40 ವರ್ಷಗಳಿಂದ ಒಂದೇ ಕಾರು, ಬೈಕನ್ನು ಓಡಿಸುತ್ತಿರುವ ವೃದ್ಧ: ನಿರ್ವಹಣೆ ಬಗ್ಗೆ ಎರಡು ಮಾತಿಲ್ಲ!

ಕ್ಲಾಸಿಕ್ ಅಥವಾ ವಿಂಟೇಜ್ ವಾಹನಗಳಿಗೆ ಇತ್ತೀಚೆಗೆ ಬಹಳಷ್ಟು ಬೇಡಿಕೆ ಬಂದಿದೆ. ಯುವ ಜನತೆಯು ಹಳೆಯ ಕಾರು ಮತ್ತು ಬೈಕ್‌ಗಳಿಗಾಗಿ ಮುಗಿಬಿದ್ದು ಸೆಕೆಂಡ್‌ ಹ್ಯಾಂಡ್ ಆದ್ರೂ ಖರೀದಿಸುತ್ತಿದ್ದಾರೆ. ತೀರಾ ಸ್ವತಂತ್ರ ಪೂರ್ವದ ವಾಹನಗಳಲ್ಲಿದೇ 70ರ ದಶಕದಲ್ಲಿ ಸದ್ದು ಮಾಡಿದ್ದ ಪ್ರೀಮಿಯರ್ ಪದ್ಮಿನಿ ಹಾಗೂ ಅಂಬಾಸಿಡರ್ ಕಾರುಗಳಿಗೂ ಬೇಡಿಕೆಯಿದೆ.

40 ವರ್ಷಗಳಿಂದ ಒಂದೇ ಕಾರು, ಬೈಕನ್ನು ಓಡಿಸುತ್ತಿರುವ ವೃದ್ಧ: ನಿರ್ವಹಣೆ ಬಗ್ಗೆ ಎರಡು ಮಾತಿಲ್ಲ!

ಇನ್ನು ದ್ವಿಚಕ್ರ ವಾಹನಗಳಿಗೆ ಉತ್ತಮ ಉದಾಹರಣೆಯೆಂದರೆ RX 100 ಮತ್ತು ಬಜಾಜ್ ಚೇತಕ್ ಸ್ಕೂಟರ್‌ಗಳಾಗಿವೆ. ಹಲವರು ಇವುಗಳ ರೆಟ್ರೊ ವಿನ್ಯಾಸಕ್ಕಾಗಿ ಇಷ್ಟಪಟ್ಟರೆ, ಕೆಲವರು ಅದರ ಸರಳತೆಗಾಗಿ ಇಷ್ಟಪಡುತ್ತಾರೆ. ಭಾರತದಾದ್ಯಂತ ಅನೇಕ ವಿಂಟೇಜ್ ಕಾರ್ ಮತ್ತು ಬೈಕ್‌ಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿರುವವರು ಹಲವರಿದ್ದಾರೆ.

40 ವರ್ಷಗಳಿಂದ ಒಂದೇ ಕಾರು, ಬೈಕನ್ನು ಓಡಿಸುತ್ತಿರುವ ವೃದ್ಧ: ನಿರ್ವಹಣೆ ಬಗ್ಗೆ ಎರಡು ಮಾತಿಲ್ಲ!

ವಾಸ್ತವವಾಗಿ ಇಂಥವರಿಂದಲೇ ಹಳೆಯ ಕಾರುಗಳಿಗೆ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಿದೆ. ಸೆಕೆಂಡ್ಸ್ ಮಾರುಕಟ್ಟೆಯಲ್ಲಿ ಈ ಕಾರುಗಳಿಗೆ ಇಂದಿಗೂ ಬೇಡಿಕೆಯಿದ್ದು, ಹಳೆಯ ವಾಹನಗಳನ್ನು ಸಂಗ್ರಹಿಸುವ ಹಲವರು ಖರೀದಿಸಿ ತಮ್ಮ ಗ್ಯಾರೇಜ್‌ನಲ್ಲಿ ಭದ್ರವಾಗಿರಿಸಿಕೊಳ್ಳುತ್ತಾರೆ.

40 ವರ್ಷಗಳಿಂದ ಒಂದೇ ಕಾರು, ಬೈಕನ್ನು ಓಡಿಸುತ್ತಿರುವ ವೃದ್ಧ: ನಿರ್ವಹಣೆ ಬಗ್ಗೆ ಎರಡು ಮಾತಿಲ್ಲ!

ಈ ಕಾರ್ ಸಂಗ್ರಾಹಕರ ಬಗ್ಗೆ ಮಾತನಾಡುವುದಾದರೆ, ಹೆಚ್ಚಿನವರು ಈ ಕಾರುಗಳನ್ನು ಹೊಂದಿರುತ್ತಾರಾದರೂ, ಅವರು ವಿರಳವಾಗಿ ಬಳಸುತ್ತಾರೆ. ಏಕೆಂದರೆ ಈ ಹೆಚ್ಚಿನ ಕಾರುಗಳು ಹೊರಗಿನಿಂದ ಆಕರ್ಷಣೀಯವಾಗಿ ಕಾಣಿಸಬಹುದು ಆದರೆ ಅವು ಕೆಲವು ಯಾಂತ್ರಿಕ ಸಮಸ್ಯೆಗಳನ್ನು ಹೊಂದಿರುತ್ತವೆ.

40 ವರ್ಷಗಳಿಂದ ಒಂದೇ ಕಾರು, ಬೈಕನ್ನು ಓಡಿಸುತ್ತಿರುವ ವೃದ್ಧ: ನಿರ್ವಹಣೆ ಬಗ್ಗೆ ಎರಡು ಮಾತಿಲ್ಲ!

ಸಾಮಾನ್ಯವಾಗಿ ಹಳೆಯ ಕಾರುಗಳನ್ನು ಸಂಗ್ರಹಿಸಿಟ್ಟುಳ್ಳುವವರು ದಿನನಿತ್ಯ ಓಡಾಡಲು ಆಧುನಿಕ ಕಾರುಗಳನ್ನು ಬಳಸುತ್ತಾರೆ. ಅವರು ಸಂಗ್ರಹಿಸಿಟ್ಟಿರುವ ಹಳೆಯ ಕಾರುಗಳನ್ನು ನಿತ್ಯ ಜೀವನದಲ್ಲಿ ಬಳಸುವುದಿಲ್ಲ. ಆದರೆ ಇಲ್ಲೊಬ್ಬರು ಸುಮಾರು 40 ವರ್ಷಗಳಿಂದ ಒಂದೇ ಕಾರು ಮತ್ತು ಸ್ಕೂಟರ್ ಚಲಾಯಿಸುತ್ತಿದ್ದಾರೆ.

40 ವರ್ಷಗಳಿಂದ ಒಂದೇ ಕಾರು, ಬೈಕನ್ನು ಓಡಿಸುತ್ತಿರುವ ವೃದ್ಧ: ನಿರ್ವಹಣೆ ಬಗ್ಗೆ ಎರಡು ಮಾತಿಲ್ಲ!

ಅವರೇ ದಯಾನಂದನ್, ಈ ಕಥೆಯಲ್ಲಿನ ಮುಖ್ಯ ಪಾತ್ರದಾರಿಯಾದ ದಯಾನಂದನ್ ಅವರು ಕ್ಲಾಸಿಕ್ ಕಾರ್ ಕಲೆಕ್ಟರ್ ಅಲ್ಲ. ಆದರೆ ಅವರು ಬಜಾಜ್ ಸೂಪರ್ ಸ್ಕೂಟರ್ ಮತ್ತು ಪ್ರೀಮಿಯರ್ ಪದ್ಮಿನಿ ಹೊಂದಿದ್ದಾರೆ. ಈ ಎರಡೂ ವಾಹನಗಳು ತಮ್ಮದೇ ಆದ ಕಥೆಯನ್ನು ಹೊಂದಿದ್ದು, ದಯಾನಂದನ್ ಈ ವಾಹನಗಳನ್ನು ಬರೋಬ್ಬರಿ 40 ವರ್ಷಗಳಿಂದ ತಮ್ಮ ದಿನನಿತ್ಯದ ಕೆಲಸಕಾರ್ಯಗಳಿಗೆ ಬಳಸಿಕೊಂಡು ಬಂದಿದ್ದಾರೆ.

40 ವರ್ಷಗಳಿಂದ ಒಂದೇ ಕಾರು, ಬೈಕನ್ನು ಓಡಿಸುತ್ತಿರುವ ವೃದ್ಧ: ನಿರ್ವಹಣೆ ಬಗ್ಗೆ ಎರಡು ಮಾತಿಲ್ಲ!

ದಯಾನಂದನ್ ಅವರು ಕೇಂದ್ರ ಸರ್ಕಾರಿ ಉದ್ಯೋಗಿಯಾಗಿದ್ದು, ಈಗ ನಿವೃತ್ತರಾಗಿದ್ದಾರೆ. ಅವರ ಕೆಲಸದ ಭಾಗವಾಗಿ ದೆಹಲಿ ಮತ್ತು ಇತರ ಹಲವು ರಾಜ್ಯಗಳಲ್ಲಿ ಅವರನ್ನು ನಿಯೋಜಿಸಲಾಗುತ್ತಿತು. ಯೋಜನೆಯ ಭಾಗವಾಗಿ ಅವರನ್ನು ಭೂತಾನ್‌ನಲ್ಲಿಯೂ ನಿಯೋಜಿಸಲಾಗಿತ್ತು. ಕೆಲಸ ಮಾಡುತ್ತಿದ್ದಾಗ ಅವರ ಬಳಕೆಗೆ ಅಧಿಕೃತ ವಾಹನಗಳಿದ್ದವು.

40 ವರ್ಷಗಳಿಂದ ಒಂದೇ ಕಾರು, ಬೈಕನ್ನು ಓಡಿಸುತ್ತಿರುವ ವೃದ್ಧ: ನಿರ್ವಹಣೆ ಬಗ್ಗೆ ಎರಡು ಮಾತಿಲ್ಲ!

ಕೆಲ ವರ್ಷಗಳ ನಂತರ ಅವರು ತಮ್ಮ ವೈಯಕ್ತಿಕ ಬಳಕೆಗಾಗಿ ಕಾರು ಖರೀದಿಸಲು ಯೋಚಿಸಿದರು. ಆಗ ಮಾರುಕಟ್ಟೆಯಲ್ಲಿ ಹಿಂದುಸ್ತಾನ್ ಅಂಬಾಸಿಡರ್, ಪ್ರೀಮಿಯರ್ ಪದ್ಮಿನಿಯಂತಹ ಕಾರುಗಳು ಲಭ್ಯವಿದ್ದವು. ಅವರು ಅಂತಿಮವಾಗಿ ಪ್ರೀಮಿಯರ್ ಪದ್ಮಿನಿಯನ್ನು ಖರೀದಿಸಿ, ಅಂದಿನಿಂದ ಇಂದಿನವರೆಗೂ ಅದನ್ನು ಓಡಿಸುತ್ತಿದ್ದಾರೆ.

40 ವರ್ಷಗಳಿಂದ ಒಂದೇ ಕಾರು, ಬೈಕನ್ನು ಓಡಿಸುತ್ತಿರುವ ವೃದ್ಧ: ನಿರ್ವಹಣೆ ಬಗ್ಗೆ ಎರಡು ಮಾತಿಲ್ಲ!

ಭಾರತದೊಳಗೆ ಎಲ್ಲೇ ಪೋಸ್ಟಿಂಗ್ ಆದರೂ ಅಲ್ಲೆಲ್ಲ ಕಾರನ್ನು ತೆಗೆದುಕೊಂಡು ಹೋಗುತ್ತಿದ್ದರು. ನಂತರ ಕೊನೆಯದಾಗಿ ಪೋಸ್ಟಿಂಗ್ ಆಗಿದ್ದ ದೆಹಲಿಯಲ್ಲಿ ಕಾರನ್ನು ನೋಂದಾಯಿಸಲಾಯಿತು, ಅವರು ನಿವೃತ್ತರಾದ ನಂತರ ಕೇರಳಕ್ಕೆ ಹಿಂತಿರುಗಿದಾಗ ಅವರು ಕಾರನ್ನು ಸ್ಥಳೀಯ ಆರ್‌ಟಿಒಗೆ ವರ್ಗಾಯಿಸಿದರು. ಪದ್ಮಿನಿ 40 ವರ್ಷಗಳಿಂದ ಜೊತೆಗಿದ್ದು, ಈ ಅವಧಿಯಲ್ಲಿ ಬೇರೆ ಯಾವುದೇ ಕಾರನ್ನು ಅವರು ಓಡಿಸಿರಲಿಲ್ಲ.

40 ವರ್ಷಗಳಿಂದ ಒಂದೇ ಕಾರು, ಬೈಕನ್ನು ಓಡಿಸುತ್ತಿರುವ ವೃದ್ಧ: ನಿರ್ವಹಣೆ ಬಗ್ಗೆ ಎರಡು ಮಾತಿಲ್ಲ!

ಕಾರಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಅವರು ಪ್ರೀಮಿಯರ್ ಪದ್ಮಿನಿಯನ್ನು ಬಹಳಷ್ಟು ಇಷ್ಟಪಡುತ್ತಾರೆ. ಅವರು ತಮ್ಮ ಕಾರಿನಲ್ಲಿ ಬಹಳಷ್ಟು ಆಧುನಿಕ ವೈಶಿಷ್ಟ್ಯಗಳನ್ನು ಇಷ್ಟಪಡುವ ವ್ಯಕ್ತಿಯಲ್ಲ. ಆದ್ದರಿಂದ ಅವರು ಈಗಷ್ಟೇ ಸೀಟ್ ಕವರ್‌ಗಳನ್ನು ಮರುರೂಪಿಸಿದ್ದಾರೆ. ಅದು ಬಿಟ್ಟರೆ ಕಾರಿನ ಒಳಗಿರುವ ಎಲ್ಲವೂ ಫ್ಯಾಕ್ಟರಿಯಿಂದ ಬಂದಂತೆಯೇ ಇದೆ.

40 ವರ್ಷಗಳಿಂದ ಒಂದೇ ಕಾರು, ಬೈಕನ್ನು ಓಡಿಸುತ್ತಿರುವ ವೃದ್ಧ: ನಿರ್ವಹಣೆ ಬಗ್ಗೆ ಎರಡು ಮಾತಿಲ್ಲ!

ಕಾರನ್ನು ಕೇರಳಕ್ಕೆ ಪಡೆದ ನಂತರ, ಅವರು ತಮ್ಮ ಮಗ ಖರೀದಿಸಿದ ಮೋರಿಸ್ ಸ್ಕೇಲ್ ಮಾಡೆಲ್‌ನಿಂದ ಸ್ಫೂರ್ತಿ ಪಡೆದ ಹಸಿರು ಮತ್ತು ಬಿಳಿ ಡ್ಯುಯಲ್-ಟೋನ್ ಶೇಡ್‌ನಲ್ಲಿ ಕಾರನ್ನು ಸಂಪೂರ್ಣವಾಗಿ ಪರಿವರ್ತಿಸಿದ್ದಾರೆ. ಕಾರು ಎಸಿಯಂತಹ ಹಲವು ವೈಶಿಷ್ಟ್ಯಗಳನ್ನು ತಪ್ಪಿಸಿದರೂ ದಯಾನಂದನ್ ಮಾತ್ರ ಈ ಕಾರಿನೊಂದಿಗೆ ಸಂತೋಷಪಟ್ಟಿದ್ದಾರೆ.

40 ವರ್ಷಗಳಿಂದ ಒಂದೇ ಕಾರು, ಬೈಕನ್ನು ಓಡಿಸುತ್ತಿರುವ ವೃದ್ಧ: ನಿರ್ವಹಣೆ ಬಗ್ಗೆ ಎರಡು ಮಾತಿಲ್ಲ!

ಇನ್ನೂ ನಗರದೊಳಗೆ ಯಾವುದೇ ಸಂಕೋಚವಿಲ್ಲದೇ ಅದನ್ನು ಓಡಿಸುತ್ತಿದ್ದಾರೆ. ಇನ್ನು ಸ್ಕೂಟರ್ ವಿಚಾರಕ್ಕೆ ಬರುವುದಾದರೆ, ಬಜಾಜ್ ಸೂಪರ್ ಸ್ಕೂಟರ್ ಆಗಿರುವ ಚೇತಕ್ ಮೊದಲ ಮಾಡೆಲ್ ಅನ್ನು ದಯಾನಂದ್ ಹೊಂದಿದ್ದಾರೆ. ಅವರು ಭೂತಾನ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಬಜಾಜ್ ಚೇತಕ್ ಅನ್ನು ಖರೀದಿಸಿದ್ದರು. ಅವರು ಅಸ್ಸಾಂಗೆ ವರ್ಗಾವಣೆಯಾದಾಗ ಸ್ಕೂಟರ್ ಅನ್ನು ಭಾರತಕ್ಕೆ ತಂದರು.

40 ವರ್ಷಗಳಿಂದ ಒಂದೇ ಕಾರು, ಬೈಕನ್ನು ಓಡಿಸುತ್ತಿರುವ ವೃದ್ಧ: ನಿರ್ವಹಣೆ ಬಗ್ಗೆ ಎರಡು ಮಾತಿಲ್ಲ!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸ್ಕೂಟರ್‌ನ ನೋಂದಣಿ ಭೂತಾನ್‌ನಿಂದ ಅಸ್ಸಾಂಗೆ, ನಂತರ ದೆಹಲಿಗೆ ಮತ್ತು ಅಂತಿಮವಾಗಿ ಕೇರಳಕ್ಕೆ ಬದಲಾಯಿತು. ಸುಮಾರು 35 ವರ್ಷಗಳಿಂದ ಸ್ಕೂಟರ್ ಅವರ ಬಳಿಯೇ ಇದೆ. ಅವರು ಸ್ಕೂಟರ್ ಮತ್ತು ಕಾರು ಎರಡನ್ನೂ ನಿಯಮಿತವಾಗಿ ಬಳಸುತ್ತಿದ್ದಾರೆ. ಹೆಚ್ಚಿನ ಹಣ ನೀಡುತ್ತೇವೆ ಕಾರನ್ನು ಮಾರಾಟ ಮಾಡಲು ಆಸಕ್ತಿ ಇದೆಯೇ ಎಂದು ಹಲವರು ಕೇಳಿದ್ದರೂ, ಯಾರಿಗೂ ಸಹ ಮಾರಾಟ ಮಾಡಿಲ್ಲ.

Most Read Articles

Kannada
English summary
An old man who has been driving the same car and bike for 40 years There is no doubt about maintenan
Story first published: Monday, September 12, 2022, 17:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X