ಶೋಲೆ ಚಿತ್ರದ ಠಾಕೂರ್ ಪಾತ್ರದಲ್ಲಿ ಕಾಣಿಸಿಕೊಂಡ ಆನಂದ್ ಮಹೀಂದ್ರಾ

ಮಹೀಂದ್ರಾ ಕಂಪನಿಯ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿ ಟ್ವೀಟ್ ಮಾಡುತ್ತಿರುತ್ತಾರೆ. ಈ ಬಾರಿ ಅವರ ಅಭಿಮಾನಿಯೊಬ್ಬರು ಆನಂದ್ ಮಹೀಂದ್ರಾ ಅವರನ್ನು ಮಹೀಂದ್ರಾ ಥಾರ್ ಎಸ್‌ಯುವಿಯ ಜೊತೆಗೆ ಟ್ವೀಟ್ ಮಾಡಿದ್ದಾರೆ.

ಶೋಲೆ ಚಿತ್ರದ ಠಾಕೂರ್ ಪಾತ್ರದಲ್ಲಿ ಕಾಣಿಸಿಕೊಂಡ ಆನಂದ್ ಮಹೀಂದ್ರಾ

ಈ ಟ್ವೀಟ್ ಅನ್ನು ತಮಾಷೆಗಾಗಿ ಮಾಡಲಾಗಿದೆ. ಈ ಟ್ವೀಟ್ ನಲ್ಲಿ ಆನಂದ್ ಮಹೀಂದ್ರಾ ಅವರನ್ನು ಶೋಲೆ ಚಿತ್ರದ ಠಾಕೂರ್ ಪಾತ್ರದಲ್ಲಿ ಚಿತ್ರಿಸಲಾಗಿದೆ. ಈ ಟ್ವೀಟ್‌ನಲ್ಲಿ ಗಬ್ಬರ್ ಸಿಂಗ್ ಠಾಕೂರ್‌ಗೆ ಅಂದರೆ ಆನಂದ್ ಮಹೀಂದ್ರಾರವರಿಗೆ ಥಾರ್ ಎಸ್‌ಯುವಿಯನ್ನು ಈ ಥಾರ್ ನನಗೆ ಬೇಕು ಠಾಕೂರ್ ಎಂದು ಹೇಳುವಂತೆ ಚಿತ್ರಿಸಲಾಗಿದೆ.

ಶೋಲೆ ಚಿತ್ರದ ಠಾಕೂರ್ ಪಾತ್ರದಲ್ಲಿ ಕಾಣಿಸಿಕೊಂಡ ಆನಂದ್ ಮಹೀಂದ್ರಾ

ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಆನಂದ್ ಮಹೀಂದ್ರಾ ಥಾರ್‌ ಎಸ್‌ಯುವಿಯನ್ನು ಬಣ್ಣಿಸಲು ಇದೊಂದು ಉತ್ತಮ ಸಾಲು ಎಂದು ಹೇಳಿದ್ದಾರೆ. ಹೊಸ ಥಾರ್ ಎಸ್‌ಯುವಿಯ ಬಿಡುಗಡೆಯನ್ನು ಕಾರು ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ಹೊಸ ತಲೆಮಾರಿನ ಥಾರ್ ಎಸ್‌ಯುವಿಯನ್ನು ಆಗಸ್ಟ್ 15ರಂದು ಅನಾವರಣಗೊಳಿಸಲಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಶೋಲೆ ಚಿತ್ರದ ಠಾಕೂರ್ ಪಾತ್ರದಲ್ಲಿ ಕಾಣಿಸಿಕೊಂಡ ಆನಂದ್ ಮಹೀಂದ್ರಾ

ಮತ್ತೊಂದು ಟ್ವೀಟ್‌ನಲ್ಲಿ ಆನಂದ್ ಮಹೀಂದ್ರಾರವರು ಥಾರ್ ಯಾವುದೇ ಪರಿಸರಕ್ಕೆ ಹೊಂದಿಕೊಳ್ಳುವ ಕಾರು. ಇದನ್ನು ಹಬ್ಬ ಅಥವಾ ಮದುವೆಗೆ ಬಳಸಬಹುದು, ಮಣ್ಣಿನ ರಸ್ತೆಗಳಲ್ಲೂ ಚಾಲನೆ ಮಾಡಬಹುದು. ಇದೊಂದು ಸಾರ್ವಕಾಲಿಕ ಕಾರು ಎಂದು ಹೇಳಿದ್ದಾರೆ.

ಶೋಲೆ ಚಿತ್ರದ ಠಾಕೂರ್ ಪಾತ್ರದಲ್ಲಿ ಕಾಣಿಸಿಕೊಂಡ ಆನಂದ್ ಮಹೀಂದ್ರಾ

ಮಹೀಂದ್ರಾ ಥಾರ್ ದೇಶಾದ್ಯಂತ ವಿಭಿನ್ನ ಅಭಿಮಾನಿಗಳನ್ನು ಹೊಂದಿದೆ. ಹೊಸ ಥಾರ್ ಎಸ್‌ಯುವಿ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ. ಈ ಎಸ್‌ಯುವಿಯಲ್ಲಿರುವ ಫೀಚರ್, ಬೆಲೆ ಹಾಗೂ ಇನ್ನಿತರ ಅಂಶಗಳು ಬಿಡುಗಡೆಯಾದ ನಂತರ ಬಹಿರಂಗಗೊಳ್ಳಲಿವೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಶೋಲೆ ಚಿತ್ರದ ಠಾಕೂರ್ ಪಾತ್ರದಲ್ಲಿ ಕಾಣಿಸಿಕೊಂಡ ಆನಂದ್ ಮಹೀಂದ್ರಾ

ಹಳೆ ಮಾದರಿಗೆ ಹೋಲಿಸಿದರೆ ಹೊಸ ಥಾರ್‌ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಥಾರ್‌ನಲ್ಲಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಎಬಿಎಸ್, ಸೀಟ್ ಬೆಲ್ಟ್ ರಿಮ್ಯಾಂಡರ್, ಸ್ಪೀಡ್ ಅಲರ್ಟ್ ಸಿಸ್ಟಂ ಹಾಗೂ ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳಂತಹ ಅನೇಕ ಹೊಸ ಫೀಚರ್ ಗಳನ್ನು ನೀಡಲಾಗಿದೆ.

ಶೋಲೆ ಚಿತ್ರದ ಠಾಕೂರ್ ಪಾತ್ರದಲ್ಲಿ ಕಾಣಿಸಿಕೊಂಡ ಆನಂದ್ ಮಹೀಂದ್ರಾ

ಈ ಎಸ್‌ಯುವಿ ಹೊಸ ಸ್ಟೀಯರಿಂಗ್ ವೀಲ್, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಹೊಂದಿರುವ ಸೀಟುಗಳನ್ನು ಹೊಂದಿದೆ. ಹೊಸ ಥಾರ್ ಎಸ್‌ಯುವಿಯನ್ನು 2.0-ಲೀಟರಿನ ಆಮ್ಸ್ಟಾಲಿಯನ್ ಟಿಜಿಡಿ ಬಿಎಸ್ 6 ಪೆಟ್ರೋಲ್ ಎಂಜಿನ್ ಹಾಗೂ 2.2-ಲೀಟರಿನ ಎಮ್ಹಾಕ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುವುದು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಶೋಲೆ ಚಿತ್ರದ ಠಾಕೂರ್ ಪಾತ್ರದಲ್ಲಿ ಕಾಣಿಸಿಕೊಂಡ ಆನಂದ್ ಮಹೀಂದ್ರಾ

ಈ ಎಸ್‌ಯುವಿಯನ್ನು ಎಎಕ್ಸ್ ಹಾಗೂ ಎಲ್ಎಕ್ಸ್ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗುವುದು. 2.0-ಲೀಟರಿನ ಆಮ್ಸ್ಟಾಲಿಯನ್ ಟಿಜಿಡಿ ಪೆಟ್ರೋಲ್ ಎಂಜಿನ್ 190 ಬಿಹೆಚ್‌ಪಿ ಪವರ್ ಹಾಗೂ 380 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಶೋಲೆ ಚಿತ್ರದ ಠಾಕೂರ್ ಪಾತ್ರದಲ್ಲಿ ಕಾಣಿಸಿಕೊಂಡ ಆನಂದ್ ಮಹೀಂದ್ರಾ

ಈ ಎರಡೂ ಎಂಜಿನ್‌ಗಳು ಆಟೋಮ್ಯಾಟಿಕ್ ಹಾಗೂ ಮ್ಯಾನುವಲ್ ಗೇರ್‌ಬಾಕ್ಸ್‌ಗಳನ್ನು ಹೊಂದಿವೆ. ಹೊಸ ಥಾರ್ ಎಸ್‌ಯುವಿಯ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.10 ಲಕ್ಷಗಳಿಂದ ಆರಂಭವಾಗುವ ನಿರೀಕ್ಷೆಗಳಿವೆ.

Most Read Articles

Kannada
English summary
Anand Mahindra seen in sholay movie Thakur character. Read in Kannada.
Story first published: Saturday, August 22, 2020, 18:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X