ಹಾಲು ವ್ಯಾಪಾರಿಯ ಪ್ರತಿಭೆಯನ್ನು ಶ್ಲಾಘಿಸಿದ ಆನಂದ್ ಮಹೀಂದ್ರಾ

ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳು ಸ್ಫೂರ್ತಿದಾಯಕ ಹಾಗೂ ಹಾಸ್ಯಮಯವಾಗಿರುತ್ತವೆ. ಇದೀಗ ಮತ್ತೊಂದು ವಿಡಿಯೋದೊಂದಿಗೆ ಬಂದಿರುವ ಅವರು, ವ್ಯಕ್ತಿಯೊಬ್ಬ ಎಫ್‌1 ರೇಸ್‌ ಕಾರನ್ನು ಹೋಲುವಂತಹ ವಾಹನವನ್ನು ನಿರ್ಮಿಸಿಕೊಂಡು ಹಾಲಿನ ಪಾತ್ರೆಗಳನ್ನು ಸಾಗಿಸುವ ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಹಾಲು ವ್ಯಾಪಾರಿಯ ಪ್ರತಿಭೆಯನ್ನು ಶ್ಲಾಘಿಸಿದ ಆನಂದ್ ಮಹೀಂದ್ರಾ

ಹಾಲಿನ ವ್ಯಾಪಾರಿಯೊಬ್ಬ ಎಫ್‌1 ರೇಸ್‌ ಕಾರಿನಂತೆ ತನ್ನ ವಾಹನವನ್ನು ನಿರ್ಮಿಸಿಕೊಂಡು ಸಂಚರಿಸುತ್ತಿರುವ ವಿಡಿಯೋದಲ್ಲಿ ಕಾರಿನ ಹಿಂಭಾಗದಲ್ಲಿ ದೊಡ್ಡ ಹಾಲಿನ ಪಾತ್ರೆಗಳನ್ನು ಸಾಗಿಸುತ್ತಿರುವುದನ್ನು ಕಾಣಬಹುದು. ಈ ಯುವಕ ಹೆಲ್ಮೆಟ್ ಮತ್ತು ಕಪ್ಪು ಜಾಕೆಟ್ ಧರಿಸಿ ಥೇಟ್‌ ಎಫ್‌1 ಕಾರಿಂತೆಯೇ ತನ್ನ ವಾಹನವನ್ನು ಚಲಾಯಿಸಿದ್ದಾನೆ.

ಹಾಲು ವ್ಯಾಪಾರಿಯ ಪ್ರತಿಭೆಯನ್ನು ಶ್ಲಾಘಿಸಿದ ಆನಂದ್ ಮಹೀಂದ್ರಾ

ಈ ವೀಡಿಯೊದಲ್ಲಿ ಎರಡು ಇನ್ವರ್ಟರ್ ಗಾತ್ರದ ಬ್ಯಾಟರಿಗಳನ್ನು ಮುಂಭಾಗದಲ್ಲಿ ಅಳವಡಿಸಲಾಗಿದ್ದು, ವಾಹನವನ್ನು ಪವರ್ ಮಾಡಲು ವಿದ್ಯುತ್ ಬಳಸಲಾಗಿದೆ. ಈ ವೀಡಿಯೋ ನೋಡಿದರೆ ವಾಹನದ ಕಾರ್ಯಕ್ಷಮತೆಯೂ ತುಂಬಾ ಚೆನ್ನಾಗಿದೆ. ಹಾಲಿನ ಭಾರೀ ದೊಡ್ಡ ಪಾತ್ರೆಗಳನ್ನು ಸಾಗಿಸುವಾಗಲೂ ಇದರ ವೇಗವು ಉತ್ತಮವಾಗಿದೆ.

ಹಾಲು ವ್ಯಾಪಾರಿಯ ಪ್ರತಿಭೆಯನ್ನು ಶ್ಲಾಘಿಸಿದ ಆನಂದ್ ಮಹೀಂದ್ರಾ

ಈ ಅದ್ಬುತ ಕಲ್ಪನೆಯನ್ನು ನೋಡಲು ಅನೇಕ ಜನರು ಆನಂದ್ ಮಹೀಂದ್ರಾರನ್ನು ಟ್ಯಾಗ್ ಮಾಡಿದಾಗ ರೋಡ್ಸ್ ಆಫ್ ಮುಂಬೈ ಎಂಬ ಟ್ವಿಟರ್ ಹ್ಯಾಂಡಲ್‌ನಲ್ಲಿ ಮೂಲತಃ ಹಂಚಿಕೊಂಡಿದ್ದ ವೀಡಿಯೊವನ್ನು ಆನಂದ್ ಮಹೀಂದ್ರಾ ಮರು ಪೋಸ್ಟ್ ಮಾಡಿದ್ದಾರೆ. "ನೀವು ಎಫ್ 1 ರೈಡರ್ ಆಗಲು ಬಯಸಿದ್ದೀರ, ಆದರೆ ಮನೆಯ ಪರಿಸ್ಥಿತಿಗಳಿಂದಾಗಿ ಡೈರಿ ವ್ಯವಹಾರಕ್ಕೆ ಸಹಾಯ ಮಾಡಲು ಕುಟುಂಬವು ಒತ್ತಾಯಿಸಿದೆ" ಎಂದು ವೀಡಿಯೊದ ಶೀರ್ಷಿಕೆಯನ್ನು ನೀಡಿದ್ದಾರೆ.

ಹಾಲು ವ್ಯಾಪಾರಿಯ ಪ್ರತಿಭೆಯನ್ನು ಶ್ಲಾಘಿಸಿದ ಆನಂದ್ ಮಹೀಂದ್ರಾ

ಈ ಹಾಲಿ ವ್ಯಾಪಾರಿಯ ವಾಹನವು ರಸ್ತೆ ನಿಯಮಗಳನ್ನು ಅನುಸರಿಸುತ್ತದೆಯೇ ಎಂಬುದರ ಬಗ್ಗೆ ನನಗೆ ಖಚಿತತೆ ಇಲ್ಲ, ಆದರೆ ಚಕ್ರಗಳ ಮೇಲಿನ ಅವನ ಉತ್ಸಾಹವು ಅನಿಯಂತ್ರಿತವಾಗಿ ಉಳಿಯುತ್ತದೆ ಎಂದು ಭಾವಿಸುತ್ತೇನೆ. ಈ ಮಧ್ಯಕಾಲದಲ್ಲಿ ನಾನು ನೋಡಿದಂತಹ ಅದ್ಬುತಗಳಲ್ಲಿ ಇದೂ ಒಂದು. ಈ ರೋಡ್ ಯೋಧನನ್ನು ಭೇಟಿಯಾಗಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಹಾಲು ವ್ಯಾಪಾರಿಯ ಪ್ರತಿಭೆಯನ್ನು ಶ್ಲಾಘಿಸಿದ ಆನಂದ್ ಮಹೀಂದ್ರಾ

ಈ ಹಿಂದೆ, ಮಹೀಂದ್ರಾ ಸಮೂಹದ ಅಧ್ಯಕ್ಷರು ಭಾರತದಲ್ಲಿ ಟ್ರಾಫಿಕ್‌ನಿಂದ ವಿದ್ಯುತ್ ಉತ್ಪಾದಿಸುವ ವಿನೂತನ ಕಲ್ಪನೆಯನ್ನು ಹಂಚಿಕೊಂಡಿದ್ದರು. ಈ ಕುರಿತು ಕ್ಲಿಪ್ ಅನ್ನು ಸಹ ಟ್ವೀಟ್ ಮಾಡಿದ್ದಾರೆ, ಅದು ರಸ್ತೆಯ ಮಧ್ಯದಲ್ಲಿ ಜೋಡಿಸಲಾದ ಸಣ್ಣ ಟರ್ಬೈನ್‌ಗಳಿಗೆ ಶಕ್ತಿ ಉತ್ಪಾದನೆಯ ಮೂಲವಾಗಿದೆ. ಚಲಿಸುವ ವಾಹನಗಳಿಂದ ಬರುವ ಗಾಳಿಯನ್ನು ಪಡೆದು ಟರ್ಬೈನ್‌ಗಳು ತಿರುಗುವುದರಿಂದ ವಿದ್ಯುತ್ ಉತ್ಪಾತ್ತಿಯಾಗುತ್ತದೆ.

ಹಾಲು ವ್ಯಾಪಾರಿಯ ಪ್ರತಿಭೆಯನ್ನು ಶ್ಲಾಘಿಸಿದ ಆನಂದ್ ಮಹೀಂದ್ರಾ

ಟ್ವೀಟ್‌ಗೆ ನೆಟ್ಟಿಗರ ಪ್ರತಿಕ್ರಿಯೆ

ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಈ ವೀಡಿಯೊ 7.7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವೀಡಿಯೊವು ಸುಮಾರು 34,000 ಲೈಕ್‌ಗಳನ್ನು ಪಡೆದುಕೊಂಡಿದೆ. ಇದು ಜನರಿಂದ ಟನ್‌ಗಳಷ್ಟು ಕಾಮೆಂಟ್‌ಗಳನ್ನು ಸಹ ಗಳಿಸಿದೆ. "Batmobile ನಿಂದ MilkMobile ಸ್ಫೂರ್ತಿ ಪಡೆದಿದೆ!" ಎಂದು ಒಬ್ಬ ಕಮೆಂಟ್ ಮಾಡಿದ್ದಾನೆ. "ನಿಮ್ಮಂತಹ ಮಹಾನ್ ವ್ಯಕ್ತಿ ಇಂತಹ ಪೋಸ್ಟ್‌ಗಳನ್ನು ಪ್ರಚಾರ ಮಾಡುತ್ತಿದ್ದರೆ ತುಂಬಾ ಸಂತೋಷವಾಗುತ್ತದೆ ಎಂದು ಮತ್ತೊರ್ವ ಕಮೆಂಟ್‌ ಮಾಡಿದ್ದಾನೆ.

ಹಾಲು ವ್ಯಾಪಾರಿಯ ಪ್ರತಿಭೆಯನ್ನು ಶ್ಲಾಘಿಸಿದ ಆನಂದ್ ಮಹೀಂದ್ರಾ

ಇಂತಹ ವಾಹನಗಳಿಗಿಲ್ಲ ಅನುಮತಿ

ಇಂತಹ ವಾಹನಗಳು ಸಂಚಾರ ನಿಯಮಗಳ ಪಾಲನೆಗೆ ಒಳಪಡುವುದಿಲ್ಲ. ಜೊತೆಗೆ ಈ ವಾಹನಗಳನ್ನು ರಸ್ತೆಗಳಿಗೆ ಇಳಿಸಿ ಸಂಚರಿಸುವುದು ಕಾನೂನುಬದ್ಧವಲ್ಲ. ಭಾರತೀಯ ಕಾನೂನು, ಗ್ರಾಹಕರು ತಮ್ಮ ವಾಹನಗಳನ್ನು ಮಾರ್ಪಡಿಸಲು ಅನುಮತಿಸುವುದಿಲ್ಲ.ಈ ವಾಹನವನ್ನು ಮಾರ್ಪಡಿಸಿ ರೇಸ್ ಟ್ರ್ಯಾಕ್ ಅಥವಾ ತೆರೆದ ಮೈದಾನದಂತಹ ಸ್ಥಳಗಳಲ್ಲಿ ಮಾತ್ರ ಅವುಗಳನ್ನು ಬಳಸಬಹುದು.

ಹಾಲು ವ್ಯಾಪಾರಿಯ ಪ್ರತಿಭೆಯನ್ನು ಶ್ಲಾಘಿಸಿದ ಆನಂದ್ ಮಹೀಂದ್ರಾ

ಸಾಮಾನ್ಯ ರಸ್ತೆಗಳಲ್ಲಿ ಸಂಚರಿಸಬೇಕಾದರೆ ಆಟೋಮೊಬೈಲ್ ಮಾನದಂಡಗಳನ್ನು ಪೂರೈಸಬೇಕು ಮತ್ತು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆಟೋಮೊಬೈಲ್ ಕಂಪನಿಗಳು ತಮ್ಮ ವಾಹನಗಳನ್ನು ಹೋಮೋಲೋಗ್ ಮಾಡಿ ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸಲು ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಈ ನಿಯಮಗಳು ಗಾಳಿ ಮತ್ತು ಶಬ್ದ ಮಾಲಿನ್ಯದ ಮಟ್ಟಗಳ ಸುರಕ್ಷತಾ ವೈಶಿಷ್ಟ್ಯಗಳ ಮೇಲೆ ಅನುಮತಿಸುವ ಮಿತಿಗಳನ್ನು ಒಳಗೊಂಡಿರುತ್ತವೆ.

ಹಾಲು ವ್ಯಾಪಾರಿಯ ಪ್ರತಿಭೆಯನ್ನು ಶ್ಲಾಘಿಸಿದ ಆನಂದ್ ಮಹೀಂದ್ರಾ

ಉದಾಹರಣೆಗೆ ಆಟೋ ಕಂಪನಿಗಳು ನಾಲ್ಕು ಚಕ್ರಗಳ ವಾಹನಗಳಿಗೆ ಎಬಿಎಸ್ ಮತ್ತು ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿವೆ. ಮಾರ್ಪಡಿಸಿದ ವಾಹನಗಳಿಗೆ ವಿಮೆ ಕ್ಲೈಮ್‌ಗಳನ್ನು ಸ್ವೀಕರಿಸುವುದು ದೊಡ್ಡ ಸಮಸ್ಯೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅಂತಹ ವಾಹನಗಳನ್ನು ಬಳಸಿ ಪೊಲೀಸರಿಗೆ ಸಿಕ್ಕಿಬೀಳಬಹುದು, ಜೊತೆಗೆ ನೀವು ಭಾರೀ ದಂಡವನ್ನು ತೆರಬೇಕಾಗಬಹುದು. ನಿಮ್ಮ ವಾಹನವನ್ನು ಮಾರ್ಪಡಿಸಿದ್ದರೆ, ನೀವು RTO ಅನ್ನು ಸಂಪರ್ಕಿಸಬಹುದು ಮತ್ತು ನೀವು ಮಾಡಿದ ಮಾರ್ಪಾಡಿಗೆ ಅನುಗುಣವಾಗಿ ನಿಮ್ಮ ನೋಂದಣಿ ಪ್ರಮಾಣಪತ್ರ ಅಥವಾ RC ಅನ್ನು ಬದಲಾಯಿಸಬಹುದು. ಆದರೆ ನಿಮ್ಮ ವಾಹನವು ರಸ್ತೆಯಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ.

Most Read Articles

Kannada
English summary
Anand mahindra posted video of jugaad trike of milkman in bihar
Story first published: Saturday, April 30, 2022, 16:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X