ಎತ್ತಿನ ಗಾಡಿಯಾಗಿ ಬದಲಾದ ಅಂಬಾಸಿಡರ್ ಕಾರು

ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಹಾಸ್ಯ ಭರಿತವಾದ ಹಾಗೂ ವ್ಯಂಗ್ಯವಾದ ಟ್ವೀಟ್'ಗಳಿಗೆ ಹೆಸರುವಾಸಿಯಾಗಿದ್ದಾರೆ. ಮಹೀಂದ್ರಾ ಅಂಡ್ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಉದ್ಯಮಿಗಳಲ್ಲಿ ಒಬ್ಬರು.

ಎತ್ತಿನ ಗಾಡಿಯಾಗಿ ಬದಲಾದ ಅಂಬಾಸಿಡರ್ ಕಾರು

ಯಾವುದಾದರೂ ಕ್ರಿಯಾತ್ಮಕವಾದ ಅಥವಾ ವಿಚಿತ್ರವಾದ ಸಂಗತಿ ಅವರ ಕಣ್ಣಿಗೆ ಬಿದ್ದರೆ ಅದನ್ನು ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ಶೇರ್ ಮಾಡಿಕೊಳ್ಳುತ್ತಾರೆ. ಈಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊವೊಂದನ್ನು ಶೇರ್ ಮಾಡಿದ್ದಾರೆ. ಈ ವೀಡಿಯೊವನ್ನು ಪೋಸ್ಟ್ ಮಾಡಿ ಜನಪ್ರಿಯ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ ಟೆಸ್ಲಾ ಕಂಪನಿಯ ಕಾಲೆಳೆದಿದ್ದಾರೆ.

ಎತ್ತಿನ ಗಾಡಿಯಾಗಿ ಬದಲಾದ ಅಂಬಾಸಿಡರ್ ಕಾರು

ಅಮೆರಿಕಾ ಮೂಲದ ಟೆಸ್ಲಾ ಕಂಪನಿಯು ಭಾರತವನ್ನು ಹೊರತುಪಡಿಸಿ ವಿಶ್ವದ ಹಲವು ದೇಶಗಳಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡುತ್ತದೆ. ಕಂಪನಿಯ ಕಾರುಗಳು ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಎತ್ತಿನ ಗಾಡಿಯಾಗಿ ಬದಲಾದ ಅಂಬಾಸಿಡರ್ ಕಾರು

ಈಗ ಆನಂದ್ ಮಹೀಂದ್ರಾ ಎತ್ತಿನ ಗಾಡಿಯಾಗಿ ಮಾರ್ಪಟ್ಟಿರುವ ಅಂಬಾಸಿಡರ್ ಕಾರಿನ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಟೆಸ್ಲಾ ಕಂಪನಿಯು ಸಹ ಈ ರೀತಿಯ ಕೈಗೆಟುಕುವ ಬೆಲೆಯ ವಾಹನವನ್ನು ನೀಡಬಹುದೇ ಎಂದು ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಎತ್ತಿನ ಗಾಡಿಯಾಗಿ ಬದಲಾದ ಅಂಬಾಸಿಡರ್ ಕಾರು

ಅವರು ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಆನಂದ್ ಮಹೀಂದ್ರಾ ಟ್ವಿಟ್ಟರ್ ನಲ್ಲಿ 8 ಮಿಲಿಯನ್ ಫಾಲೋವರ್'ಗಳನ್ನು ಹೊಂದಿದ್ದಾರೆ. ಅವರು ಶೇರ್ ಮಾಡಿರುವ ವೀಡಿಯೊವನ್ನು 22 ಗಂಟೆಗಳಲ್ಲಿ ಸುಮಾರು 3.5 ಲಕ್ಷ ಟ್ವಿಟರ್ ಬಳಕೆದಾರರು ವೀಕ್ಷಿಸಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಪೋಸ್ಟ್‌ಗೆ ಟೆಸ್ಲಾ ಕಂಪನಿಯು ಸಹ ಪ್ರತಿಕ್ರಿಯೆ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಟೆಸ್ಲಾ ಕಂಪನಿಯ ಕಾರುಗಳು ಶೀಘ್ರದಲ್ಲೇ ಭಾರತದಲ್ಲಿಯೂ ಬಿಡುಗಡೆಯಾಗಿ ತಮ್ಮ ಛಾಪನ್ನು ಮೂಡಿಸಲು ಸಜ್ಜಾಗಿವೆ.

ಎತ್ತಿನ ಗಾಡಿಯಾಗಿ ಬದಲಾದ ಅಂಬಾಸಿಡರ್ ಕಾರು

ಟೆಸ್ಲಾ ಕಂಪನಿಯು ಈ ನಿಟ್ಟಿನಲ್ಲಿ ತನ್ನ ಪ್ರಯತ್ನಗಳನ್ನು ಮುಂದುವರೆಸಿದೆ. ಆದರೆ ಟೆಸ್ಲಾ ಕಂಪನಿಯ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಯಾವಾಗ ಬಿಡುಗಡೆಯಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Anand Mahindra taunts Tesla company through a tweet. Read in Kannada.
Story first published: Friday, December 25, 2020, 14:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X