ಅಮೆರಿಕಾದ ನೂತನ ಅಧ್ಯಕ್ಷ ಜೋ ಬೈಡನ್'ರ ನೆಚ್ಚಿನ ಕಾರುಗಳಿವು

ಜೋ ಬೈಡನ್ ನವೆಂಬರ್ 7ರಂದು ಅಮೆರಿಕಾದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೋ ಬೈಡನ್ ಅಮೆರಿಕಾ ಮಾತ್ರವಲ್ಲದೇ ವಿಶ್ವದ ಹಲವು ದೇಶಗಳಲ್ಲಿ ಜನಪ್ರಿಯತೆಯನ್ನು ಹೊಂದಿದ್ದಾರೆ.

ಅಮೆರಿಕಾದ ನೂತನ ಅಧ್ಯಕ್ಷ ಜೋ ಬೈಡನ್'ರ ನೆಚ್ಚಿನ ಕಾರುಗಳಿವು

ಸುದೀರ್ಘ ಕಾಲದಿಂದ ಅಮೆರಿಕಾದ ರಾಜಕೀಯದಲ್ಲಿ ಸಕ್ರಿಯವಾಗಿರುವ ಜೋ ಬೈಡನ್ ವಿಂಟೇಜ್ ಕಾರುಗಳ ಅಭಿಮಾನಿಯಾಗಿದ್ದಾರೆ. ಕಾರು ವ್ಯಾಪಾರಿಯಾಗಿದ್ದ ಜೋ ಬೈಡನ್ ಅವರ ತಂದೆ ಅಮೇರಿಕಾದಲ್ಲಿ 34 ವರ್ಷಗಳ ಕಾಲ ಶೋರೂಂ ನಡೆಸುತ್ತಿದ್ದರು. ತಂದೆಯ ಕಾರು ವ್ಯವಹಾರದಿಂದಾಗಿ ಜೋ ಬಿಡೆನ್ ಕಾರುಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ.

ಅಮೆರಿಕಾದ ನೂತನ ಅಧ್ಯಕ್ಷ ಜೋ ಬೈಡನ್'ರ ನೆಚ್ಚಿನ ಕಾರುಗಳಿವು

ಅವರು ತಮ್ಮ ತಂದೆಯ ಗ್ಯಾರೇಜ್ ನಲ್ಲಿದ್ದ ವಿಂಟೇಜ್ ಕಾರುಗಳನ್ನು ಚಾಲನೆ ಮಾಡುತ್ತಿದ್ದರು. ತಮ್ಮ ತಂದೆ ಕ್ರಿಸ್ಲರ್ ಹಾಗೂ ಫೋರ್ಡ್ ಕಂಪನಿಗಳಿಂದ ಕಾರು ಖರೀದಿಸಿ ಮಾರಾಟ ಮಾಡುತ್ತಿದ್ದರು ಎಂದು ಜೋ ಬೈಡನ್ ಹೇಳಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಅಮೆರಿಕಾದ ನೂತನ ಅಧ್ಯಕ್ಷ ಜೋ ಬೈಡನ್'ರ ನೆಚ್ಚಿನ ಕಾರುಗಳಿವು

ಸಂದರ್ಶನವೊಂದರಲ್ಲಿ ಅವರು ತಮ್ಮ ತಂದೆ ಕ್ರಿಸ್ಲರ್ 300 ಡಿ ಕಾರಿನಲ್ಲಿ 7000 ಮೈಲಿ ಚಲಿಸಿದ್ದರು ಎಂದು ಹೇಳಿದ್ದರು. 1951ರಲ್ಲಿ ಅವರು ಸ್ಟಡ್ಬೇಕರ್ ಕಾರನ್ನು ಚಾಲನೆ ಮಾಡಿದ್ದರು. ಅದು ಅವರ ಮೊದಲ ಕಾರ್ ಆಗಿತ್ತು. 1952ರಲ್ಲಿ ಅವರು ಚೆರ್ರಿ ಕೆಂಪು ಬಣ್ಣದ ಪ್ಲೈಮೌತ್ ಕನ್ವರ್ಟಿಬಲ್ ಕಾರನ್ನು ಚಾಲನೆ ಮಾಡಿದ್ದರು.

ಅಮೆರಿಕಾದ ನೂತನ ಅಧ್ಯಕ್ಷ ಜೋ ಬೈಡನ್'ರ ನೆಚ್ಚಿನ ಕಾರುಗಳಿವು

1956ರಲ್ಲಿ ಅವರ ಕಾಲೇಜು ದಿನಗಳಲ್ಲಿ ಶೆವ್ರೊಲೆಟ್ ಹಾಗೂ ಮರ್ಸಿಡಿಸ್ ಬೆಂಝ್ 190 ಎಸ್‌ಎಲ್ ಕಾರುಗಳನ್ನು ಚಾಲನೆ ಮಾಡುತ್ತಿದ್ದರು. ಈ ಕಾರುಗಳು ವೇಗವಾಗಿ ಚಲಿಸುತ್ತವೆ ಹಾಗೂ ಅವುಗಳ ಎಂಜಿನ್‌ಗಳು ವಿಭಿನ್ನ ಶಬ್ದವನ್ನು ಹೊಂದಿವೆ ಎಂಬ ಕಾರಣಕ್ಕೆ ಈ ಕಾರುಗಳನ್ನು ಇಷ್ಟ ಪಟ್ಟಿದ್ದರು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಅಮೆರಿಕಾದ ನೂತನ ಅಧ್ಯಕ್ಷ ಜೋ ಬೈಡನ್'ರ ನೆಚ್ಚಿನ ಕಾರುಗಳಿವು

ಅವರು ಮರ್ಸಿಡಿಸ್ ಬೆಂಝ್ 190 ಎಸ್‌ಎಲ್ ಕಾರನ್ನು ಸುಮಾರು 1.5 ಲಕ್ಷ ಕಿ.ಮೀಗಳಷ್ಟು ದೂರ ಚಾಲನೆ ಮಾಡಿದ್ದಾರೆ. ಅವರು ಹಲವು ಕಾರುಗಳನ್ನು ಹೊಂದಿದ್ದರೂ ಸಹ 1967ರಲ್ಲಿ ಅವರ ವಿವಾಹದಲ್ಲಿ ಅವರ ತಂದೆ ನೀಡಿದ ವುಡ್ ಗ್ರೀನ್ ಬಣ್ಣದ ಶೆವ್ರೊಲೆಟ್ ಕಾರ್ವೆಟ್ ಕಾರನ್ನು ಅವರು ಹೆಚ್ಚು ಇಷ್ಟಪಡುತ್ತಾರೆ.

ಅಮೆರಿಕಾದ ನೂತನ ಅಧ್ಯಕ್ಷ ಜೋ ಬೈಡನ್'ರ ನೆಚ್ಚಿನ ಕಾರುಗಳಿವು

ಈ ಕಾರನ್ನು ಅವರು ಹಲವು ಬಾರಿ ತಮ್ಮ ಮನೆಯ ಹೊರಗೆ ಚಾಲನೆ ಮಾಡಿದ್ದಾರೆ. ಜೋ ಬೈಡನ್ ಈ ಕಾರಿನ ಎಂಜಿನ್ ಅನ್ನು ವಿಶೇಷವಾಗಿ ಟ್ಯೂನ್ ಮಾಡಿಸಿದ್ದು, 53 ವರ್ಷಗಳಿಂದ ಈ ಕಾರನ್ನು ಬಳಸುತ್ತಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಅಮೆರಿಕಾದ ನೂತನ ಅಧ್ಯಕ್ಷ ಜೋ ಬೈಡನ್'ರ ನೆಚ್ಚಿನ ಕಾರುಗಳಿವು

ಈ ಕಾರು 350 ಬಿಹೆಚ್‌ಪಿ ಪವರ್ ಉತ್ಪಾದಿಸುವ ವಿ 8 ಎಂಜಿನ್ ಅನ್ನು ಹೊಂದಿದೆ. ಈ ಕಾರು ಟ್ಯಾನ್ ಬ್ರೌನ್ ಬಣ್ಣದ ಇಂಟಿರಿಯರ್ ಹೊಂದಿದ್ದರೂ ಎಕ್ಸ್ ಟಿರಿಯರ್ ಬಣ್ಣದಲ್ಲಿ ಆಕರ್ಷಕವಾಗಿ ಕಾಣುತ್ತದೆ.

ಅಮೆರಿಕಾದ ನೂತನ ಅಧ್ಯಕ್ಷ ಜೋ ಬೈಡನ್'ರ ನೆಚ್ಚಿನ ಕಾರುಗಳಿವು

ಬರಾಕ್ ಒಬಾಮ ಅಧ್ಯಕ್ಷರಾಗಿದ್ದ ವೇಳೆ ಜೋ ಬೈಡನ್ ಉಪಾಧ್ಯಕ್ಷರಾಗಿದ್ದರು. ಆ ಸಮಯದಲ್ಲಿ ಅವರಿಗೆ ಅಮೆರಿಕಾದಲ್ಲಿ ದಿ ಬೀಸ್ಟ್ ಎಂದು ಕರೆಯಲ್ಪಡುವ ಕ್ಯಾಡಿಲಾಕ್ ಕಾರನ್ನು ನೀಡಲಾಗಿತ್ತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಅಮೆರಿಕಾದ ನೂತನ ಅಧ್ಯಕ್ಷ ಜೋ ಬೈಡನ್'ರ ನೆಚ್ಚಿನ ಕಾರುಗಳಿವು

ಜೋ ಬೈಡನ್ ಅಮೆರಿಕಡಾ ಕಾರು ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡುವ ಭರವಸೆಯನ್ನು ನೀಡಿದ್ದಾರೆ. ಇದರ ಜೊತೆಗೆ ಎಲೆಕ್ಟ್ರಿಕ್ ಕಾರುಗಳ ಬಳಕೆಗೂ ಅವರು ಬೆಂಬಲ ನೀಡಿದ್ದಾರೆ.

Most Read Articles

Kannada
English summary
American new president Joe Biden's favorite cars. Read in Kannada.
Story first published: Thursday, November 12, 2020, 12:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X