Mahindra: ಭಾವುಕರಾದ ಆನಂದ್ ಮಹೀಂದ್ರಾ: ಸ್ವದೇಶಿ ಕಾರುಗಳ ಮುಂದೆ ಮಂಡಿಯೂರಿದ ವಿದೇಶಿಗರು!

ಭಾರತ ಇಂದು ಎಲ್ಲಾ ರಂಗಗಳಲ್ಲಿಯೂ ಉತ್ತುಂಗದಲ್ಲಿದೆ, ಆಟೋ ಉದ್ಯಮದ ವಿಷಯಕ್ಕೆ ಬಂದರೆ ಟಾಟಾ, ಮಹೀಂದ್ರಾದಂತಹ ದೇಶೀಯ ಬ್ರಾಂಡ್‌ಗಳು ವಿದೇಶಗಳಲ್ಲಿಯೂ ಬೇಡಿಕೆಯನ್ನು ಪಡೆಯುತ್ತಿವೆ. ಭಾರತೀಯರು ಹೊರ ದೇಶಗಳಲ್ಲಿ ನಡೆಯುವ ಆಟೋ ಎಕ್ಸ್‌ಪೋಗಳನ್ನು ನೋಡಲು ಕಾತುರದಿಂದ ಕಾಯುತ್ತಿದ್ದ ದಿನಗಳು ಮುಗಿದಿವೆ. ಇಂದು ಭಾರತವೇ ಆಟೋ ಎಕ್ಸ್‌ಪೋ ನಡೆಸುವ ಮೂಲಕ ವಿಶ್ವ ದೇಶಗಳನ್ನು ಸೆಳೆಯುತ್ತಿದೆ. ದೆಹಲಿಯಲ್ಲಿ ಇತ್ತೀಚೆಗೆ ನಡೆದ ಭಾರತ್ ಮೊಬಿಲಿಟಿ ಶೋನಲ್ಲಿ, ಜಪಾನ್ ಮತ್ತು ಕೊರಿಯಾದ ವಾಹನ ಉತ್ಸಾಹಿಗಳು ನಮ್ಮ ಹೊಸ ಸ್ವದೇಶಿ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಮುಗಿಬಿದ್ದು ಫೋಟೋಗಳನ್ನು ತೆಗೆದ ಬಗ್ಗೆ ಉದ್ಯಮಿ ಆನಂದ್ ಮಹೀಂದ್ರಾ(Anand mahindra) ಭಾವುಕರಾಗಿದ್ದಾರೆ.

ಭಾರತದ ಎಸ್‌ಯುವಿ ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಎರಡು ಎಲೆಕ್ಟ್ರಿಕ್ ವಾಹನಗಳಾದ ಬಿಇ 6 (be 6) ಮತ್ತು ಎಕ್ಸ್‌ಇವಿ 9 ಇ (Xev 9e) ಅನ್ನು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ 2025 ರಲ್ಲಿ ಪ್ರದರ್ಶಿಸಿತ್ತು. ಈ ಎರಡೂ ಮಾದರಿಗಳು ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದವು, ಅಂತೆಯೇ ಜಪಾನ್ ಮತ್ತು ಕೊರಿಯಾದ ಪ್ರತಿನಿಧಿಗಳು ಸಹ ಪ್ರಭಾವಿತರಾಗಿದ್ದರು.

anand-mahindra-shared-post-of-japanese-visitors-taking-pics-of-be-6-xev-9e

ಯಾವ ಮಟ್ಟಿಗೆ ಅಂದರೆ ಆ ಎರಡೂ ಕಾರುಗಳನ್ನು ಖುದ್ದು ಅವರೇ ಬಂದು ಫೋಟೋಗಳನ್ನು ತೆಗೆಯುವ ಮಟ್ಟಿಗೆ ಕಾರುಗಳು ಅವರನ್ನು ಸೆಳೆದಿದ್ದವು. ಬಿಇ 6 ಮತ್ತು ಎಕ್ಸ್‌ಇವಿ 9ಇ ಕಾರುಗಳ ಚಿತ್ರಗಳನ್ನು ತೆಗೆಯು ವಿದೇಶಿಗರ ಚಿತ್ರಗಳನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು X (ಟ್ವಿಟರ್)ನಲ್ಲಿ ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

"ದಶಕಗಳ ಹಿಂದೆ, ನಾನು ಆಟೋ ಉದ್ಯಮದಲ್ಲಿ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಾಗ, ನಮ್ಮ ಭಾರತೀಯ ನಿಯೋಗಗಳು ವಿದೇಶದಲ್ಲಿ ತಯಾರಿಸಿದ ಸುಧಾರಿತ ಕಾರುಗಳ ಫೋಟೋಗಳನ್ನು ತೆಗೆಯಲು ಮತ್ತು ಅಧ್ಯಯನ ಮಾಡಲು ಅಂತರರಾಷ್ಟ್ರೀಯ ಆಟೋ ಪ್ರದರ್ಶನಗಳಿಗೆ ಪ್ರಯಾಣ ಮಾಡುತ್ತಿದ್ದವು" ಎಂದು ಮಹೀಂದ್ರಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

anand-mahindra-shared-post-of-japanese-visitors-taking-pics-of-be-6-xev-9e

"ದೆಹಲಿಯಲ್ಲಿ ಇತ್ತೀಚೆಗೆ ನಡೆದ ಭಾರತ್ ಮೊಬಿಲಿಟಿ ಶೋನಲ್ಲಿ, ಜಪಾನ್ ಮತ್ತು ಕೊರಿಯಾದ ಪ್ರತಿನಿಧಿಗಳು ನಮ್ಮ ಹೊಸ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಫೋಟೋ ಕ್ಲಿಕ್ಕಿಸುವುದನ್ನು ನೋಡಿದಾಗ ನನ್ನ ಭಾವನೆಗಳನ್ನು ನೀವು ಊಹಿಸಬಹುದು" ಎಂದು ಅವರು ಟ್ವೀಟ್ ಮಾಡಿದ್ದಾರೆ. ಅವರ ಈ ಆಳವಾದ ಮಾತುಗಳು ಹಲವರು ಭಾರತೀಯರ ಮನಗೆದ್ದಿವೆ.

ಕಾರುಗಳ ವಿಶೇಷತೆಗಳು: ಮಹೀಂದ್ರಾ ಬಿಇ 6ಇ (BE 6e) ಹಾಗೂ ಎಕ್ಸ್ಇವಿ 9ಇ (XEV 9e) ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಇತ್ತೀಚೆಗೆ ಚೆನ್ನೈನಲ್ಲಿ ಬಿಡುಗಡೆಗೊಳಿಸಲಾಗಿದೆ. ಮಹೀಂದ್ರಾ ಕಂಪನಿಯು ಬಿಇ 6 ಮತ್ತು ಎಕ್ಸ್ ಇವಿ 9ಇ ಎಲೆಕ್ಟ್ರಿಕ್ ಎಸ್‌ಯುವಿಗಳ ಸಂಪೂರ್ಣ ಬೆಲೆ ಪಟ್ಟಿಯನ್ನು ಫೆಬ್ರವರಿ 14 ರಿಂದ ಅಧಿಕೃತವಾಗಿ ಬುಕಿಂಗ್ ತೆರೆಯುವ ಮೊದಲು ಪ್ರಕಟಿಸಲಿದೆ.

ಎರಡೂ ಎಸ್‌ಯುವಿಗಳ ವಿತರಣೆಯು 2025 ರ ಮಾರ್ಚ್ ಮಧ್ಯದಿಂದ ಹಂತ ಹಂತವಾಗಿ ಪ್ರಾರಂಭವಾಗಲಿದೆ. ಇವೆರೆಡು ಕಾರುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಅಂತರಾಷ್ಟ್ರೀಯ ಮಟ್ಟದ ಡಿಸೈನ್ ಹಾಗೂ ಫೀಚರ್ಸ್‌ನೊಂದಿಗೆ ಟೆಸ್ಲಾದಂತಹ ಕಾರುಗಳಿಗೂ ಪೈಪೋಟಿ ನೀಡುವ ಸಾಮರ್ಥ್ಯವನ್ನು ಹೊಂದಿವೆ. ಟೆಸ್ಲಾ ಕಾರುಗಳಿಗೆ ಹೋಲಿಸಿಕೊಂಡರೆ ಬೆಲೆ ವಿಷಯದಲ್ಲಿ ತೀರಾ ಅಗ್ಗವಾಗಿರಲಿವೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, February 6, 2025, 18:14 [IST]
English summary
Anand mahindra shared post of japanese visitors taking pics of be 6 xev 9e
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+