ರೋಲ್ಸ್ ರಾಯ್ಸ್ ದುಬಾರಿ ಕಾರಿನಲ್ಲಿ ಮಿಂಚಿದ ಅನಂತ್ ಅಂಬಾನಿ..!
ರೋಲ್ಸ್ ರಾಯ್ಸ್ ನಿರ್ಮಾಣದ ಹೊಚ್ಚ ಹೊಸ ಎಸ್‌ಯುವಿ ಆವೃತ್ತಿಯಾದ ಕಲಿನಿಯನ್ ಕಾರು ಭಾರತೀಯ ಉದ್ಯಮಿಗಳು ಮತ್ತು ಬಾಲಿವುಡ್ ನಟರ ಮೊಸ್ಟ್ ಫೆವರಿಟ್ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಮುಂಬೈ ರಸ್ತೆಗಳಲ್ಲಿ ಕಲಿನಿಯನ್ ಕಾರುಗಳ ಸದ್ದು ಹೆಚ್ಚುತ್ತಿದೆ.

ಬಲಿಷ್ಠತೆ, ಸ್ಟೈಲ್ ಮತ್ತು ಐಷಾರಾಮಿ ಸೌಲಭ್ಯಗಳೊಂದಿಗೆ ಎಸ್‌ಯುವಿ ಕಾರುಗಳಲ್ಲೇ ಶ್ರೇಷ್ಠ ಎನ್ನಿಸುವ ಕಲಿನಿಯನ್ ಕಾರು ರೋಲ್ಸ್ ರಾಯ್ಸ್ ಸಂಸ್ಥೆಯ ಮೊದಲ ಎಸ್‌ಯುವಿ ಮಾದರಿಯಾಗಿದ್ದು, ಬಾಲಿವುಡ್ ನಟ-ನಟಿಯರು ಮತ್ತು ಉದ್ಯಮಿಗಳ ಹಾಟ್ ಫೆವರಿಟ್ ಕಾರು ಮಾದರಿಯಾಗಿ ಹೊರಹೊಮ್ಮಿದೆ. ಹೊಸ ಕಾರು ಭಾರತದಲ್ಲಿ ಬಿಡುಗಡೆಯಾಗಿ ನಾಲ್ಕೈದು ತಿಂಗಳ ಅವಧಿಯಲ್ಲಿ 100ಕ್ಕೂ ಹೆಚ್ಚು ಕಾರುಗಳಿಗೆ ಬೇಡಿಕೆ ಸಲ್ಲಿಕೆಯಾಗಿದ್ದು, ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಬಳಿಯೂ ಇದೀಗ ರೋಲ್ಸ್ ರಾಯ್ಸ್ ಕಾರು ಸ್ಥಾನಗಿಟ್ಟಿಸಿಕೊಂಡಿದೆ.

ರೋಲ್ಸ್ ರಾಯ್ಸ್ ನಿರ್ಮಾಣದ ಹಲವಾರು ಕಾರು ಮಾದರಿಗಳು ಈಗಾಗಲೇ ಅಂಬಾನಿ ಕುಟುಂಬದ ಬಳಿಯಿದ್ದು, ಅತಿ ಕಡಿಮೆ ಅವಧಿಯಲ್ಲಿ ಅತಿಹೆಚ್ಚು ಜನಪ್ರಿಯವಾಗುತ್ತಿರುವ ಕಲಿನಿಯನ್ ಕಾರನ್ನು ಕೂಡಾ ಇದೀಗ ಖರೀದಿ ಮಾಡಲಾಗಿದೆ.

ಹೊಸ ಕಾರು ಭಾರತದಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ.6.95 ಕೋಟಿ ಬೆಲೆ ಹೊಂದಿದ್ದು, ಆರ್ಕಿಟೆಕ್ಚರ್ ಆಫ್ ಲಗ್ಷುರಿ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಉತ್ಪಾದನೆಗೊಂಡಿರುವ ಕಲಿನಿಯನ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಫ್ಯಾಂಟಮ್ VIII ಕಾರಿಗಿಂತಲೂ ಕೆಳದರ್ಜೆಯಲ್ಲಿ ಮಾರಾಟಗೊಳ್ಳಲಿದೆ.

ಕೇವಲ ಐಷಾರಾಮಿ ಅಷ್ಟೇ ಅಲ್ಲದೇ ಆಫ್ ರೋಡ್ ವೈಶಿಷ್ಟ್ಯತೆ ಹೊತ್ತು ಬಂದಿರುವ ಕಲಿನಿಯನ್ ಕಾರು ನೂರಕ್ಕೂ ಹೆಚ್ಚು ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಜಗತ್ತಿನಲ್ಲಿ ಇದುವರೆಗೆ ಉತ್ಪಾದನೆಯಾದ ಇತರೆ ಐಷಾರಾಮಿ ಎಸ್‌ಯುವಿ ಕಾರುಗಳಿಂತಲೂ ವಿಶೇಷ ಎನ್ನಿಸಲಿದೆ. ಕಲಿನಿಯನ್ ಕಾರುಗಳು 5-ಸೀಟರ್ ಸೌಲಭ್ಯ ಹೊಂದಿರುವ ಎಸ್‌ಯುವಿ ಮಾದರಿಯಾಗಿದ್ದು, 22 ಇಂಚಿನ ಚಕ್ರಗಳನ್ನು ಹೊಂದಿದೆ. ಜೊತೆಗೆ ಅಲ್ಯೂಮಿನಿಯಂ ಪ್ಯಾಟ್‌ಫಾರ್ಮ್ ಮೇಲೆ ಸಿದ್ದವಾಗಿರುವ ಕಲ್ಲಿನನ್ ಕಾರುಗಳು ಫ್ಯಾಂಟಮ್ VIII ಮಾದರಿಯಲ್ಲೇ ಎಂಜಿನ್ ಡಿಸೈನ್ ಪಡೆದಿದೆ.

ಜೊತೆಗೆ ಆಧುನಿಕ ಐಷಾರಾಮಿ ಎಸ್‌ಯುವಿ ಎಂದೇ ಬಿಂಬಿತವಾಗಿರುವ ಕಲಿನಿಯನ್ ಕಾರುಗಳು ಸೈಡ್ ಪ್ರೋಫೈಲ್‌ನಲ್ಲಿ ಬಲವಾದ ಭುಜ ರೇಖೆಗಳನ್ನು ಹೊಂದಿದ್ದು, ಇದು ಈ ಹಿಂದೆ 1930ರಲ್ಲಿ ನಿರ್ಮಾಣವಾಗಿದ್ದ 'ಡಿ ಬ್ಲ್ಯಾಕ್' ಕಾರಿನ ಕೆಲವು ವಿನ್ಯಾಸಗಳನ್ನು ಸಹ ಇದರಲ್ಲಿ ಎರವಲು ಪಡೆದುಕೊಳ್ಳಲಾಗಿದೆ.

ಕಲಿನಿಯನ್ ಕಾರಿನ ಉದ್ದಳತೆ
ಎಸ್‌ಯುವಿ ಹೆಸರಿಗೆ ತಕ್ಕಂತೆ ಅತಿ ಎತ್ತರದ ಬಾಡಿ ಕಿಟ್ ಹೊಂದಿರುವ ಕಲಿನಿಯನ್ ಕಾರುಗಳು 5,341ಎಂಎಂ ಉದ್ದ, 2,164ಎಂಎಂ ಅಗಲ, 1,834ಎಂಎಂ ಎತ್ತರದೊಂದಿಗೆ 3,295ಎಂಎಂ ವೀಲ್ಹ್ ಬೆಸ್ ಸೌಲಭ್ಯ ಹೊಂದಿದೆ.
MOST READ: 8.50 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಲಿನಿಯನ್ ಒಡತಿಯಾದ ಭಾರತದ ಮೊದಲ ಮಹಿಳೆ..!

ಕಾರಿನ ಒಳವಿನ್ಯಾಸ
ಆಧುನಿಕ ಒಳವಿನ್ಯಾಸದೊಂದಿಗೆ ಸಿದ್ದವಾಗಿರುವ ರೋಲ್ಸ್ ರಾಯ್ಸ್ ಕಲಿನಿಯನ್ ಕಾರುಗಳಲ್ಲಿ ಬಳಕೆ ಮಾಡಿರುವ ಐಷಾರಾಮಿ ವೈಶಿಷ್ಟ್ಯತೆಗಳು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಕಾರಿನ ಒಳಗೆ ಪ್ರವೇಶ ಮಾಡಿದ್ದಲ್ಲಿ ಸ್ಪರ್ಗಕ್ಕೆ ಮೂರೇ ಗೇಣು ಎನ್ನುವ ಭಾವನೆ ಮೂಡದೇ ಇರಲಾರದು.
MOST READ: ಟರ್ಬನ್ ಬಣ್ಣಕ್ಕೆ ತಕ್ಕಂತೆ ಮತ್ತೆ ಮೂರು ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯ ಉದ್ಯಮಿ

5-ಸೀಟರ್ ಸಾಮರ್ಥ್ಯವಿರುವ ಈ ಕಾರಿನಲ್ಲಿ ಪ್ರತಿ ಸೀಟುಗಳು ಸಹ ಪ್ರತ್ಯೇಕವಾಗಿ ಎಲೆಕ್ಟ್ರಿಕ್ ಆಪರೇಟ್ ಸೌಲಭ್ಯ ಹೊಂದಿದ್ದು, ನಿಮಗೆ ಬೇಕಾದ ರೀತಿಯಲ್ಲಿ ಹೋಂದಾಣಿಕೆ ಮಾಡಿಕೊಳ್ಳಬಹುದು. ಜೊತೆಗೆ ಬೆರಳುಗಳ ತುದಿಯಲ್ಲೇ ನಿಯಂತ್ರಣ ಮಾಡಬಹುದಾದ ಇನ್ಪೋಟೈನ್‌ಮೆಂಟ್ ಮತ್ತು ಎಂಟರ್‌ಟೈನ್‌ಮೆಂಟ್ ಸೌಲಭ್ಯ ಇದಲ್ಲಿದೆ.
MOST READ:ರೋಲ್ಸ್ ರಾಯ್ಸ್ ಕುರಿತು ನಿಮಗೆ ಗೊತ್ತಿಲ್ಲದ ಇಂಟ್ರಸ್ಟಿಂಗ್ ವಿಚಾರಗಳಿವು..!

ಇದು ತ್ರಿ ಬಾಕ್ಸ್ ಎಸ್‌ಯುವಿ!
ಕಲಿನಿಯನ್ ಕಾರನ್ನು ರೋಲ್ಸ್ ರಾಯ್ಸ್ ಸಂಸ್ಥೆಯು ತ್ರಿ ಬಾಕ್ಸ್ ಎಸ್‌ಯುವಿ ಎಂದು ಕರೆದಿದೆ. ಇದಕ್ಕೆ ಕಾರಣ, ಈ ಕಾರಿನಲ್ಲಿ ಎಂಜಿನ್ ರೂಂ, ಕ್ಯಾಬಿನ್ ಮತ್ತು ಬೂಟ್ ಎಂದು ಮೂರು ವಿಭಾಗಗಳನ್ನು ಪ್ರತ್ಯೇಕಿಸಿದೆ. ಇದನ್ನೇ ತ್ರಿ ಬಾಕ್ಸ್ ಎಸ್‌ಯುವಿ ಎನ್ನಲಾಗಿದೆ. ಇದು ಇತರೆ ಎಸ್‌ಯುವಿಗಳಲ್ಲಿ ಎಂಜಿನ್ ರೂಂ ಮತ್ತು ಕ್ಯಾಬಿನ್‌ಗಳು ಮಾತ್ರ ಇರುತ್ತವೆ. ಕ್ಯಾಬಿನ್‌ಗಳ ಒಳಗೆಯೇ ಬೂಟ್ ಇರುತ್ತದೆ. ಹೀಗಾಗಿ ಅವು ಟು ಬಾಕ್ಸ್ ಎಸ್‌ಯುವಿಗಳಾಗಿವೆ.

ಇನ್ನು ಮುಂದುವರೆದು, ಕಲಿನಿಯನ್ ಕಾರುಗಳಲ್ಲಿ ಸೂಟ್ ಪ್ಯಾಕೇಜ್ ಸೌಲಭ್ಯವನ್ನು ಸಹ ಸೇರಿಸಲಾಗಿದ್ದು, ಕಾರಿನ ಬೂಟ್ ಸ್ಪೆಸ್ ಬಳಿ ಬಟನ್ ಒತ್ತಿದ್ರೆ ಸಾಕು ಎರಡು ಐಷಾರಾಮಿ ಚೇರ್‌ಗಳು ಸಣ್ಣದೊಂದು ಸಭೆ ನಡೆಸಲು ಅನೂಕಲಕರ ಮಾಡಿಕೊಡುತ್ತವೆ.

ಎಂಜಿನ್ ಸಾಮರ್ಥ್ಯ
ಕಲಿನಿಯನ್ ಕಾರು 6.75-ಲೀಟರ್(6,750 ಸಿಸಿ) ಟ್ವಿನ್ ಟರ್ಬೋ ವಿ12 ಪೆಟ್ರೋಲ್ ಎಂಜಿನ್ ಹೊಂದಿದ್ದು, 571-ಬಿಎಚ್‌ಪಿ ಮತ್ತು 650-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಹೀಗಾಗಿ ಕಾರಿನ ವೇಗವನ್ನು ಪ್ರತಿ ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ಇರಿಸಲಾಗಿದೆ.

ಇದಲ್ಲದೇ ರೋಲ್ಸ್ ರಾಯ್ಸ್ ಸಂಸ್ಥೆಯು ಮೊದಲ ಬಾರಿಗೆ ಕಲಿನಿಯನ್ ಕಾರುಗಳನ್ನು ಆಲ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ ಬಿಡುಗಡೆ ಮಾಡಿದ್ದು, ಆಫ್ ರೋಡ್‌ಗಳಲ್ಲೂ ಇದು ತನ್ನ ಕೌಶಲ್ಯ ಪ್ರದರ್ಶನ ಮಾಡಬಲ್ಲದು. ಇದಕ್ಕಾಗಿಯೇ ಕಾರಿನಲ್ಲಿ ವಿವಿಧ ರೀತಿಯ ಡ್ರೈವಿಂಗ್ ಮೊಡ್‌ಗಳನ್ನು ಒದಗಿಸಲಾಗಿದೆ.


Click it and Unblock the Notifications








