ನೀವು ನೋಡಿರದ ಅದ್ಭುತಗಳಲ್ಲಿ ಅತಿ ಅದ್ಭುತ ರಸ್ತೆ ಸೇತುವೆಗಳಿವು

ಈ ಜಗತ್ತು ಎಷ್ಟು ಸುಂದರ..! ಪ್ರಕೃತಿ ದತ್ತವಾದ ಪ್ರದೇಶಗಳನ್ನು ಮಾನವ ತನ್ನ ಬುದ್ಧಿ ಶಕ್ತಿ ಉಪಯೋಗಿಸಿ ಮನೋಹರ ತಾಣವಾಗಿ ಬದಲಾಯಿಸಿದ್ದಾನೆ. ಪ್ರವಾಸದ ಅವಕಾಶ ಸಿಕ್ಕಿದರೆ ಯಾವತ್ತೂ ಇಂತಹ ಸ್ಥಳಗಳಿಗೆ ಭೇಟಿ ಕೊಡಲು ಮಿಸ್ ಮಾಡಬೇಡಿರಿ ಎಂಬುದು ನಮ್ಮ ಸಲಹೆಯಾಗಿದೆ.

ಈ ವಿಸ್ಮಯಕಾರಿ ಜಗತ್ತಿನಲ್ಲಿ ಪ್ರಕೃತಿ ದತ್ತವಾದ ಹಾಗೂ ಮಾನವ ನಿರ್ಮಿತ ಹಲವಾರು ಅದ್ಭುತ ಸೃಷ್ಟಿಗಳಿವೆ. ಇಂತಹ ವಿಸ್ಮಯಕಾರಿ ಚಿತ್ರಗಳನ್ನು ನೋಡುವುದೇ ಒಂಥರ ಮನಸ್ಸಿಗೆ ಮುದ ನೀಡುತ್ತದೆ.

ಡ್ರೈವ್ ಸ್ಪಾರ್ಕ್‌ನ ಇಂದಿನ ಈ ಲೇಖನದಲ್ಲಿ ಅದ್ಭತಗಳಲ್ಲಿ ಅತಿ ಅದ್ಭುತ ಎನಿಸಿರುವ ಜಗತ್ತಿನ ಇಂತಹ ಶ್ರೇಷ್ಠ ರಸ್ತೆ ಹಾಗೂ ಸೇತುವೆಯ ಮಾಹಿತಿಯ ಖಣಜವನ್ನೇ ನಿಮ್ಮ ಮುಂದಿಡುತ್ತಿದ್ದೇವೆ. ಇದರಲ್ಲಿ ಭಾರತದ ರಸ್ತೆ, ಸೇತುವೆಗಳು ಸೇರಿಕೊಂಡಿರುವುದು ಲೇಖನ ಓದುವ ನಿಮ್ಮ ಆಸಕ್ತಿಯನ್ನು ಖಂಡಿತ ಇಮ್ಮಡಿಗೊಳಿಸಲಿದೆ. ಹಾಗಿದ್ದರೆ ಬನ್ನಿ ಒಂದೊಂದೇ ಪುಟ ಮುಂದಕ್ಕೆ ತಿರುವುತ್ತಾ ವಿಸ್ಮಯಕಾರಿ ಜಗತ್ತಿನ ಬೆರಗುಗೊಳಿಸುವ ರೋಡ್ ಹಾಗೂ ಬ್ರಿಡ್ಜ್‌ಗಳ ಬಗ್ಗೆ ಮಾಹಿತಿ ಪಡೆಯೋಣವೇ...

Millau Viaduct - France

Millau Viaduct - France

ಜಗತ್ತಿನ ಅತಿ ಎತ್ತರದ ಸೇತುವೆ ಎಂಬ ಹೆಗ್ಗಳಿಕೆಗೆ ಫ್ರಾನ್ಸ್‌ ಮಿಲಾವೂ ವಯಡಕ್ಟ್ ಸೇತುವೆ ಪಾತ್ರವಾಗಿದೆ. ಇದನ್ನು ನದಿಯಿಂದ 343 ಮೀಟರ್ (1,125 ಅಡಿ) ಎತ್ತರದಲ್ಲಿ ಕಟ್ಟಲಾಗಿದ್ದು ನೋಡಲು ಆಕರ್ಷಕವಾಗಿದೆ.

Atlantic Road Bridge - Norway

Atlantic Road Bridge - Norway

ಹಲವಾರು ಕಾರಣಗಳಿಂದಾಗಿ ವಿಶ್ವದ ಕ್ರೇಜಿ ಸೇತುವೆಯಾಗಿ ಇದನ್ನು ಪರಿಗಣಿಸಬಹುದು. ಇಂದು ಅಂಟ್ಲಾಟಿಕ್ ಸಮುದ್ರದ ಹಲವಾರು ಸಣ್ಣ ಸಣ್ಣ ದ್ವೀಪಗಳ ನಡುವೆ ಬಂಧಿಸಲಾಗಿದೆ. ಇನ್ನು ಸಮುದ್ರ ಅಲೆ ಅಪ್ಪಳಿಸುತ್ತಿರುವಂತೆಯೇ ಮೈ ಜುಮ್ ಅನಿಸುತ್ತಿದೆ. ಆದರೆ ಅಲ್ಲಿನವರಿಗಿದು ಸಾಮಾನ್ಯ ಅನುಭವ.

Danyang–Kunshan Grand Bridge - China

Danyang–Kunshan Grand Bridge - China

ವಿಶ್ವದ ಉದ್ದವಾದ ಸೇತುವೆ ಎಂಬ ಹೆಗ್ಗಳಿಕೆಗೆ ಚೀನಾದ ಡಾನ್ಯಾಂಗ್ ಕುಂಶಾನ್ ಗ್ರಾಂಡ್ ಬ್ರಿಡ್ಜ್ ಪಾತ್ರವಾಗಿದೆ. ಇದು ಒಟ್ಟು 164 ಕೀ.ಮೀ ದೂರದ ತನಕ ಹರಡಿದೆ ಅಂದರೆ ನೀವು ನಂಬುವೀರಾ?

Sidu River Bridge - China

Sidu River Bridge - China

ಚೀನಾ ದೇಶಕ್ಕೆ ಹೆಮ್ಮೆಪಡುವ ಮತ್ತೊಂದು ಮಾನವ ನಿರ್ಮಿತ ರಿವರ್ ಬ್ರಿಡ್ಜ್ ಸಿಡು ಆಗಿದೆ.

Famous Road Brides From India

Famous Road Brides From India

Bandra-Worli Sea Link

ಇನ್ನು ಭಾರತದ ಹೆಸರಾಂತ ಸೇತುವೆಗಳ ಬಗ್ಗೆ ಚರ್ಚಿಸುವುದಾದರೆ ಬಾಂದ್ರಾ-ವರ್ಲಿ ಸಮುದ್ರ ಪ್ರದೇಶವನ್ನು ಬಂಧಿಸುವ ಮೇಲ್ಸುತುವೆ ತುಂಬಾನೇ ಆಕರ್ಷಕವಾಗಿದೆ.5.6 ಕೀ.ಮೀ. ಉದ್ದ ಹರಡಿರುವ ಈ ಸೇತುವೆ ದೇಶದ ಅತಿ ದೊಡ್ಡ ಬ್ರಿಡ್ಜ್ ಆಗಿದೆ.

Famous Road Brides From India

Famous Road Brides From India

Kolia Bhomora Setu

ಅಸ್ಸಾಂನ ತೆಜ್‌ಪುರದಲ್ಲಿರುವ ಕೊಲಿಯಾ ಬೊಮೆರಾ ಸೇಟು ಸೇತುವೆ 3015 ಮೀಟರ್ ಉದ್ದ ಚಾಚಿದೆ. ಬ್ರಹ್ಮಪುತ್ರ ನದಿಯಲ್ಲಿರುವ ಈ ಬ್ರಿಡ್ಜ್ ರಾತ್ರಿ ವೇಳೆಯಲ್ಲಿ ಇನ್ನು ಆಕರ್ಷಕವಾಗಿ ಗೋಚರಿಸುತ್ತಿದೆ.

Heaven Linking Avenue - Hunan Province, China

Heaven Linking Avenue - Hunan Province, China

ಚೀನಾದ 11 ಕೀ.ಮೀ. ಉದ್ದದ ಹೆವೆನ್ ಲಿಂಕಿಂಗ್ ಅವೆನ್ಯೂ ರೋಡ್ 99 ಕಡಿದಾದ ತಿರುವುಗಳನ್ನು ಹೊಂದಿದೆ. ಚೀನಾದ ಜನತೆಯ ಪ್ರಕಾರ 9 ಅಂಕಿ ಅದೃಷ್ಟದ ಸಂಕೇತವಾಗಿದ್ದು, ಹೆವೆನ್‌ನ 9 ವಿಭಾಗಗಳನ್ನು ಪ್ರತಿಪಾದಿಸುತ್ತಿದೆ.

U.S Highway 50 - U.S.A

U.S Highway 50 - U.S.A

ಇದುವರೆಗೆ ಬ್ರಿಡ್ಜ್‌ಗಳನ್ನು ನೋಡಿದ್ದೀರಾ ಇದೀಗ ಇಲ್ಲಿ ಕೊಟ್ಟಿರುವ ಅಮೆರಿಕ ಹೈ ವೇಯನ್ನು ಒಮ್ಮೆ ನೋಡಿ. ಅಮೆರಿಕದಲ್ಲಿರುವ ಈ ಹೈವೇ 50, ಪಶ್ಚಿಮ ಹಾಗೂ ಪೂರ್ವ ಕರಾವಳಿಗಳನ್ನು ಬಂಧಿಸುತ್ತಿದೆ. ಮೇರಿಲ್ಯಾಂಡ್ ಓಶಿಯನ್ ಸಿಟಿಯಿಂದ ಆರಂಭವಾಗುವ ಹೈವೇ ಅಟ್ಲಾಂಟಿಕ್ ಕರಾವಳಿಯಾಗಿ ಫೆಸಿಫಿಕ್ ಕೋಸ್ಟ್‌ನ ಕ್ಯಾಲಿಫೋರ್ನಿಯಾ ತನಕವಿದೆ. ಇದು ಜಗತ್ತಿನ ಏಕಾಂತ ಹೈವೇ ಎಂದು ಅರಯಲ್ಪಡುತ್ತದೆ. ಒಟ್ಟು 4800 ಕೀ.ಮೀ. ದೂರದ ತನಕ ಈ ಹೈವೇ ಹರಡಿದೆ.

Trollstigen - Norway

Trollstigen - Norway

ಮೊದಲ ನೋಟದಲ್ಲಿ ಯಾವ ಕಲಾವಿದ ಈ ಚಿತ್ರ ಬಿಡಿಸಿದ್ದಾರೆ ಎಂಬ ಅನುಮಾನ ನಿಮ್ಮಲ್ಲಿ ಮೂಡಬಹುದು. ಆದರೆ ಇದು ನೋರ್ವೆಯಲ್ಲಿರುವ ಚಿತ್ರ ವಿಚಿತ್ರ ರಸ್ತೆಯಾಗಿದೆ. ನೋರ್ವೆಯ ಪ್ರಧಾನ ಪ್ರವಾಸಿ ಆಕರ್ಷಣೆಯಾದ ಟ್ರಾಲ್ಸ್‌ಸ್ಟಿಜೆನ್ 850 ಮೀಟರ್ ಎತ್ತರದಲ್ಲಿ ಪರ್ವತಕ್ಕೆ ಹಾದಿ ಕಲ್ಪಿಸುತ್ತಿದೆ.

Spaghetti bowl - Houston, Texas

Spaghetti bowl - Houston, Texas

ಇದೇನು ಅಡ್ಡಾ ದಿಡ್ಡಿ ಗೀಚು ಬರೆಗಳನ್ನು ಹಾಕಿದ್ದೀರಾ ಎಂದು ಅಂದುಕೊಳ್ಳಬೇಡಿರಿ. ಇದು ಎಂಜಿನಿಯರ್‌ಗಳ ಸಾಧನೆಗೆ ಮತ್ತೊಂದು ಕೈಗನ್ನಡಿಯಾಗಿದೆ. ಟೆಕ್ಸಾಸ್‌ನಲ್ಲಿರುವ ಸ್ಪಗೆಟ್ಟಿ ಬೋಲ್ವ್ ರಸ್ತೆ ವಾಹನ ದಟ್ಟಣೆಯಿಂದ ಪಾರಾಗುವಂತೆ ವ್ಯವಸ್ಥೆ ಮಾಡಲಾಗಿದೆ.

Dades Gorge Road - Morocco

Dades Gorge Road - Morocco

ಮೊರೊಕ್ಕೊದ ಅಟ್ಲಾಸ್ ಪರ್ವತದಲ್ಲಿರುವ ಡೇಡ್ಸ್ ಗಾರ್ಜ್ ರೋಡ್ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಆಫ್ ರೋಡ್ ಉತ್ಸಾಹಿಗಳಿಗೆ ಇಲ್ಲಿ ರೈಡಿಂಗ್ ಉತ್ತಮ ಅನುಭವ ನೀಡಲಿದೆ.

Jebel Hafeet Mountain Road - UAE

Jebel Hafeet Mountain Road - UAE

ಇನ್ನು ಯುನೈಟೈಡ್ ಅರಬ್ ಎಮಿರೇಟ್ಸ್‌ಗೆ ತೆರಳಿದರೆ 11.7 ಕೀ.ಮೀ ಉದ್ದದ ಈ 1,219 ಮೀಟರ್ ಎತ್ತರದ ಪರ್ವತ ರೋಡ್ ವಿಶ್ವದ ಅತ್ಯುತ್ತಮ ರೋಡ್‌ಗಳಲ್ಲಿ ಒಂದಾಗಿದೆ.

Transfagarasan Highway - Romania

Transfagarasan Highway - Romania

ವಿಶ್ವದ ಅತಿದೊಡ್ಡ ರೇಸಿಂಗ್ ಸರ್ಕ್ಯೂಟ್ ತರಹನೇ ಕಾಣಿಸುತ್ತಿರುವ ರೊಮನಿಯಾದ ಈ ಹೈವೇ 1970ರ ಕಾಲಘಟ್ಟದಲ್ಲಿ ಸೈನ್ಯದ ಪಯಣಕ್ಕೆ ನೆರವಾಗುವ ರೀತಿಯಲ್ಲಿ ರಚಿಸಲಾಗಿತ್ತು.

Chacaltaya La Paz - Bolivia

Chacaltaya La Paz - Bolivia

ಬೊಲಿವಿಯಾದಲ್ಲಿರುವ 5,421 ಎತ್ತರದ ತನಕ ಹರಡಿರುವ ಈ ಹೈವೇ ಕೂಡಾ ಆಫ್ ರೋಡಿಂಗ್ ರೈಡಿಂಗ್‌ಗೆ ಉತ್ತಮ ತಾಣವಾಗಿದೆ.

Stelvio Pass - Italy

Stelvio Pass - Italy

ಅಲ್ಫ್ಸ್ ಪರ್ವತದಲ್ಲಿ ಸ್ಟೆಲ್ವಿಯೊ ಪಾಸ್ ರಸ್ತೆ ಸ್ಥಿತಗೊಂಡಿದೆ. ಹಿಮದಿಂದ ಆವೃತವಾದ ಈ ರೋಡ್ 60 ಹೇರ್‌ಪಿನ್ ತಿರುವುಗಳನ್ನು (ಬೆಟ್ಟದ ಮೇಲಿನ ರಸ್ತೆಯಲ್ಲಿ "U" ಆಕಾರದ ಕಡಿದಾದ ತಿರುವು) ಹೊಂದಿದೆ.

Yungas Road - Bolivia

Yungas Road - Bolivia

ಇದು ವಿಶ್ವದ ಅತಿ ಅಪಾಯಕಾರಿ ರೋಡ್‌ಗಳಲ್ಲಿ ಒಂದಾಗಿದೆ. ಹಾಗಿದ್ದರೂ ಸಾಹಸ ರೈಡಿಂಗ್‌ಗಾಗಿ ಈಗಲೂ ಈ ರಸ್ತೆಗಳನ್ನು ಬಳಸಲಾಗುತ್ತಿದೆ.

Hindustan-Tibet Highway

Hindustan-Tibet Highway

ಇನ್ನು ಮತ್ತೆ ಭಾರತಕ್ಕೆ ಬಂದರೆ ಹಿಮಾಲಯದಲ್ಲಿರುವ 480 ಕೀ. ಮೀ. ಉದ್ದದ ಹೈವೇ ಶಿಮ್ಲಾ ಹಾದಿಯಾಗಿ ಟಿಬೆಟನ್ನು ಬಂಧಿಸಲ್ಪಟ್ಟಿದೆ. ಇದು ದೇಶದ ಪ್ರಕೃತಿ ರಮಣೀಯ ರಸ್ತೆಗಳಲ್ಲಿ ಒಂದಾಗಿದೆ.

Guoliang Tunnel - China

Guoliang Tunnel - China

ಚೀನಾದಲ್ಲಿ ಕಂಡುಬಂದಿರುವ ಮತ್ತೊಂದು ಅಮೆಜಿಂಗ್ ರೋಡ್. ತೈಹಾಂಗ್ ಪರ್ವದಲ್ಲಿರುವ ಈ ರಸ್ತೆ 1,200 ಮೀಟರ್ ಉದ್ದವಿದೆ. ಇದರ ವಿಶೇಷತೆ ಏನೆಂದರೆ ಅಲ್ಲಿನ ಸ್ಥಳೀಯವಾಗಿ ನಿವಾಸಿಗಳಿಂದ ಇದು ನಿರ್ಮಿತವಾಗಿದೆ. ಪ್ರಸ್ತುತ ಸುರಂಗ ಮಾರ್ಗವು ಐದು ಮೀಟರ್ ಎತ್ತರ ಹಾಗೂ ನಾಲ್ಕು ಮೀಟರ್ ಅಗಲವನ್ನು ಹೊಂದಿದೆ. ಸುರಂಗ ಮಾರ್ಗದ ಒಳಗಡೆ ಬೆಳಕು ಹರಿಯುವುದಕ್ಕಾಗಿ ಹಲವಾರು ವಿಂಡೋ ರೀತಿಯ ದ್ವಾರಗಳನ್ನು ತೆರೆಯಲಾಗಿದೆ.

Hawks Nest- New York

Hawks Nest- New York

ಹಕ್ಕಿಗೂಡು ಎಂದೇ ಬಿಂಬಿತವಾಗಿರುವ ಈ ಹೈವೇನಲ್ಲಿ ಸುಂದರ ಪ್ರಕೃತಿ ದ್ಯಶ್ಯಗಳಿವೆ. ಗಂಟೆಗೆ 88 ಕೀ.ಮೀ ವೇಗ ಮಿತಿಯಿದ್ದರೂ ಇಲ್ಲಿ ಉತ್ತಮ ಬೈಕ್ ರೈಡಿಂಗ್ ಅನುಭವ ಪಡೆದುಕೊಳ್ಳಬಹುದಾಗಿದೆ.

Taroko Gorge - Taiwan

Taroko Gorge - Taiwan

ತೈವಾನ್‌ನ ಟರೊಕೊ ಗಾರ್ಜ್ ರಾಷ್ಟ್ರೀಯ ಉದ್ಯಾನದಲ್ಲಿ ಹಾದು ಹೋಗುವ ಈ ರಸ್ತೆಯ ಬಗ್ಗೆ ವರ್ಣಿಸಲು ಪದಗಳೇ ಸಿಗುತ್ತಿಲ್ಲ. ಅಷ್ಟೊಂದು ಸುಂದರವಾಗಿ ರಸ್ತೆ ನಿರ್ಮಿಸಲಾಗಿದೆ.

Lombard Street - San Francisco

Lombard Street - San Francisco

ಈ ಹಾದಿಯು ಈಗಾಗಲೇ ಹಲವಾರು ಚನಲಚಿತ್ರ ಹಾಗೂ ಟಿ.ವಿ ಶೋಗಳಲ್ಲಿ ಪ್ರದರ್ಶನವಾಗಿದೆ. ಇದು ಎಂಟು ಕಡಿದಾದ ತಿರುವುಗಳನ್ನು ಹೊಂದಿದೆ.

Volcanoes National Park Road - Hawaii

Volcanoes National Park Road - Hawaii

ಎಚ್ಚರಿಕೆ! ಹವಾಯಿಯಲ್ಲಿರುವ ಜ್ವಾಲಾಮುಖಿ ನ್ಯಾಷನಲ್ ಪಾರ್ಕ್ ರಸ್ತೆಯಲ್ಲಿ ಸಂಚರಿಸಲು ಸ್ವಲ್ಪ ಎದೆಗಾರಿಕೆ ಇರಲೇಬೇಕು. ಇಲ್ಲವಾದ್ದಲ್ಲಿ ನಿಮ್ಮ ಯೋಜನೆಯನ್ನು ಕೈಬಿಟ್ಟರೆ ಒಳಿತು. ಚಿತ್ರದಲ್ಲಿ ನೋಡುತ್ತಿರುವಂತೆಯೇ ಕರಗಿದ ಲಾವಾರಸವು ರಸ್ತೆಯನ್ನು ಆವರಿಸಿಕೊಂಡಿದೆ.

Vrontados Chios Island - Greece

Vrontados Chios Island - Greece

ಮೆಡಿಟೇರಿಯನ್ ಓಶಿಯನ್ ಕರಾವಳಿ ಪ್ರದೇಶದಲ್ಲಿ ಹಾದು ಹೋಗುತ್ತಿರುವ ಈ ಸುಂದರವಾದ ರಸ್ತೆ ಎಂಥವರನ್ನು ಕಣ್ಮನ ಸೆಳೆಯುವಂತಿದೆ.

Canyonlands National Park - Moab, Utah

Canyonlands National Park - Moab, Utah

ಪರಿಪೂರ್ಣ ಆಫ್ ರೋಡಿಂಗ್ ಎನಿಸಿರುವ ಈ ರಸ್ತೆ ಸಾಹಸಿಗರನ್ನು ಕೈಬೀಸಿ ಕರೆಯುತ್ತಿದೆ. ಒಂದು ಕೈ ನೋಡ್ತಿರಾ ಹೇಗೆ?

Via Krupp Capri - Italy

Via Krupp Capri - Italy

ಇಟಲಿಯಲ್ಲಿ ಕಂಡುಬಂದಿರುವ ಈ ಪರ್ವತ ರಸ್ತೆ ಸಹ ಮತ್ತೊಂದು ಆಕರ್ಷಕ ದೃಶ್ಯಕ್ಕೆ ಕಾರಣವಾಗಿದೆ.

ನೀವು ನೋಡಿರದ ಅದ್ಭುತಗಳಲ್ಲಿ ಅತಿ ಅದ್ಭುತ ರಸ್ತೆ ಸೇತುವೆಗಳಿವು

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ. ಹಾಗೆಯೇ ಇದೇ ರೀತಿಯ ರಸ್ತೆ ಸೇತುವೆಗಳ ಬಗ್ಗೆ ನಿಮ್ಮಲ್ಲಿ ಮಾಹಿತಿಯಿದ್ದಲ್ಲಿ ನಮ್ಮ ಕಾಮೆಂಟ್ ಬಾಕ್ಸ್‌ ಮೂಲಕ ಪ್ರತಿಕ್ರಿಯಿಸಿರಿ.

Most Read Articles

Kannada
English summary
You could be travelling for fun or on some business. But a ride or a drive is always made enjoyable if the road you are travelling in is exciting. Following is a list of some of the world's most craziest roads and bridges which we think everyone should experience before they die. Some of the roads are beautiful and others are outright scary. Sit back and start clicking through the slides.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X