ಅಪರಿಚಿತ ವ್ಯಕ್ತಿಯಿಂದ ಲಿಫ್ಟ್ ಪಡೆದ ಅಮಿತಾಭ್: ಕಾರಣ ಕೇಳಿದ್ರೆ ಗೌರವ ಹೆಚ್ಚಾಗುತ್ತೆ.. Full Viral

ದೇಶದಲ್ಲಿ ಸಂಚಾರ ದಟ್ಟಣೆ ಇರುವ ಮಹಾನಗರಗಳ ಪೈಕಿ ಮುಂಬೈ ಮೊದಲ ಸಾಲಿನಲ್ಲಿದೆ. ಇದು ಅಲ್ಲಿನ ಜನಸಾಮಾನ್ಯರು ಮಾತ್ರವಲ್ಲದೆ ಉದ್ಯಮಿಗಳು ಹಾಗೂ ಬಾಲಿವುಡ್ ನಟ - ನಟಿಯರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೀಗ, ಅಮಿತಾಭ್ ಬಚ್ಚನ್ ಅವರಿಗೂ ಟ್ರಾಫಿಕ್ ಬಿಸಿ ತಟ್ಟಿದ್ದು, ಅಪರಿಚಿತ ವ್ಯಕ್ತಿ ಬೈಕ್‌ನಲ್ಲಿ ಲಿಫ್ಟ್ ತೆಗೆದುಕೊಂಡಿದ್ದಾರೆ.

ಸದ್ಯ, ಸೋಷಿಯಲ್ ಮೀಡಿಯಾದಲ್ಲಿ ಇದು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದ್ದು, ಅದಕ್ಕೆ ಕಾರಣವು ಇದೆ. ಅಮಿತಾಭ್ ಅವರ ವಯಸ್ಸು 80. ಆದರೂ ಸಿನಿರಂಗದಲ್ಲಿ ಆಕ್ಟಿವ್ ಇದ್ದಾರೆ. ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದು, ಶೂಟಿಂಗ್ ಗಳಲ್ಲಿಯೂ ಭಾಗವಹಿಸುತ್ತಿರುತ್ತಾರೆ. ಎಂದಿನಂತೆ ತಮ್ಮ ಕಾರಿನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅಮಿತಾಭ್ ಮನೆಯಿಂದ ಹೊರಟಿದ್ದಾರೆ. ಎಲ್ಲಿರಿಗೂ ತಿಳಿದಿರುವಂತೆ ಮುಂಬೈನಲ್ಲಿ ಸಂಚಾರ ದಟ್ಟಣೆ ಹೆಚ್ಚು. ಅದರ ಬಿಸಿ ಅವರಿಗೂ ತಟ್ಟಿದೆ.

ಅಪರಿಚಿತ ವ್ಯಕ್ತಿಯಿಂದ ಲಿಫ್ಟ್ ಪಡೆದ ಅಮಿತಾಭ್: ಕಾರಣ ಕೇಳಿದ್ರೆ ಗೌರವ ಹೆಚ್ಚಾಗುತ್ತೆ.. Full Viral

ಎಷ್ಟು ಹೊತ್ತು ಕಾದರೂ ಟ್ರಾಫಿಕ್ ಕ್ಲಿಯರ್ ಆಗಿಲ್ಲ. ಮೊದಲೇ ಸಮಯಕ್ಕೆ ಬೆಲೆ ಕೊಡುವ ಅಮಿತಾಭ್ ಬಚ್ಚನ್ ಅವರು, ಸೀದಾ ಕಾರಿನಿಂದ ಇಳಿದು, ಅಪರಿಚಿತ ವ್ಯಕ್ತಿಯೊಬ್ಬರಿಂದ ಲಿಫ್ಟ್ ಪಡೆದು ಸರಿಯಾದ ಸಮಯಕ್ಕೆ ಶೂಟಿಂಗ್ ಸ್ಥಳಕ್ಕೆ ತೆರಳಿ, ಚಿತ್ರೀಕರಣದಲ್ಲಿ ಭಾಗವಹಿಸಿ, ತಾನು ದೊಡ್ಡ ಸ್ಟಾರ್ ನಟನಾದರೂ ಸಮಯಕ್ಕೆ ನನ್ನ ಮೊದಲ ಆದ್ಯತೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಈ ಬಗ್ಗೆ ಸ್ವತಃ ಅಮಿತಾಭ್ ಬಚ್ಚನ್ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, 'ನಿಮಗೆ ಗೊತ್ತಿಲ್ಲ. ಇಂತಹ ಟ್ರಾಫಿಕ್ ಜಾಮ್‌ನಲ್ಲಿಯು ವೇಗವಾಗಿ ನೀವು ಬೈಕ್ ಓಡಿಸಿ, ಸರಿಯಾದ ಸಮಯಕ್ಕೆ ಚಿತೀಕರಣ ನಡೆಯುವ ಸ್ಥಳವನ್ನು ತಲುಪುವಂತೆ ಮಾಡಿದ್ದೀರಿ. ಕ್ಯಾಪ್ ಹಾಗೂ ಹಳದಿ ಬಣ್ಣದ ಟೀ ಶರ್ಟ್ ಹಾಕಿಕೊಂಡ ನಿಮಗೆ ಥ್ಯಾಂಕ್ಸ್' ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬರು, 'ಕಂಫರ್ಟ್ ಕ್ಕಿಂತ ಸಮಯದ ಮೌಲ್ಯ ಮುಖ್ಯ, ಸೆಲ್ಯೂಟ್ ಯು ಸರ್' ಹೇಳಿದ್ದರೆ, ಮತ್ತೊಬ್ಬರು, 'ಆ ಬೈಕ್ ಚಾಲಕನಿಗೆ ಅಮಿತಾಭ್ ಬಚ್ಚನ್ ಅವರಂತಹ ದೊಡ್ಡ ಸ್ಟಾರ್ ಗೆ ಲಿಫ್ಟ್ ಕೊಟ್ಟಿರುವುದು ಸುಮಧುರ ನೆನಪಾಗಿ ಉಳಿಯುತ್ತಿದೆ' ಎಂದು ಕಾಮೆಂಟ್ ಮಾಡಿದ್ದಾರೆ.

ಚಾರುಕಮಲ್ ಎಂಬ ಮಹಿಳೆ, 50 ವರ್ಷಗಳ ಹಿಂದಿನ ಜ್ಞಾಪಕವನ್ನು ಮೆಲುಕು ಹಾಕಿದ್ದಾರೆ. 'ನೀವು ಬಂದಾ ನಗರ (ಉತ್ತರ ಪ್ರದೇಶ)ಕ್ಕೆ ಬಂದಾಗ ನನ್ನ ತಂದೆ ನಿಮ್ಮನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿದ್ದು ನೆನಪಿದ್ಯಾ, ನನ್ನ ತಂದೆ ಹಿಂದಿ ಕವಿ ಕದರನಾಥ್ ಅಗರ್ವಾಲ್ ಮೊಮ್ಮಗ' ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ, ಸರ್, ಹೆಲ್ಮೆಟ್ ಧರಿಸಿಲ್ಲವೇಕೆ.. ನೀವು ಕೆಲಸದ ಸ್ಥಳ ತಲುಪುದು ತುರ್ತು ಇದೆ ಎಂದು ಗೊತ್ತಾಗುತ್ತದೆ. ಆದರೆ, ಸುರಕ್ಷತೆಗೆ ಆದ್ಯತೆ ಇಲ್ಲವೇ' ಎಂದು ಹೇಳಿದ್ದಾರೆ.

ಇನ್ನು, ಏನೇ ಆಗಲಿ ಈ ವಯಸ್ಸಿನಲ್ಲಿ ಅಮಿತಾಭ್ ಬಚ್ಚನ್ ಸಮಯಕ್ಕೆ ಮಹತ್ವ ನೀಡುವುದು ನೋಡಿದರೆ, ಅದು ಯುವಕರನ್ನು ನಾಚಿಸುವಂತೆ ಇದೆ. ಕಷ್ಟವಾದರೂ ಸರಿಯಾದ ಸಮಯಕ್ಕೆ ಶೂಟಿಂಗ್ ಸ್ಥಳಕ್ಕೆ ಹೋಗಬೇಕೆಂಬ ಅವರ ಬದ್ಧತೆಯನ್ನು ಎಲ್ಲರು ಮೆಚ್ಚಲೇ ಬೇಕು. ಸೋಷಿಯಲ್ ಮೀಡಿಯಾದಲ್ಲಿ ಇದು ಟ್ರೆಂಡಿಂಗ್ ವಿಷಯವಾಗಿ ಮಾರ್ಪಟ್ಟಿದೆ. ಅಭಿಮಾನಿಗಳು ಇದೇ ಅಲ್ವಾ ಕೆಲಸದ ಮೇಲಿನ ನಿಷ್ಠೆ ಎಂದು ಹೇಳುತ್ತಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ನಿಮ್ಮ ಸ್ನೇಹಿತ ಜೊತೆಗೂ ಶೇರ್ ಮಾಡಿ.

Article Published On: Monday, May 15, 2023, 17:39 [IST]
English summary
Amitabh bachchan takes lift strangers bike full viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+