ಸರ್' ಈ ಅದ್ಬುತ ಆಟಗಾರನಿಗೆ ಕಾರ್ ಗಿಫ್ಟ್ ಕೊಡಿ: ಸರಿಯಾಗಿ ಉತ್ತರ ಕೊಟ್ಟ 'ಆನಂದ್ ಮಹಿಂದ್ರಾ'!

ಭಾರತ ಕ್ರಿಕೆಟ್ ತಂಡ ಆತಿಥೇಯ ಶ್ರೀಲಂಕಾವನ್ನು 10 ವಿಕೆಟ್‌ಗಳಿಂದ ಸೋಲಿಸಿ ಏಷ್ಯಾಕಪ್ ಧಕ್ಕಿಸಿಕೊಂಡಿದೆ. ಆದ್ರೆ ಏಷ್ಯಾಕಪ್ ಫೈನಲ್‌ನಲ್ಲಿ ಮೊಹಮ್ಮದ್ ಸಿರಾಜ್ ಅವರದ್ದೇ ಮುಖ್ಯ ಪಾತ್ರವಾಗಿರುವುದು ಎಲ್ಲರಿಗೂ ತಿಳಿದೇ ಇದೆ. ಇದೀಗ ಸಿರಾಜ್ ಪರ X (ಟ್ರಿಟರ್)ನಲ್ಲಿ ಅಭಿಮಾನಿಗಳು ಎಸ್‌ಯುವಿ ಉಡುಗೊರೆಯಾಗಿ ನೀಡಲು ಆನಂದ್ ಮಹೀಂದ್ರಾರನ್ನು ಒತ್ತಾಯಿಸಿದ್ದಾರೆ.

ಏಷ್ಯಾಕಪ್ ಫೈನಲ್‌ನಲ್ಲಿ ಮೊಹಮ್ಮದ್ ಸಿರಾಜ್ ಅದ್ಬುತ ಬೌಲಿಂಗ್‌ಗೆ ಲಂಕಾ ಮಂಡಿಯೂರಿ ಶರಣಾಗಿಬಿಟ್ಟಿತ್ತು. 21 ರನ್ ನೀಡಿ 6 ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್ ಅವರನ್ನು ಸದ್ಯ ಕ್ರೀಡಾ ಜಗತ್ತು ಕೊಂಡಾಡುತ್ತಿದೆ. ಏಷ್ಯಾಕಪ್ ಗೆಲುವಿನತ್ತ ಮುನ್ನುಗ್ಗುವ ಪ್ರದರ್ಶನ ನೀಡಿದ ಸಿರಾಜ್‌ಗೆ ಆನಂದ್ ಮಹೀಂದ್ರಾ ಎಸ್‌ಯುವಿಯನ್ನು ನೀಡುವ ಕುರಿತು ಆಶ್ಚರ್ಯಕರ ಪ್ರತ್ಯುತ್ತರ ನೀಡಿದ್ದಾರೆ.

anand-mahindra-cricketer-siraj-car-gift-clarification

ಆನಂದ್ ಮಹೀಂದ್ರಾ ಪೋಸ್ಟ್ ಫುಲ್ ವೈರಲ್: ಆನಂದ್ ಮಹೀಂದ್ರಾ ಟೀಮ್ ಇಂಡಿಯಾ ಮತ್ತು ಸಿರಾಜ್ ಅವರನ್ನು ಅಭಿನಂದಿಸಿದ್ದಾರೆ. ''ನಮ್ಮ ಎದುರಾಳಿಗಳಿಗಾಗಿ ನನ್ನ ಹೃದಯ ಅಳುವುದನ್ನು ನಾನು ಹಿಂದೆಂದೂ ಅನುಭವಿಸಿಲ್ಲ ಎಂದು ನಾನು ಭಾವಿಸುತ್ತೇನೆ ... ಇದು ನಾವು ಅವರ ಮೇಲೆ ಅಲೌಕಿಕ ಶಕ್ತಿಯನ್ನು ತೊರಿದಂತಿದೆ... ಮುಹಮ್ಮದ್ ಸಿರಾಜ್ ನೀವು ಮಾರ್ವೆಲ್ ಅವೆಂಜರ್ ಆಗಿದ್ದೀರಿ' ಎಂದು ಆನಂದ್ ಮಹೀಂದ್ರಾ ಬರೆದಿದ್ದಾರೆ.

ಸಾಮಾನ್ಯವಾಗಿ ಆನಂದ್ ಮಹೀಂದ್ರಾ ಅವರಿಗೆ ದೇಶದ ಕ್ರೀಡಾ ಪಟುಗಳೆಂದರೆ ಅಪಾರ ಗೌರವವಿದೆ. ಈ ಹಿಂದೆಯೂ ಹಲವರು ಕ್ರೀಡಾ ಪಟುಗಳಿಗೆ ತಮ್ಮ ಮಹೀಂದ್ರಾ ಎಸ್‌ಯುವಿಗಳನ್ನು ನೀಡಿ ಅಭಿನಂದಿಸಿದ್ದಾರೆ. ಈಗ ಕೂಡ ಸಿರಾಜ್‌ಗೆ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡುವಂತೆ X(ಟ್ವಿಟರ್) ಬಳಕೆದಾರರೊಬ್ಬರು ಆನಂದ್ ಮಹೀಂದ್ರಾ ಅವರನ್ನು ಕೇಳಿದ್ದರು.

anand-mahindra-cricketer-siraj-car-gift-clarification

ಇದಕ್ಕೆ ಉತ್ತರಿಸಿದ ಅವರು ಈಗಾಗಲೇ ಉಡುಗೊರೆ ನೀಡಲಾಗಿದೆ ಎಂದಿದ್ದಾರೆ. ಅಂದರೆ 2021 ರಲ್ಲಿ ತಮ್ಮ ದೇಶದಲ್ಲೇ ಆಸ್ಟ್ರೇಲಿಯಾವನ್ನು ಮಂಡಿಯೂರಿಸುವ ಮೂಲಕ ಟೆಸ್ಟ್ ಸರಣಿಯನ್ನು ಗೆದ್ದ ಭಾರತೀಯ ತಂಡದ ಆರು ಆಟಗಾರರಿಗೆ, ಆನಂದ್ ಮಹೀಂದ್ರಾ ಅವರು ಥಾರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದರು. ಅಂದು ಮಹೀಂದ್ರಾದಿಂದ ಎಸ್‌ಯುವಿ ಪಡೆದ ಆಟಗಾರರಲ್ಲಿ ಸಿರಾಜ್ ಕೂಡ ಒಬ್ಬರು.

ಅಂದು ಸಿರಾಜ್ ಹೊರತಾಗಿ ಶುಭಮನ್ ಗಿಲ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್ ಮತ್ತು ಟಿ ನಟರಾಜನ್ ಥಾರ್ ಎಸ್‌ಯುವಿಯನ್ನು ಪಡೆದಿದ್ದರು. ಕೇವಲ ಇವರು ಮಾತ್ರವಲ್ಲ ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ವಿಶ್ವಕಪ್ ಚೆಸ್ ಫೈನಲ್ ತಲುಪಿದ ಅತ್ಯಂತ ಕಿರಿಯ ಆಟಗಾರನಾದ ಗ್ರಾಂಡ್ ಮಾಸ್ಟರ್ ಆರ್ ಪ್ರಗ್ನಾನಂದ ಅವರ ಪೋಷಕರಿಗೆ XUV400 ಎಲೆಕ್ಟ್ರಿಕ್ SUV ಯನ್ನು ಉಡುಗೊರೆಯಾಗಿ ನೀಡಲಾಗಿದೆ.

anand-mahindra-cricketer-siraj-car-gift-clarification

ಇದಕ್ಕೂ ಮೊದಲು, 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆಲ್ಲುವ ಮೂಲಕ ದೇಶದ ಹೆಮ್ಮೆಯ ನೀರಜ್ ಚೋಪ್ರಾಗೆ ಮಹೀಂದ್ರಾ ಕಸ್ಟಮೈಸ್ ಮಾಡಿದ XUV700 ಅನ್ನು ಉಡುಗೊರೆಯಾಗಿ ನೀಡಿತ್ತು. ಈ ವರ್ಷದ ಆರಂಭದಲ್ಲಿ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಗೆದ್ದ ನಿಖತ್ ಜರೀನ್‌ಗೆ ಥಾರ್ ಎಸ್‌ಯುವಿಯನ್ನು ನೀಡಿದ್ದರು.

ಶ್ರೀಲಂಕನ್ನರ ಮನಗೆದ್ದ ಸಿರಾಜ್: ಏಷ್ಯಾಕಪ್ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸಿರಾಜ್, ಲಂಕಾದ ಮೈದಾನದ ಸಿಬ್ಬಂದಿಗೆ ಬಹುಮಾನದ ಮೊತ್ತವನ್ನು ನೀಡಿ ಪ್ರಶಂಸೆ ಪಡೆದಿದ್ದಾರೆ. ಮಳೆಯ ನಡುವೆಯೂ ಪಂದ್ಯಾವಳಿಯನ್ನು ಯಶಸ್ವಿಗೊಳಿಸಲು ಶ್ರಮಿಸಿದ ಮೈದಾನ ಸಿಬ್ಬಂದಿಗೆ ಗೌರವ ಸಲ್ಲಿಸಲಾಯಿತು. ಸಿರಾಜ್ ಮೈದಾನದ ಸಿಬ್ಬಂದಿಗೆ 5000 ಡಾಲರ್ ಬಹುಮಾನ ನೀಡಿದರು.

anand-mahindra-cricketer-siraj-car-gift-clarification

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, September 18, 2023, 18:13 [IST]
English summary
Anand mahindra cricketer siraj car gift clarification
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+