ಬಹುಕೋಟಿ ಬೆಲೆಯ ಮರ್ಸಿಡಿಸ್‌ ಖರೀದಿಸಿದ ಅಜಿಂಕ್ಯಾ ರಹಾನೆ: ಇದನ್ನು ರಸ್ತೆಯಲ್ಲಿ ಹಿಡಿಯುವವರಿಲ್ಲ!

ಭಾರತೀಯ ಸೆಲೆಬ್ರಿಟಿಗಳಿಗೆ ದುಬಾರಿ ಕಾರು ಮತ್ತು ಬೈಕ್‌ಗಳೆಂದರೆ ಎಲ್ಲಿಲ್ಲದೆ ಪ್ರೀತಿ. ಭಾರತದಲ್ಲಿ ಹಲವರಿಗೆ ದುಬಾರಿ ಕಾರುಗಳು ಮತ್ತು ಬೈಕ್‌ಗಳನ್ನು ಸಂಗ್ರಹಿಸುವುದು ಅವರ ಸಾಮಾಜಿಕ ಅಂತಸ್ತನ್ನು ಸಹ ತೋರಿಸುತ್ತದೆ. ಇದೀಗ ಭಾರತೀಯ ಕ್ರಿಕೆಟ್‌ ತಂಡದ ಆಟಗಾರ ದುಬಾರಿ ಬೆಲೆಯ ಐಷಾರಾಮಿ ಕಾರೊಂದನ್ನು ಖರೀದಿ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗಮನವನ್ನು ಸೆಳೆಯುತ್ತಿದೆ.

ಹೌದು, ಭಾರತೀಯ ಕ್ರಿಕೆಟ್‌ ತಂಡದ ಹೆಸರಾಂತ ಬ್ಯಾಟ್ಸ್‌ಮನ್ ಅಜಿಂಕ್ಯಾ ರಹಾನೆ ಹೊಸ ಮರ್ಸಿಡಿಸ್‌ ಕಾರೊಂದನ್ನು ಖರೀದಿಸಿದ್ದಾರೆ. ದುಬಾರಿ ಐಷಾರಾಮಿ ಮರ್ಸಿಡಿಸ್‌-ಮೇಬ್ಯಾಕ್ ಜಿಎಲ್‌ಎಸ್‌ 600 (Mercedes-Maybach GLS 600) ಎಸ್‌ಯುವಿಯನ್ನು ಅಜಿಂಕ್ಯಾ ರಹಾನೆ ಖರೀದಿ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾಗಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಕಾರನ್ನು ಇತ್ತೀಚೆಗಷ್ಟೇ ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಸಹ ಖರೀದಿಸಿ ಸುದ್ದಿಯಾಗಿದ್ದರು.

Ajinkya Rahane Bought Mercedes-Maybach GLS 600 SUV Went Viral

ಭಾರತೀಯ ಕ್ರಿಕೆಟರ್‌ ಅಜಿಂಕ್ಯಾ ರಹಾನೆ ಖರೀದಿಸಿರುವ ಈ ಕಾರಿನ ಬೆಲೆ ಸುಮಾರು ಮುರು ಕೊಟಿಯಾಗಿದೆ. ತುಂಬಾ ಐಷಾರಾಮಿ ಫೀಚರ್‌ಗಳನ್ನು ಹೊಂದಿರುವ ಈ ಕಾರು, ಮರ್ಸಿಡಿಸ್‌ ಪಾಳಯದಲ್ಲಿ ಸಾಕಷ್ಟು ಹೆಸರುವಾಸಿಯಾಗಿದೆ. ಭಾರತದ ರಸ್ತೆಗಳಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಕಂಡು ಬರುವ ಈ ಕಾರು, ನೋಡುಗರ ಮನವನ್ನು ಕ್ಷಣ ಮಾತ್ರದಲ್ಲಿ ತಮ್ಮತ್ತ ಸೆಳೆಯುತ್ತದೆ, ಮತ್ತು ಇದರ ಚಲಾವಣೆಯೂ ಸಹ ಸಾಕಷ್ಟು ಆರಾಮದಾಯಕವಾಗಿದೆ ಎಂಬುದು ಎಲ್ಲರ ಅಭಿಪ್ರಾಯ.

ಮರ್ಸಿಡಿಸ್‌ ಮೇ-ಬ್ಯಾಕ್ ಜಿಎಲ್‌ಎಸ್‌ 600 ಗ್ರಾಹಕರ ಬೇಡಿಕೆಯೆಂತೆ 4 ಸೀಟರ್ ಅಥವಾ 5 ಸೀಟರ್ ಮಾದರಿಯೊಂದಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಈ Mercedes Maybach GLS600 ಅತ್ಯಾಧುನಿಕ ಸೌಲಭ್ಯಗಳೊಂದಿಗೆ ತನ್ನ ಸರಣಿ ಕಾರುಗಳಲ್ಲಿಯೇ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಇದು ಸುಧಾರಿತ ತಂತ್ರಜ್ಞಾನ ಮತ್ತು ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿದೆ. ಈ ಎಸ್‍ಯುವಿಯ ಒಟ್ಟಾರೆ ವಿನ್ಯಾಸವು ಐಷಾರಾಮಿ ಮತ್ತು ಪ್ರೀಮಿಯಂ ಆಗಿದೆ.

Ajinkya Rahane Bought Mercedes-Maybach GLS 600 SUV Went Viral

ಈ ಕಾರಿನಲ್ಲಿ ಬಳಸಲಾಗಿರುವ ಲೆದರ್ ಕೂಡಾ ಮೇಬ್ಯಾಕ್ ಎಕ್ಸ್‌ಕ್ಲೂಸಿವ್ ನಪ್ಪಾ ಲೆದರ್ ಮಾದರಿಯಾಗಿದೆ. ಇದರೊಂದಿಗೆ ಹೊಸ ಕಾರಿನಲ್ಲಿ ಕೇವಲ ನಾಲ್ಕು ಆಸನಗಳ ಸೌಲಭ್ಯವಿದೆ. ವಿಸ್ತರಿತವಾಗಿ ಸೆಂಟರ್ ಕನ್ಸೊಲ್ ಹಿಂಬದಿಯ ಸವಾರಿಗೆ ಹೆಚ್ಚಿನ ಮಟ್ಟದ ಸವಾರಿ ಅನುಭವ ನೀಡಲು ಇದನ್ನು ಅಭಿವೃದ್ದಿಗೊಳಿಸಲಾಗಿದೆ. ಇದರೊಂದಿಗೆ ಹೊಸ ಕಾರಿನಲ್ಲಿ ಅಡಾಪ್ಟಿವ್ ಡಿಜಿಟಲ್ ಎಲ್ಇಡಿ ಹೆಡ್‌ಲೈಟ್ಸ್, ಹಿಂತೆಗೆದುಕೊಳ್ಳಬಹುದಾದ ಡೋರ್ ಹ್ಯಾಂಡಲ್‌, ಫಿಂಗರ್‌ಪ್ರಿಂಟ್ ರೀಡರ್ ಮತ್ತು ಪನೋರಮಿಕ್ ಸನ್‌ರೂಫ್ ಹೊಂದಿದೆ.

ಇದರಲ್ಲಿ ದೊಡ್ಡದಾದ ವರ್ಟಿಕಲ್ ಸ್ಲ್ಯಾಟ್ ಗ್ರಿಲ್, ವಿಂಡೋ ಲೈನ್, ಸೈಡ್-ಸ್ಟೆಪ್, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಲ್ಲಿ ಡಿಸೈನ್ ಆಕ್ಸೆಂಟ್, ರೂಫ್ ರೈಲ್ಸ್ ಮತ್ತು ಸ್ಪೋರ್ಟಿ ಎಕ್ಸಾಸ್ ನೋಟ್ ಹೊಂದಿದೆ. ಈ Mercedes Maybach GLS600 ಕಾರಿ ಹಿಂಭಾಗದಲ್ಲಿ ಫೋರ್ಡರ್‌ಗಳಲ್ಲಿ ರೆಫ್ರಿಜರೇಟರ್ ಅನ್ನು ಸಹ ಒಳಗೊಂಡಿದೆ. ಈ ಐಷಾರಾಮಿ ಎಸ್‍ಯುವಿಯಲ್ಲಿ 4.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ 9 ಜಿ-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 542 ಬಿಎಚ್‌ಪಿ ಮತ್ತು 730ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೊಸ ಎಂಜಿನ್‌ನಲ್ಲಿ 21ಬಿಎಚ್‌ಪಿ ಮತ್ತು 249ಎನ್ಎಂ ಟಾರ್ಕ್ ಕೊಡುಗೆ ನೀಡುವ ಸಂಯೋಜಿತ ಇಕ್ಯೂ ಬೂಸ್ಟ್ ಸ್ಟಾರ್ಟರ್-ಜನರೇಟರ್ ಅನ್ನು ಸಹ ಹೊಂದಿದೆ. ಈ ಎಸ್‍ಯುವಿಯು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, February 22, 2024, 10:19 [IST]
English summary
Ajinkya rahane bought mercedes maybach gls 600 suv went viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+