ಇದು ನಂಬಲೇಬೇಕಾದ ಸತ್ಯ - ಕುದುರೆಗೆ ಶರಣಾಗಿದ್ದ ಸ್ಟೀಮ್ ಎಂಜಿನ್ ರೈಲು

ಬಸ್ಸುಗಳು, ವಿಮಾನಗಳು, ರೈಲುಗಳು ಆಧುನಿಕ ಯುಗದ ಸಂಚಾರ ವ್ಯವಸ್ಥೆಯ ಭಾಗವಾಗಿದೆ. ನಮ್ಮಲ್ಲಿರುವ ಸಾಕಷ್ಟು ಜನರು ವಿಮಾನಗಳಲ್ಲಿ ಅಥವಾ ಹಡಗುಗಳಲ್ಲಿ ಪ್ರಯಾಣಿಸದೇ ಇರಬಹುದು. ಆದರೆ ಬಹುತೇಕ ಜನರು ರೈಲುಗಳಲ್ಲಿ ಸಂಚರಿಸಿಯೇ ಇರುತ್ತಾರೆ. ಬಸ್ಸು ಹಾಗೂ ವಿಮಾನಗಳಿಗೆ ಹೋಲಿಸಿದರೆ ರೈಲುಗಳಲ್ಲಿ ಪ್ರಯಾಣ ದರವು ಕಡಿಮೆಯಾಗಿರುತ್ತದೆ.

ಇದು ನಂಬಲೇಬೇಕಾದ ಸತ್ಯ - ಕುದುರೆಗೆ ಶರಣಾಗಿದ್ದ ಸ್ಟೀಮ್ ಎಂಜಿನ್ ರೈಲು

ಜೊತೆಗೆ ಆರಾಮದಾಯಕ ಅನುಭವವನ್ನು ನೀಡುತ್ತವೆ. ಈ ಕಾರಣಕ್ಕೆ ಯಾವುದೇ ಊರಿಗೆ ಹೋಗುವ ಮೊದಲು ಆ ಊರಿಗೆ ರೈಲು ಸಂಪರ್ಕವಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತಾರೆ. ಪ್ರಯಾಣಿಕರ ಮೊದಲ ಆದ್ಯತೆ ರೈಲುಗಳಾಗಿರುತ್ತವೆ. ರೈಲುಗಳಲ್ಲಿ ಯಾವುದೇ ಟ್ರಾಫಿಕ್ ಜಾಮ್‍‍ನ ಕಿರಿಕಿರಿ ಇರುವುದಿಲ್ಲ. ಈ ಲೇಖನದಲ್ಲಿ ಈ ಹಿಂದೆ ಸ್ಟೀಮ್ ಎಂಜಿನ್ ರೈಲುಗಳು ಹೇಗಿದ್ದವು ಹಾಗೂ ಅವುಗಳ ಬೆಳವಣಿಗೆಯ ಬಗ್ಗೆ ನೋಡೋಣ. ಬ್ರಿಟನ್ನಿನ ರಿಚರ್ಡ್ ಟ್ರೆವಿಥಿಕ್ ಎಂಬುವವರು ಮೊದಲ ಬಾರಿಗೆ ಸ್ಟೀಮ್ ಎಂಜಿನ್ ಅನ್ನು ಪ್ರಾಯೋಗಿಕ ಬಳಕೆಗೆ 1804ರಲ್ಲಿ ಪರಿಚಯಿಸಿದರು.

ಇದು ನಂಬಲೇಬೇಕಾದ ಸತ್ಯ - ಕುದುರೆಗೆ ಶರಣಾಗಿದ್ದ ಸ್ಟೀಮ್ ಎಂಜಿನ್ ರೈಲು

ಹೀಗೆ ಪರಿಚಯಿಸಲಾದ ರೈಲು ಪ್ರತಿ ಗಂಟೆಗೆ 10 ಮೈಲುಗಳ ಕಡಿಮೆ ವೇಗದಲ್ಲಿ ಚಲಿಸಿತು. ಆದರೆ ಇಂದಿನ ಯುಗದಲ್ಲಿ ಜಪಾನ್ ಅಭಿವೃದ್ಧಿಪಡಿಸಿರುವ ರೈಲುಗಳು ಪ್ರತಿ ಗಂಟೆಗೆ ಸುಮಾರು 350 ಕಿ.ಮೀ ವೇಗದಲ್ಲಿ ಚಲಿಸುತ್ತವೆ.

ಇದು ನಂಬಲೇಬೇಕಾದ ಸತ್ಯ - ಕುದುರೆಗೆ ಶರಣಾಗಿದ್ದ ಸ್ಟೀಮ್ ಎಂಜಿನ್ ರೈಲು

ಜಪಾನ್ ಮಾತ್ರವಲ್ಲದೇ ಫ್ರಾನ್ಸ್, ಚೀನಾ ಹಾಗೂ ಜರ್ಮನಿ ದೇಶಗಳೂ ಸಹ ಹೈ ಸ್ಪೀಡ್ ರೈಲುಗಳನ್ನು ಅಭಿವೃದ್ಧಿಪಡಿಸಿವೆ. ಇಷ್ಟೆಲ್ಲಾ ಹಿನ್ನೆಲೆಯಿರುವ ಅಭಿವೃದ್ಧಿಹೊಂದಿರುವ ರೈಲು ಹಿಂದೊಮ್ಮೆ ರೇಸ್‍‍ನಲ್ಲಿ ಕುದುರೆಯೊಂದಿಗೆ ಸೋತಿತ್ತು ಎಂಬುದು ನಂಬಲೇಬೇಕಾದ ಸಂಗತಿ.

ಇದು ನಂಬಲೇಬೇಕಾದ ಸತ್ಯ - ಕುದುರೆಗೆ ಶರಣಾಗಿದ್ದ ಸ್ಟೀಮ್ ಎಂಜಿನ್ ರೈಲು

ಇದು ಐತಿಹಾಸಿಕ ಸತ್ಯ. ಅಮೇರಿಕಾದ ಮೊದಲ ಸ್ಟೀಮ್ ಎಂಜಿನ್ ರೈಲು, ರೇಸಿನಲ್ಲಿ ಕುದುರೆಯೊಂದಕ್ಕೆ ಸೋತಿತ್ತು. 1827ರಲ್ಲಿ ಬಾಲ್ಟಿಮೋರ್ ಹಾಗೂ ಒಹಿಯೊ ರೇಲ್‍‍ರೋಡ್ ಕಂಪನಿಗೆ ಪ್ಯಾಸೆಂಜರ್ ರೈಲ್ ಅನ್ನು ಚಲಾಯಿಸಲು ಅನುಮತಿ ನೀಡಲಾಗಿತ್ತು. ಬಾಲ್ಟಿಮೋರ್ ಹಾಗೂ ಒಹಿಯೊ ರೇಲ್‍‍ರೋಡ್ ಹೀಗೆ ಅನುಮತಿ ಪಡೆದ ಅಮೇರಿಕಾದ ಮೊದಲ ಕಂಪನಿಯಾಗಿದೆ.

ಇದು ನಂಬಲೇಬೇಕಾದ ಸತ್ಯ - ಕುದುರೆಗೆ ಶರಣಾಗಿದ್ದ ಸ್ಟೀಮ್ ಎಂಜಿನ್ ರೈಲು

ಕುದುರೆ ಎಳೆಯುವ ರೈಲುಗಳನ್ನು ಅಭಿವೃದ್ಧಿಪಡಿಸುವ ಬದಲು ಈ ಕಂಪನಿಯು ಕಠಿಣವಾದ ರಸ್ತೆಗಳಲ್ಲಿ ಚಲಿಸುವ ಸ್ಟೀಮ್ ಎಂಜಿನ್ ಅನ್ನು ಅಭಿವೃದ್ಧಿಪಡಿಸಲು ಹೆಣಗಾಡಿತು. ಕುದುರೆ ಎಳೆಯುವ ರೈಲುಗಳೆಂದರೇನು ಎಂಬ ಪ್ರಶ್ನೆ ಮೂಡುವುದು ಸಹಜ.

ಇದು ನಂಬಲೇಬೇಕಾದ ಸತ್ಯ - ಕುದುರೆಗೆ ಶರಣಾಗಿದ್ದ ಸ್ಟೀಮ್ ಎಂಜಿನ್ ರೈಲು

ಆ ದಿನಗಳಲ್ಲಿ ರೈಲುಗಳನ್ನು ಎಳೆಯಲು ಕುದುರೆಗಳನ್ನು ಬಳಸಲಾಗುತ್ತಿತ್ತು. ಕಂಪನಿಯು ಸಹ ಸ್ಟೀಮ್ ಎಂಜಿನ್ ಅನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿರಲಿಲ್ಲ. ಈ ವೇಳೆಯಲ್ಲಿ ಉದ್ಯಮಿ ಪೀಟರ್ ಕೂಪರ್ ಎಂಬುವವರು ಮುಂದೆ ಬಂದರು.

ಇದು ನಂಬಲೇಬೇಕಾದ ಸತ್ಯ - ಕುದುರೆಗೆ ಶರಣಾಗಿದ್ದ ಸ್ಟೀಮ್ ಎಂಜಿನ್ ರೈಲು

ಬಾಲ್ಟಿ ಮೋರ್ ಹಾಗೂ ಒಹಿಯೊ ರೇಲ್‍‍ರೋಡ್ ಕಂಪನಿಗಾಗಿ ಎಂಜಿನ್ ಒಂದನ್ನು ವಿನ್ಯಾಸಗೊಳಿಸಿದರು. ಈ ಎಂಜಿನ್ ಅನ್ನು ಟಾಮ್ ಥಂಬ್ ಎಂದು ಕರೆದರು. ಈ ಎಂಜಿನ್ ಅನ್ನು ಬಾಲ್ಟಿಮೋರ್ ಹಾಗೂ ಒಹಿಯೊ ರೇಲ್‍‍ರೋಡ್ ಟ್ರಾಕ್‍‍ಗಳಿದ್ದ ಬಾಲ್ಟಿಮೋರ್ ಬಳಿ ಪರೀಕ್ಷಿಸಲಾಯಿತು.

ಇದು ನಂಬಲೇಬೇಕಾದ ಸತ್ಯ - ಕುದುರೆಗೆ ಶರಣಾಗಿದ್ದ ಸ್ಟೀಮ್ ಎಂಜಿನ್ ರೈಲು

ಪರೀಕ್ಷಿಸಲು ರೇಸ್ ಅನ್ನು ಆಯೋಜಿಸಲಾಯಿತು. ಈ ರೇಸ್, ಸ್ಟೀಮ್ ಎಂಜಿನ್ ಹೊಂದಿದ್ದ ರೈಲು ಹಾಗೂ ಕುದುರೆ ಎಳೆಯುವ ರೈಲಿನ ನಡುವೆ ನಡೆಯಿತು. ಈ ಸ್ಪರ್ಧೆಗೆ ಪೀಟರ್ ಕೂಪರ್ ಸಹ ಒಪ್ಪಿಗೆ ಸೂಚಿಸಿದರು.

ಇದು ನಂಬಲೇಬೇಕಾದ ಸತ್ಯ - ಕುದುರೆಗೆ ಶರಣಾಗಿದ್ದ ಸ್ಟೀಮ್ ಎಂಜಿನ್ ರೈಲು

ಮೊದಲಿಗೆ ಪೀಟರ್ ಕೂಪರ್‍‍ರವರು ಅಭಿವೃದ್ಧಿಪಡಿಸಿದ್ದ ಸ್ಟೀಮ್ ಎಂಜಿನ್ ರೈಲು ಸ್ಪರ್ಧೆಯಲ್ಲಿ ಮುಂದಿತ್ತು. ಆದರೆ ಎಂಜಿನ್‍‍ನಲ್ಲಿ ಉಂಟಾದ ತಾಂತ್ರಿಕ ದೋಷದ ಕಾರಣಕ್ಕೆ, ಸ್ಟೀಮ್ ಎಂಜಿನ್ ಹೊಂದಿದ್ದ ರೈಲು ಸ್ಪರ್ಧೆಯಿಂದ ಹಿಂದೆ ಸರಿಯಿತು.

ಇದು ನಂಬಲೇಬೇಕಾದ ಸತ್ಯ - ಕುದುರೆಗೆ ಶರಣಾಗಿದ್ದ ಸ್ಟೀಮ್ ಎಂಜಿನ್ ರೈಲು

ಕುದುರೆ ಎಳೆಯುತ್ತಿದ್ದ ರೈಲು ಸ್ಪರ್ಧೆಯಲ್ಲಿ ಮುಂದೆ ಸಾಗಿ, ರೇಸ್ ಅನ್ನು ಯಶಸ್ವಿಯಾಗಿ ಗುರಿ ಮುಟ್ಟಿತು. ರೇಸಿನಿಂದ ಹಿಂದೆ ಸರಿದರೂ, ಬಾಲ್ಟಿಮೋರ್ ಹಾಗೂ ಒಹಿಯೊ ರೇಲ್‍‍ರೋಡ್ ಕಂಪನಿಯ ಅಧಿಕಾರಿಗಳು ಪೀಟರ್ ಕೂಪರ್‍‍ರವರ ಸ್ಟೀಮ್ ಎಂಜಿನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದು ನಂಬಲೇಬೇಕಾದ ಸತ್ಯ - ಕುದುರೆಗೆ ಶರಣಾಗಿದ್ದ ಸ್ಟೀಮ್ ಎಂಜಿನ್ ರೈಲು

ಇದಾದ ನಂತರ ರೈಲುಗಳಲ್ಲಿ ಮಹತ್ತರವಾದ ಬೆಳವಣಿಗೆಗಳಾಗಿವೆ. ಸ್ಟೀಮ್ ಎಂಜಿನ್‍‍ನಿಂದ, ಎಲೆಕ್ಟ್ರಿಕ್ ರೈಲುಗಳವರೆಗೆ ಅನೇಕ ಬೆಳವಣಿಗೆಗಳಾಗಿವೆ. ಈಗಂತೂ ಎಲ್ಲೆಡೆ ಬುಲೆಟ್ ರೈಲಿನದೇ ಮಾತು. ಭಾರತದ ದೊಡ್ಡ ನಗರಗಳಲ್ಲಿ ಮೆಟ್ರೋ ರೈಲುಗಳು ಸಂಚರಿಸುತ್ತಿವೆ. ಇವುಗಳಲ್ಲಿ ನಮ್ಮ ಮೆಟ್ರೋ ಸಹ ಒಂದು.

Article Published On: Monday, February 10, 2020, 10:54 [IST]
English summary
Americas first steam engine train lost a race to horse. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+