ನಟಿಯರಿಗೆ BMW ಈ ಎಲೆಕ್ಟ್ರಿಕ್ ಕಾರೆಂದರೇ ಪಂಚಪ್ರಾಣ.. 2 ಕೋಟಿ ಕೊಟ್ಟು ಖ್ಯಾತ ಉದ್ಯಮಿ ದಿನೇಶ್‌ರಿಂದ ಖರೀದಿ
ದೇಶದ ಶ್ರೀಮಂತ ಉದ್ಯಮಿಗಳು, ಕ್ರಿಕೆಟಿಗರು ಸೆಲೆಬ್ರಿಟಿಗಳಿಗೆ ಬಿಎಂಡಬ್ಲ್ಯೂ (BMW) ಕಾರುಗಳೆಂದರೆ ಅಚ್ಚುಮೆಚ್ಚು. ಇವು ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ದುಬಾರಿ ಬೆಲೆಯನ್ನು ನೀಡಿ ಕೊಂಡುಕೊಳ್ಳುತ್ತಾರೆ. ಕೆಲವು ತಿಂಗಳ ಹಿಂದೆ, ಖ್ಯಾತಿ ಉದ್ಯಮಿ, ಏಂಜಲ್ ಬ್ರೋಕಿಂಗ್ ಮುಖ್ಯಸ್ಥ ದಿನೇಶ್ ಠಕ್ಕರ್ ಹೊಚ್ಚ ಹೊಸ ಬಿಎಂಡಬ್ಲ್ಯೂ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ.
ದಿನೇಶ್ ಠಕ್ಕರ್ (Dinesh Thakkar) ಅವರಿಗೆ ಕಾರುಗಳ ಮೇಲೆ ವಿಶೇಷ ಪ್ರೀತಿಯಿದ್ದು, ಅವರ ಗ್ಯಾರೇಜ್‌ನಲ್ಲಿ ಭಾರೀ ಬೆಲೆಯ ಹಲವು ಕಾರುಗಳಿವೆ. ಬಿಎಂಡಬ್ಲ್ಯೂ ಐ7 (BMW i7) ಐಷಾರಾಮಿ ಎಲೆಕ್ಟ್ರಿಕ್ ಸೆಡಾನ್ ಪಕ್ಕದಲ್ಲಿ ನಿಂತುಕೊಂಡಿರುವ ಫೋಟೋಗಳನ್ನು ದಿನೇಶ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ, ಅವರು 'ಬಿಎಂಡಬ್ಲ್ಯೂ ಐ7' ಯಾವ ರೂಪಾಂತರವನ್ನು ಖರೀದಿಸಿದ್ದಾರೆ ಎಂಬುದರ ಬಗ್ಗೆ ವಿವರಗಳಿಲ್ಲ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ದೊರೆಯುವ ಬಿಎಂಡಬ್ಲ್ಯೂ ಐ7 ಸೆಡಾನ್, ರೂ.2.03 ರಿಂದ 2.50 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಕಾರು, 101.7 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಇದರ ಎಕ್ಸ್‌ಡ್ರೈವ್60 ರೂಪಾಂತರದಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 544 PS ಪವರ್, 745 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಂಪೂರ್ಣ ಚಾರ್ಜ್ ನಲ್ಲಿ 625 km ರೇಂಜ್ ನೀಡುತ್ತದೆ.
ಎಂ70 ಎಕ್ಸ್‌ಡ್ರೈವ್ (M70 xDrive) ರೂಪಾಂತರದಲ್ಲಿರುವ ಎಲೆಕ್ಟ್ರಿಕ್ ಮೋಟಾರ್, 650 PS ಗರಿಷ್ಠ ಪವರ್, 1015 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಪೂರ್ತಿ ಚಾರ್ಜ್ ನಲ್ಲಿ 560 ಕಿ.ಮೀ ರೇಂಜ್ ಕೊಡುತ್ತದೆ. ಬಿಎಂಡಬ್ಲ್ಯೂ ಐ7 ರೂಪಾಂತರಗಳಿಗೆ ಅನುಗುಣವಾಗಿ 3.7 ಸೆಕೆಂಡು/ 4.7 ಸೆಕೆಂಡುಗಳಲ್ಲಿ 0-100 kmph ವೇಗವನ್ನು ಪಡೆಯಲಿದ್ದು, 239 kmph ಟಾಪ್ ಸ್ವೀಡ್ ಹೊಂದಿದೆ.

5 ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯುವ ಈ ಕಾರಿನ ಬ್ಯಾಟರಿ ಪ್ಯಾಕ್, 195kW ಚಾರ್ಜರ್ ಬಳಕೆಯಲ್ಲಿ ಶೇಕಡ 10 - 80% ಚಾರ್ಜ್ ಆಗಲು 34 ನಿಮಿಷಗಳು ಬೇಕಾಗುತ್ತದೆ. ಇದೇ 22kW ವಾಲ್‌ಬಾಕ್ಸ್ ಚಾರ್ಜರ್ ಆಯ್ಕೆಯಲ್ಲಿ ಐದೂವರೆ ಗಂಟೆಗಳಿಗೂ ಹೆಚ್ಚಿನ ಕಾಲಾವಕಾಶ ಬೇಕಾಗಿದೆ. ಈ ಬಿಎಂಡಬ್ಲ್ಯೂ ಐ7, 14.9 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಬಿಎಂಡಬ್ಲ್ಯೂ ಐ7 ಎಲೆಕ್ಟ್ರಿಕ್ ಕಾರು, 7 ಏರ್‌ಬ್ಯಾಗ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಎಲ್ಲ ಪ್ರಯಾಣಿಕರಿಗಾಗಿ 3-ಪಾಯಿಂಟ್ ಸೀಟ್‌ಬೆಲ್ಟ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಒಳಗೊಂಡಂತೆ ಹಲವು ಸೇಫ್ಟಿ ಫೀಚರ್ಸ್ ಹೊಂದಿದೆ.

ಇನ್ನು, ದಿನೇಶ್ ಠಕ್ಕರ್ ಅವರ ಗ್ಯಾರೇಜ್‌ನಲ್ಲಿ ರೂ.2.43 ಕೋಟಿ ಬೆಲೆಯ ಪೋರ್ಷೆ ಟೇಕನ್ ಟರ್ಬೊ ಎಸ್ (Porsche Taycan Turbo S), ಮರ್ಸಿಡಿಸ್ ಬೆಂಜ್ ಇಕ್ಯೂಇ (Mercedes Benz EQE), ಫೆರಾರಿ 488 ಪಿಸ್ತಾ (Ferrari 488 Pista) ಲಂಬೋರ್ಗಿನಿ ಹುರಾಕನ್ ಪರ್ಫಾರ್ಮಂಟೆ (Lamborghini Huracan Performante) ಸೇರಿದಂತೆ ಹಲವು ದುಬಾರಿ ಬೆಲೆಯ ಕಾರುಗಳಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications