ಪತಿಯನ್ನು ಹಿಂದೆ ಕೂರಿಸಿಕೊಂಡು ಟಿವಿಎಸ್ XL ನಲ್ಲಿ ವೃದ್ಧ ದಂಪತಿಯ ಸವಾರಿ

ಒಂದು ಕಾಲದಲ್ಲಿ ಸ್ಕೂಟರ್, ಬೈಕ್‌ಗಳು ಕೇವಲ ಪುರುಷರಿಗೆ ಮಾತ್ರ ಸೀಮಿತವಾಗಿದ್ದವು. ಕಾಲಾನಂತರ ಈಗ ಮಹಿಳೆಯರು ಕೂಡ ದ್ವಿಚಕ್ರ ವಾಹನಗಳನ್ನು ಓಡಿಸುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ವೃದ್ಧ ಮಹಿಳೆ ಟಿವಿಎಸ್ XL ನಲ್ಲಿ ತನ್ನ ಗಂಡನನ್ನು ಹಿಂದೆ ಕೂರಿಸಿಕೊಂಡು ಸವಾರಿ ಮಾಡುವುದನ್ನು ಬಹುಶಃ ನೋಡಿರುವುದಿಲ್ಲ.

ಪತಿಯನ್ನು ಹಿಂದೆ ಕೂರಿಸಿಕೊಂಡು ಟಿವಿಎಸ್ XL ನಲ್ಲಿ ವೃದ್ಧ ದಂಪತಿಯ ಸವಾರಿ

ಹೌದು... ವೃದ್ಧ ದಂಪತಿ ದ್ವಿಚಕ್ರ ವಾಹನದಲ್ಲಿ ತೆರಳಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ ಜನರು ಮೊದಲಿಗೆ ಈ ದಂಪತಿ ಯುವ ಜೋಡಿಯೆಂದು ಭಾವಿಸುತ್ತಾರೆ. ಆದರೆ ವಿಡಿಯೋದಲ್ಲಿ ದಂಪತಿಯನ್ನು ಹತ್ತಿರದಿಂದ ನೋಡಿದಾಗ ಬೈಕ್ ಸವಾರಿ ಮಾಡುವ ಮಹಿಳೆ ವೃದ್ಧೆಯಾಗಿರುವುದನ್ನು ಕಂಡು ಆಶ್ಚರ್ಯಗೊಳ್ಳುತ್ತಿದ್ದಾರೆ.

ಲಿಂಗ ಭೇದವನ್ನು ಮರೆತು ದಕ್ಷಿಣ ಭಾರತದ ಈ ಹಿರಿಯ ದಂಪತಿ ಸುಸ್ಮಿತಾ ಡೋರಾ ಎಂಬುವವರ ಗಮನವನ್ನು ಸೆಳೆದಿದ್ದಾರೆ. ಸುಸ್ಮಿತಾ ಎಂಬಾಕೆ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇವರ Instagram ಬಯೋ ಪರಿಶೀಲಿಸಿದಾಗ ಅವರು ಛಾಯಾಗ್ರಾಹಕರಾಗಿರುವುದು ತಿಳಿದುಬಂದಿದೆ. ವೃದ್ಧ ದಂತಿಯ ಬಾಂಧವ್ಯ ಕಂಡು ಪ್ರಭಾವಿತರಾದ ಡೋಗ್ರಾ ಆ ಕ್ಷಣಗಳನ್ನು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ.

ಪತಿಯನ್ನು ಹಿಂದೆ ಕೂರಿಸಿಕೊಂಡು ಟಿವಿಎಸ್ XL ನಲ್ಲಿ ವೃದ್ಧ ದಂಪತಿಯ ಸವಾರಿ

ವಿಡಿಯೋದಲ್ಲಿ ಸೀರೆಯುಟ್ಟ ಮಹಿಳೆಯೊಬ್ಬರು ಬೈಕು ಸವಾರಿ ಮಾಡುವುದನ್ನು ಕಾಣಬಹುದು, ಆಕೆಯ ಪತಿಯಂತೆ ತೋರುವ ವ್ಯಕ್ತಿ ಆಕೆಯ ಹಿಂದೆ ಕುಳಿತಿದ್ದಾನೆ. ಶ್ರೇಯಾ ಗೋಶಾಲ್ ಮತ್ತು ಸೋನು ನಿಗಮ್ ಅವರ ಹಾಡು ತೇರೆ ಬಿನ್ ಹಿನ್ನೆಲೆಯಲ್ಲಿ ವಿಡಿಯೋ ಪ್ಲೇ ಆಗುತ್ತಿದ್ದಂತೆ ಅವರ ಮಧುರ ಧ್ವನಿಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಪತಿಯನ್ನು ಹಿಂದೆ ಕೂರಿಸಿಕೊಂಡು ಟಿವಿಎಸ್ XL ನಲ್ಲಿ ವೃದ್ಧ ದಂಪತಿಯ ಸವಾರಿ

ವೀಡಿಯೊವನ್ನು ಹಂಚಿಕೊಳ್ಳುವಾಗ ಇನ್‌ಸ್ಟಾಗ್ರಾಮ್ ಬಳಕೆದಾರರು, ಪುರುಷರು ಸಾಮಾನ್ಯ ಸವಾರರು ಎಂಬ ಸ್ಟೀರಿಯೊಟೈಪ್ ಅನ್ನು ಹೈಲೈಟ್ ಮಾಡಿದ್ದಾರೆ. ವೃದ್ಧ ದಂಪತಿಯ ಉತ್ಸಾಹವನ್ನು ಮತ್ತಷ್ಟು ಶ್ಲಾಘಿಸಿದ್ದಾರೆ. ಅಲ್ಲದೇ ಈ ವಿಡಿಯೋವನ್ನು ಸಾಕಷ್ಟು ಷೇರ್ ಮಾಡುತ್ತಿದ್ದು, ದೇಶಾದ್ಯಂತ ವೈರಲ್ ಆಗುತ್ತಿದೆ.

ಪತಿಯನ್ನು ಹಿಂದೆ ಕೂರಿಸಿಕೊಂಡು ಟಿವಿಎಸ್ XL ನಲ್ಲಿ ವೃದ್ಧ ದಂಪತಿಯ ಸವಾರಿ

ವಿಡಿಯೋವು ಶೀರ್ಷಿಕೆಯನ್ನು ಸಹ ಒಳಗೊಂಡಿದ್ದು, "ಸಾಮಾನ್ಯವಾಗಿ ನಾವು ಬೈಕ್ ಓಡಿಸುವ ದಂಪಯನ್ನು ನೋಡಿದಾಗ ಯಾವಾಗಲೂ ಪುರುಷರೇ ಬೈಕ್ ಸವಾರಿ ಮಾಡುತ್ತಾರೆ. ಈ ವಯಸ್ಸಿನಲ್ಲಿ ಮಹಿಳೆ ಡ್ರೈವ್ ಮಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ?" ಎಂದು ಶೀರ್ಷಿಕೆ ನೀಡಲಾಗಿದೆ.

ಪತಿಯನ್ನು ಹಿಂದೆ ಕೂರಿಸಿಕೊಂಡು ಟಿವಿಎಸ್ XL ನಲ್ಲಿ ವೃದ್ಧ ದಂಪತಿಯ ಸವಾರಿ

ಈ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಸ್ವಲ್ಪ ಸಮಯದಲ್ಲೇ ವೈರಲ್ ಆಗಿದೆ. ಫೋಟೋ ಹಂಚಿಕೆ ಅಪ್ಲಿಕೇಶನ್‌ನಲ್ಲಿ ವಿಡಿಯೋವು 3.7 ಮಿಲಿಯನ್ ವೀಕ್ಷಣೆಗಳನ್ನು ಮತ್ತು 3 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಕಾಮೆಂಟ್ ವಿಭಾಗವಂತೂ ಹಾರ್ಟ್ ಸಿಂಬಲ್‌ಗಳಿಂದ ತುಂಬಿಹೋಗಿದೆ.

ಪತಿಯನ್ನು ಹಿಂದೆ ಕೂರಿಸಿಕೊಂಡು ಟಿವಿಎಸ್ XL ನಲ್ಲಿ ವೃದ್ಧ ದಂಪತಿಯ ಸವಾರಿ

ಇನ್ನೂ ಕೆಲವರು ಫೈರ್ ಇಮೋಜಿಗಳೊಂದಿಗೆ ತುಂಬಿಸುವ ಮೂಲಕ ಸಾಮಾಜಿಕ ಮಾಧ್ಯಮ ಬಳಕೆದಾರರು ದಂಪತಿಯ ಯುವ ಮನೋಭಾವವನ್ನು ಶ್ಲಾಘಿಸಿದೆ. ವಿಡಿಯೋದಲ್ಲಿನ ಸನ್ನಿವೇಶವು ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿದೆ ಎಂದು ಹಲವರು ಹೈಲೈಟ್ ಮಾಡಿದ್ದಾರೆ. ಒಬ್ಬ ಬಳಕೆದಾರ "ದಕ್ಷಿಣದಲ್ಲಿ ಇದು ಸಾಮಾನ್ಯವಾಗಿದೆ" ಎಂದರೆ, ಮತ್ತೊಬ್ಬ "ಇದು ನಿಜ! ತಮಿಳುನಾಡಿನಲ್ಲಿ ಇದು ತುಂಬಾ ಸಾಮಾನ್ಯ ವಿಷಯ ಎಂದು ಕಮೆಂಟ್ ಮಾಡಿದ್ದಾನೆ.

ಪತಿಯನ್ನು ಹಿಂದೆ ಕೂರಿಸಿಕೊಂಡು ಟಿವಿಎಸ್ XL ನಲ್ಲಿ ವೃದ್ಧ ದಂಪತಿಯ ಸವಾರಿ

ಈ ನಡುವೆ ಸಾಮಾಜಿಕ ಮಾಧ್ಯಮದ ಒಂದು ವಿಭಾಗವು ಆಕೆಯ ಡ್ರೈವಿಂಗ್ ಅನ್ನು ಮೆಚ್ಚಿದ್ದು, ಆಕೆಯು ತನ್ನದೇ ಆದ ಶೈಲಿಯನ್ನು ಹೊಂದಿದ್ದಾಳೆ. ಅದು ನೋಡಲು ತುಂಬಾ ಆಕರ್ಷಣೀಯವಾಗಿ ಕಾಣುತ್ತಿದೆ ಎಂದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸೆಪ್ಟೆಂಬರ್ 3 ರಂದು ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿನ ಬೈಕ್ ಸವಾರಿಯಲ್ಲಿ ಕಾಣಿಸಿಕೊಂಡ ದಂಪತಿಯ ಗುರುತು ಇನ್ನೂ ತಿಳಿದುಬಂದಿಲ್ಲ.

ಪತಿಯನ್ನು ಹಿಂದೆ ಕೂರಿಸಿಕೊಂಡು ಟಿವಿಎಸ್ XL ನಲ್ಲಿ ವೃದ್ಧ ದಂಪತಿಯ ಸವಾರಿ

40 ವರ್ಷಗಳಿಂದ ಒಂದೇ ಕಾರು ಓಡಿಸುತ್ತಿರುವ ವೃದ್ಧ

ಕೇರಳದ ದಯಾನಂದನ್ ಎಂಬುವವರು ಪ್ರೀಮಿಯರ್ ಪದ್ಮಿನಿ ಹೊಂದಿದ್ದು, ಈ ವಾಹನವನ್ನು ಬರೋಬ್ಬರಿ 40 ವರ್ಷಗಳಿಂದ ತಮ್ಮ ದಿನನಿತ್ಯದ ಕೆಲಸಕಾರ್ಯಗಳಿಗೆ ಬಳಸಿಕೊಂಡು ಬಂದಿದ್ದಾರೆ. ದಯಾನಂದನ್ ಅವರು ಕೇಂದ್ರ ಸರ್ಕಾರಿ ಉದ್ಯೋಗಿಯಾಗಿದ್ದು, ಈಗ ನಿವೃತ್ತರಾಗಿದ್ದಾರೆ.

ಪತಿಯನ್ನು ಹಿಂದೆ ಕೂರಿಸಿಕೊಂಡು ಟಿವಿಎಸ್ XL ನಲ್ಲಿ ವೃದ್ಧ ದಂಪತಿಯ ಸವಾರಿ

ಅವರ ಕೆಲಸದ ಭಾಗವಾಗಿ ದೆಹಲಿ ಮತ್ತು ಇತರ ಹಲವು ರಾಜ್ಯಗಳಲ್ಲಿ ಅವರನ್ನು ನಿಯೋಜಿಸಲಾಗುತ್ತಿತು. ಯೋಜನೆಯ ಭಾಗವಾಗಿ ಅವರನ್ನು ಭೂತಾನ್‌ನಲ್ಲಿಯೂ ನಿಯೋಜಿಸಲಾಗಿತ್ತು. ಕೆಲಸ ಮಾಡುತ್ತಿದ್ದಾಗ ಅವರ ಬಳಕೆಗೆ ಅಧಿಕೃತ ವಾಹನಗಳಿದ್ದವು.

ಪತಿಯನ್ನು ಹಿಂದೆ ಕೂರಿಸಿಕೊಂಡು ಟಿವಿಎಸ್ XL ನಲ್ಲಿ ವೃದ್ಧ ದಂಪತಿಯ ಸವಾರಿ

ಕೆಲ ವರ್ಷಗಳ ನಂತರ ಅವರು ತಮ್ಮ ವೈಯಕ್ತಿಕ ಬಳಕೆಗಾಗಿ ಕಾರು ಖರೀದಿಸಲು ಯೋಚಿಸಿದರು. ಆಗ ಮಾರುಕಟ್ಟೆಯಲ್ಲಿ ಹಿಂದುಸ್ತಾನ್ ಅಂಬಾಸಿಡರ್, ಪ್ರೀಮಿಯರ್ ಪದ್ಮಿನಿಯಂತಹ ಕಾರುಗಳು ಲಭ್ಯವಿದ್ದವು. ಅವರು ಅಂತಿಮವಾಗಿ ಪ್ರೀಮಿಯರ್ ಪದ್ಮಿನಿಯನ್ನು ಖರೀದಿಸಿ, ಅಂದಿನಿಂದ ಇಂದಿನವರೆಗೂ ಅದನ್ನು ಓಡಿಸುತ್ತಿದ್ದಾರೆ.

ಪತಿಯನ್ನು ಹಿಂದೆ ಕೂರಿಸಿಕೊಂಡು ಟಿವಿಎಸ್ XL ನಲ್ಲಿ ವೃದ್ಧ ದಂಪತಿಯ ಸವಾರಿ

ಭಾರತದೊಳಗೆ ಎಲ್ಲೇ ಪೋಸ್ಟಿಂಗ್ ಆದರೂ ಅಲ್ಲೆಲ್ಲ ಕಾರನ್ನು ತೆಗೆದುಕೊಂಡು ಹೋಗುತ್ತಿದ್ದರು. ನಂತರ ಕೊನೆಯದಾಗಿ ಪೋಸ್ಟಿಂಗ್ ಆಗಿದ್ದ ದೆಹಲಿಯಲ್ಲಿ ಕಾರನ್ನು ನೋಂದಾಯಿಸಲಾಯಿತು, ಅವರು ನಿವೃತ್ತರಾದ ನಂತರ ಕೇರಳಕ್ಕೆ ಹಿಂತಿರುಗಿದಾಗ ಅವರು ಕಾರನ್ನು ಸ್ಥಳೀಯ ಆರ್‌ಟಿಒಗೆ ವರ್ಗಾಯಿಸಿದರು. ಪದ್ಮಿನಿ 40 ವರ್ಷಗಳಿಂದ ಜೊತೆಗಿದ್ದು, ಈ ಅವಧಿಯಲ್ಲಿ ಬೇರೆ ಯಾವುದೇ ಕಾರನ್ನು ಅವರು ಓಡಿಸಿರಲಿಲ್ಲ.

ಪತಿಯನ್ನು ಹಿಂದೆ ಕೂರಿಸಿಕೊಂಡು ಟಿವಿಎಸ್ XL ನಲ್ಲಿ ವೃದ್ಧ ದಂಪತಿಯ ಸವಾರಿ

ಕಾರಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಅವರು ಪ್ರೀಮಿಯರ್ ಪದ್ಮಿನಿಯನ್ನು ಬಹಳಷ್ಟು ಇಷ್ಟಪಡುತ್ತಾರೆ. ಅವರು ತಮ್ಮ ಕಾರಿನಲ್ಲಿ ಬಹಳಷ್ಟು ಆಧುನಿಕ ವೈಶಿಷ್ಟ್ಯಗಳನ್ನು ಇಷ್ಟಪಡುವ ವ್ಯಕ್ತಿಯಲ್ಲ. ಆದ್ದರಿಂದ ಅವರು ಈಗಷ್ಟೇ ಸೀಟ್ ಕವರ್‌ಗಳನ್ನು ಮರುರೂಪಿಸಿದ್ದಾರೆ. ಅದು ಬಿಟ್ಟರೆ ಕಾರಿನ ಒಳಗಿರುವ ಎಲ್ಲವೂ ಫ್ಯಾಕ್ಟರಿಯಿಂದ ಬಂದಂತೆಯೇ ಇದೆ.

Most Read Articles

Kannada
English summary
An elderly couple took a ride in a TVS XL with their husband sitting behind them
Story first published: Saturday, September 17, 2022, 15:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X