13 ನಿಮಿಷದಲ್ಲಿ 14 ಕಿ.ಮೀ ಪ್ರಯಾಣ: ಬಾಲಕಿ ಜೀವ ಉಳಿಸಲು ನಮ್ಮ ಬೆಂಗಳೂರು ಪೊಲೀಸರ ಹರಸಾಹಸ

ಬೆಂಗಳೂರಿನಲ್ಲಿ 14 ಕಿ.ಮೀ ದೂರವನ್ನು ಕೇವಲ 13 ನಿಮಿಷ ಮತ್ತು 7 ಸೆಕೆಂಡುಗಳಲ್ಲಿ ಪ್ರಯಾಣಿಸಿ 7 ವರ್ಷದ ಮಗುವಿನ ಪ್ರಾಣ ಉಳಿಸುವ ಪ್ರಯತ್ನ ನಡೆದಿದೆ. ಬೆಂಗಳೂರಿನ ಟ್ರಾಫಿಕ್ ಭರಾಟೆ ನಮಗೆಲ್ಲರಿಗೂ ಗೊತ್ತಿರೋ ವಿಚಾರ. ಬೆಂಗಳೂರಿನ ಸಂಚಾರ ದಟ್ಟಣೆ ಖ್ಯಾತಿ ಗಳಿಸಿದೆ. ರಾಜಧಾನಿಯಲ್ಲಿ ಕೇವಲ 10 ಕಿಲೋ ಮೀಟರ್ ಪ್ರಯಾಣ ಮಾಡೋದಕ್ಕೆ ಗಂಟೆಗಟ್ಟಲೆ ಬೇಕು.

ಆದರೆ ಬೆಂಗಳೂರು (Bengaluru) ಪೊಲೀಸರು ಅಕ್ಟೋಬರ್ 15 ರ ಭಾನುವಾರ ಏಳು ವರ್ಷದ ಮಗುವಿನ ಹೃದಯ ಕಸಿಗಾಗಿ ಜೀವಂತ ಹೃದಯವನ್ನು (Heart) ಸಾಗಿಸಲು ಆಂಬ್ಯುಲೆನ್ಸ್‌ಗಾಗಿ ಹಸಿರು ಕಾರಿಡಾರ್ ರಚನೆ ಮಾಡಿದ್ದರು. ಈ ವಿಶೇಷ ಹಸಿರು ಕಾರಿಡಾರ್‌ನಲ್ಲಿ ಶೇಷಾದ್ರಿಪುರದಿಂದ ಆರ್‌ಆರ್‌ನಗರದ ಸ್ಪರ್ಶ ಆಸ್ಪತ್ರೆವರೆಗೆ, ಇದರಿಂದ 14 ಕಿ.ಮೀ ದೂರವನ್ನು ಕೇವಲ 13 ನಿಮಿಷ ಮತ್ತು 7 ಸೆಕೆಂಡುಗಳಲ್ಲಿ ಆಂಬ್ಯುಲೆನ್ಸ್ (ambulance) ಕ್ರಮಿಸಲು ಸಾಧ್ಯವಾಯಿತು.

Bengaluru

ಹೃದಯವನ್ನು ರವಾನಿಸಲು ಬೆಂಗಳೂರು ಪೊಲೀಸರು ಯಾವುದೇ ರಸ್ತೆ ಅಡಚಣೆ ಉಂಟಾಗದಂತೆ ಹಸಿರು ಕಾರಿಡಾರ್​ ಅನ್ನು ನಿರ್ಮಿಸಿದರು. ಬೆಂಗಳೂರು ಟ್ರಾಫಿಕ್​ ಪೊಲೀಸರ ನೆರವಿನೊಂದಿಗೆ ಹೃದಯವನ್ನು ರವಾನಿಸಲು ಸಾಧ್ಯವಾಯಿತು. ಸಂಚಾರ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಸೋಶಿಯಲ್ ಮೀಡಿಯಾದಲ್ಲೂ ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ವರದಿಗಳ ಪ್ರಕಾರ, ಏಳು ವರ್ಷದ ಬಾಲಕಿ ಕಾರ್ಡಿಯೊಮಿಯೋಪತಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದಳು. ಇದು ಹಿಗ್ಗಿದ ಹೃದಯ ಸ್ನಾಯುವಿನ ಕಾಯಿಲೆಯ ಒಂದು ವಿಧವಾಗಿದ್ದು, ಹೃದಯದ ಕೋಣೆಗಳು ತೆಳುವಾಗಿರುತ್ತದೆ, ಹಿಗ್ಗುತ್ತದೆ ಮತ್ತು ದೊಡ್ಡದಾಗಿ ಬೆಳೆಯುತ್ತದೆ. ಇದರಿಂದ ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ. ಇದರಿಂದ ಹೃದಯ ಕಸಿ ಮಾಡಲಾಗಿದೆ.

Bengaluru

ಇದೇ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯ ಸಹೋದರಿ ಕೂಡ 2019 ಮೃತಪಟ್ಟಿದ್ದರು. ಇದೀಗ ಕಿರಿ ಮಗಳಿಗೂ ಇದೇ ಕಾಯಿಲೆ ಬಂದಿರುವುದಕ್ಕೆ ಪೋಷಕರು ತಮ್ಮ ಮಗಳನ್ನು ಹೇಗಾದರೂ ಉಳಿಸಿಕೊಳ್ಳಬೇಕು ಎಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಆಸ್ಪತ್ರೆಯ ವೈದರ ತಂಡ ಚಿಕಿತ್ಸೆಯನ್ನು ನೀಡಲು ಪ್ರಾರಂಭಿಸುತ್ತಾರೆ. ವೈದ್ಯರು ಹೃದಯ ಕಸಿ ಮಾಡಬೇಕು ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಅವರು ನವೆಂಬರ್‌ನಲ್ಲಿ ಹೃದಯ ಕಸಿ ಮಾಡಲು ನೋಂದಾಯಿಸಿದ್ದರು. ಆದರೆ ಹೃದಯ ದಾನಿ ಇಲ್ಲದೆ ಚಿಕಿತ್ಸೆ ನೀಡಲಾಗುತ್ತಿತ್ತು. ಹೃದಯ ರವಾನೆ ಬಗ್ಗೆ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಶೇಷಾದ್ರಿಪುರಂ ಮತ್ತು ಆರ್‌ಆರ್‌ನಗರ ನಡುವೆ ಹಸಿರು ಕಾರಿಡಾರ್‌ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರು. ಅದರಂತೆ ಭಾನುವಾರ, ಟ್ರಾಫಿಕ್ ಪೊಲೀಸರು ಶೇಷಾದ್ರಿಪುರದಿಂದ ಆರ್‌ಆರ್‌ನಗರದ ಸ್ಪರ್ಶ ಆಸ್ಪತ್ರೆವರೆಗೆ ವಿಶೇಷ ಹಸಿರು ಕಾರಿಡಾರ್​ ನಿರ್ಮಿಸಿದರು.

ಪೊಲೀಸರ ಸಹಕಾರದಿಂದ ಆಂಬುಲೆನ್ಸ್ ಸಮಯಕ್ಕೆ ಸರಿಯಾಗಿ ಆಸ್ಪತ್ರೆಯನ್ನು ತಲುಪಿತು. ಕೆಲವು ರೋಗಿಗಳ ಹೃದಯ ಇನ್ನು ಸರಿಪಡಿಸಲಾರದಷ್ಟು ವಿಫಲಗೊಂಡಿದ್ದು ಬದಲಿಸದೇ ಜೀವ ಉಳಿಸಲು ಸಾಧ್ಯವಿಲ್ಲ ಎಂಬ ಸ್ಥಿತಿ ಎದುರಾದಾಗ ವೈದ್ಯರು ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ದಾನಿಯೊಬ್ಬರ ಅಗತ್ಯವಿದೆ. ಇದೊಂದು ಅತ್ಯಂದ ಕ್ಲಿಷ್ಟ ಮತ್ತು ಗಹನವಾದ ಶಸ್ತ್ರಕ್ರಿಯೆಯಾಗಿದೆ.

ಇನ್ನು ಸಾಮಾನ್ಯವಾಗಿ ಅಪಘಾತಕ್ಕೀಡಾದ ವ್ಯಕ್ತಿಗಳ ಹೃದಯ ಆರೋಗ್ಯಕರವಾಗಿದ್ದರೆ, ದಾನಿಗಳ ಕುಟುಂಬ ಸದಸ್ಯರ ಅಪ್ಪಣೆ ಪಡೆದ ಬಳಿಕ ಕಾನೂನು ರೀತಿ ದಾನಿಯ ಹೃದಯವನ್ನು ಪಡೆದು ರೋಗಿಯ ದೇಹಕ್ಕೆ ಅಳವಡಿಸುವುದೇ ಈ ಶಸ್ತ್ರಕ್ರಿಯೆಯ ಕ್ರಮವಾಗಿದೆ. ದೇಹ ದಾನಿಯ ಹೃದಯವನ್ನು ಸ್ವೀಕರಿಸಲು ಸಾಧ್ಯವಿರುವುದು ಮೊದಲಾದ ಪರೀಕ್ಷೆಗಳನ್ನೆಲ್ಲಾ ಮಾಡಿಸಿ ಎಲ್ಲವೂ ಸರಿ ಇದೆ ಎಂದ ಬಳಿಕ ಮಾತ್ರವೇ ಈ ಶಸ್ತ್ರಚಿಕಿತ್ಸೆಯನ್ನು ಕೇವಲ ನುರಿತ ಶಸ್ತ್ರಚಿಕಿತ್ಸಕ ವೈದ್ಯರು ನಡೆಸುತ್ತಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 17, 2023, 11:44 [IST]
English summary
Ambulance carrying live heart covered 14 kms in 13 minutes in bengaluru details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+