ಇನ್ನು ಮುಂದೆ ಈ ಅತ್ಯಾಧುನಿಕ ವಿಮಾನದಲ್ಲೇ ಹಾರಾಟ ನಡೆಸಲಿದ್ದಾರೆ ಪ್ರಧಾನಿ ಮೋದಿ

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಪ್ರಧಾನಿ ಮೋದಿ ಅವರು ಇನ್ನು ಮುಂದೆ ಹಾರಾಟ ನಡೆಸಲಿರುವ ಬೋಯಿಂಗ್ 777 ವಿಮಾನವು ಅಕ್ಟೋಬರ್ 1ರಂದು ಅಮೆರಿಕಾದಿಂದ ದೆಹಲಿಗೆ ಆಗಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಮುಂದೆ ಈ ಅತ್ಯಾಧುನಿಕ ವಿಮಾನದಲ್ಲೇ ಹಾರಾಟ ನಡೆಸಲಿದ್ದಾರೆ ಪ್ರಧಾನಿ ಮೋದಿ

ಈ ವಿಮಾನವನ್ನು ಏರ್ ಇಂಡಿಯಾ ಒನ್ ಎಂದು ಕರೆಯಲಾಗುವುದು. ಬೋಯಿಂಗ್ 777 ವಿಮಾನವು ಅಮೆರಿಕಾದ ಟೆಕ್ಸಾಸ್‌ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಎರಡು ಬಾರಿ ವಿಳಂಬವಾದ ನಂತರ ಬೋಯಿಂಗ್ ಈ ವಿಮಾನವನ್ನು ಭಾರತಕ್ಕೆ ತಲುಪಿಸಿದೆ. ಈ ಮೊದಲು ಬೋಯಿಂಗ್ 777 ವಿಮಾನವನ್ನು ಜುಲೈ ತಿಂಗಳಿನಲ್ಲಿ ತಲುಪಿಸುವ ನಿರೀಕ್ಷೆಯಿತ್ತು. ಆದರೆ ಕರೋನಾ ವೈರಸ್ ಸಮಸ್ಯೆಯಿಂದಾಗಿ ಸಾಧ್ಯವಾಗಿರಲಿಲ್ಲ.

ಇನ್ನು ಮುಂದೆ ಈ ಅತ್ಯಾಧುನಿಕ ವಿಮಾನದಲ್ಲೇ ಹಾರಾಟ ನಡೆಸಲಿದ್ದಾರೆ ಪ್ರಧಾನಿ ಮೋದಿ

ನಂತರ ಆಗಸ್ಟ್‌ ತಿಂಗಳಿನಲ್ಲಿ ತಲುಪಿಸುವ ನಿರೀಕ್ಷೆಯಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ತಲುಪಿಸಿರಲಿಲ್ಲ. ಕೊನೆಗೆ ಅಕ್ಟೋಬರ್ 1ರಂದು ಈ ವಿಮಾನವನ್ನು ಭಾರತಕ್ಕೆ ತಲುಪಿಸಲಾಗಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಇನ್ನು ಮುಂದೆ ಈ ಅತ್ಯಾಧುನಿಕ ವಿಮಾನದಲ್ಲೇ ಹಾರಾಟ ನಡೆಸಲಿದ್ದಾರೆ ಪ್ರಧಾನಿ ಮೋದಿ

ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಿಗಳ ಓಡಾಟಕ್ಕೆ ಎರಡು ಬೋಯಿಂಗ್ 777 ವಿಮಾನಗಳನ್ನು ಬಳಸಲಾಗುವುದು. ಈ ಪೈಕಿ ಒಂದು ವಿಮಾನವು ಮಾತ್ರ ಭಾರತಕ್ಕೆ ತಲುಪಿದೆ. ಮತ್ತೊಂದು ಬೋಯಿಂಗ್ 777 ವಿಮಾನವು ಕೆಲ ದಿನಗಳಲ್ಲಿಯೇ ತಲುಪಲಿದೆ ಎಂದು ವರದಿಗಳಾಗಿವೆ.

ಇನ್ನು ಮುಂದೆ ಈ ಅತ್ಯಾಧುನಿಕ ವಿಮಾನದಲ್ಲೇ ಹಾರಾಟ ನಡೆಸಲಿದ್ದಾರೆ ಪ್ರಧಾನಿ ಮೋದಿ

ಎರಡೂ ಬೋಯಿಂಗ್ 777 ವಿಮಾನಗಳು ಎಸ್‌ಪಿಎಸ್ (ಸೆಲ್ಫ್ ಪ್ರೊಟೇಕ್ಷನ್ ಸೂಟ್‌) ಗಳನ್ನು ಹೊಂದಿವೆ. ಎರಡೂ ವಿಮಾನಗಳು ಎಲ್ಎಐಆರ್ ಸಿಎಂ (ಲೈಟ್ ಏರ್ ಕ್ರಾಫ್ಟ್ ಇನ್ಫ್ರಾರೆಡ್ ಕೌಂಟರ್‌ ಮೆಶರ್) ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹೊಂದಿರಲಿವೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಇನ್ನು ಮುಂದೆ ಈ ಅತ್ಯಾಧುನಿಕ ವಿಮಾನದಲ್ಲೇ ಹಾರಾಟ ನಡೆಸಲಿದ್ದಾರೆ ಪ್ರಧಾನಿ ಮೋದಿ

ವಿವಿಐಪಿಗಳು ಪ್ರಯಾಣಿಸುವ ಈ ಎರಡು ಬೋಯಿಂಗ್ 777 ವಿಮಾನಗಳನ್ನು ಏರ್ ಇಂಡಿಯಾ ಪೈಲಟ್‌ಗಳು ಚಾಲನೆ ಮಾಡುವುದಿಲ್ಲ. ಬದಲಿಗೆ ಭಾರತೀಯ ವಾಯುಪಡೆಯ ಪೈಲಟ್‌ಗಳು ಚಾಲನೆ ಮಾಡಲಿದ್ದಾರೆ. ಸದ್ಯಕ್ಕೆ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳು ಏರ್ ಇಂಡಿಯಾ ಬೋಯಿಂಗ್ 747 ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ.

ಇನ್ನು ಮುಂದೆ ಈ ಅತ್ಯಾಧುನಿಕ ವಿಮಾನದಲ್ಲೇ ಹಾರಾಟ ನಡೆಸಲಿದ್ದಾರೆ ಪ್ರಧಾನಿ ಮೋದಿ

ಈ ಬೋಯಿಂಗ್ 747 ವಿಮಾನಗಳನ್ನು ಏರ್ ಇಂಡಿಯಾ ಪೈಲಟ್‌ಗಳು ಚಾಲನೆ ಮಾಡುತ್ತಿದ್ದಾರೆ. ಅವುಗಳನ್ನು ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ (ಎಐಇಎಸ್ಎಲ್) ನಿರ್ವಹಿಸುತ್ತದೆ. ಎರಡು ಬೋಯಿಂಗ್ 777 ವಿಮಾನಗಳ ಆಗಮನದ ನಂತರ ಬೋಯಿಂಗ್ 747 ವಿಮಾನಗಳನ್ನು ವಿವಿಐಪಿಗಳ ಸೇವೆಯಿಂದ ಹೊರಗಿಡಲಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಇನ್ನು ಮುಂದೆ ಈ ಅತ್ಯಾಧುನಿಕ ವಿಮಾನದಲ್ಲೇ ಹಾರಾಟ ನಡೆಸಲಿದ್ದಾರೆ ಪ್ರಧಾನಿ ಮೋದಿ

ಬೋಯಿಂಗ್ 747 ವಿಮಾನಗಳನ್ನು ಇನ್ನು ಮುಂದೆ ವಾಣಿಜ್ಯ ಕಾರ್ಯಾಚರಣೆಗಾಗಿ ಬಳಸಲಾಗುವುದು ಎಂದು ವರದಿಯಾಗಿದೆ. ಬೋಯಿಂಗ್ 777 ವಿಮಾನಗಳು ವಿವಿಐಪಿ ವಿಮಾನಗಳಾಗಿ ಬಳಕೆಯಾಗಲಿವೆ. ಟೆಕ್ಸಾಸ್‌ನಿಂದ 15 ಗಂಟೆಗಳ ಪ್ರಯಾಣದ ನಂತರ ಬೋಯಿಂಗ್ 777 ವಿಮಾನವು ನವ ದೆಹಲಿಗೆ ಆಗಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಮುಂದೆ ಈ ಅತ್ಯಾಧುನಿಕ ವಿಮಾನದಲ್ಲೇ ಹಾರಾಟ ನಡೆಸಲಿದ್ದಾರೆ ಪ್ರಧಾನಿ ಮೋದಿ

ಏರ್ ಇಂಡಿಯಾ ಒನ್ ಎಂದು ಕರೆಯಲ್ಪಡುವ ಬೋಯಿಂಗ್ 777 ವಿಮಾನವು ಸುರಕ್ಷತೆಯ ದೃಷ್ಟಿಯಿಂದ ಅಮೆರಿಕಾ ಅಧ್ಯಕ್ಷರ ಏರ್ ಫೋರ್ಸ್ ಒನ್ ವಿಮಾನಕ್ಕೆ ಸಮನಾಗಿದೆ ಎಂದು ಹೇಳಲಾಗಿದೆ. ವಿಮಾನವು ಇಂಧನ ತುಂಬುವುದಕ್ಕೂ ನಿಲ್ಲದೇ ಅಮೆರಿಕಾ ಹಾಗೂ ಭಾರತದ ನಡುವೆ ಹಾರಾಟ ನಡೆಸಬಲ್ಲದು ಎಂದೂ ಹೇಳಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಇನ್ನು ಮುಂದೆ ಈ ಅತ್ಯಾಧುನಿಕ ವಿಮಾನದಲ್ಲೇ ಹಾರಾಟ ನಡೆಸಲಿದ್ದಾರೆ ಪ್ರಧಾನಿ ಮೋದಿ

ಬೋಯಿಂಗ್ 777 ವಿಮಾನವನ್ನು ವಿವಿಐಪಿಗಳು ಕಚೇರಿ ರೀತಿಯಲ್ಲಿ ಬಳಸುವಂತಹ ಸೌಲಭ್ಯಗಳನ್ನು ನೀಡಲಾಗಿದೆ. ಈ ವಿಮಾನವು ಮೀಟಿಂಗ್ ರೂಂ ಹಾಗೂ ಅತ್ಯಾಧುನಿಕ ದೂರಸಂಪರ್ಕ ವ್ಯವಸ್ಥೆಗಳನ್ನು ಸಹ ಹೊಂದಿದೆ. ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗಾಗಿ ಪ್ರತ್ಯೇಕ ಘಟಕವನ್ನು ನೀಡಲಾಗಿದೆ.

Most Read Articles

Kannada
English summary
Air India One plane reserved for VVIPs arrives in India. Read in Kannada.
Story first published: Sunday, October 4, 2020, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X