ವಿಶ್ವದ ಮೊದಲ ಡೈಮಂಡ್ ಫ್ರೇಮ್ ಇ-ಬೈಕ್ ತೆಗೆದುಕೊಂಡ ಆನಂದ್ ಮಹೀಂದ್ರಾ: ನಮ್ಮ ಯುವಕರ ಪರಿಶ್ರಮ ಮೆಚ್ಚಿದ್ರು!

ಮಹೀಂದ್ರಾ ಗ್ರೂಪ್‌ (Mahindra Group) ಮುಖ್ಯಸ್ಥರಾದ ಆನಂದ್ ಮಹೀಂದ್ರಾ (Anand Mahindra), ದೇಶದ ಸ್ಟಾರ್ಟ್‌ಅಪ್‌ಗಳ ಹೊಸ-ಹೊಸ ಆವಿಷ್ಕಾರ (innovations)ಗಳನ್ನು ಬೆಂಬಲಿಸುವ ಮೂಲಕ ಖ್ಯಾತಿಗಳಿಸಿದ್ದಾರೆ. ಇದೀಗ, ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದಾರೆ.

ಬಾಂಬೆ ಐಐಟಿ ವಿದ್ಯಾರ್ಥಿಗಳು ಸ್ಥಾಪಿಸರುವ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ ಹಾರ್ನ್‌ಬ್ಯಾಕ್ (Hornback) ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅವರು, ತಯಾರಿಸಿರುವ ವಿಶ್ವದ ಮೊದಲ ಮಡಚಬಹುದಾದ (foldable) ಡೈಮಂಡ್ ಫ್ರೇಮ್ ಇ - ಬೈಕ್ (diamond frame e - bike) ಅನ್ನು ಆನಂದ್ ಮಹೀಂದ್ರಾ ಅವರು ಹೊಗಳಿದ್ದಾರೆ.

ವಿಶ್ವದ ಮೊದಲ ಡೈಮಂಡ್ ಫ್ರೇಮ್ ಇ-ಬೈಕ್ ತೆಗೆದುಕೊಂಡ ಆನಂದ್ ಮಹೀಂದ್ರಾ: ನಮ್ಮ ಯುವಕರ ಪರಿಶ್ರಮ ಮೆಚ್ಚಿದ್ರು!

ಮಹೀಂದ್ರಾ ಗ್ರೂಪ್‌ ಕಚೇರಿ ಆವರಣದಲ್ಲಿ ಓಡಾಟ ನಡೆಸಲು ಆನಂದ್ ಮಹೀಂದ್ರಾ ಅವರು, ಹಾರ್ನ್‌ಬ್ಯಾಕ್ ಎಕ್ಸ್1 (Hornback X1) ಇ - ಬೈಕ್ ಖರೀದಿಸಿದ್ದು, ಅದೇ ಸ್ಟಾರ್ಟ್ಅಪ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಅವರು 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿರುವ ಚಿತ್ರಗಳಲ್ಲಿ ತಮ್ಮ ಸ್ಕಾರ್ಪಿಯೊ - ಎನ್ ಎಸ್‌ಯುವಿ ಬೂಟ್‌ನೊಳಗಿಂದ ಇ-ಬೈಕ್ ತೆಗೆಯುತ್ತಿರುವುದು, ಇಡುತ್ತಿರುವುದು ಹಾಗೂ ಅದರಲ್ಲಿ ಓಡಾಡುತ್ತಿರುವುದನ್ನು ಕಾಣಬಹುದು.

ಈ ಬಗ್ಗೆ ಸ್ವತಃ ಆನಂದ್ ಮಹೀಂದ್ರಾ ಪ್ರತಿಕ್ರಿಯೆ ನೀಡಿದ್ದು, 'ಐಐಟಿ ಬಾಂಬೆ ವಿದ್ಯಾರ್ಥಿಗಳ ಗುಂಪು ಮತ್ತೊಮ್ಮೆ ಹೆಮ್ಮೆ ತಂದಿದೆ. ಅವರು, ಪ್ರಪಂಚದಲ್ಲಿಯೇ ಮೊದಲ ಮಡಚಬಹುದಾದ ಡೈಮಂಡ್ ಫ್ರೇಮ್ ಇ - ಬೈಕ್ ಅಭಿವೃದ್ಧಿಪಡಿಸಿದ್ದಾರೆ. ಇಂತಹ ಬೇರೆ ಇ-ಬೈಕ್ ಗಳಿಗೆ ಹೋಲಿಸಿದರೆ, 35% ಹೆಚ್ಚು ಪರಿಣಾಮಕಾರಿಯಾಗಿದೆ. ಕಚೇರಿ ಆವರಣದಲ್ಲಿ ಸಂಚರಿಸಲು ಎಕ್ಸ್1 ಬೈಕ್ ತೆಗೆದುಕೊಂಡೆ!. ಇದು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದೆ' ಎಂದು ಹೇಳಿದ್ದಾರೆ.

ವಿಶ್ವದ ಮೊದಲ ಡೈಮಂಡ್ ಫ್ರೇಮ್ ಇ-ಬೈಕ್ ತೆಗೆದುಕೊಂಡ ಆನಂದ್ ಮಹೀಂದ್ರಾ: ನಮ್ಮ ಯುವಕರ ಪರಿಶ್ರಮ ಮೆಚ್ಚಿದ್ರು!

ಹಾರ್ನ್‌ಬ್ಯಾಕ್ ಎಕ್ಸ್1 ಇ - ಬೈಕ್ ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ, ಇದು ರೂ.45,000 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 36V, 7.65Ah ಸಾಮರ್ಥ್ಯದ ತೆಗೆಯಬಹುದಾದ ಬ್ಯಾಟರಿ (removable battery) ಹಾಗೂ 250W, 36 Nm ಹೊಂದಿದೆ. ಮನೆಯ ವಿದ್ಯುತ್ ಬಳಕೆಯಲ್ಲಿ 3 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಲಿದ್ದು, ಪೆಡಲ್ ಅಸಿಸ್ಟ್ ಜೊತೆಯಲ್ಲಿ 45 ಕಿಲೋಮೀಟರ್ ಕ್ರಮಿಸಬಲ್ಲದು.

ಈ ಎಕ್ಸ್1 ಇ - ಬೈಕ್ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ, LCD ಡಿಸ್ಪ್ಲೇಯನ್ನು ಪಡೆದಿದೆ. ಇದು, ವೇಗ (speed) ಬ್ಯಾಟರಿ ಲೆವೆಲ್ (battery level) ಸೇರಿದಂತೆ ಇತರೆ ಮಾಹಿತಿಯನ್ನು ಒದಗಿಸುತ್ತದೆ. ಜೊತೆಗೆ, 28 - ಇಂಚಿನ ವೀಲ್ಸ್ ಪಡೆದಿದ್ದು, ಎರಡು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಗ್ರೇ-ಆರೆಂಜ್, ಬ್ಲೂ-ಆರೆಂಜ್.

ಕೆಲವೇ ದಿನಗಳ ಹಿಂದೆಯಷ್ಟೇ ಆನಂದ್ ಮಹೀಂದ್ರಾ ಅವರು, ಏಷ್ಯನ್ ಗೇಮ್ಸ್ ಪದಕ ವಿಜೇತ, ಗ್ರಾಮೀಣ ಪ್ರತಿಭೆ ರಾಮ್ ಬಾಬೂ ಕುಟುಂಬಕ್ಕೆ ಕೃಷಿ ಕೆಲಸಕ್ಕೆ ನೆರವಾಗಲು ಮಹೀಂದ್ರಾ ವಾಹನ ನೀಡಲು ಮುಂದಾಗಿದ್ದರು. ಆ ಕುರಿತು ಸ್ವತಃ ಟ್ವೀಟ್ ಮಾಡಿ ಮಾಹಿತಿಯನ್ನು ನೀಡಿದ್ದರು. ಏಷ್ಯನ್ ಗೇಮ್ಸ್ 35 ಕಿಲೋಮೀಟರ್ ರೇಸ್ ವಾಕ್ ಸ್ಪರ್ಧೆಯ ಮಿಶ್ರ ತಂಡದಲ್ಲಿ ರಾಮ್ ಬಾಬೂ ಕಂಚಿನ ಪದಕ ಜಯಿಸಿದ್ದರು.

ಮೂಲತಃ ಉತ್ತರಪ್ರದೇಶದವರಾದ ಅವರು, ಬಡತನದಲ್ಲಿ ಅರಳಿದ ಪ್ರತಿಭೆ. ಜೀವನ ನಿರ್ವಹಣೆಗೆ ಸಾಕಷ್ಟು ಶ್ರಮವಹಿದ್ದರು. ಇನ್ನು, ಆನಂದ್ ಮಹೀಂದ್ರಾ ಅವರು, ತಮ್ಮ ಉದಾರತೆಯಿಂದ ಕ್ರೀಡೆ ಸೇರಿದಂತೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ತಮ್ಮ ಕಂಪನಿ ಕಾರುಗಳನ್ನು ಉಡುಗೊರೆಯಾಗಿ ನೀಡಿ ಪ್ರೋತ್ಸಾಹಿಸುತ್ತಾರೆ. ಜೊತೆಯಲ್ಲಿ ಭಾರತದ ಸ್ಟಾರ್ಟ್‌ಅಪ್‌ಗಳ ನೂತನ ಆವಿಷ್ಕಾರಗಳನ್ನು ಬೆಂಬಲಿಸಿಕೊಂಡು ಬಂದಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, October 23, 2023, 9:42 [IST]
English summary
Anand mahindra buy worlds first diamond frame e bike appreciate efforts of our youths
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+