ಸಿನಿಮಾಗೆ 15 ಕೋಟಿ ಸಂಭಾವನೆ ಪಡೆಯುವ ನಟಿ ಆಟೋದಲ್ಲಿ ಸವಾರಿ! ನಿಜ ತಿಳಿದು ಶಾಕ್ ಆಗಬೇಡಿ!
ಭಾರತದಲ್ಲಿ ಕೇವಲ ಬೆಂಗಳೂರು ಮಾತ್ರವಲ್ಲ ಅದೆಷ್ಟೋ ನಗರಗಳು ತುಂಬಾ ಟ್ರಾಫಿಕ್‌ನಿಂದ ಕೂಡಿರುತ್ತವೆ. ಅದರಲ್ಲೂ ಮುಂಬೈ ನಗರದ ಟ್ರಾಫಿಕ್ ಜಾಮ್‌ಗೆ ಸೆಲೆಬ್ರಿಟಿಗಳು ಕೂಡ ಪರದಾಡುತ್ತಾರೆ. ಇತ್ತೀಚೆಗೆ ಬಾಲಿವುಡ್ ನಟಿ 'ಆಲಿಯಾ ಭಟ್' (Alia Bhatt) ಟ್ರಾಫಿಕ್ ಜಾಮ್‌ಗೆ ಕಂಗೆಟ್ಟು ಆಟೋದಲ್ಲಿ ಸವಾರಿ ಮಾಡಿದ್ದಾರೆ. ಮಾಸ್ಕ್ ಧರಿಸಿದ್ದರಾದರೂ ಪಾಪರಾಜಿಗಳು ಆಕೆಯನ್ನು ಗುರ್ತಿಸಿ ವಿಡಿಯೋವನ್ನು ಚಿತ್ರಿಸಿದ್ದಾರೆ. ಕೆಲ ಮೂಲಗಳ ಪ್ರಕಾರ ಅವರು ಶೂಟಿಂಗ್ ಮುಗಿಸಿ ಮರಳುತ್ತಿದ್ದಾಗ ವಿಡಿಯೋ ಚಿತ್ರಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ತೀವ್ರ ಟ್ರಾಫಿಕ್ ಜಾಮ್‌ನಲ್ಲಿ ಅವರ ದೊಡ್ಡ ಎಸ್‌ಯುವಿ ಬೇಗನೆ ತಲುಪುವುದಿಲ್ಲವೆಂದು ಆಟೋದಲ್ಲಿ ಹೊರಟಿದ್ದಾರೆ.
ನಮ್ಮ ಪ್ರಕಾರ ಹೀಗೆ ಆಟೋದಲ್ಲಿ ಪ್ರಯಾಣಿಸಲು ಎರಡು ಸಾಧ್ಯತೆಗಳಿರಬಹುದು. ಮೊದಲೇ ಹೇಳಿದಂತೆ, ಮುಂಬೈ ಟ್ರಾಫಿಕ್ ತಪ್ಪಿಸಲು ಹೀಗೆ ಮಾಡಿರಬಹುದು ಅಥವಾ ಇದು ಸಿನಿಮಾಗಾಗಿ ಪಿಆರ್ ಸ್ಟಂಟ್ ಅಥವಾ ಪ್ರಚಾರ ಚಟುವಟಿಕೆಯಾಗಿರಬಹುದು. ಅಂದಹಾಗೆ ಆಲಿಯಾ ಭಟ್ ಆಟೋದಲ್ಲಿ ಪ್ರಯಾಣಿಸುತ್ತಿರುವುದು ಇದೇ ಮೊದಲೇನಲ್ಲ. 2021 ರಲ್ಲಿ ಅವರ 'ಬ್ರಹ್ಮಾಸ್ತ್ರ' ಸಿನಿಮಾ ಬಿಡುಗಡೆಯಾಗುವ ಹಂತದಲ್ಲಿತ್ತು, ಆಗ ಕೂಡ ಇದೇ ರೀತಿ ಆಟೋದಲ್ಲಿ ಪ್ರಯಾಣಿಸಿದ್ದರು.

ಈಗಲೂ ಅವರ ಹೊಸ ಸಿನಿಮಾಗಾಗಿ ಈ ರೀತಿಯ ಸ್ಟಂಟ್ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಹೀಗೆ ಹೇಳಲು ಬಲವಾದ ಕಾರಣವು ಇದೆ. ಇತ್ತೀಚೆಗೆ ಅವರು ನಟಿಸಿರುವ 'ಜಿಗ್ರಾ' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಿನಿಮಾದಲ್ಲಿ ಹೆಚ್ಚಾಗಿ ಬೂದು ಪಟ್ಟಿಗಳನ್ನು ಹೊಂದಿರುವ ಆಫ್-ವೈಟ್ ಶರ್ಟ್ ಅನ್ನು ಹೆಚ್ಚಾಗಿ ಧರಿಸಿ ಕಾಣಿಸಿಕೊಂಡಿದ್ದಾರೆ. ಅದೇ ಶರ್ಟ್ ಅನ್ನು ಧರಿಸಿ ಈಗ ಆಟೋದಲ್ಲಿ ಪ್ರಯಾಣಿಸಿರುವುದೇ ಇದಕ್ಕೆ ಬಲವಾದ ಕಾರಣವಾಗಿದೆ.
ಆಲಿಯಾ ಭಟ್ ದುಬಾರಿ ಕಾರುಗಳು: ಆಲಿಯಾ ಭಟ್ ಮತ್ತು ಅವರ ಪತಿ ರಣಬೀರ್ ಕಪೂರ್ ದಂಪತಿಯು ರೇಂಜ್ ರೋವರ್ ವೋಗ್, ಆಡಿ ಆರ್ 8, ಮರ್ಸಿಡಿಸ್ ಎಎಂಜಿ ಜಿ 63, ಆಡಿ ಎ6, ಬಿಎಂಡಬ್ಲ್ಯು 7-ಸೀರಿಸ್, ಬೆಂಟ್ಲಿ ಕಾಂಟಿನೆಂಟಲ್ ಜಿಟಿ ವಿ8, ಆಡಿ ಎ8ಎಲ್, ಲ್ಯಾಂಡ್ ರೋವರ್ ರೇಂಜ್ ರೋವರ್, ಮರ್ಸಿಡಿಸ್-ಎಎಂಜಿ ಜಿ63, ಆಡಿ ಕ್ಯೂ5 ಮತ್ತು ಕ್ಯೂ7 ಕಾರುಗಳನ್ನು ಹೊಂದಿದ್ದಾರೆ.

ಇಷ್ಟು ಕಾರುಗಳನ್ನು ಹೊಂದಿರುವ ಇವರು ಆಟೋದಲ್ಲಿ ಪ್ರಯಾಣಿಸುತ್ತಾರೆಯೇ? ಅದು ಅಲ್ಲದೇ 2.50 ಕೋಟಿ ಮೌಲ್ಯದ ಲೆಕ್ಸಸ್ ಎಲ್ಎಂ ಎಂಬ ಐಷಾರಾಮಿ ಎಂಪಿವಿಯನ್ನು ಕೂಡ ಇತ್ತೀಚೆಗೆ ಖರೀದಿಸಿದ್ದಾರೆ. ಇದು ಐಷಾರಾಮಿ ಎಲ್‌ಎಂ ಸೋನಿಕ್ ಟೈಟಾನಿಯಂ ಬಣ್ಣದಲ್ಲಿದೆ. ಒಟ್ಟಾರೆ ದಂಪತಿಯು 11 ದುಬಾರಿ ಕಾರುಗಳು ಮತ್ತು ಎಸ್‌ಯುವಿಗಳನ್ನು ಹೊಂದಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ, ಆಲಿಯಾ ಮತ್ತು ರಣಬೀರ್ ಕಪೂರ್ ಇಬ್ಬರೂ ಒಂದೇ ಕಾರನ್ನು ಎರಡು ವಿಭಿನ್ನ ಬಣ್ಣಗಳಲ್ಲಿಯೂ ಹೊಂದಿದ್ದಾರೆ. ಅದೇ ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ ಎಲ್‌ಡಿಬ್ಲ್ಯೂಬಿ ಎಸ್‌ಯುವಿ. ಆಲಿಯಾ ಕಾರ್‌ಪಾಥಿಯನ್ ಗ್ರೇ ಬಣ್ಣದಲ್ಲಿ ಖರೀದಿಸಿದ್ದರೇ, ರಣಬೀರ್ ಬೆಲ್ಗ್ರಾವಿಯಾ ಗ್ರೀನ್ ಬಣ್ಣದಲ್ಲಿ ಖರೀದಿಸಿದ್ದಾರೆ.
ಆಲಿಯಾ ಭಟ್ ತಮ್ಮ ಕಾರುಗಳ ಮೇಲೆ ತಮ್ಮ ಸಿಗ್ನೇಚರ್ ಅನ್ನು ಇಡಿಸುತ್ತಾರೆ. ಅಲ್ಲದೇ ಅವರ ಬಹುತೇಕ ಕಾರುಗಳ ನೋಂದಣಿ ಸಂಖ್ಯೆ '1500' ಇದೆ. ಈ ನಿರ್ದಿಷ್ಟ ಸಂಖ್ಯೆಯ ಹಿಂದಿನ ಕಥೆ ತಿಳಿಯದಿದ್ದರೂ, ಅವರ ಆಡಿ ಕ್ಯೂ 7, ರೇಂಜ್ ರೋವರ್ ವೋಗ್, ಆಡಿ ಕ್ಯೂ 5, ಆಡಿ ಎ 6 ಮತ್ತು ಬಿಎಂಡಬ್ಲ್ಯು 7 ಸೀರಿಸ್ ಕಾರುಗಳು ಇದೇ ನಂಬರ್ ಪ್ಲೇಟ್‌ಗಳನ್ನು ಹೊಂದಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications