ಸಮುದ್ರದೊಳಗೆ ಧುಮುಕಿದ ಐಎನ್‌ಎಸ್ ಕಲ್ವರಿ ಆಟ್ಯಾಕ್ ಸಬ್‌ಮೆರಿನ್
ಭಾರತೀಯ ನೌಕಾ ಬಲ ಇಮ್ಮಡಿಯಾಗಿದ್ದು, ಐಎಎಸ್ ಕಲ್ವರಿ (INS Kalvari) ಆಟ್ಯಾಕ್ ಸಬ್ ಮೆರಿನ್ (ದಾಳಿ ಮಾಡುವ ಜಲಾಂತರ್ಗಾಮಿ ನೌಕೆ) ಸಮುದ್ರದೊಳಗೆ ಧುಮುಕಿದೆ. ಅಲ್ಲದೆ ಮುಂದಿನ ಆರು ತಿಂಗಳುಗಳ ಕಾಲ ಪರೀಕ್ಷಾರ್ಥ ಸಂಚಾರ ಪ್ರಯೋಗವನ್ನು ನಡೆಸಲಿದೆ.
Also Read: ಜಲಾಂತರ್ಗಾಮಿ ನೌಕೆಯಲ್ಲಿ ಕಪ್ಪು ಸಾಗರದೊಳಗೆ ಧುಮುಕಿದ ರಷ್ಯಾ ಅಧ್ಯಕ್ಷರು ಮುಂದಕ್ಕೆ ಓದಿ
ನಿಮ್ಮ ಮಾಹಿತಿಗಾಗಿ ಫ್ರಾನ್ಸ್ ಡಿಸಿಎನ್‌ಎಸ್ ಜೊತೆ ಮಾಡಿರುವ ಒಪ್ಪಂದದಂತೆ ಆರು ಸ್ಕಾರ್ಪೀನ್ ಡೀಸೆಲ್ ಎಲೆಕ್ಟ್ರಿಕ್ ಆಟ್ಯಾಕ್ ಜಲಾಂತರ್ಗಾಮಿ ನೌಕೆಗಳು (ಎಸ್‌ಎಸ್‌ಕೆ) ದೇಶಕ್ಕೆಹಸ್ತಾಂತರವಾಗಲಿದೆ. ಈ ಪೈಕಿ ಐಎನ್‌ಎಸ್ ಕಲ್ವರಿ ಮೊದಲ ಸಬ್ ಮೆರಿನ್ ಆಗಿದೆ.

ಮುಂಬೈನಲ್ಲಿರುವ ಭಾರತ ನೌಕಾದಳದ ಮಝಗಾನ್ ಡಾಕ್ ಯಾರ್ಡ್ ಲಿಮಿಟೆಡ್ (ಎಂಡಿಎಲ್) ಬಂದರಿನಲ್ಲಿ ಐಎನ್‌ಎಸ್ ಕಲ್ವರಿ ಜಲಾಂತರ್ಗಾಮಿ ನೌಕೆ ತೇಲುತ್ತಾ ತೇಲುತ್ತಾ ಮುಂದಕ್ಕೆ ಸಾಗುತ್ತಿದೆ.

ಇದಕ್ಕೂ ಮೊದಲು ಕಳೆದ ಎಪ್ರಿಲ್ 06ರಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಾನಿಧ್ಯದಲ್ಲಿ ಐಎನ್‌ಎಸ್ ಕಲ್ವರಿ ಲೋಕಾರ್ಪಣೆಯಾಗಿತ್ತು. ಈಗ ಮುಂದಿನ 10 ತಿಂಗಳುಗಳ ಕಾಲ ಪ್ರಾಯೋಗಿಕ ಸಂಚಾರವನ್ನು ನಡೆಸಲಿದೆ.

ಭಾರತೀಯ ನೌಕಾದಳದ ನಿಕಟವರ್ತಿಗಳಿಂದ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ 2016ನೇ ಸಾಲಿನಲ್ಲಿ ಐಎನ್‌ಎಸ್ ಕಲ್ವರಿ ಆಟ್ಯಾಕ್ ಜಲಾಂತರ್ಗಾಮಿಯನ್ನು ನಿಯೋಜಿಸಲಾಗುವುದು.

2005ರಲ್ಲಿ ಫ್ರಾನ್ಸ್‌ನ ಡಿಸಿಎನ್‌ಎಸ್ ಜೊತೆ ಭಾರತೀಯ ರಕ್ಷಣಾ ಸಚಿವಾಲಯ ನಡೆಸಿರುವ 3.6 ಬಿಲಿಯನ್ ಅಮೆರಿಕನ್ ಡಾಲರ್ ಒಪ್ಪಂದದಂತೆ ಸ್ಕಾರ್ಪೀನ್ ದರ್ಜೆಯ ಆರು ಜಲಾಂತರ್ಗಾಮಿ ನೌಕೆಗಳು ಭಾರತಕ್ಕೆ ಹಸ್ತಾಂತರವಾಗಲಿದೆ.

ಡಿಸಿಎನ್‌ಎಸ್ ಪರವಾನಗಿಯಲ್ಲಿ ಈ ಎಲ್ಲ ಆರು ಎಸ್‌ಎಸ್‌ಕೆ ಜಲಾಂತರ್ಗಾಮಿ ದಾಳಿ ಹಡಗುಗಳು 'ಪ್ರೊಜೆಕ್ಟ್ 75' ಹೆಸರಲ್ಲಿ ಮುಂಬೈನ ಎಂಡಿಎಲ್ ಬಂದಿರಿಯಲ್ಲಿ ನಿರ್ಮಾಣವಾಗುತ್ತಿದೆ. ಈ ಪೈಕಿ 4 ಸಾಂಪ್ರದಾಯಿಕ ಹಾಗೂ ಉಳಿದೆರಡು ಏರ್ ಇಂಡಿಪೆಂಡೆಂಟ್ ಪ್ರೊಪಲ್ಯೂಷನ್ (ಎಐಪಿ) ವ್ಯವಸ್ಥೆಯನ್ನು ಹೊಂದಿದ್ದು ದೀರ್ಘ ಕಾಲದ ವರೆಗೆ ನೀಡಿನಡಿಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುತ್ತದೆ.

ಈ ಪೈಕಿ ಪ್ರೊಜೆಕ್ಟ್ 75 ಯೋಜನೆಯ ಅಡಿಯಲ್ಲಿ ಸಾಪ್ಕೀನ್ ದರ್ಜೆಯ ಉಳಿದೈದು ಜಲಾಂತರ್ಗಾಮಿ ನೌಕೆಗಳು 2020ರ ವೇಳೆಯಾಗುವ ಹಸ್ತಾಂತರವಾಗಲಿದೆ. ಅಲ್ಲದೆ ಮುಂದಿನ ಎರಡು ದಶಕಗಳಷ್ಟು ಕಾಲ ಭಾರತೀಯ ನೌಕಾಪಡೆಗೆ ತನ್ನ ಸೇವೆಯನ್ನು ಸಲ್ಲಿಸಲಿದೆ.

ಇದರಲ್ಲಿ ಅತಿ ವಿಸ್ಪೋಟಕ ಆರು 533 ಎಂಎಂ ಟಾರ್ಪೆಡೊ ಟ್ಯೂಬ್, ಎಸ್‌ಎಂ-39 ಎಕ್ಸೊಸೆಟ್ ಬ್ಲಾಕ್ 2 ಹಡಗು ನಿರೋಧಕ ಕ್ಷಿಪಣಿಗಳು ಹಾಗೂ ಅತ್ಯಾಧುನಿಕ ಸಂವೇದಕಗಳನ್ನು ಹೊಂದಿರಲಿದೆ.

ದೇಶಕ್ಕೆ 24-30ರಷ್ಟು ಜಲಾಂತರ್ಗಾಮಿಯ ಅವಶ್ಯಕತೆಯಿದ್ದು, ಆದರೆ ಸದ್ಯ 14ರಷ್ಟು ಮಾತ್ರ ಸೇವೆಯಲ್ಲಿದೆ. ಇನ್ನೊಂದೆಡೆ ನೆರೆಯ ಚೀನಾದಲ್ಲಿ 68 ಹಾಗೂ ಪಾಕಿಸ್ತಾನದಲ್ಲಿ ಐದು ಸಬ್ ಮೆರಿನ್ ಗಳನ್ನು ಹೊಂದಿದೆ. ಅಲ್ಲದೆ ಸದ್ಯದಲ್ಲೇ ಪಾಕಿಸ್ತಾನವು ಮತ್ತಷ್ಟು ಆರು ಸಬ್ ಮೆರಿನ್ ಗಳನ್ನು ಚೀನಾದಿಂದ ಖರೀದಿಸಲಿದೆ.

ಈ ನಿಟ್ಟಿನಲ್ಲಿ ಭಾರತ ಎಚ್ಚೆತ್ತುಕೊಂಡಿದ್ದು, ನೌಕಾ ಸೇನೆಯಲ್ಲೂ ನೂತನ ಆಟ್ಯಾಕ್ ಸಬ್ ಮೆರಿನ್ ಸೇರ್ಪಡೆಗೊಳಿಸುವ ಮೂಲಕ ಮತ್ತಷ್ಟು ಬಲ ಪ್ರದರ್ಶಿಸಿದೆ.

ಸಾಗರವೆಂಬ ಮಾಯಾಲೋಕದಲ್ಲಿ ಜಲಾಂತರ್ಗಾಮಿ ಪ್ರವಾಸ


Click it and Unblock the Notifications








