ಲಾಕ್‌ಡೌನ್ ಅವಧಿಯನ್ನು ಫೋಟೋಗೆ ಹೋಲಿಸಿಕೊಂಡ ಹೆಸರಾಂತ ಉದ್ಯಮಿ

ಹೆಸರಾಂತ ಉದ್ಯಮಿ ಆನಂದ್ ಮಹೀಂದ್ರಾ ಶುಕ್ರವಾರ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯ ಚಿತ್ರವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ಚಿತ್ರದಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯನ್ನು ಚೈನ್ ಬಳಸಿ ಮರಕ್ಕೆ ಕಟ್ಟಿ ಹಾಕಲಾಗಿದೆ.

ಲಾಕ್‌ಡೌನ್ ಅವಧಿಯನ್ನು ಫೋಟೋಗೆ ಹೋಲಿಸಿಕೊಂಡ ಹೆಸರಾಂತ ಉದ್ಯಮಿ

ಆನಂದ್ ಮಹೀಂದ್ರಾ ಈ ಕಾರಿನ ಮಾಲೀಕರನ್ನು ಶ್ಲಾಘಿಸಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಆಸಕ್ತಿದಾಯಕ ಚಿತ್ರಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಕೆಲವು ಚಿತ್ರಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ತಮಾಷೆಗಾಗಿಯೂ ಶೇರ್ ಮಾಡುತ್ತಾರೆ.

ಲಾಕ್‌ಡೌನ್ ಅವಧಿಯನ್ನು ಫೋಟೋಗೆ ಹೋಲಿಸಿಕೊಂಡ ಹೆಸರಾಂತ ಉದ್ಯಮಿ

ಆನಂದ್ ಮಹೀಂದ್ರಾ ಅವರಿಗೆ ಟ್ವಿಟರ್ ನಲ್ಲಿ ಎಂಭತ್ತು ಲಕ್ಷಕ್ಕೂ ಹೆಚ್ಚು ಫಾಲೋವರ್ ಗಳಿದ್ದಾರೆ. ತಮ್ಮ ಇತ್ತೀಚಿನ ಪೋಸ್ಟ್ ನಲ್ಲಿ ಆನಂದ್ ಮಹೀಂದ್ರಾ ಒಬ್ಬ ವ್ಯಕ್ತಿ ತಮ್ಮ ಕಾರನ್ನು ಎಷ್ಟು ಪ್ರೀತಿಸಬಹುದು ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಲಾಕ್‌ಡೌನ್ ಅವಧಿಯನ್ನು ಫೋಟೋಗೆ ಹೋಲಿಸಿಕೊಂಡ ಹೆಸರಾಂತ ಉದ್ಯಮಿ

ಫೋಟೋವನ್ನು ಶೇರ್ ಮಾಡಿ ಇದು ಹೈಟೆಕ್ ಲಾಕಿಂಗ್ ಪರಿಹಾರವಲ್ಲಎಂದು ಬರೆದಿದ್ದಾರೆ. ಈ ಚಿತ್ರವು ಲಾಕ್‌ಡೌನ್ ಅವಧಿಯಲ್ಲಿ ನಾನು ಹೇಗಿದ್ದೆ ಎಂಬುದನ್ನು ನೆನಪಿಸುತ್ತದೆ. ಈ ವೀಕ್ ಎಂಡ್ ನಲ್ಲಿ ನಾನು ಮಾಸ್ಕ್ ಧರಿಸಿ ಈ ಚೈನ್ ಅನ್ನು ಮುರಿಯುತ್ತೇನೆ ಎಂದು ಹೇಳಿದ್ದಾರೆ.

ಲಾಕ್‌ಡೌನ್ ಅವಧಿಯನ್ನು ಫೋಟೋಗೆ ಹೋಲಿಸಿಕೊಂಡ ಹೆಸರಾಂತ ಉದ್ಯಮಿ

ಈ ಫೋಟೋಗೆ ಅವರ ಫಾಲೋವರ್ ಗಳು ಕಾಮೆಂಟ್ ಗಳನ್ನು ಮಾಡಿದ್ದಾರೆ. ಸ್ಕಾರ್ಪಿಯೋ ಹಿಂದಕ್ಕೆ ಚಲಿಸಿದರೆ ಚೈನ್ ತಾನಾಗಿಯೇ ಮುರಿದು ಬೀಳಲಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಲಾಕ್‌ಡೌನ್ ಅವಧಿಯನ್ನು ಫೋಟೋಗೆ ಹೋಲಿಸಿಕೊಂಡ ಹೆಸರಾಂತ ಉದ್ಯಮಿ

ಹೊಸ ತಲೆಮಾರಿನ ವಾಹನಗಳು ಹೊಸ ರೀತಿಯ ಭದ್ರತಾ ವ್ಯವಸ್ಥೆಯನ್ನು ಹೊಂದಿರಬೇಕು ಎಂದು ಕೆಲವರು ಗಂಭೀರವಾಗಿ ಹೇಳಿದ್ದಾರೆ. ಇನ್ನೂ ಕೆಲವರು ಈ ಚಿತ್ರವು ಕಾರುಗಳ್ಳತನದ ಸಮಸ್ಯೆಯನ್ನು ಎತ್ತಿ ತೋರಿಸಿದೆ ಎಂದು ಹೇಳಿದ್ದಾರೆ.

ಲಾಕ್‌ಡೌನ್ ಅವಧಿಯನ್ನು ಫೋಟೋಗೆ ಹೋಲಿಸಿಕೊಂಡ ಹೆಸರಾಂತ ಉದ್ಯಮಿ

ಇದು ನಿಜವೂ ಹೌದು. ಭಾರತದ ಹಲವು ನಗರಗಳಲ್ಲಿ ಕಾರು ಕಳ್ಳತನದ ಸಮಸ್ಯೆ ಸಾಮಾನ್ಯವಾಗಿದೆ. ಹಲವು ಕಾರು ಮಾಲೀಕರು ತಮ್ಮ ಕಾರು ಕಳ್ಳತನವಾಗುವುದನ್ನು ತಪ್ಪಿಸಲು ಈ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಲಾಕ್‌ಡೌನ್ ಅವಧಿಯನ್ನು ಫೋಟೋಗೆ ಹೋಲಿಸಿಕೊಂಡ ಹೆಸರಾಂತ ಉದ್ಯಮಿ

ಮಹೀಂದ್ರಾ ಕಂಪನಿಯು ಕರೋನಾ ವೈರಸ್ ಅವಧಿಯಲ್ಲಿ ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ನೆರವಾಗಿತ್ತು. ಕಳೆದ ತಿಂಗಳು ಬಿಡುಗಡೆಯಾದ ಮಹೀಂದ್ರಾ ಕಂಪನಿಯ ಹೊಸ ಥಾರ್ ಬುಕ್ಕಿಂಗ್ ನಲ್ಲಿ ಹೊಸ ದಾಖಲೆಯನ್ನು ಬರೆದಿದೆ.

ಲಾಕ್‌ಡೌನ್ ಅವಧಿಯನ್ನು ಫೋಟೋಗೆ ಹೋಲಿಸಿಕೊಂಡ ಹೆಸರಾಂತ ಉದ್ಯಮಿ

ಹಬ್ಬದ ಸಂದರ್ಭದಲ್ಲಿ ಮಹೀಂದ್ರಾ ಕಂಪನಿಯು ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಮಹೀಂದ್ರಾ ಕಂಪನಿಯು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ರೂ.11,500ಗಳವರೆಗೆ ನಗದು ರಿಯಾಯಿತಿಯನ್ನು ನೀಡುತ್ತಿದೆ.

Most Read Articles

Kannada
English summary
Anand Mahindra compares his lockdown feel with Scorpio parked with chain. Read in Kannada.
Story first published: Saturday, November 7, 2020, 9:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X