ಕರ್ನಾಟಕದಲ್ಲಿ ರೂ.40,000 ಕೋಟಿ ಹೂಡಿಕೆ.. ಆನಂದ್ ಮಹೀಂದ್ರಾ ಘೋಷಣೆ: ಸಾವಿರಾರು ಉದ್ಯೋಗ ಸೃಷ್ಟಿ!
ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ - 2025ಕ್ಕೆ ಮಂಗಳವಾರ ಅದ್ದೂರಿಯಾಗಿ ಚಾಲನೆ ದೊರೆತಿದೆ. ಈ ಸಮಾವೇಶದಲ್ಲಿ ವಿವಿಧ ಕಂಪನಿಗಳು, ರಾಜ್ಯದಲ್ಲಿ ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆ ಮಾಡುವುದರೊಂದಿಗೆ, ಉದ್ಯೋಗ ಸೃಷ್ಟಿಗೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅಧಿಕೃತವಾಗಿ ಘೋಷಣೆ ಮಾಡಿವೆ. ಮೊದಲ ದಿನವೇ ಬರೋಬ್ಬರಿ ರೂ.5 ಲಕ್ಷ ಕೋಟಿ ಮೊತ್ತದ ಹಲವು ಹೂಡಿಕೆ ಒಪ್ಪಂದಗಳಿಗೂ ಕರ್ನಾಟಕ ಸರ್ಕಾರದೊಂದಿಗೆ ಸಹಿ ಹಾಕಿವೆ.
ಮಹೀಂದ್ರಾ ಗ್ರೂಪ್‌ನ ಮುಖ್ಯಸ್ಥ ಆನಂದ್ ಮಹೀಂದ್ರಾ (Anand Mahindra), ಮುಂದಿನ 5 ವರ್ಷಗಳಲ್ಲಿ ಕರ್ನಾಟಕದಲ್ಲಿ ಸರಿ ಸುಮಾರು ರೂ.40,000 ಕೋಟಿ ಬಂಡವಾಳ ಹೂಡಿಕೆ ಮಾಡುವುದಾಗಿ ಮಹತ್ವದ ಘೋಷಣೆ ಮಾಡಿದ್ದಾರೆ. ಮಹೀಂದ್ರಾ ಗ್ರೂಪ್ ಪ್ರಮುಖವಾಗಿ ನವೀಕರಿಸಬಹುದಾದ ಇಂಧನ, ಪ್ರವಾಸೋದ್ಯಮ, ರಕ್ಷಣೆ, ಎಲೆಕ್ಟ್ರಿಕ್ ವಾಹನಗಳು ಹಾಗೂ ರಿಯಲ್ ಎಸ್ಟೇಟ್‌ನಲ್ಲಿ ಹೆಚ್ಚಿನ ಹೂಡಿಕೆ ಮಾಡಲು ತೀರ್ಮಾನಿಸಿದೆ.

ಮಹೀಂದ್ರಾ ಸಸ್ಟೆನ್ (Mahindra Susten), ಮುಂಬರುವ ವರ್ಷಗಳಲ್ಲಿ 5 ಜಿಡಬ್ಲ್ಯೂಗಿಂತ ಹೆಚ್ಚಿನ ಸೋಲಾರ್ (ಸೌರ) ಹಾಗೂ ಹೈಬ್ರಿಡ್ ಪ್ರಾಜೆಕ್ಟ್‌ಗಳನ್ನು (ಯೋಜನೆ) ಅನುಷ್ಠಾನಗೊಳಿಸಲು ರೂ.35,000 ಕೋಟಿಯನ್ನು ಹೂಡಿಕೆ ಮಾಡುವ ಗುರಿಯನ್ನು ಹಾಕಿಕೊಂಡಿದೆ. ಇದರಿಂದ 6,000 ರಿಂದ 8,000 ಹೊಸ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.
ಕರ್ನಾಟಕದಲ್ಲಿ ಮಹೀಂದ್ರಾ ಹಾಲಿಡೇಸ್ (Mahindra Holidays) ಒಡೆತನದಲ್ಲಿ ಹಲವಾರು ರೆಸಾರ್ಟ್‌ಗಳಿವೆ. ಪ್ರವಾಸೋದ್ಯಕ್ಕೆ (Tourism) ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಗೋಕರ್ಣ ಹಾಗೂ ಹಂಪಿಯಲ್ಲಿ ರೂ.1,000 ಕೋಟಿ ಬಂಡವಾಳ ಹೂಡಿಕೆ ಮಾಡಲು ನಿರ್ಧಾರ ಮಾಡಿದೆ. ಮಹೀಂದ್ರಾ ಡಿಫೆನ್ಸ್ ಸರ್ವೀಸಸ್ (Mahindra Defence Services) & ಮಹೀಂದ್ರಾ ಏರೋಸ್ಪೇಸ್ (Mahindra Aerospace) ಕೂಡ ರಾಜ್ಯದಲ್ಲಿ ನೂರಾರು ಕೋಟಿ ಹೂಡಿಕೆ ಮಾಡಲು ಎದುರು ನೋಡುತ್ತಿವೆ.

ಈಗಾಗಲೇ ಮಹೀಂದ್ರಾ ಲೈಫ್‌ಸ್ಪೇಸಸ್ (Mahindra Lifespaces) ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳ ಮೇಲೆ ರೂ.5,000 ಕೋಟಿ ಬಂಡವಾಳ ಹಾಕಿದೆ. ಹೆಚ್ಚುವರಿಯಾಗಿ ರೂ.6,000 ಹೂಡಿಕೆ ಮಾಡಲು ಯೋಜಿಸಿದೆ. ಈ ಮೂಲಕ ಮಹೀಂದ್ರಾ ಕಂಪನಿ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲು ಮುಂದಾಗಿದೆ ವಿಶ್ಲೇಷಣೆ ಮಾಡಲಾಗುತ್ತಿದೆ.
ಈ ಸಮಾವೇಶದಲ್ಲಿ ಮಾತನಾಡಿದ ಆನಂದ್ ಮಹೀಂದ್ರಾ ಅವರು, '60 ಪೇಟೆಂಟ್ ಅರ್ಜಿಗಳು, 54 ಟ್ರೇಡ್‌ಮಾರ್ಕ್‌ಗಳು ಹಾಗೂ 10 ವಿನ್ಯಾಸ (ಡಿಸೈನ್) ನೋಂದಣಿಯೊಂದಿಗೆ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಮಾರುಕಟ್ಟೆಯಲ್ಲಿ ಅಗ್ರ ಸ್ಥಾನದಲ್ಲಿ ಉಳಿಯುವ ನಮ್ಮ ಮಹತ್ವಾಕಾಂಕ್ಷೆಗಳಿಗೆ ಕರ್ನಾಟಕ ಕೇಂದ್ರವಾಗಿದೆ' ಎಂದು ಹೇಳಿದರು. ಜೊತೆಗೆ ಕರ್ನಾಟಕದೊಂದಿಗಿನ ತಮ್ಮ ಸಂಬಂಧದ ಬಗ್ಗೆಯೂ ಅಭಿಪ್ರಾಯವನ್ನು ಹಂಚಿಕೊಂಡರು.
ಟಿವಿಎಸ್ ಮೋಟಾರ್ (TVS Motor) ಸಹ ಬಂಡವಾಳ ಹೂಡಿಕೆ: ದ್ವಿಚಕ್ರ & ತ್ರಿಚಕ್ರ ವಾಹನ ತಯಾರಿಕೆಗೆ ಟಿವಿಎಸ್ ಮೋಟಾರ್ ಕಂಪನಿ ಹೆಸರುವಾಗಿದೆ. ಮುಂದಿನ 5 ವರ್ಷಗಳಲ್ಲಿ ಕರ್ನಾಟಕದಲ್ಲಿ 2,000 ಕೋಟಿ ಹೂಡಿಕೆ ಮಾಡಲು ತೀರ್ಮಾನ ಮಾಡಿದೆ. ಈ ಸಂಬಂಧ ರಾಜ್ಯ ಸರ್ಕಾರದೊಂದಿಗೂ ಕೂಡ ಒಪ್ಪಂದಕ್ಕೆ ಸಹಿ ಹಾಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications