಟ್ರಯಂಫ್ ಥಂಡರ್ ಬರ್ಡ್

ಟ್ರಯಂಫ್ ಥಂಡರ್ ಬರ್ಡ್ ಬೈಕ್ ಬಗ್ಗೆ ಕೆಲವು ಜನರಿಗೆ ಮಾತ್ರ ತಿಳಿದಿದೆ. ಈ ಬೈಕ್‌ನಲ್ಲಿ ಅಳವಡಿಸಿರುವ ಶಕ್ತಿಯುತ 1700 ಸಿಸಿ ಎಂಜಿನ್ ಹೆದ್ದಾರಿಯಲ್ಲಿ ಅತ್ಯುತ್ತಮ ಸ್ಥಿರತೆಯನ್ನು ನೀಡುತ್ತದೆ.

ಈ ವ್ಯಕ್ತಿಯ ಬಳಿಯಿವೆ ಮೂರೂವರೆ ಕೋಟಿ ಮೌಲ್ಯದ 20ಕ್ಕೂ ಹೆಚ್ಚು ಕ್ರೂಸರ್ ಬೈಕ್‌ಗಳು

ಈ ಎಂಜಿನ್ 96 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ. ಶಕ್ತಿಯುತ ಎಂಜಿನ್‌ ಹೊಂದಿರುವ ಈ ಬೈಕಿನ ಒಟ್ಟು ತೂಕ 340 ಕೆ.ಜಿಗಳಾಗಿದೆ. ಟ್ರಯಂಫ್ ಥಂಡರ್ ಬರ್ಡ್ ಪ್ರತಿ ಲೀಟರ್ ಪೆಟ್ರೋಲಿಗೆ 19ರಿಂದ 20ಕಿ.ಮೀಗಳ ಮೈಲೇಜ್ ನೀಡುತ್ತದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಬಿಎಂಡಬ್ಲ್ಯು ಕೆ 1600 ಬಿ

ಈ ಬೈಕಿನ ಬಾಡಿಯನ್ನು ಕಾರ್ಬನ್ ಫೈಬರ್‌ನಿಂದ ನಿರ್ಮಿಸಲಾಗಿದೆ. ಈ ಕಾರಣದಿಂದಾಗಿ ಈ ಬೈಕ್ ವಿಶಿಷ್ಟ ಬಣ್ಣವನ್ನು ಹೊಂದಿದೆ. ಬಿಎಂಡಬ್ಲ್ಯು ಕೆ 1600 ಬಿ ಬೈಕ್ ಹೋಂಡಾ ಕಂಪನಿಯ ಗ್ಲೋಡ್ವಿಂಗ್ ಬೈಕಿಗೆ ಪೈಪೋಟಿ ನೀಡುತ್ತದೆ.

ಈ ವ್ಯಕ್ತಿಯ ಬಳಿಯಿವೆ ಮೂರೂವರೆ ಕೋಟಿ ಮೌಲ್ಯದ 20ಕ್ಕೂ ಹೆಚ್ಚು ಕ್ರೂಸರ್ ಬೈಕ್‌ಗಳು

ಅಡ್ವೆಂಚರ್ ಬೈಕ್ ಸೆಗ್ ಮೆಂಟಿನಲ್ಲಿ ಈ ಎರಡೂ ಬೈಕ್‌ಗಳು ಪರಸ್ಪರ ಪೈಪೋಟಿ ನೀಡುತ್ತವೆ. ಈ ಎರಡೂ ಬೈಕ್‌ಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ ಎಂಬುದು ಗಮನಾರ್ಹ.

ಚಿತ್ರಕೃಪೆ: ಮೋಟೋ ಗ್ರಾಫರ್

Most Read Articles

Kannada
English summary
Ahmedabad man owns more than 20 cruiser motorcycles worth Rs. 3.5 crore. Read in Kannada.
Story first published: Wednesday, May 19, 2021, 10:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X