ಭಾರತದ ಶಕ್ತಿ ಪ್ರದರ್ಶನದಿಂದ ಬೆರಗಾದ ಒಬಾಮಾ ದಂಪತಿ!
ಪ್ರಜಾಪ್ರಭುತ್ವ ಭಾರತದ 66ನೇ ಗಣರಾಜ್ಯೋತ್ಸವದ ಮುಖ್ಯ ಆತಿಥಿಯಾಗಿ ದೇಶಕ್ಕೆ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ದಂಪತಿ ದೇಶದ ಶಕ್ತಿ ಪ್ರದರ್ಶನ ನೋಡಿ ಬೆರಗಾಗಿದ್ದಾರೆ. ಬಲ್ಲ ಮೂಲದ ವರದಿಯೊಂದರ ಪ್ರಕಾರ ದೇಶದ ಗಡಿ ಭದ್ರತಾ ಪಡೆಯ ಡೇರ್ ಡೆವಿಲ್ಸ್ ಏರ್ಪಡಿಸಿದ್ದ ವಿಶೇಷ ಬೈಕ್ ಸ್ಟಂಟ್ ಶೋ ಕಂಡು ಬರಾಕ್ ಒಬಾಮಾ ಪತ್ನಿ ಮಿಚೆಲ್ ಒಬಾಮಾ ದಿಗ್ಭ್ರಮೆಗೊಂಡಿದ್ದಾರೆ.
ಸತತ ಒಂದು ತಿಂಗಳ ಅಭ್ಯಾಸದ ಬಳಿಕ ಬಿಎಸ್‌ಎಫ್ ಡೇರ್ ಡೆವಿಲ್ಸ್ ತಂಡವು ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಅತ್ಯಾದ್ಭುತ ಬೈಕ್ ಪ್ರದರ್ಶನವನ್ನು ನೀಡಿತ್ತು. ಇಲ್ಲಿ ರಾಯಲ್ ಎನ್‌ಫೀಲ್ಡ್‌ಗಳಂತಹ ದೇಶದ ಐಕಾನಿಕ್ ಬೈಕ್‌ಗಳನ್ನು ಬಳಕೆ ಮಾಡಲಾಗಿತ್ತು. ಇಂದಿನ ಈ ಲೇಖನದಲ್ಲಿ ಗಣರಾಜ್ಯೋತ್ಸವದಂದ ಒಬಾಮಾ ಹಾಗೂ ಅಮೆರಿಕ ಮೊದಲ ಮಹಿಳೆ ಅವರ ಕಣ್ಣು ಕುಕ್ಕಿದ ಬಿಎಸ್‌ಎಫ್ ಡೇರ್ ಡೆವಿಲ್ಸ್ ತಂಡದ ಬೈಕ್ ಹಾಗೂ ಯುದ್ಧ ವಿಮಾನದ ಶಕ್ತಿ ಪ್ರದರ್ಶನದ ಚಿತ್ರಗಳನ್ನು ನಿಮ್ಮ ಮುಂದಿಡಲಿದ್ದೇವೆ. ಇಲ್ಲಿ ನೀವು ಕೂಡಾ ನಿಮ್ಮ ಅಮೂಲ್ಯ ಅಭಿಪ್ರಾಯಗಳನ್ನು ಉಲ್ಲೇಖಿಸಲು ಮರೆಯದಿರಿ...

ಬಿಎಸ್‌ಎಫ್ ಡೇರ್ ಡೆವಿಲ್ಸ್ ತಂಡದಿಂಗ ಅದ್ಭುತ ಬೈಕ್ ಸ್ಟಂಟ್ ಪ್ರದರ್ಶನ

ತ್ರಿವರ್ಣದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಬಿಎಸ್‌ಎಫ್ ಡೇರ್ ಡೆವಿಲ್ಸ್

ಬಿಎಸ್‌ಎಫ್ ಡೇರ್ ಡೆವಿಲ್ಸ್ ತಂಡದಿಂದ ಮಗದೊಂದು ಅದ್ಭುತ ಪ್ರದರ್ಶನ

ಬಿಎಸ್‌ಎಫ್ ಡೇರ್ ಡೆವಿಲ್ಸ್ ತಂಡದ ಅಭ್ಯಾಸ ಪರೇಡ್‌ನಿಂದ ಕ್ಕಿಕ್ಕಿಸಿದ ಚಿತ್ರವಿದು

ರಾಜಪಥದಲ್ಲಿ ಕಂಗೊಳಿಸಿದ ಬಿಎಸ್‌ಎಫ್ ಡೇರ್ ಡೆವಿಲ್ಸ್

ಅಮೆರಿಕದ ಪ್ರಥಮ ಮಹಿಳೆಯಿಂದ ಕೈಚಪ್ಪಾಳೆ ಗಿಟ್ಟಿಸಿಕೊಂಡ ಬಿಎಸ್‌ಎಫ್ ಡೇರ್ ಡೆವಿಲ್ಸ್ ತಂಡದ ಧೀರ ಯೋಧರು

ದೇಶದ ಗಡಿ ಕಾಯುವ ಕಾವಲು ಪಡೆಯ ಯೋಧರಿವರು

ರಾಷ್ಟ್ರ ರಾಜಧಾನಿಯ ನವದೆಹಲಿಯ ರಾಜಪಥದಿಂದ ಸೆರೆಹಿಡಿಯಲಾದ ಮಗದೊಂದು ಆಕರ್ಷಕ ಚಿತ್ರವಿದು

ಕೇವಲ ಬಿಎಸ್‌ಎಫ್ ಮಾತ್ರವಲ್ಲ ಆಕಾಶದಲ್ಲಿ ದೇಶದ ರಕ್ಷಣೆ ಕಾಯುವ ವಾಯು ಸೈನ್ಯದ ಯುದ್ಧ ವಿಮಾನಗಳು ಸಹ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಶಕ್ತಿ ಪ್ರದರ್ಶನ ನಡೆಸಿತ್ತು.

ರಾಜಪಥದಲ್ಲಿ ಶರವೇಗದಲ್ಲಿ ಸಾಗುವ ಯುದ್ಧ ವಿಮಾನ

ಗಣರಾಜ್ಯೋತ್ಸವದ ಮಗದೊಂದು ಆಕರ್ಷಕ ದೃಶ್ಯ

ಯಾವುದೇ ಹವಾಮಾನ ವೈಪರೀತ್ಯ ಪರಿಸ್ಥಿತಿಯಲ್ಲೂ ಶತ್ರುಗಳನ್ನು ಹೊಡೆದುರುಳಿಸುವ ಶಕ್ತಿ ಇದಕ್ಕಿದೆ.

ತನ್ನ ಪಥದಲ್ಲಿ ಅಚ್ಚುಕಟ್ಟಾಗಿ ಸಾಗುತ್ತಿರುವ ಯುದ್ಧ ವಿಮಾನಗಳು

ಬಾನೆತ್ತರಕ್ಕೆ ಹಾರಿದ ಯುದ್ಧ ವಿಮಾನ

ದೇಶದ ಶಕ್ತಿ ಪ್ರದರ್ಶನ

ಭಾರತೀಯ ವಾಯು ಸೇನೆಯ (ಐಎಎಫ್) ಮಗದೊಂದು ಆಕರ್ಷಕ ದೃಶ್ಯ

ಸೇನೆಯ ಹೆಲಿಕಾಪ್ಟರ್ ಸಹ ಪ್ರಮುಖ ಆಕರ್ಷಣೆಯಾಗಿತ್ತು.

ಭೂ ಸೇನೆಯ ತೆರೆದ ವಾಹನದಲ್ಲಿ ಮಕ್ಕಳ ಕಾರ್ಯಕ್ರಮ ಪ್ರದರ್ಶನ.

ರಾಜಪಥಕ್ಕೆ ಬಂದಿಳಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ

ಲಾಸ್ಟ್ ಬಟ್ ನಾಟ್ ಲೀಸ್ಟ್ - ಬ್ರಹ್ಮೋಸ್ ಮಿಸೈಲ್ ಶಕ್ತಿಯ ಅನಾವರಣ


Click it and Unblock the Notifications








