ಟಾಟಾ ಮೋಟಾರ್ಸ್ ನೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಆಂಧ್ರ ಸರ್ಕಾರ

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರವು ಟಾಟಾ ಮೋಟಾರ್ಸ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದನ್ವಯ ಆಂಧ್ರ ಸರ್ಕಾರವು ಟಾಟಾ ಏಸ್ ಗೋಲ್ಡ್ ಕಮರ್ಷಿಯಲ್ ವಾಹನವನ್ನು ಖರೀದಿಸಲಿದೆ.

ಟಾಟಾ ಮೋಟಾರ್ಸ್ ನೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಆಂಧ್ರ ಸರ್ಕಾರ

ಏಸ್ ಗೋಲ್ಡ್ ಕಮರ್ಷಿಯಲ್ ವಾಹನಗಳ 6,413 ಯುನಿಟ್‌ಗಳನ್ನು ಪೂರೈಸುವಂತೆ ಆಂಧ್ರ ಸರ್ಕಾರವು ವರ್ಕ್ ಆರ್ಡರ್ ನೀಡಿದೆ. ಈ ಎಲ್ಲಾ ವಾಹನಗಳನ್ನು ರಾಜ್ಯದ ಜನರ ಮನೆ ಬಾಗಿಲಿಗೇ ಹೋಗಿ ಪಡಿತರ ವಸ್ತುಗಳನ್ನು ವಿತರಿಸಲು ಬಳಸಲಾಗುತ್ತದೆ. ಟಾಟಾ ಮೋಟಾರ್ಸ್ ಈ ಸಂಬಂಧ ನಿನ್ನೆ ವರ್ಕ್ ಆರ್ಡರ್ ಪಡೆದಿದೆ.

ಟಾಟಾ ಮೋಟಾರ್ಸ್ ನೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಆಂಧ್ರ ಸರ್ಕಾರ

ಆಂಧ್ರಪ್ರದೇಶ ಸರ್ಕಾರವು ಆನ್‌ಲೈನ್‌ನಲ್ಲಿ ನಡೆಸಿದ ಇ-ಹರಾಜಿನಲ್ಲಿ ಭಾಗವಹಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಬಿಡ್ ಪಡೆದಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ದೇಶದ ಇತರ ಪ್ರಮುಖ ಕಂಪನಿಗಳು ಸಹ ಭಾಗವಹಿಸಿದ್ದವು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಟಾಟಾ ಮೋಟಾರ್ಸ್ ನೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಆಂಧ್ರ ಸರ್ಕಾರ

ಟಾಟಾ ಮೋಟಾರ್ಸ್ ಕಂಪನಿಯು ಈ ಎಲ್ಲಾ ಕಂಪನಿಗಳನ್ನು ಹಿಂದಿಕ್ಕಿ ಈ ಅವಕಾಶವನ್ನು ಪಡೆದಿದೆ. ಟಾಟಾ ಮೋಟಾರ್ಸ್ ಕಂಪನಿಯು ಏಸ್ ಗೋಲ್ಡ್ ವಾಹನವನ್ನು ಸರಕುಗಳನ್ನು ಸಾಗಿಸುವ ಸಾಮರ್ಥ್ಯವಿರುವ ಬಾಡಿ ಕಾನ್ಫಿಗರೇಷನ್ ನೊಂದಿಗೆ ಅಭಿವೃದ್ಧಿಪಡಿಸಿದೆ.

ಟಾಟಾ ಮೋಟಾರ್ಸ್ ನೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಆಂಧ್ರ ಸರ್ಕಾರ

ಟಾಟಾ ಮೋಟಾರ್ಸ್ ಪೂರ್ತಿಯಾಗಿ ಬಾಡಿಯನ್ನು ಹೊಂದಿರುವ ಏಸ್ ಗೋಲ್ಡ್ ವಾಹನವನ್ನು ಆಂಧ್ರ ಸರ್ಕಾರಕ್ಕೆ ಪೂರೈಸಲಿದೆ. ಈ ಬಗ್ಗೆ ಮಾತನಾಡಿರುವ ಟಾಟಾ ಮೋಟಾರ್ಸ್ ಎಸ್‌ಸಿವಿ ಉಪಾಧ್ಯಕ್ಷರಾದ ವಿನಯ್ ಪಾಠಕ್, ಆಂಧ್ರಪ್ರದೇಶದ ಆಹಾರ ಪೂರೈಕೆ ಇಲಾಖೆಯೊಂದಿಗೆ ಪಾಲುದಾರಿಕೆ ಹೊಂದಲು ನಮಗೆ ಖುಷಿಯಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಟಾಟಾ ಮೋಟಾರ್ಸ್ ನೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಆಂಧ್ರ ಸರ್ಕಾರ

ಇದು ನಾವು ಇದುವರೆಗೂ ಪಡೆದ ಅಮೂಲ್ಯ ವರ್ಕ್ ಆರ್ಡರ್ ಗಳಲ್ಲಿ ಒಂದು ಎಂದು ಹೇಳಿದ್ದಾರೆ. ನಾವು ಕಸ್ಟಮೈಸ್ ಮಾಡಿದ, ಸಂಪೂರ್ಣವಾಗಿ ನಿರ್ಮಿಸಿದ ಏಸ್ ಗೋಲ್ಡ್ ಮಿನಿ ಟ್ರಕ್‌ಗಳನ್ನು ಪೂರೈಸುವುದಲ್ಲದೇ ವಾಹನಗಳ ಸಮಗ್ರ ನಿರ್ವಹಣೆಗೆ ಸಹಕರಿಸುತ್ತೇವೆ ಎಂದು ಅವರು ಹೇಳಿದರು.

ಟಾಟಾ ಮೋಟಾರ್ಸ್ ನೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಆಂಧ್ರ ಸರ್ಕಾರ

ಟಾಟಾ ಏಸ್ ಗೋಲ್ಡ್ ಬಾಡಿ ರಚನೆಯನ್ನು ನಿರ್ಮಿಸಲು ಟಾಟಾ ಮೋಟಾರ್ಸ್ ಕಂಪನಿಯು ಮತ್ತೊಂದು ಕಂಪನಿಯೊಂದಿಗೆ ಕೆಲಸ ಮಾಡುತ್ತಿರುವುದಾಗಿ ವರದಿಯಾಗಿದೆ. ಟಾಟಾ ಏಸ್ ಗೋಲ್ಡ್ ವಾಹನವನ್ನು ಬಿಎಸ್ 6 ಎಂಜಿನ್ ನೊಂದಿಗೆ ಮಾರಾಟ ಮಾಡಲಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಟಾಟಾ ಮೋಟಾರ್ಸ್ ನೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಆಂಧ್ರ ಸರ್ಕಾರ

ಏಸ್ ಗೋಲ್ಡ್ ವಾಹನವು ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರವು ಸಾರ್ವಜನಿಕ ಸೇವೆಗಾಗಿ ಟಾಟಾ ಗೋಲ್ಡ್ ಏಸ್ ವಾಹನಗಳನ್ನು ಬಳಸಲು ಮುಂದಾಗಿದೆ.

ಟಾಟಾ ಮೋಟಾರ್ಸ್ ನೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಆಂಧ್ರ ಸರ್ಕಾರ

ಟಾಟಾ ಏಸ್ ಗೋಲ್ಡ್ ವಾಹನವನ್ನು ಡೀಸೆಲ್, ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ನೊಂದಿಗೆ ಮಾರಾಟ ಮಾಡಲಾಗುತ್ತದೆ. ಈ ಎಲ್ಲ ಎಂಜಿನ್ ಗಳನ್ನು ಬಿಎಸ್ 6 ನಿಯಮಗಳಿಗೆ ಅನುಸಾರವಾಗಿ ಅಪ್ ಡೇಟ್ ಮಾಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಟಾಟಾ ಮೋಟಾರ್ಸ್ ನೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಆಂಧ್ರ ಸರ್ಕಾರ

ಏಸ್ ಗೋಲ್ಡ್ ಟಾಟಾ ಮೋಟಾರ್ಸ್ ಕಂಪನಿಯ ಅತ್ಯಂತ ವಿಶ್ವಾಸಾರ್ಹ ವಾಹನಗಳಲ್ಲಿ ಒಂದಾಗಿದೆ. ಟಾಟಾ ಏಸ್ ಗೋಲ್ಡ್ ವಾಹನವು ಹಲವಾರು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

Most Read Articles

Kannada
English summary
Andhra Government to get Ace gold vehicle from Tata Motors. Read in Kannada.
Story first published: Saturday, October 24, 2020, 16:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X