ನಿಮಗೆ ರೋಲ್ಸ್ ರಾಯ್ಸ್ ಐಷಾರಾಮಿ ಕಾರುಗಳ ಬಗೆಗೆ ಎಷ್ಟು ಗೊತ್ತು?

By Manoj B.k

ಪ್ರಪಂಚದಲ್ಲಿ ಐಷಾರಾಮಿ ಕಾರುಗಳನ್ನು ತಯಾರಿಸುವ ಕಂಪನಿಯಲ್ಲಿ ರೋಲ್ಸ್ ರಾಯ್ಸ್ ಕೂಡ ಒಂದು. ರೋಲ್ಸ್‌ ರಾಯ್ಸ್‌ ಕಂಪನಿಯು ತಯಾರಿಸುವ ಕಾರುಗಳ ಬೆಲೆ ಕೋಟಿ ರೂಪಾಯಿಗಿಂತ ಹೆಚ್ಚು. ಇದೇ ಕಾರಣ ವಿಶ್ವದ ಐಷಾರಾಮಿ ಕಾರುಗಳು ಎಂದ ಕೂಡಲೇ 'ರೋಲ್ಸ್‌ ರಾಯ್ಸ್‌' ನೆನಪಾಗುತ್ತದೆ. ಆದ್ರೆ ರೋಲ್ಸ್ ರಾಯ್ಸ್ ಹಿಂದಿನ ಇಂಟ್ರಸ್ಟಿಂಗ್ ಅನೇಕರಿಗೆ ಗೊತ್ತಿಲ್ಲಾ.

ನಿಮಗೆ ರೋಲ್ಸ್ ರಾಯ್ಸ್ ಬಗ್ಗೆ ಎಷ್ಟು ಗೊತ್ತು..?

ಬಹುತೇಕ ಜನಕ್ಕೆ ರೋಲ್ಸ್ ರಾಯ್ಸ್ ಕಾರಿನ ಹೆಸರು ಮಾತ್ರ ಗೊತ್ತು ಆದ್ರೆ ರೋಲ್ಸ್ ರಾಯ್ಸ್ ಇತಿಹಾಸದ ಬಗ್ಗೆ ಅಷ್ಟಾಗಿ ಗೊತ್ತಿರುವುದಿಲ್ಲ. ಹೀಗಾಗಿ ನಾವಿಂದು ನಿಮಗೆ ರೋಲ್ಸ್ ರಾಯ್ಸ್ ಬೆಳೆದು ಬಂದ ಬಗೆಗಿನ ಒಂದಿಷ್ಟು ಇಂಟ್ರಸ್ಟಿಂಗ್ ಮಾಹಿತಿಗಳನ್ನು ಆಯ್ದು ತಂದಿದ್ದೇವೆ.

ನಿಮಗೆ ರೋಲ್ಸ್ ರಾಯ್ಸ್ ಬಗ್ಗೆ ಎಷ್ಟು ಗೊತ್ತು..?

ಚಾರ್ಲ್ಸ್ ಸ್ಟೀವರ್ಟ್ ರೋಲ್ಸ್ ಮತ್ತು ಫ್ರೆಡೆರಿಕ್ ಹೆನ್ರಿ ರಾಯ್ಸ್ ಎಂಬ ವ್ಯಕ್ತಿಗಳು 1906ರಲ್ಲಿ ಸ್ಥಾಪಿಸಿದ 'ರೋಲ್ಸ್ ರಾಯ್ಸ್ ಲಿಮಿಟೆಡ್' ಕಂಪನಿಯು ಕಾರು ಮತ್ತು ವಿಮಾನದ ಎಂಜಿನ್ ಉತ್ಪಾದನೆಯಲ್ಲಿ ಪ್ರಾಬಲ್ಯ ಹೊಂದಿದೆ.

ನಿಮಗೆ ರೋಲ್ಸ್ ರಾಯ್ಸ್ ಬಗ್ಗೆ ಎಷ್ಟು ಗೊತ್ತು..?

1971ರಲ್ಲಿ ಯುಕೆ ಸರ್ಕಾರ ರೋಲ್ಸ್ ರಾಯ್ಸ್ ಕಂಪನಿಯನ್ನು ರಾಷ್ಟ್ರೀಕೃತ ಕಂಪನಿ ಎಂದು ಘೋಷಣೆ ಮಾಡಿ ಆದೇಶ ಹೊರಡಿಸಿತು. 2 ವರ್ಷಗಳ ನಂತರ ಕಾರು ತಯಾರಿಕೆಯ ವಿಭಾಗಕ್ಕೆ 'ರೋಲ್ಸ್ ರಾಯ್ಸ್ ಮೋಟಾರ್ಸ್' ಎಂದು ಮತ್ತೆ ಹೆಸರಿಡಲಾಗಿತ್ತು. ಹಾಗೆಯೇ ಅದು 1987ರಲ್ಲಿ ಖಾಸಗಿ ಸಂಸ್ಥೆಯಾಗಿ ಬದಲಾಯಿತು.

ನಿಮಗೆ ರೋಲ್ಸ್ ರಾಯ್ಸ್ ಬಗ್ಗೆ ಎಷ್ಟು ಗೊತ್ತು..?

1980ರಲ್ಲಿ ಜನಪ್ರಿಯ ವಿಕ್ಕರ್ಸ್ ಸಂಸ್ಥೆಯು ರೋಲ್ಸ್ ರಾಯ್ಸ್ ಮೋಟಾರ್ಸ್ ಸಂಸ್ಥೆಯನ್ನು ತನ್ನದಾಗಿಸಿಕೊಂಡಿತು. ನಂತರದ ಬೆಳವಣಿಗೆಯಲ್ಲಿ ಕಾರು ಉತ್ಪಾದಕ ಬಿಎಂಡಬ್ಲ್ಯು ಕಂಪನಿಯು ರೋಲ್ಸ್ ರಾಯ್ಸ್ ಮೋಟಾರ್ಸ್ ಕಂಪನಿಯನ್ನು 1998ರಲ್ಲಿ ಖರೀದಿ ಮಾಡಿ ತನ್ನ ಅಂಗ ಸಂಸ್ಥೆಯನ್ನಾಗಿ ಮಾಡಿಕೊಂಡಿತು.

ನಿಮಗೆ ರೋಲ್ಸ್ ರಾಯ್ಸ್ ಬಗ್ಗೆ ಎಷ್ಟು ಗೊತ್ತು..?

ರೋಲ್ಸ್ ರಾಯ್ಸ್ ಕಂಪನಿ ತಯಾರಿಸಿದ ಶೇಕಡಾ 65 ರಷ್ಟು ಕಾರುಗಳು ಈಗಲೂ ಸಹ ರಸ್ತೆಯ ಮೇಲೆ ರಾಜನಂತೆ ಮೆರೆಯುತ್ತಿರುವುದು ಕಾರಿನ ನಿರ್ಮಾಣ ಗುಣಮಟ್ಟ ಎಷ್ಟಿದೆ ಎಂದು ನಾವು ಊಹಿಸಬಹುದು.

ನಿಮಗೆ ರೋಲ್ಸ್ ರಾಯ್ಸ್ ಬಗ್ಗೆ ಎಷ್ಟು ಗೊತ್ತು..?

ಈಗಾಗಲೇ ದೈತ್ಯಕಾರವಾಗಿ ಬೆಳೆದಿರುವ ರೋಲ್ಸ್-ರಾಯ್ಸ್ ಮೋಟಾರ್ಸ್ ಕಂಪನಿಯ ಮೇಲೆ ಹೆಚ್ಚು ಒಲವು ಹೊಂದಿದ್ದ ಬಿಎಂಡಬ್ಲ್ಯು ಭಾರೀ ಪ್ರಮಾಣದ ಬಂಡವಾಳದೊಂದಿಗೆ ಅರ್ಧಕ್ಕಿಂತಲೂ ಹೆಚ್ಚು ಷೇರನ್ನು ತನ್ನದಾಗಿಸಿಕೊಂಡಿತು. ಷೇರು ಖರೀದಿ ನಂತರ ಬಿಎಂಡಬ್ಲ್ಯು ಕಂಪನಿ ಇಂಗ್ಲೆಂಡಿನಲ್ಲಿ ರೋಲ್ಸ್ ರಾಯ್ಸ್ ಕಂಪನಿಗಾಗಿ ಪ್ರತ್ಯೇಕ ಕಾರು ಉತ್ಪಾದನಾ ಘಟಕವನ್ನು ಸ್ಥಾಪಿಸುವ ಮೂಲಕ ಕಾರಿನ ಅಸ್ತಿತ್ವವನ್ನು ಮತ್ತಷ್ಟು ಬಲಿಷ್ಠಗೊಳಿಸಿತು.

ನಿಮಗೆ ರೋಲ್ಸ್ ರಾಯ್ಸ್ ಬಗ್ಗೆ ಎಷ್ಟು ಗೊತ್ತು..?

ರೋಲ್ಸ್ ರಾಯ್ಸ್ ಮೋಟಾರ್ಸ್ ಕಂಪನಿಯು 2003ರಲ್ಲಿ ತನ್ನ ಮೊದಲ 'ಪ್ಯಾಂಟಮ್' ಕಾರನ್ನು ಪ್ರಪಂಚಕ್ಕೆ ಪರಿಚಯಿಸಿತು. ಸರಿ ಸುಮಾರು 4 ಸಾವಿರಕ್ಕೂ ಅಧಿಕ ಬಣ್ಣಗಳಲ್ಲಿ ಈ ಪ್ಯಾಂಟಮ್ ಕಾರು ಲಭ್ಯವಿದ್ದು, ಗ್ರಾಹಕ ತನಗೆ ಬೇಕಾದ ಬಣ್ಣವನ್ನು ಆರಿಸಿ ಉತ್ಪಾದನೆಗೆ ಕಳುಹಿಸಿಕೊಡಬಹುದಾಗಿದೆ.

ನಿಮಗೆ ರೋಲ್ಸ್ ರಾಯ್ಸ್ ಬಗ್ಗೆ ಎಷ್ಟು ಗೊತ್ತು..?

ಸದ್ಯ ಫ್ಯಾಂಟಮ್ ಕಾರುಗಳು ಜರ್ಮನಿಯಲ್ಲಿ ನಿರ್ಮಾಣಗೊಂಡು ಪ್ರಪಂಚದ ಮೂಲೆ ಮೂಲೆ ತಲುಪುತ್ತಿದ್ದು, ಪ್ರತಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಕೂಡಾ ಹ್ಯಾಂಡ್‌ಮೆಡ್ ವಿನ್ಯಾಸದೊಂದಿಗೆ ನಿರ್ಮಾಣವಾಗುತ್ತಿವೆ.

ನಿಮಗೆ ರೋಲ್ಸ್ ರಾಯ್ಸ್ ಬಗ್ಗೆ ಎಷ್ಟು ಗೊತ್ತು..?

ಜೊತೆಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಕೇವಲ 5.9 ಸೆಕೆಂಡುಗಳಲ್ಲಿ ಗಂಟೆಗೆ ಸುಮಾರು 0 ಇಂದ 100 ಕಿ.ಮೀ ಪಡೆದುಕೊಳ್ಳುವಷ್ಟು ಬಲಿಷ್ಠ ವಿ-12 ಎಂಜಿನ್ ಹೊಂದಿದೆ.

ನಿಮಗೆ ರೋಲ್ಸ್ ರಾಯ್ಸ್ ಬಗ್ಗೆ ಎಷ್ಟು ಗೊತ್ತು..?

ಫ್ಯಾಂಟಮ್ ಕಾರಿನ ಎಲ್ಲಾ ಮಾದರಿಗಳಲ್ಲಿ ಟೆಫ್ಲಾನ್ ಕೋಟ್ ಹೊಂದಿರುವ ಛತ್ರಿಗಳನ್ನು ಕಾರಿನ ಬಾಗಿಲಿಗೆ ಇರಿಸಲಾಗಿದ್ದು, ಅವಶ್ಯಕತೆ ಇದ್ದಲ್ಲಿ ಉಪಯೋಗಿಸಿಕೊಳ್ಳಬಹುದಾಗಿದೆ. ಪ್ರತಿಯೊಂದು ಫ್ಯಾಂಟಮ್ ಕಾರಿನ ಆಸನಗಳನ್ನು ತಯಾರಿಸಲು 75 ಚದುರ ಅಡಿಯಷ್ಟು ಪ್ರತ್ಯೇಕ ಬಟ್ಟೆ ಬೇಕಾಗುತ್ತದೆಯಂತೆ.

ಐಷಾರಾಮಿ ರೋಲ್ಸ್ ರಾಯ್ಸ್ ಬಗ್ಗೆ ನಿಮಗೆ ಎಷ್ಟು ಗೊತ್ತು?

ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯಂತೆ ಈ ಸಂಸ್ಥೆ ಕಾರುಗಳ ಮುಂದೆ ಉಕ್ಕು, ಬೆಳ್ಳಿ, ಚಿನ್ನ ಮತ್ತು ಬೆಲೆಬಾಳುವ ಹರಳುಗಳನ್ನು ಬಳಸಿ ‘ಫ್ಲೈಯಿಂಗ್‌ ಲೇಡಿ' ಹೆಸರಿನ ಗೊಂಬೆ ಅಳವಡಿಸುತ್ತದೆ.

ಐಷಾರಾಮಿ ರೋಲ್ಸ್ ರಾಯ್ಸ್ ಬಗ್ಗೆ ನಿಮಗೆ ಎಷ್ಟು ಗೊತ್ತು?

ಈ ಗೊಂಬೆಯ ಬೆಲೆಯೇ ರೂ. 6 ಲಕ್ಷದಿಂದ 15 ಲಕ್ಷದವರೆಗೂ ಇರುತ್ತದೆ. ಈ ಗೊಂಬೆಯನ್ನು ಯಾರೇ ಮುಟ್ಟಿದರೂ ಅದು ಬ್ಯಾನೆಟ್ ತಳಭಾಗದಲ್ಲಿ ಅಳಡಿಸಿರುವ ವಿಶೇಷ ಪೆಟ್ಟೆಗೆಯೊಳಗೆ ಅಡಗಿ ಕೊಳ್ಳುತ್ತದೆ.

Most Read Articles

Kannada
English summary
Facts every Rolls-Royce fan should know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X