ಕರೋನಾ ವೈರಸ್ ಎಫೆಕ್ಟ್: ಬದಲಾಗಲಿದೆ ವಿಮಾನಯಾನ ಪ್ರಯಾಣ ವಿಧಾನ
ಕರೋನಾ ವೈರಸ್ ಸೋಂಕಿನಿಂದಾಗಿ, ಪ್ರಪಂಚದಾದ್ಯಂತ ಎಲ್ಲಾ ರೀತಿಯ ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಕೆಲವು ದೇಶಗಳಲ್ಲಿ ವಿಮಾನ ಸೇವೆಗಳನ್ನು ಆರಂಭಿಸಿದ್ದರೂ, ಈ ಸೇವೆಗಳನ್ನು ಇನ್ನೂ ಪೂರ್ಣಪ್ರಮಾಣದಲ್ಲಿ ಆರಂಭಿಸಿಲ್ಲ. ಶೀಘ್ರದಲ್ಲೇ ಪೂರ್ಣಪ್ರಮಾಣದಲ್ಲಿ ಆರಂಭವಾಗುವ ನಿರೀಕ್ಷೆಗಳಿವೆ.

ಲಾಕ್‌ಡೌನ್ ನಂತರ ವಿಮಾನ ಸೇವೆಗಳು ಯಾವಾಗ ಆರಂಭವಾಗಲಿವೆ, ಜನರಿಗೆ ವಿಮಾನದಲ್ಲಿ ಕುಳಿತುಕೊಳ್ಳಲು ಸಾಮಾನ್ಯ ಸೀಟುಗಳನ್ನು ನೀಡಲಾಗುವುದೇ ಅಥವಾ ಅವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಶೇಷ ಸೀಟುಗಳನ್ನು ನೀಡಲಾಗುವುದೇ ಎಂಬ ಪ್ರಶ್ನೆಗಳು ಉದ್ಭವವಾಗಿವೆ.

ಲಾಕ್‌ಡೌನ್ ನಂತರ ವಿಮಾನಯಾನ ಪ್ರಯಾಣವು ಪೂರ್ಣವಾಗಿ ಬದಲಾಗಲಿದೆ ಎಂಬುದು ಸ್ಪಷ್ಟವಾಗಿದೆ. ವಿಮಾನಯಾನ ಕಂಪನಿಗಳು ವಿಮಾನಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿವೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಫ್ರಾನ್ಸ್‌ನ ಏರೋನಾಟಿಕಲ್ ಎಂಜಿನಿಯರ್ ಫ್ಲಾರೆನ್ಸ್ ಬಾರ್ಜೋಟ್ ಎಂಬುವವರು ಪ್ಲ್ಯಾನ್‌ಬೇ ಎಂಬ ಮಾದರಿಯನ್ನು ಸಿದ್ಧಪಡಿಸಿದ್ದಾರೆ. ಆದರೆ ಈಗಿರುವ ವಿಮಾನದ ಇಂಟಿರಿಯರ್ ಡಿಸೈನ್ ಅನ್ನು ತಕ್ಷಣಕ್ಕೆ ಬದಲಿಸಲು ಸಾಧ್ಯವಿಲ್ಲ.

ಈ ಫ್ಲೋರೆನ್ ಕಿಟ್ ಅನ್ನು ಸೀಟಿನ ಮೇಲೆ ಸುಲಭವಾಗಿ ಜೋಡಿಸಿ, ತೆಗೆಯಬಹುದು. ಈ ಕಿಟ್ ಅನ್ನು ವಿಮಾನ ಪ್ರಯಾಣಿಕರ ಸೀಟಿನ ಮಧ್ಯದಲ್ಲಿ ಅಳವಡಿಸಲಾಗುವುದು. ಇದಕ್ಕಾಗಿ ಸೀಟನ್ನು ಖಾಲಿ ಇಡಬೇಕಾಗುತ್ತದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ಕಿಟ್ ಅನ್ನು ಅಳವಡಿಸಿದ ನಂತರ, ಮೂರು ಜನರು ಕುಳಿತುಕೊಳ್ಳುವ ಸೀಟುಗಳಲ್ಲಿ ಇಬ್ಬರು ಕುಳಿತುಕೊಳ್ಳಬಹುದು. ಅವರ ನಡುವೆ ಶೀಲ್ಡ್ ಅಳವಡಿಸಲಾಗುತ್ತದೆ. ಈ ಕಿಟ್ ಅನ್ನು ಅಳವಡಿಸುವ ವಿಧಾನವು ಸುಲಭವಾಗಿದ್ದು, ಕಡಿಮೆ ಖರ್ಚನ್ನು ಹೊಂದಿರುತ್ತದೆ ಎಂದು ಫ್ಲೋರೆನ್ ಹೇಳಿದ್ದಾರೆ.

ಕಿಟ್ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಹಡಗು ಸರಬರಾಜುದಾರರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಫ್ಲೋರೆನ್ ಹೇಳಿದ್ದಾರೆ. ಭವಿಷ್ಯದಲ್ಲಿ ಈ ಕಲ್ಪನೆಯನ್ನು ಬಳಸಲಾಗುತ್ತದೆಯೇ ಇಲ್ಲವೇ ಎಂಬುದು ಖಚಿತವಾಗಿಲ್ಲವೆಂದು ಅವರು ಹೇಳುತ್ತಾರೆ.
ಚಿತ್ರಕೃಪೆ: ಫ್ಲೋರಿಯನ್ ಬಾರ್ಜೋಟ್


Click it and Unblock the Notifications