ಸೇತುವೆ ಕೆಳಗೆ ತಗ್ಲಾಕಿ ಕೊಂಡ ವಿಮಾನ ಸಾಗಿಸುತ್ತಿದ್ದ ಟ್ರಕ್..!

ಭಾರತದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಕಳೆದ ಹಲವು ವರ್ಷಗಳಿಂದ ಹೊಸದಾಗಿ ಹಲವು ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳಲ್ಲಿ ಹಲವು ಫ್ಲೈ ಒವರ್, ಒವರ್ ಬ್ರಿಡ್ಜ್ ಹಾಗೂ ಎಲಿವೇಟೆಡ್ ರಸ್ತೆಗಳು ಸೇರಿವೆ.

ಸೇತುವೆ ಕೆಳಗೆ ತಗ್ಲಾಕಿ ಕೊಂಡ ವಿಮಾನ ಸಾಗಿಸುತ್ತಿದ್ದ ಟ್ರಕ್..!

ಸಾಮಾನ್ಯವಾಗಿ ಸೇತುವೆ ಹಾಗೂ ಫ್ಲೈ ಓವರ್‍‍ಗಳ ಮೇಲೆ ಹೆಚ್ಚು ತೂಕವನ್ನು ಸಾಗಿಸುವ ವಾಹನಗಳ ಓಡಾಟವನ್ನು ನಿಷೇಧಿಸಲಾಗಿರುತ್ತದೆ. ಈ ವಾಹನಗಳು ಸೇತುವೆಗಳ ಕೆಳಗೆ ಓಡಾಡುತ್ತವೆ. ಇದರಿಂದ ಯಾವುದೇ ರೀತಿಯ ತೊಂದರೆಗಳು ಉಂಟಾಗುವುದಿಲ್ಲ.

ಸೇತುವೆ ಕೆಳಗೆ ತಗ್ಲಾಕಿ ಕೊಂಡ ವಿಮಾನ ಸಾಗಿಸುತ್ತಿದ್ದ ಟ್ರಕ್..!

ಸೇತುವೆಗಳ ಕೆಳಗೆ ಓಡಾಡುವಾಗ ವಿಮಾನಗಳನ್ನು ಸಾಗಿಸುವ ಟ್ರಕ್ ಅಥವಾ ಲಾರಿ ಸಿಲುಕಿದರೆ ಏನಾಗುತ್ತದೆ? ಇದೇ ರೀತಿ ಕಾರ್ಗೊ ವಿಮಾನವನ್ನು ಸಾಗಿಸುತ್ತಿದ್ದ ಟ್ರಕ್‍‍ವೊಂದು ಸೇತುವೆ ಕೆಳಗೆ ಸಿಲುಕಿದ ಘಟನೆಯೊಂದು ನಡೆದಿದೆ. ಮುಂದೇನಾಯ್ತು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸೇತುವೆ ಕೆಳಗೆ ತಗ್ಲಾಕಿ ಕೊಂಡ ವಿಮಾನ ಸಾಗಿಸುತ್ತಿದ್ದ ಟ್ರಕ್..!

ಈ ಘಟನೆ ನಡೆದಿರುವುದು ದೇಶದಲ್ಲಿರುವ ಅತಿ ವೇಗದ ರಸ್ತೆಗಳಲ್ಲಿ ಒಂದಾದ ಪಶ್ಚಿಮ ಬಂಗಾಳದ ದುರ್ಗಾಪುರ ಎಕ್ಸ್ ಪ್ರೆಸ್‍‍ವೇ‍‍ನಲ್ಲಿ. ಈ ಟ್ರಕ್, ಇಂಡಿಯಾ ಪೋಸ್ಟ್ ನವರು ಬಳಸುತ್ತಿದ್ದ ಕಾರ್ಗೊ ವಿಮಾನವನ್ನು ಸಾಗಿಸುತ್ತಿದ್ದ ವೇಳೆ ಸೇತುವೆಯಡಿಯಲ್ಲಿ ಸಿಲುಕಿದೆ.

ಸೇತುವೆ ಕೆಳಗೆ ತಗ್ಲಾಕಿ ಕೊಂಡ ವಿಮಾನ ಸಾಗಿಸುತ್ತಿದ್ದ ಟ್ರಕ್..!

ಈ ಬೃಹತ್ ಗಾತ್ರದ ಟ್ರಕ್ ಹಲವು ಗಂಟೆಗಳ ಕಾಲ ಸೇತುವೆಯಡಿಯಲ್ಲಿ ಸಿಲುಕಿತ್ತು. ಸಂಬಂಧಪಟ್ಟ ಅಧಿಕಾರಿಗಳು ನಂತರ ಟ್ರಕ್ ಅನ್ನು ಅಲ್ಲಿಂದ ಚಲಿಸಲು ಅನುವು ಮಾಡಿಕೊಟ್ಟರು. ವಿಮಾನವನ್ನು ಸಾಗಿಸುತ್ತಿದ್ದ ಟ್ರಕ್‍‍ನಲ್ಲಿದ್ದ ಎಲ್ಲಾ ಟಯರ್‍‍ಗಳನ್ನು ಹೊರತೆಗೆಯಲಾಯಿತು.

ಸೇತುವೆ ಕೆಳಗೆ ತಗ್ಲಾಕಿ ಕೊಂಡ ವಿಮಾನ ಸಾಗಿಸುತ್ತಿದ್ದ ಟ್ರಕ್..!

ಇದರಿಂದಾಗಿ ಟ್ರಕ್‍‍ನ ಎತ್ತರವು ಇಳಿದು ಟ್ರಕ್ ಸೇತುವೆ ಅಡಿಯಿಂದ ಮುಂದೆ ಹೋಗಲು ಸಾಧ್ಯವಾಗಿದೆ. ಸೇತುವೆಯಡಿಯಲ್ಲಿ ಸಿಲುಕಿದ್ದ ಟ್ರಕ್ ಅನ್ನು ಮುಂದಕ್ಕೆ ಎಳೆಯಲು ಮತ್ತೊಂದು ಟ್ರಕ್‍‍ನ ಸಹಾಯವನ್ನು ಪಡೆಯಲಾಗಿದೆ.

ಸೇತುವೆ ಕೆಳಗೆ ತಗ್ಲಾಕಿ ಕೊಂಡ ವಿಮಾನ ಸಾಗಿಸುತ್ತಿದ್ದ ಟ್ರಕ್..!

ಈ ರೀತಿಯ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಹಲವು ಸ್ಥಳಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಬ್ಬಿಣದ ಬ್ಯಾರಿಕೇಡ್‍‍ಗಳನ್ನು ಹಾಕಿ ಅವುಗಳ ಮೇಲೆ ಸೂಚನಾ ಫಲಕಗಳನ್ನು ಅಳವಡಿಸಿರುತ್ತಾರೆ. ಈ ರೀತಿಯ ಸಮಸ್ಯೆಗಳಾಗಬಾರದೆಂಬ ಕಾರಣಕ್ಕೆ ಹಲವು ಟ್ರಕ್ ಚಾಲಕರು ಸೇತುವೆಗಳಿರುವ ರಸ್ತೆಗಳಲ್ಲಿ ಸಂಚರಿಸುವುದಿಲ್ಲ.

ಸೇತುವೆ ಕೆಳಗೆ ತಗ್ಲಾಕಿ ಕೊಂಡ ವಿಮಾನ ಸಾಗಿಸುತ್ತಿದ್ದ ಟ್ರಕ್..!

ಕಾರ್ಗೊ ವಿಮಾನವನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಚಾಲಕನು ಮೊದಲ ಬಾರಿಗೆ ಈ ರಸ್ತೆಯಲ್ಲಿ ಸಂಚರಿಸಿರುವ ಸಾಧ್ಯತೆಗಳಿವೆ. ಈ ಕಾರಣಕ್ಕೆ ಸೇತುವೆಯ ಎತ್ತರವನ್ನು ಅರಿಯದೇ ಅದರ ಕೆಳಗೆ ಸಿಲುಕಿದ್ದಾನೆ. ಈ ಮೊದಲು ಸಹ ಸೇತುವೆಗಳಡಿಯಲ್ಲಿ ಸಿಲುಕಿದ್ದ ಅನೇಕ ವಾಹನಗಳನ್ನು ಪಾರು ಮಾಡಲಾಗಿದೆ.

ಸೇತುವೆ ಕೆಳಗೆ ತಗ್ಲಾಕಿ ಕೊಂಡ ವಿಮಾನ ಸಾಗಿಸುತ್ತಿದ್ದ ಟ್ರಕ್..!

ಈ ರೀತಿಯ ಸಂದರ್ಭಗಳಲ್ಲಿ ಟ್ರಕ್‍‍ಗಳಲ್ಲಿರುವ ಟಯರ್‍‍ಗಳನ್ನು ಕಳಚುವುದರಿಂದ ಅವು ಸರಾಗವಾಗಿ ಮುಂದಕ್ಕೆ ಚಲಿಸುತ್ತವೆ. ಟ್ರಕ್‍‍ಗಳ ಟಯರ್‍‍ಗಳನ್ನು ಕಳಚುವುದರಿಂದ ಟ್ರಕ್‍‍ಗಳ ಎತ್ತರವು ಹಲವು ಇಂಚುಗಳಷ್ಟು ಕಡಿಮೆಯಾಗುತ್ತದೆ.

ಸೇತುವೆ ಕೆಳಗೆ ತಗ್ಲಾಕಿ ಕೊಂಡ ವಿಮಾನ ಸಾಗಿಸುತ್ತಿದ್ದ ಟ್ರಕ್..!

ಸೇತುವೆಯಡಿಯಲ್ಲಿ ಸಿಲುಕಿದ್ದ ಈ ಟ್ರಕ್‍‍ನ ಎತ್ತರವನ್ನು ಸಹ ಕಡಿಮೆಗೊಳಿಸ ಬೇಕಿತ್ತು. ಈ ಕಾರಣಕ್ಕೆ ಟಯರ್‍‍ಗಳನ್ನು ಕಳಚಲಾಗಿದೆ. ಟ್ರಕ್ ಸಿಲುಕಿದ್ದ ಸೇತುವೆಗೆ ಯಾವುದಾದರೂ ಹಾನಿಯಾಗಿದೆಯೇ ಎಂಬ ಮಾಹಿತಿ ದೊರೆತಿಲ್ಲ.

ಆದರೆ ವಾಹನಗಳನ್ನು ಸಂಚಾರಕ್ಕೆ ಬಿಡುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಸೇತುವೆಗೆ ಯಾವುದಾದರೂ ಹಾನಿಯಾಗಿದೆಯೇ ಇಲ್ಲವೇ ಎಂಬುದನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಲಿದ್ದಾರೆ.

ಸೇತುವೆ ಕೆಳಗೆ ತಗ್ಲಾಕಿ ಕೊಂಡ ವಿಮಾನ ಸಾಗಿಸುತ್ತಿದ್ದ ಟ್ರಕ್..!

ಸೇತುವೆಯಡಿಯಲ್ಲಿ ಟ್ರಕ್ ಸಿಲುಕಿ ಅದನ್ನು ಹೊರತೆಗೆಯುವುದನ್ನು ನೋಡಲು ಹಲವಾರು ಜನ ಸ್ಥಳದಲ್ಲಿ ಜಮಾಯಿಸಿದ್ದರು. ಈ ರೀತಿಯ ಕಾರ್ಗೊ ವಿಮಾನಗಳನ್ನು ಸಾಗಿಸುವಾಗ ಫ್ಲೈ ಒವರ್, ಓವರ್ ಬ್ರಿಡ್ಜ್ ಹಾಗೂ ಅಂಡರ್‍‍ಪಾಸ್‍‍ಗಳ ಎತ್ತರವನ್ನು ಗಮಿಸಿ ಸಂಚರಿಸುವುದು ಸೂಕ್ತ.

Most Read Articles

Kannada
English summary
Truck carrying aircraft gets stuck under a bridge - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X