ಭಾರತದ ಚೊಚ್ಚಲ ಬುಲೆಟ್ ರೈಲಿನ 'ನೀಲಿ ನಕ್ಷೆ'; ತಿಳಿದುಕೊಳ್ಳಬೇಕಾದ 10 ಅಂಶಗಳು

By Nagaraja

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ತರ ಯೋಜನೆಯಾಗಿರುವ ಚೊಚ್ಚಲ ಬುಲೆಟ್ ರೈಲು ಓಡಾಟಕ್ಕೆ ನೀಲಿ ನಕ್ಷೆ ಸಿದ್ಧಗೊಂಡಿದೆ. ಈ ಸಂಬಂಧ ಜಪಾನ್ ಪ್ರಧಾನಿ ಶಿನ್ಜೊ ಅಬೆ ಜೊತೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿಕೊಂಡಿದ್ದಾರೆ.

Also Read: ಜಗತ್ತಿನ ಅತಿ ವೇಗದ ಬುಲೆಟ್ ರೈಲುಗಳು

ಪ್ರಸ್ತುತ ಲೇಖನದಲ್ಲಿ ಭಾರತದ ಚೊಚ್ಚಲ ಬುಲೆಟ್ ರೈಲು ಬಗ್ಗೆ ನೀವು ತಿಳಿದು ಕೊಳ್ಳಬೇಕಾಗಿರುವ 10 ಪ್ರಮುಖ ಅಂಶಗಳನ್ನು ಮೆಲುಕು ಹಾಕಲಿದ್ದೇವೆ. ಇದಕ್ಕಾಗಿ ಚಿತ್ರಪುಟದತ್ತ ಮುಂದುವರಿಯಿರಿ

01. ಮುಂಬೈ-ಅಹಮದಾಬಾದ್

01. ಮುಂಬೈ-ಅಹಮದಾಬಾದ್

ಮುಂಬೈ ಮತ್ತು ಅಹಮದಾಬಾದ್ ನಗರಗಳಿಗೆ ದೇಶದ ಮೊತ್ತ ಮೊದಲ ಬುಲೆಟ್ ರೈಲು ಕನಸಿನ ಭಾಗ್ಯ ದೊರತಿದೆ. ಈ ಎರಡು ನಗರಗಳು ಹೈ ಸ್ಪೀಡ್ ಕನಸನ್ನು ನನಸಾಗಿಸಲಿದೆ.

02. ಎರಡೇ ತಾಸಿನಲ್ಲಿ ಮುಂಬೈಗೆ

02. ಎರಡೇ ತಾಸಿನಲ್ಲಿ ಮುಂಬೈಗೆ

ಇದರೊಂದಿಗೆ ಮುಂಬೈ-ಅಹಮದಾಬಾದ್ ನಡುವಣ ಪ್ರಯಾಣ ಅವಧಿ ಏಳು ತಾಸಿನಿಂದ ಬರಿ ಎರಡು ಗಂಟೆಗಳಿಗೆ ಇಳಿಕೆಯಾಗಲಿದೆ.

03. ಕಾಮಗಾರಿ

03. ಕಾಮಗಾರಿ

2017 ಅಥವಾ 2018 ಆರಂಭದಲ್ಲೇ ಮುಂಬೈ-ಅಹಮದಾಬಾದ್ ನಡುವಣ ಹೈ ಸ್ಪೀಡ್ ರೈಲು ಕಾಮಗಾರಿ ಆರಂಭಗೊಳ್ಳಲಿದ್ದು, ಐದು ವರ್ಷಗಳ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳುವ ಗುರಿಯನ್ನಿಟ್ಟುಕೊಳ್ಳಲಾಗಿದೆ.

04. ವೇಗ

04. ವೇಗ

ಈ ಯೋಜನೆಯಂತೆ ಬುಲೆಟ್ ರೈಲುಗಳು ಗಂಟೆಗೆ 300ರಿಂದ 350 ಕೀ.ಮೀ. ವೇಗದಲ್ಲಿ ಸಂಚರಿಸಲಿದ್ದು, ಒಟ್ಟು 508 ಕೀ.ಮೀ. ದೂರವನ್ನು ಕ್ರಮಿಸಲಿದೆ.

05. 11 ನಿಲ್ದಾಣಗಳು

05. 11 ನಿಲ್ದಾಣಗಳು

ಪ್ರಸ್ತುತ ಯೋಜನೆಯು ಮುಂಬೈ ಹಾಗೂ ಅಹಮಾದಾಬಾದ್ ನಡುವಣ ಪ್ರಮುಖ ನಗರಗಳಾದ ಥಾಣೆ, ವಿರಾರ್, ಸೂರತ್, ಭರುಚ್ ಮತ್ತು ವಡೋದರಾ ಸೇರಿದಂತೆ 11 ನಿಲ್ದಾಣಗಳನ್ನು ಸಂಪರ್ಕಿಸಲಿದೆ.

06. ಯೋಜನಾ ವೆಚ್ಚ

06. ಯೋಜನಾ ವೆಚ್ಚ

ಪ್ರಾಥಮಿಕ ಅಂಕಿಅಂಶಗಳ ಪ್ರಕಾರ ನಿರ್ಮಾಣದ ಒಟ್ಟು ಯೋಜನಾ ವೆಚ್ಚ 98,805 ಕೋಟಿ ರು.ಗಳೆಂದು ಅಂದಾಜಿಸಲಾಗಿದೆ.

07. ಜಪಾನ್ ಆರ್ಥಿಕ ನೆರವು

07. ಜಪಾನ್ ಆರ್ಥಿಕ ನೆರವು

ಭಾರತದ ಈ ಮಹತ್ತರ ಯೋಜನೆಯ ಬಹುಪಾಲು ಅಂದರೆ ಶೇಕಡಾ 81ರಷ್ಟು (ಅಂದಾಜು 79,380 ಕೋಟಿ ರು. ) ಆರ್ಥಿಕ ನೆರವನ್ನು ನೀಡಲಿರುವ ಜಪಾನ್ ಇಂಟರ್ ನ್ಯಾಷನಲ್ ಕಾರ್ಪೋರೇಷನ್ ಏಜೆನ್ಸಿ 'ಸಾಫ್ಟ್ ಲೋನ್' ಪ್ರಕಾರ ಶೇಕಡಾ 0.1 ರಷ್ಟು ಬಡ್ಡಿದರವನ್ನು ಈಡು ಮಾಡಲಿದೆ.

08. ಮೇಕ್ ಇನ್ ಇಂಡಿಯಾ

08. ಮೇಕ್ ಇನ್ ಇಂಡಿಯಾ

ಇದು ಕೂಡಾ ಮೇಕ್ ಇನ್ ಇಂಡಿಯಾ ಭಾಗವಾಗಿದ್ದು, ಶೇಕಡಾ 20ರಷ್ಟು ಬಿಡಿಭಾಗಗಳನ್ನು ಮಾತ್ರ ಜಪಾನ್ ನಿಂದ ಆಮದು ಮಾಡಿಕೊಳ್ಳಲಾಗುವುದು.

09. ಮುಂಬೈ ನಿಲ್ದಾಣ

09. ಮುಂಬೈ ನಿಲ್ದಾಣ

ಬುಲೆಟ್ ರೈಲು ನಿಲ್ದಾಣಕ್ಕಾಗಿ ಮುಂಬೈನಲ್ಲಿ ಭಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಆಯ್ಕೆ ಮಾಡಲಾಗಿದೆ. ಇದು ಮೂರು ಹಂತದ ನೆಲಮಹಡಿಗಳನ್ನು ಹೊಂದಲಿದ್ದು, ವಾಣಿಜ್ಯ ನಗರಿಗೆ ಯಾವುದೇ ಧಕ್ಕೆಯುಂಟಾಗುವುದಿಲ್ಲ.

10. ಕೊನೆಗೂ ಶಿಂಕಾನ್ಸೆನ್ ಭಾರತಕ್ಕೆ

10. ಕೊನೆಗೂ ಶಿಂಕಾನ್ಸೆನ್ ಭಾರತಕ್ಕೆ

ಜಪಾನ್‌ನಲ್ಲಿ ಶಿಂಕಾನ್ಸೆನ್ ಎಂದು ಅರಿಯಲ್ಪಡುವ ಬುಲೆಟ್ ಟ್ರೇನ್‌ಗಳು ಭಾರತದ ದೀರ್ಘ ಕಾಲದ ಯೋಜನೆಯಾಗಿದೆ.

ಭಾರತದ ಚೊಚ್ಚಲ ಬುಲೆಟ್ ರೈಲಿನ 'ನೀಲಿ ನಕ್ಷೆ'; ತಿಳಿದುಕೊಳ್ಳಬೇಕಾದ 10 ಅಂಶಗಳು

ಜಪಾನ್ ಮ್ಯಾಗ್ಲೆವ್ ವಿಶ್ವದಾಖಲೆ

Article Published On: Monday, February 22, 2016, 9:54 [IST]
English summary
All you need to know about the India's first bullet train corridor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+