ಕರ್ನಾಟಕದಿಂದ ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ತೆರಳುವವರಿಗೆ ಸಿಹಿಸುದ್ದಿ: ಜ.17ರಿಂದ ವಿಮಾನ ಸೇವೆ

ಪ್ರಮುಖ ಧಾರ್ಮಿಕ ಕ್ಷೇತ್ರ ಅಯೋಧ್ಯೆ (Ayodhya)ಯಲ್ಲಿ ಕೆಲವೇ ದಿನಗಳಲ್ಲಿ ರಾಮ ಮಂದಿರ ಲೋಕಾರ್ಪಣೆಗೊಳ್ಳಲಿದ್ದು, ಜನವರಿ 22 ರಂದು 'ರಾಮ ಲಲ್ಲಾ' ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಕರ್ನಾಟಕ (Karnataka) ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಇಲ್ಲಿಗೆ ವಿಮಾನ ಸಂಚಾರ ಪ್ರಾರಂಭವಾಗುತ್ತಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

ಜನವರಿ 17 ರಿಂದ ಬೆಂಗಳೂರು ಹಾಗೂ ಕೋಲ್ಕತ್ತಾದಿಂದ ಅಯೋಧ್ಯೆಗೆ ನೇರ ವಿಮಾನ ಸೇವೆ ಆರಂಭಿಸುವುದಾಗಿ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ಘೋಷಣೆ ಮಾಡಿದೆ. ಡಿಸೆಂಬರ್ 30 ರಂದು ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Maharishi Valmiki International Airport)ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ.

ಕರ್ನಾಟಕದಿಂದ ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ತೆರಳುವವರಿಗೆ ಸಿಹಿಸುದ್ದಿ: ಜ.17ರಿಂದ ವಿಮಾನ ಸೇವೆ

ಬೆಂಗಳೂರು (Bengaluru) - ಅಯೋಧ್ಯೆ (Ayodhya) ಮಾರ್ಗದಲ್ಲಿ ಓಡಾಟ ನಡೆಸುವ ಮೊದಲ ವಿಮಾನವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜ.17ರಂದು ಬೆಳಗ್ಗೆ 8.05ಕ್ಕೆ ಹೊರಟು 10.35ಕ್ಕೆ ಅಯೋಧ್ಯೆಯನ್ನು ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 3.40ಕ್ಕೆ ಹೊರಡುವ ವಿಮಾನವು ಸಂಜೆ 6.10ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದೆ. ಅಯೋಧ್ಯೆಯಿಂದ ಬೆಳಗ್ಗೆ 11.05ಕ್ಕೆ ಸಂಚಾರ ಆರಂಭಿಸಲಿರುವ ಈ ವಿಮಾನ, ಮಧ್ಯಾಹ್ನ 12.50ಕ್ಕೆ ಕೋಲ್ಕತ್ತಾವನ್ನು ತಲುಪಪಿದೆ.

ಕೋಲ್ಕತ್ತಾದಿಂದ ಮಧ್ಯಾಹ್ನ 1.25ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 3.10ಕ್ಕೆ ಅಯೋಧ್ಯೆಗೆ ಬರಲಿದೆ. ಸದ್ಯ ಟಿಕೆಟ್ ಬುಕ್ಕಿಂಗ್‌ ಕೂಡ ಆರಂಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಏರ್‌ಲೈನ್ಸ್‌ನ ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ airindiaexpress.com ಮತ್ತು ಇತರೆ ಪ್ರಮುಖ ಬುಕ್ಕಿಂಗ್‌ ಪ್ಲಾಟ್‌ಫಾರ್ಮ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸಬಹುದು. ಟಿಕೆಟ್ ದರ ರೂ.7000 ಇದೆ ಎಂದು ತಿಳಿದುಬಂದಿದೆ.

ಕರ್ನಾಟಕದಿಂದ ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ತೆರಳುವವರಿಗೆ ಸಿಹಿಸುದ್ದಿ: ಜ.17ರಿಂದ ವಿಮಾನ ಸೇವೆ

ಜನವರಿ 16ರಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯ ಐಎಕ್ಸ್ 2789 ವಿಮಾನವು ದೆಹಲಿಯಿಂದ ಅಯೋಧ್ಯೆಗೆ ದೈನಂದಿನ ಕಾರ್ಯಚರಣೆಯನ್ನು ಪ್ರಾರಂಭಿಸಲಿದೆ. ನವದೆಹಲಿಯಿಂದ ಬೆಳಗ್ಗೆ 11 ಗಂಟೆಗೆ ಪ್ರಯಾಣವನ್ನು ಪ್ರಾರಂಭಿಸಲಿದ್ದು, ಮಧ್ಯಾಹ್ನ 12.20ಕ್ಕೆ ಅಯೋಧ್ಯೆಗೆ ಬರಲಿದೆ. ಇಲ್ಲಿಂದ 12.50ಕ್ಕೆ ಸಂಚಾರ ಆರಂಭಿಸುವ ವಿಮಾನವು ಮಧ್ಯಾಹ್ನ 2.10ರ ಸುಮಾರಿಗೆ ನವದೆಹಲಿಗೆ ವಾಪಸ್ ಆಗಲಿದೆ ಎಂದು ವರದಿಯಾಗಿದೆ.

ಇಂಡಿಗೋ (IndiGo), ಜನವರಿ 15 ರಿಂದ ಮುಂಬೈ (Mumbai) ಮತ್ತು ಅಯೋಧ್ಯೆ (Ayodhya) ನಡುವೆ ವಿಮಾನ ಸೇವೆ ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಇತ್ತೀಚೆಗೆ, ನವದೆಹಲಿ (Delhi) ಹಾಗೂ ಅಹಮದಾಬಾದ್‌ (Ahemdabad)ನಿಂದಲೂ ಅಯೋಧ್ಯೆಗೆ ವಿಮಾನ ಸಂಚಾರ ಶುರು ಮಾಡುವುದಾಗಿ ಘೋಷಣೆ ಮಾಡಿತ್ತು. ಈ ವಿಮಾನ ನಿಲ್ದಾಣವನ್ನು ಮೊದಲ ಹಂತವಾಗಿ ರೂ.1,450 ವ್ಯಯಿಸಿ ಅಭಿವೃದ್ಧಿಪಡಿಸಲಾಗಿದೆ.

ಕರ್ನಾಟಕದಿಂದ ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ತೆರಳುವವರಿಗೆ ಸಿಹಿಸುದ್ದಿ: ಜ.17ರಿಂದ ವಿಮಾನ ಸೇವೆ

ವಿಮಾನ ನಿಲ್ದಾಣವು 2200 ಮೀಟರ್ ಉದ್ದದ ರನ್ ವೇಯನ್ನು ಒಳಗೊಂಡಿದ್ದು, 'ಎ-321' ವಿಮಾನಗಳನ್ನು ಇಳಿಸಲು ಸೂಕ್ತವಾಗಿದೆ. 6,500 ಚದರ ಮೀಟರ್‌ಗಳಷ್ಟು ವಿಸ್ತಾರವಾಗಿರುವ ಹೊಸ ಟರ್ಮಿನಲ್ ಕಟ್ಟಡ ಪೀಕ್ - ಅವರ್‌ನಲ್ಲಿ 600 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ವಾರ್ಷಿಕ 10 ಲಕ್ಷ ಪ್ರಯಾಣಿಕರನ್ನು ನಿಭಾಯಿಸಬಹುದು.

ಎರಡನೇ ಹಂತದಲ್ಲಿ 50,000 ಚದರ ಮೀಟರ್‌ನ ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಇದು ಪೀಕ್ - ಅವರ್‌ನಲ್ಲಿ 4,000 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಪಡೆದಿರಲಿದ್ದು, ವಾರ್ಷಿಕ 60 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವಷ್ಟು ಸುಸಜ್ಜಿತವಾಗಿರಲಿದೆ. ಡಿಸೆಂಬರ್ 14ರಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಈ ಏರ್‌ಪೋರ್ಟ್ ಗೆ ಪರವಾನಿಗೆಯನ್ನು ನೀಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 1, 2024, 9:35 [IST]
English summary
Air india express starts direct flights connecting bangalore to ayodhya january 17
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+