ಐತಿಹಾಸಿಕ ಜಯ ದೊರಕಿಸಿದ ಯುವ ಕ್ರಿಕೆಟಿಗರಿಗೆ ವಿಶೇಷ ಗಿಫ್ಟ್ ನೀಡಲಿರುವ ಆನಂದ್ ಮಹೀಂದ್ರಾ

ಆಸ್ಟ್ರೇಲಿಯಾ ನೆಲದಲ್ಲಿ ಭಾರತೀಯ ಕ್ರಿಕೆಟ್ ತಂಡದ ಯಶಸ್ಸು ಎಲ್ಲರೂ ತಿರುಗಿ ನೋಡುವಂತೆ ಮಾಡಿದೆ. ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ಭಾರತೀಯ ಕ್ರಿಕೆಟ್ ತಂಡಕ್ಕೆ ಐತಿಹಾಸಿಕ ಗೆಲುವು ತಂದು ಕೊಟ್ಟಿದ್ದಾರೆ.

ಐತಿಹಾಸಿಕ ಜಯ ದೊರಕಿಸಿದ ಯುವ ಕ್ರಿಕೆಟಿಗರಿಗೆ ವಿಶೇಷ ಗಿಫ್ಟ್ ನೀಡಲಿರುವ ಆನಂದ್ ಮಹೀಂದ್ರಾ

ಭಾರತೀಯ ಅಭಿಮಾನಿಗಳು ಈ ವಿಜಯವನ್ನು ಸಂಭ್ರಮಿಸುತ್ತಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಇತಿಹಾಸ ನಿರ್ಮಿಸಿದ ಭಾರತದ ಯುವ ಆಟಗಾರರಿಗೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ವಿಶೇಷ ಉಡುಗೊರೆಯನ್ನು ಘೋಷಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ 6 ಯುವ ಆಟಗಾರರಿಗೆ ಹೊಸ ಥಾರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡುವುದಾಗಿ ಆನಂದ್ ಮಹೀಂದ್ರಾ ತಿಳಿಸಿದ್ದಾರೆ.

ಐತಿಹಾಸಿಕ ಜಯ ದೊರಕಿಸಿದ ಯುವ ಕ್ರಿಕೆಟಿಗರಿಗೆ ವಿಶೇಷ ಗಿಫ್ಟ್ ನೀಡಲಿರುವ ಆನಂದ್ ಮಹೀಂದ್ರಾ

ಮೊಹಮ್ಮದ್ ಸಿರಾಜ್, ಶುಭ್ ಮನ್ ಗಿಲ್, ನಟರಾಜನ್, ಶಾರ್ದುಲ್ ಠಾಕೂರ್, ನವದೀಪ್ ಶೈನಿ ಹಾಗೂ ವಾಷಿಂಗ್ಟನ್ ಸುಂದರ್ ರವರಿಗೆ ಥಾರ್ ಎಸ್‌ಯುವಿಗಳನ್ನು ಉಡುಗೊರೆಯಾಗಿ ನೀಡುವುದಾಗಿ ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಐತಿಹಾಸಿಕ ಜಯ ದೊರಕಿಸಿದ ಯುವ ಕ್ರಿಕೆಟಿಗರಿಗೆ ವಿಶೇಷ ಗಿಫ್ಟ್ ನೀಡಲಿರುವ ಆನಂದ್ ಮಹೀಂದ್ರಾ

ಈ 6 ಯುವ ಆಟಗಾರರಿಗೆ ಆನಂದ್ ಮಹೀಂದ್ರಾ ಅವರ ವತಿಯಿಂದ ಥಾರ್ ಎಸ್‌ಯುವಿಗಳನ್ನು ಉಡುಗೊರೆಯಾಗಿ ನೀಡಲಾಗುವುದು. ಅಂದರೆ ಈ ಎಸ್‌ಯುವಿಗಳ ಸಂಪೂರ್ಣ ವೆಚ್ಚವನ್ನು ಆನಂದ್ ಮಹೀಂದ್ರಾರವರೇ ಭರಿಸಲಿದ್ದಾರೆ.

ಐತಿಹಾಸಿಕ ಜಯ ದೊರಕಿಸಿದ ಯುವ ಕ್ರಿಕೆಟಿಗರಿಗೆ ವಿಶೇಷ ಗಿಫ್ಟ್ ನೀಡಲಿರುವ ಆನಂದ್ ಮಹೀಂದ್ರಾ

ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಈ 6 ಯುವ ಆಟಗಾರರಿಗೆ ನೀಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ. ಈ ಉಡುಗೊರೆಯು ಭಾರತ ತಂಡದ ಯುವ ಆಟಗಾರರಿಗೆ ಮತ್ತಷ್ಟು ಉತ್ತೇಜನ ನೀಡುವುದರಲ್ಲಿ ಸಂದೇಹವಿಲ್ಲ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಐತಿಹಾಸಿಕ ಜಯ ದೊರಕಿಸಿದ ಯುವ ಕ್ರಿಕೆಟಿಗರಿಗೆ ವಿಶೇಷ ಗಿಫ್ಟ್ ನೀಡಲಿರುವ ಆನಂದ್ ಮಹೀಂದ್ರಾ

ಮಹೀಂದ್ರಾ ಥಾರ್ ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಆಫ್-ರೋಡ್ ಎಸ್‌ಯುವಿಗಳಲ್ಲಿ ಒಂದು. ಮಹೀಂದ್ರಾ ಕಂಪನಿಯು ಹೊಸ ತಲೆಮಾರಿನ ಥಾರ್ ಎಸ್‌ಯುವಿಯನ್ನು ಅಕ್ಟೋಬರ್ 2ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು.

ಐತಿಹಾಸಿಕ ಜಯ ದೊರಕಿಸಿದ ಯುವ ಕ್ರಿಕೆಟಿಗರಿಗೆ ವಿಶೇಷ ಗಿಫ್ಟ್ ನೀಡಲಿರುವ ಆನಂದ್ ಮಹೀಂದ್ರಾ

ಹೊಸ ತಲೆಮಾರಿನ ಮಹೀಂದ್ರಾ ಥಾರ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದಿದೆ. ಥಾರ್ ಎಸ್‌ಯುವಿಯು ಮಹೀಂದ್ರಾ ಕಂಪನಿಯು ನಿರೀಕ್ಷೆ ಮಾಡಿದಕ್ಕಿಂತ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಐತಿಹಾಸಿಕ ಜಯ ದೊರಕಿಸಿದ ಯುವ ಕ್ರಿಕೆಟಿಗರಿಗೆ ವಿಶೇಷ ಗಿಫ್ಟ್ ನೀಡಲಿರುವ ಆನಂದ್ ಮಹೀಂದ್ರಾ

ಹೊಸ ತಲೆಮಾರಿನ ಮಹೀಂದ್ರಾ ಥಾರ್ ಎಸ್‌ಯುವಿಯ ವಿತರಣೆಯನ್ನು ಪಡೆಯಲು ಹಲವು ತಿಂಗಳವರೆಗೆ ಕಾಯಬೇಕಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು, ಮಹೀಂದ್ರಾ ಕಂಪನಿಯು ಹೊಸ ಥಾರ್ ಎಸ್‌ಯುವಿಯ ಉತ್ಪಾದನೆಯನ್ನು ಹೆಚ್ಚಿಸಲು ಮುಂದಾಗಿದೆ.

ಐತಿಹಾಸಿಕ ಜಯ ದೊರಕಿಸಿದ ಯುವ ಕ್ರಿಕೆಟಿಗರಿಗೆ ವಿಶೇಷ ಗಿಫ್ಟ್ ನೀಡಲಿರುವ ಆನಂದ್ ಮಹೀಂದ್ರಾ

ಹೊಸ ಥಾರ್ ಎಸ್‌ಯುವಿಯು ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್'ನಲ್ಲಿ 4 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ. ಇದಕ್ಕೂ ಮುನ್ನ ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ 300 ಕಾಂಪ್ಯಾಕ್ಟ್ ಎಸ್‌ಯುವಿಯು ಸಹ ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್'ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ.

Most Read Articles

Kannada
English summary
Anand Mahindra to give new Thar SUV to six Indian cricket players as gift. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X