Anant Ambani: ಟಾಟಾ ಕಾರು ಏರಿದ ಅನಂತ್ ಅಂಬಾನಿ, 8 ಕೋಟಿಯ ರೋಲ್ಸ್ ರಾಯ್ಸ್ ಕುಲ್ಲಿನನ್ ಪಕ್ಕಕ್ಕೆ..!
ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani), ದೇಶದ ಆಗರ್ಭ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ಕುಟುಂಬ ಸದಸ್ಯರು, ತಮ್ಮ ಸಂಚಾರಕ್ಕಾಗಿ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ (Rolls Royce), ಮರ್ಸಿಡಿಸ್ ಬೆಂಜ್ (Mercedes-Benz) ಸೇರಿದಂತೆ ಹಲವು ಕಾರುಗಳನ್ನು ಬಳಕೆ ಮಾಡುತ್ತಾರೆ.
ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani), ತಮ್ಮ ಪ್ರಯಾಣಕ್ಕಾಗಿ ಹಲವು ಟಾಪ್ ಎಂಡ್ ಮಾದರಿ ಕಾರುಗಳನ್ನು ಉಪಯೋಗಿಸುತ್ತಾರೆ. ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸದ ಗ್ಯಾರೇಜ್‌ನಲ್ಲಿ ಹಲವು ಐಷಾರಾಮಿ ಕಾರುಗಳ ದೊಡ್ಡ ಸಂಗ್ರಹವೇ ಇದೆ. ಅದರಲ್ಲೂ ಮುಕೇಶ್ ಅಂಬಾನಿ ತಮ್ಮ ಸಂಚಾರಕ್ಕೆ ಸ್ಫೋಟ ನಿರೋಧಕ (Bomb - Proof) ಮರ್ಸಿಡಿಸ್ ಬೆಂಜ್ ಎಸ್680 (Mercedes-Benz S680) ಸೆಡಾನ್ ಬಳಸುತ್ತಾರೆ.

ಅನಂತ್ ಅಂಬಾನಿ ಅವರು ಕಾರ್ಯ ನಿಮಿತ್ತ ಎಲ್ಲಿಗಾದರೂ ಪ್ರಯಾಣಿಸಲು ರೂ.8 ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕುಲ್ಲಿನನ್ (Rolls-Royce Cullinan) ಎಸ್‌ಯುವಿಯನ್ನು ಉಪಯೋಗಿಸುತ್ತಾರೆ. ಆದರೆ, ಇತ್ತೀಚೆಗೆ ಅನಂತ್ ಅಂಬಾನಿ ರೋಲ್ಸ್ ರಾಯ್ಸ್ ಕುಲ್ಲಿನನ್ ಕಾರನ್ನು ಬಿಟ್ಟು, ಕಡಿಮೆ ಬೆಲೆಯ ಟಾಟಾ ಮಾಲೀಕತ್ವದ ಪ್ರೀಮಿಯಂ ರೇಂಜ್ ರೋವರ್ (Range Rover) ಕಾರಿನಲ್ಲಿ ಪ್ರಯಾಣಿಸಿ, ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲ ಭಾರೀ ವೈರಲ್ ಆಗಿದೆ. ಅನಂತ್ ಅಂಬಾನಿ ಅವರು 'ರಿಲಯನ್ಸ್ ನ್ಯೂ ಎನರ್ಜಿ'ಯ ವಹಿವಾಟನ್ನು ನೋಡಿಕೊಳ್ಳುತ್ತಿದ್ದು, ಅವರ ನಿವ್ವಳ ಆದಾಯದ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಆದರೆ, ಅವರು ಕೂಡ ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅನಂತ್ ಅಂಬಾನಿ ಅವರಿಗೆ ಕಾರು ಹಾಗೂ ವಾಚ್‌ಗಳ ಮೇಲೆ ವಿಶೇಷವಾದ ಪ್ರೀತಿಯಿದೆ.
ಅನಂತ್ ಅಂಬಾನಿ ಅವರು ರೇಂಜ್ ರೋವರ್ ಕಾರಿನ ಯಾವ ರೂಪಾಂತರವನ್ನು ಬಳಕೆ ಮಾಡಿದ್ದಾರೆ ಎಂಬುದರ ಬಗ್ಗೆ ವಿವರಗಳಿಲ್ಲ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್ ವೆಲಾರ್ (Land Rover Range Rover Velar) ರೂ.94.30 ಲಕ್ಷ, ಲ್ಯಾಂಡ್ ರೋವರ್ ರೇಂಜ್ ರೋವರ್ (Land Rover Range Rover) ರೂ.2.39 ಕೋಟಿಯಿಂದ ರೂ.4.17 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ.
ಲ್ಯಾಂಡ್ ರೋವರ್ ರೇಂಜ್ ರೋವರ್ ವೆಲಾರ್ ಬಗ್ಗೆ ಹೇಳುವುದಾದರೆ, ಇದು 1997 ಸಿಸಿ ಸಾಮರ್ಥ್ಯದ ಎಂಜಿನ್, 8-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿರುವ ಈ ಕಾರು, 210 kmph ಟಾಪ್ ಸ್ವೀಡ್ ಹೊಂದಿದೆ. 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.
ಲ್ಯಾಂಡ್ ರೋವರ್ ರೇಂಜ್ ರೋವರ್ (Land Rover Range Rover) ಕುರಿತು ಮಾತನಾಡುವುದಾದರೆ, ಪೆಟ್ರೋಲ್, ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುವ ಈ ಕಾರು, AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. 14.01 kmpl ವರೆಗೆ ಮೈಲೇಜ್ ನೀಡುತ್ತದೆ. ಈ ಎಸ್‌ಯುವಿಯಲ್ಲಿ 7 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.
ಈ ಕಾರು, 13.7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 13.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 1600ಡಬ್ಲ್ಯೂ ಮೆರಿಡಿಯನ್ ಸೌಂಡ್ ಸಿಸ್ಟಮ್, ಅಮೆಜಾನ್-ಅಲೆಕ್ಸಾ ಕನೆಕ್ಟಿವಿಟಿ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದೆ. ಲ್ಯಾಂಡ್ ರೋವರ್ ರೇಂಜ್ ರೋವರ್ ಕಾರಿಗೆ ಲೆಕ್ಸಸ್ ಎಲ್ಎಕ್ಸ್, ಮರ್ಸಿಡಿಸ್ ಬೆಂಜ್ ಮೇಬ್ಯಾಕ್ ಜಿಎಲ್ಎಸ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications