ಮಾರುತಿ 800 ಕಾರಿನ ಹಿಂದಿನ ಸೀಟಿನಲ್ಲಿ ದೆವ್ವ? AI ಕ್ಯಾಮೆರಾದಲ್ಲಿ ಸೆರೆಯಾದ ಚಿತ್ರ

ಇತ್ತೀಚೆಗೆ ದೇಶದ ನಾನಾ ಕಡೆ ಸಂಚಾರಿ ನಿಯಮಗಳನ್ನು ವಾಹನ ಸವಾರರು ಉಲ್ಲಂಘಿಸುವುದನ್ನು ತಪ್ಪಿಸುವುದಕ್ಕಾಗಿ ಹಲವಾರು ವಿನೂತನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇರಳ ಸರ್ಕಾರ ಈ ವರ್ಷದ ಆರಂಭದಲ್ಲಿ ರಾಜ್ಯದಲ್ಲಿ ತೆಗೆದುಕೊಂಡಿದ್ದ ಒಂದು ನಿರ್ಧಾರ ಭಾರೀ ಸುದ್ದಿ ಮಾಡುತ್ತಿದೆ. ಕೇರಳ ಸರ್ಕಾರ ಅಳವಡಿಸಿರುವ AI ಟ್ರಾಫಿಕ್ ಕ್ಯಾಮೆರಾಗಳು ಸ್ಥಾಪನೆಯಾದಾಗಿನಿಂದ ಸುದ್ದಿಯಲ್ಲಿವೆ.

ಆರಂಭದಲ್ಲಿ, ಈ ಸಿಸ್ಟಂನಲ್ಲಿ ಹಲವಾರು ಸಮಸ್ಯೆಗಳಿದ್ದವು, ಮತ್ತು ಅವುಗಳು ಕಾಲಕಾಲಕ್ಕೆ ಬಗೆಹರಿಸುತ್ತಿದ್ದಾರೆ. ಕ್ಯಾಮೆರಾಗಳು ವಾಹನದ ನಂಬರ್ ಪತ್ತೆಹಚ್ಚಲು ಸಾಧ್ಯವಾಗದ ಅಥವಾ ತಪ್ಪು ಚಲನ್‌ಗಳನ್ನು ನೀಡಿದ ಉದಾಹರಣೆಗಳೂ ಇವೆ. AI ಕ್ಯಾಮೆರಾಗಳಿಂದ (AI Camera) ಕ್ಲಿಕ್ ಮಾಡಲಾದ ಕೆಲವು ಆಸಕ್ತಿದಾಯಕ ಫೋಟೋಗಳ ಸರಣಿಯನ್ನು ನಾವು ನೋಡಿದ್ದೇವೆ. ಅದೇ ರೀತಿ ಇತ್ತೀಚೆಗೆ, ಮಾರುತಿ 800 ಕಾರಿನ ಹಿಂಭಾಗದ ಸೀಟಿನಲ್ಲಿ 'ಭೂತ' ಇರುವ ಫೋಟೋ ವೈರಲ್ ಆಗಿದೆ.

AI Camera

ಮೋಟಾರು ವಾಹನ ಇಲಾಖೆಯಿಂದ (ಎಂವಿಡಿ) ಚಲನ್ (ದಂಡ) ನೋಟಿಸ್ ಸ್ವೀಕರಿಸಿದಾಗ ಮಾರುತಿ 800 (Maruti 800) ಮಾಲೀಕರು ಗೊಂದಲಕ್ಕೊಳಗಾದರು. ಹ್ಯಾಚ್‌ಬ್ಯಾಕ್‌ನ ಹಿಂಬದಿಯ ಸೀಟಿನಲ್ಲಿ ಚಾಲಕನ ಬಲ ಭುಜದ ಮೇಲೆ ಇಣುಕಿ ನೋಡುತ್ತಿರುವ ವ್ಯಕ್ತಿಯನ್ನು ಫೋಟೋ ಸ್ಪಷ್ಟವಾಗಿ ಕಾಣುತ್ತದೆ. ಕುತೂಹಲಕಾರಿಯಾಗಿ, AI ಕ್ಯಾಮೆರಾ ಫೋಟೋವನ್ನು ಕ್ಲಿಕ್ ಮಾಡುವ ಸಮಯದಲ್ಲಿ ಕಾರಿನ ಹಿಂದಿನ ಸೀಟಿನಲ್ಲಿ ಇಬ್ಬರು ಮಕ್ಕಳು ಇದ್ದರು ಮತ್ತು ಅವರು ಚಿತ್ರದಲ್ಲಿ ಕಾಣುವುದಿಲ್ಲ್.

ಚಲಿಸುತ್ತಿದ್ದ ಕಾರಿನಲ್ಲಿ ಚಾಲಕ ಮತ್ತು ಪ್ರಯಾಣಿಕರಿಬ್ಬರೂ ಸೀಟ್ ಬೆಲ್ಟ್ ಧರಿಸಿಲ್ಲ ಎಂದು ಎಐ ಕ್ಯಾಮರಾ ಗುರುತಿಸಿದ್ದರಿಂದ ಚಲನ್ ಕಳುಹಿಸಲಾಗಿದೆ. ಕೇರಳದ ಪಯ್ಯನ್ನೂರ್ ಪಟ್ಟಣದ ಬಳಿಯ ಮೇಲ್ಪ್ಪಲಂನಲ್ಲಿ ಫೋಟೋ ಕ್ಲಿಕ್ಕಿಸಲಾಗಿದೆ. ಕಾರಿನ ಚಾಲಕ ಆದಿತ್ಯನ್ ಗೊಂದಲಕ್ಕೊಳಗಾದರು ಮತ್ತು MVD ಅನ್ನು ಸಂಪರ್ಕಿಸಿದರು. ಆದರೆ ಮೋಟಾರು ವಾಹನ ಇಲಾಖೆಯ ಅಧಿಕಾರಿ ಬಳಿ ಯಾವುದೇ ನಿಖರವಾದ ಉತ್ತರವಿರಲಿಲ್ಲ.

ಇದರ ಬಗ್ಗೆ ಪರಿಶೀಲಿಸುತ್ತೇವೆ ಎಂದು ಉತ್ತರಿಸಿದರು. ಹಿಂದಿನ ಸೀಟಿನಲ್ಲಿರುವ ಮಕ್ಕಳು ಏಕೆ ಕಾಣಿಸುತ್ತಿಲ್ಲ ಎಂಬುದಕ್ಕೆ MVD ಬಳಿ ಉತ್ತರವಿಲ್ಲ. ಫೋಟೋದಲ್ಲಿರುವ ಮೂರನೇ ಮುಖವು ಮಹಿಳೆಯದ್ದಾಗಿದೆ. ನಮ್ಮ ಊಹೆಯ ಪ್ರಕಾರ ಇದು ಬಹುಶಃ ಕಾರಿನಲ್ಲಿದ್ದ ಮಕ್ಕಳಲ್ಲಿ ಒಬ್ಬರು, ಆದರೆ ಕಾರಿನೊಳಗಿನ ಕಪ್ಪು ಮತ್ತು ಬಿಳಿ ಫೋಟೋ ಮತ್ತು ಮುಂಭಾಗದ ಮಹಿಳೆಯ ನೆರಳು ಕೂಡ ಆಗಿರಬಹುದು ಅಥವಾ ಇತರ ತಾಂತ್ರಿಕ ದೋಷವಾಗಿರಬಹುದು.

ಕೇರಳದ AI ಕ್ಯಾಮೆರಾಗಳು ಈ ರೀತಿಯ 'ದೆವ್ವ'ಗಳನ್ನು ಸೆರೆಹಿಡಿಯುವುದನ್ನು ಹೊರತುಪಡಿಸಿ ಯಶಸ್ವಿ ಚಾಲನೆಯಲ್ಲಿವೆ. ರಾಜ್ಯ ಸಾರಿಗೆ ಸಚಿವರ ಪ್ರಕಾರ, ಎಐ ಕ್ಯಾಮೆರಾಗಳನ್ನು ಪರಿಚಯಿಸಿದಾಗಿನಿಂದ, ಜನರು ಹೆಚ್ಚು ಜಾಗರೂಕರಾಗಿರುವುದರಿಂದ ಸಂಚಾರ ಅಪರಾಧಗಳು ರಾಜ್ಯದಲ್ಲಿ ಕಡಿಮೆಯಾಗಿದೆ. ಇನ್ನು ಕೆಲವು ದಿನಗಳ ಹಿಂದೆ, ಹೆಲ್ಮೆಟ್ ಇಲ್ಲದೆ ಸ್ಕೂಟರ್‌ನಲ್ಲಿ ಪ್ರಯಾಣಿಸುವ ದಂಪತಿಗಳ ಫೋಟೋವನ್ನು AI ಕ್ಯಾಮೆರಾ ಸೆರೆಹಿಡಿದಿತ್ತು. ಈ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿತ್ತು.

ಸ್ಕೂಟರ್ ಹಿಂದೆ ಕುಳಿತಿದ್ದ ಯುವತಿಯ ತಾಯಿಗೆ ಫೋಟೋವನ್ನು ಕಳುಹಿಸಿದ್ದಕ್ಕಾಗಿ ಸ್ಕೂಟರ್ ರೈಡರ್ ಈಗ AI ಕ್ಯಾಮೆರಾಗೆ (AI Camera) ಧನ್ಯವಾದ ಹೇಳೀದ್ದಾರೆ. ಇದರ ಬಗ್ಗೆ ವಿಡಿಯೋವನ್ನು ಎಸ್‌ಎನ್‌ಪಿ ವ್ಲಾಗ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಇದು ವಾಸ್ತವವಾಗಿ AI ಕ್ಯಾಮೆರಾದಿಂದ ತೆಗೆದ ಚಿತ್ರವಾಗಿದ್ದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಪೋಸ್ಟ್‌ನ ಶೀರ್ಷಿಕೆಯಲ್ಲಿ, "ಧನ್ಯವಾದಗಳು ಕೇರಳ MVD, ಅನಿರೀಕ್ಷಿತ ಕ್ಲಿಕ್, ನನ್ನ ತಾಯಿಯ ಮೊಬೈಲ್ ಸಂಖ್ಯೆಗೆ ಕಳುಹಿಸಿದ್ದಕ್ಕಾಗಿ ಧನ್ಯವಾದಗಳು" ಎಂದು ಬರೆದಿದ್ದಾರೆ.

ಈ ಘಟನೆಯು ಕೇರಳದಲ್ಲಿ ಸಂಭವಿಸಿದೆ, ಆದರೆ ನಿಖರವಾದ ಸ್ಥಳದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಚಿತ್ರದಲ್ಲಿ ಇಬ್ಬರು ಜನರು ಸಾರ್ವಜನಿಕ ರಸ್ತೆಯಲ್ಲಿ ಹೋಂಡಾ ಡಿಯೋ ಸ್ಕೂಟರ್ ಸವಾರಿ ಮಾಡುತ್ತಿರುವುದನ್ನು ನಾವು ನೋಡುತ್ತೇವೆ. ಸವಾರ ಮತ್ತು ಪಿಲಿಯನ್ ಇಬ್ಬರೂ ರೈಡಿಂಗ್ ಹೆಲ್ಮೆಟ್ ಧರಿಸಿಲ್ಲ. ನೀವು ಎಚ್ಚರಿಕೆಯಿಂದ ನೋಡಿದರೆ, ಸವಾರನ ಕೈಯಲ್ಲಿ ಒಂದು ಹೆಲ್ಮೆಟ್ ಮತ್ತು ಮಹಿಳಾ ಪಿಲಿಯನ್ ಕೂಡ ಅವಳ ಕೈಯಲ್ಲಿರುವುದು ನೋಡಬಹುದಾಗಿದೆ.

ಆದರೆ, ಕಾರಣಾಂತರಗಳಿಂದ ಇಬ್ಬರೂ ಧರಿಸಿರಲಿಲ್ಲ. ಈ ಪೋಸ್ಟ್‌ನ ಕಾಮೆಂಟ್ ನಲ್ಲಿ ಸವಾರನನ್ನು ಗೇಲಿ ಮಾಡುವ ಕಾಮೆಂಟ್‌ಗಳಿಂದ ತುಂಬಿದೆ. ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕು ಎಂಬ ಕಾರಣಕ್ಕೆ ರೈಡರ್ ಉದ್ದೇಶಪೂರ್ವಕವಾಗಿಯೇ ಇದನ್ನು ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಯುವತಿಯ ವಿವರಗಳು ಬಹಿರಂಗವಾಗಿಲ್ಲ. ಫೇಸ್‌ಬುಕ್ ಬಳಕೆದಾರರು ಆ ಹುಡುಗಿಯು ರೈಡರ್‌ನ ಗೆಳತಿ ಎಂದು ಊಹಿಸಿದ್ದಾರೆ.

Article Published On: Monday, November 6, 2023, 15:27 [IST]
English summary
Ai camera catches ghost inside maruti 800 car in kerala details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+