ಮುಂಬೈ ಟ್ರಾಫಿಕ್ ಜಾಮ್ ಗೇಲಿ ಮಾಡಿದ ಆನಂದ್ ಮಹೀಂದ್ರಾ

ಮಹೀಂದ್ರಾ ಅಂಡ್ ಮಹೀಂದ್ರಾ ಆಟೋಮೊಬೈಲ್ ಗ್ರೂಪ್ ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಟ್ವಿಟರ್ ನಲ್ಲಿ ಸದಾಕಾಲ ಸಕ್ರಿಯರಾಗಿರುತ್ತಾರೆ. ಭಾರತೀಯರ ಹೊಸ ಹೊಸ ಆವಿಷ್ಕಾರ ಹಾಗೂ ತಂತ್ರಗಳನ್ನು ತಮ್ಮದೇ ಆದ ದೃಷ್ಟಿಕೋನದಲ್ಲಿ ನೋಡಿ ಮೆಚ್ಚುತ್ತಾರೆ.

ಮುಂಬೈ ಟ್ರಾಫಿಕ್ ಜಾಮ್ ಗೇಲಿ ಮಾಡಿದ ಆನಂದ್ ಮಹೀಂದ್ರಾ

ಇತ್ತೀಚೆಗೆ, ಆನಂದ್ ಮಹೀಂದ್ರಾರವರು ಮಹೀಂದ್ರಾ ಅಂಡ್ ಮಹೀಂದ್ರಾದ ಡಿಫೆನ್ಸ್ ವೆಹಿಕಲ್ ಯುನಿಟ್ ಅಧ್ಯಕ್ಷ ಎಸ್ ಪಿ ಶುಕ್ಲಾರವರು ಮಾಡಿದ್ದ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ. ಮಹೀಂದ್ರಾದ ಡಿಫೆನ್ಸ್ ವೆಹಿಕಲ್ ಯುನಿಟ್ ತಯಾರಿಸಿದ ಗಣಿ ವಿರೋಧಿ ವಾಹನಗಳನ್ನು ವಿಶ್ವಸಂಸ್ಥೆಯ ಶಾಂತಿ ಕಾಪಾಡುವ ಮಿಷನ್ ಅಡಿಯಲ್ಲಿ ನಿಯೋಜಿಸಲಾಗುವ ಬಗ್ಗೆ ಎಸ್‌ಪಿ ಶುಕ್ಲಾ ಟ್ವೀಟ್ ಮಾಡಿದ್ದರು.

ಮುಂಬೈ ಟ್ರಾಫಿಕ್ ಜಾಮ್ ಗೇಲಿ ಮಾಡಿದ ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾ ತಮ್ಮ ಕಂಪನಿಯ ಟ್ವೀಟ್ ಅನ್ನು ರಿಟ್ವೀಟ್ ಮಾಡಿ ಡಿಫೆನ್ಸ್ ವೆಹಿಕಲ್ ಯುನಿಟ್ ಅನ್ನು ಶ್ಲಾಘಿಸಿದ್ದಾರೆ. ಜೊತೆಗೆ ಮುಂಬೈನ ಟ್ರಾಫಿಕ್ ಜಾಮ್ ಅನ್ನು ಗೇಲಿ ಮಾಡಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮುಂಬೈ ಟ್ರಾಫಿಕ್ ಜಾಮ್ ಗೇಲಿ ಮಾಡಿದ ಆನಂದ್ ಮಹೀಂದ್ರಾ

ಈ ಯಂತ್ರವು ದೊಡ್ಡ ಗಾತ್ರವನ್ನು ಹೊಂದಿದ್ದು, ಬಲಶಾಲಿಯಾಗಿದೆ. ಜಗತ್ತಿನಲ್ಲಿ ಶಾಂತಿ ಸ್ಥಾಪಿಸುವವರನ್ನು ನಾವು ರಕ್ಷಿಸುತ್ತಿರುವುದು ಮಹೀಂದ್ರಾ ಡಿಫೆನ್ಸ್ ತಂಡಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಮುಂಬೈ ಟ್ರಾಫಿಕ್ ಜಾಮ್ ಗೇಲಿ ಮಾಡಿದ ಆನಂದ್ ಮಹೀಂದ್ರಾ

ನಂತರ ಈ ವಾಹನಗಳನ್ನು ರಸ್ತೆಗಳಲ್ಲಿ ಚಾಲನೆ ಮಾಡಲು ಅನುಮತಿ ದೊರೆತರೆ ಮುಂಬೈನ ಟ್ರಾಫಿಕ್ ಜಾಮ್ ನಲ್ಲಿ ಸುಲಭವಾಗಿ ಚಾಲನೆ ಮಾಡಬಹುದು ಎಂದು ಹೇಳಿದ್ದಾರೆ. ಈ ಟ್ವೀಟ್‌ಗೆ ಇದುವರೆಗೂ 13,000ಕ್ಕೂ ಹೆಚ್ಚು ಲೈಕ್‌ಗಳು ಬಂದಿದ್ದು, 1,500ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಮುಂಬೈ ಟ್ರಾಫಿಕ್ ಜಾಮ್ ಗೇಲಿ ಮಾಡಿದ ಆನಂದ್ ಮಹೀಂದ್ರಾ

ಮಹೀಂದ್ರಾ ಕಂಪನಿಯ ಸಾಧನೆಯನ್ನು ಜನ ಶ್ಲಾಘಿಸುತ್ತಿದ್ದು, ಭಾರತೀಯ ಕಂಪನಿಗಳು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸುತ್ತಿವೆ ಎಂದು ಕಾಮೆಂಟ್‌ ಮಾಡಿದ್ದಾರೆ. ಜೊತೆಗೆ ತಮ್ಮ ಬಳಿಯಿರುವ ಮಹೀಂದ್ರಾ ಕಾರುಗಳನ್ನು ಕಾಮೆಂಟ್ ನೊಂದಿಗೆ ಬಳಸಿದ್ದಾರೆ.

ಮುಂಬೈ ಟ್ರಾಫಿಕ್ ಜಾಮ್ ಗೇಲಿ ಮಾಡಿದ ಆನಂದ್ ಮಹೀಂದ್ರಾ

ಮಹೀಂದ್ರಾ ಕಂಪನಿಯ ಮಾರ್ಕ್ಸ್‌ಮನ್ ಅಂಡ್ ಆರ್ಮರ್ಡ್ ಲೈಟ್ ಸ್ಪೆಷಲಿಸ್ಟ್ ವೆಹಿಕಲ್ (ಎಎಸ್‌ಎಲ್‌ವಿ)ಗಳನ್ನು ಅನೇಕ ದೇಶಗಳ ಸೇನೆಗಳು ಬಳಸುತ್ತಿವೆ. ಈ ವಾಹನಗಳು ಭೂ ಗಣಿ, ಗ್ರೆನೇಡ್ ಹಾಗೂ ಬುಲೆಟ್ ಗಳ ದಾಳಿಯನ್ನು ತಡೆದುಕೊಳ್ಳಬಲ್ಲವು. ಯಾವುದೇ ರೀತಿಯ ಯುದ್ಧದಲ್ಲಿ ಈ ವಾಹನಗಳನ್ನು ಬಳಸಿಕೊಳ್ಳಲಾಗುತ್ತದೆ.

Most Read Articles

Kannada
English summary
Anand Mahindra trolls Mumbai traffic jam with company's defense vehicle. Read in Kannada.
Story first published: Wednesday, July 15, 2020, 15:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X