ಸಾಮಾನ್ಯರ ಪ್ರತಿಭೆಗೆ ಆನಂದ್ ಮಹೀಂದ್ರಾ ಫಿದಾ.. ಭಾರತೀಯರಿಗೆ ಮಾತ್ರ ಬರೋದು ಇಂತಹ ಐಡಿಯಾ

ದೇಶದ ಪ್ರಸಿದ್ಧ ಉದ್ಯಮಿ ಆನಂದ್ ಮಹೀಂದ್ರಾ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಇರುತ್ತಾರೆ. ಅವರು, ಶೇರ್ ಮಾಡುವ ವಿಡಿಯೊಗಳನ್ನು ನೆಟ್ಟಿಗರು ಸಹ ಲೈಕ್ ಮಾಡುತ್ತಿರುತ್ತಾರೆ. ಅವರು, ಬಹುತೇಕ ದೇಶೀ ಬುದ್ಧಿವಂತರು ಮಾಡಿದ ಹೊಸ ಆವಿಷ್ಕಾರಗಳ ಕುರಿತಂತೆ ಪೋಸ್ಟ್ ಮಾಡುವ ಮೂಲಕ ಅವರ ಪ್ರತಿಭೆಯನ್ನು ಜಗತ್ತಿಗೆ ಸಾರುವ ಪ್ರಯತ್ನ ಮಾಡುತ್ತಾರೆ.

ನೂತನ ಐಡಿಯಾದೊಂದಿಗೆ ತಮ್ಮ ವಾಹನಗಳನ್ನು ಮರು ವಿನ್ಯಾಸ ಮಾಡಿ, ತಮ್ಮ ಕೆಲಸಗಳಿಗೆ ಬಳಸಿಕೊಳ್ಳುವ ದೇಶದ ಯುವ ಪ್ರತಿಭೆಗಳ ಬಗ್ಗೆ ಮಾಡಲಾದ ಪೋಸ್ಟ್ ಆಗಾಗೇ ಭಾರೀ ವೈರಲ್ ಆಗುತ್ತಿರುತ್ತದೆ. ಸದ್ಯ ಆನಂದ್ ಮಹೀಂದ್ರಾ ಅಂತಹದೇ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಸ್ಕೂಟರ್‌ ಅನ್ನು ಮಾಡಿಫೈ ಮಾಡಿರುವ ಕಟ್ಟಡ ಕಾರ್ಮಿಕರ ಟ್ಯಾಲೆಂಟ್ ಅನ್ನು ಶ್ಲಾಘಿಸಿದ್ದಾರೆ. ಇದು ಎಲ್ಲೆಡೆ ವೈರಲ್ ಆಗುತ್ತಿದೆ. ಬರೋಬ್ಬರಿ 30 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಜೊತೆಗೆ ಅವರ ಪ್ರತಿಭೆಯನ್ನು ಪ್ರಶಂಸಿಸಿದ್ದಾರೆ.

ಸಾಮಾನ್ಯರ ಪ್ರತಿಭೆಗೆ ಆನಂದ್ ಮಹೀಂದ್ರಾ ಪಿಧಾ.. ಭಾರತೀಯರಿಗೆ ಮಾತ್ರ ಬರೋದು ಇಂತಹ ಐಡಿಯಾ

ಟ್ವಿಟರ್‌ನಲ್ಲಿ ಆನಂದ್ ಮಹೀಂದ್ರಾ ಹಂಚಿಕೊಂಡ ಈ ವಿಡಿಯೋದಲ್ಲಿ ಕಟ್ಟಡ ಕಾರ್ಮಿಕರು ಹಳೆಯ ಬಜಾಜ್ ಸ್ಕೂಟರ್ ಅನ್ನು ಬಳಸಿಕೊಂಡು ನಿರ್ಮಾಣ ಹಂತದ ಕಟ್ಟಡದ ಮೇಲ್ಭಾಗಕ್ಕೆ ಭಾರವಾದ ವಸ್ತುಗಳನ್ನು ಸಾಗಿಸುತ್ತಿದ್ದಾರೆ. ಸ್ಕೂಟರ್‌ನಲ್ಲಿ ಕುಳಿತಿರುವ ವ್ಯಕ್ತಿಯೊಂದಿಗೆ ಈ ವಿಡಿಯೋ ಶುರುವಾಗಲಿದ್ದು, ಮೆಟಲ್ ರಾಡ್‌ಗಳ ಸಹಾಯದಿಂದ ಸ್ಕೂಟರ್‌ನ ತಿರುಗುವ ಚಕ್ರಕ್ಕೆ ರೋಪ್ ಅನ್ನು ಜೋಡಿಸಲಾಗಿದ್ದು, ಅದಕ್ಕೆ ಬ್ಯಾಗ್‌ಗಳನ್ನು ಕಟ್ಟಲಾಗಿದೆ. ವ್ಯಕ್ತಿಯೊಬ್ಬ ಸ್ಕೂಟರ್‌ನ ಎಕ್ಸಲೇಟರ್ ಅನ್ನು ತಿರುಗಿಸುತ್ತಿದ್ದಂತೆ, ಸಿಮೆಂಟ್ ಚೀಲಗಳು ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೇಲಕ್ಕೆ ಹೋಗುತ್ತವೆ.

ಇದರಿಂದ ಕಟ್ಟಡ ಕಾರ್ಮಿಕರ ಶ್ರಮ ಉಳಿಯುವುದಲ್ಲದೆ ಭಾರವಾದ ವಸ್ತುಗಳನ್ನು ಸುಲಭವಾಗಿ ಸಾಗಿಸಬಹುದಾಗಿದೆ. ಕಟ್ಟಡ ಮೇಲಿನ ನಾಮಫಲಕವನ್ನು ನೋಡಿದರೆ ಈ ವಿಡಿಯೋ ಆಂಧ್ರ ಪ್ರದೇಶದ ಶ್ರೀಶೈಲಂ ಸುತ್ತಲಿನ ಪ್ರದೇಶದ್ದು ಎಂಬುದು ತೋರುತ್ತದೆ. ಈ ಕುರಿತಂತೆ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಆನಂದ್ ಮಹೀಂದ್ರಾ, ಕಟ್ಟಡ ಕಾರ್ಮಿಕರನ್ನು ಪ್ರಶಂಸಿಸಿದ್ದು, ವಾಹನ ಎಂಜಿನ್‌ಗಳ ಶಕ್ತಿಯನ್ನು ಬಳಸಿಕೊಳ್ಳಲು ಹಲವು ಮಾರ್ಗಗಳಿದ್ದು, ಈ ಸ್ಕೂಟರ್‌ನಲ್ಲಿ ಕಾರ್ಮಿಕರು ಮಾಡಿರುವ ಐಡಿಯಾ ಇನ್ನೂ ಉತ್ತಮವಾಗಿದೆ' ಎಂದು ಬರೆಕೊಂಡಿದ್ದಾರೆ.

ನೆಟ್ಟಿಗರು ಸಹ ಕಟ್ಟಡ ಕಾರ್ಮಿಕರ ಐಡಿಯಾವನ್ನು ಹೊಗಳಿದ್ದಾರೆ. 'ದೇಶದಲ್ಲಿ ಸಾಕಷ್ಟು ಸೃಜನಶೀಲ ಮತ್ತು ಪ್ರತಿಭಾವಂತ ಜನರಿದ್ದಾರೆ. ಆದರೆ, ಕೆಟ್ಟ ವಿಷಯವೆಂದರೆ ಅವರನ್ನು ಪದವಿಗಳೊಂದಿಗೆ ನಿರ್ಣಯಿಸಲಾಗುತ್ತದೆ ಎಂದು ಬರೆದುಕೊಂದಿದ್ದಾರೆ. ಮತ್ತೊಬ್ಬ ಬಳಕೆದಾರ, 'ಭಾರತದಲ್ಲಿ ನಾವು ತುಂಬಾ ಪ್ರತಿಭೆಯನ್ನು ಹೊಂದಿದ್ದೇವೆ ಎಂದು ಇದು ತೋರಿಸುತ್ತದೆ, ನೀವು ಅವರಿಗೆ ಹೊಸ ಆವಿಷ್ಕಾರಗಳ ಬಗ್ಗೆ ಐಡಿಯಾ ಕೇಳಿದರೆ ಲಭ್ಯವಿರುವ ಯಾವುದೇ ಮೂಲಗಳೊಂದಿಗೆ ಪರಿಹಾರ ನೀಡುತ್ತಾರೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇವರ ಆವಿಷ್ಕಾರವು ಉನ್ನತ ದರ್ಜೆಯ ಇಂಜಿನಿಯರ್‌ಗಿಂತ ಕಡಿಮೆಯಿಲ್ಲ... ಹ್ಯಾಟ್ಸ್ ಆಫ್' ಎಂದಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಆನಂದ್ ಮಹೀಂದ್ರಾ ಅವರು, ಹಳ್ಳಿ ಹುಡುಗರು ತಯಾರಿಸಿದ್ದ ಆರು ಮಂದಿ ಕುಳಿತುಕೊಳ್ಳಬಹುದಾದ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಪೋಸ್ಟ್ ಅನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾಡಿದ್ದರು. ಇದು ಭಾರೀ ವೈರಲ್ ಆಗಿತ್ತು. ಇದರ ತಯಾರಿಕೆಗೆ ಕೇವಲ 12,000 ರೂ. ಖರ್ಚು ಆಗಿದೆ ಎನ್ನಲಾಗಿತ್ತು. 'ಈ ಆಧುನಿಕ ಜಗತ್ತಿನಲ್ಲಿ ಇದು ತುಂಬಾ ಅದ್ಭುತವಾಗಿದೆ. ಹಳ್ಳಿಗಳಲ್ಲಿ ಮಾತ್ರ ಇಂತಹ ಆವಿಷ್ಕಾರಗಳು ಹುಟ್ಟಿಕೊಳ್ಳುತ್ತಿವೆ ಎಂದು ಆನಂದ್ ಮಹೀಂದ್ರಾ ಹೇಳಿದ್ದರು.

ಅಲ್ಲದೆ, ಅವರು ಈ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ನಮ್ಮ ಭಾರತದ ಹಳ್ಳಿಯಲ್ಲಿ ಆವಿಷ್ಕಾರ ಮಾಡಿದ್ದಕ್ಕಾಗಿ 'ಮದರ್ ಆಫ್ ಇನ್ವೆನ್ಶನ್' ಎಂದು ಕರೆದಿದ್ದರು. ಈ ಎಲೆಕ್ಟ್ರಿಕ್ ವಾಹನವು ನೋಡಲು ಬಹುತೇಕ ಬೈಸಿಕಲ್‌ನಂತೆ ಕಾಣುತ್ತದೆ. ಜೊತೆಗೆ ಆರು ಆಸನಗಳನ್ನು ಹೊಂದಿದೆ. ಹಾಗಾಗಿ, ಈ ವಾಹನದಲ್ಲಿ ಏಕಕಾಲಕ್ಕೆ ಆರು ಮಂದಿ ಪ್ರಯಾಣಿಸಬಹುದಾಗಿದ್ದು. ಈ ಎಲೆಕ್ಟ್ರಿಕ್ ವಾಹನವು ಕೈಗಾರಿಕಕೆ, ಮೃಗಾಲಯ, ಜನನಿಬಿಡ ಸ್ಥಳಗಳಲ್ಲಿ ಓಡಿಸಲು ಹೆಚ್ಚು ಅನುಕೂಲಕರವಾಗಿದೆ ಎಂದು ಹೇಳಬಹುದಾಗಿದೆ.

ಭಾರತದ ಪ್ರಮುಖ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ, ಹಂಚಿಕೊಂಡಿರುವ ಕಟ್ಟಡ ಕಾರ್ಮಿಕರು ಮಾಡಿಫೈ ಮಾಡಿರುವ 'ಬಜಾಜ್ ಚೇತಕ್ ಪೋಸ್ಟ್‌ ಸದ್ಯ ಹೆಚ್ಚು ಮಂದಿ ಲೈಕ್ ಮಾಡುತ್ತಿದ್ದಾರೆ. ಭಾರತದಂತಹ ದೊಡ್ಡ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಇಂತಹ ಪ್ರತಿಭೆಗಳಿಗೆ ಕೊರತೆಯಿಲ್ಲ. ಬಹುತೇಕರು ತೆರೆಮರೆಯಲ್ಲಿ ಇರುತ್ತಾರೆ. ಆದರೆ, ಇವತ್ತಿನ ಸೋಷಿಯಲ್ ಮೀಡಿಯಾ ಜಮಾನದಲ್ಲಿ ಕೆಲವರು ಹೊರಬರುತ್ತಿರುತ್ತಾರೆ. ಈ ಕಟ್ಟಡ ಕಾರ್ಮಿಕರ ಐಡಿಯಾ ಬಗ್ಗೆ ನಿಮಗೆ ಏನು ಅನ್ನಿಸುತ್ತದೆ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿರಿ.

Most Read Articles

Kannada
English summary
Anand mahindra pidha for common mans talent such an idea only comes to indians
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X