ಐಷಾರಾಮಿ ಕಾರು ಖರೀದಿಸಿದ ಜನಪ್ರಿಯ ನಟನ ತಂಗಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

ಬಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ಎಂದೇ ಫೇಮಸ್ ಆದ ಶ್ರೀದೇವಿ ಇಂದು ಜೀವಂತವಾಗಿಲ್ಲದಿದ್ರೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿದ್ದಾರೆ. ಆಕೆ ಮತ್ತು ಆಕೆಯ ಪತಿ ಬೋನಿ ಕಪೂರ್ ಅವರಿಗೆ 2 ಹೆಣ್ಣು ಮಕ್ಕಳಿದ್ದಾರೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಷಯ. ಅವರೆಂದರೆ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್. ಇವರಿಬ್ಬರೂ ಸದ್ಯ ಸಿನಿಮಾ ರಂಗದಲ್ಲಿ ಮಿಂಚುತಿದ್ದಾರೆ. ಆದ್ರೆ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಅವರ ಮತ್ತೊಬ್ಬ ಮಗಳಿದ್ದಾಳೆ. ಅದು ಯಾರು ಗೊತ್ತಾ? ಅವರು ಈಗ ಸುದ್ದಿಯಲಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ನಿರ್ಮಾಪಕ ಹಾಗೂ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಅವರ ಮಗಳು ಅನ್ಶುಲಾ ಕಪೂರ್ (Anshula Kapoor)​. ಶ್ರೀದೇವಿ ಪತಿ ಬೋನಿ ಕಪೂರ್ ಅವರ ಮೊದಲ ಪತ್ನಿಯ ಮಗಳು. ಬೋನಿ ಕಪೂರ್ 1983 ರಲ್ಲಿ ಮೋನಾ ಶೌರಿ ಕಪೂರ್ ಅವರನ್ನು ವಿವಾಹವಾದರು. ಬೋನಿ ಕಪೂರ್-ಮೋನಾ ಶೋರೆ ಕಪೂರ್ ಅವರಿಗೆ 2 ಮಕ್ಕಳಿದ್ದಾರೆ. ಅವರಲ್ಲಿ ಒಬ್ಬರು ಅನ್ಶುಲಾ ಕಪೂರ್ ಆದರೆ ಮತ್ತೊಬ್ಬರು ಜನಪ್ರಿಯ ನಟ ಅರ್ಜುನ್ ಕಪೂರ್.

Anshula Kapoor

ಸುಮಾರು 13 ವರ್ಷಗಳ ಕಾಲ ಮೋನಾ ಶೋರೆ ಕಪೂರ್ ಅವರನ್ನು ವಿವಾಹವಾದ ನಂತರ, ಬೋನಿ ಕಪೂರ್ 1996 ರಲ್ಲಿ ವಿಚ್ಛೇದನ ಪಡೆದರು. ನಂತರ ಅದೇ ವರ್ಷದಲ್ಲಿ ಅವರು ಶ್ರೀದೇವಿಯನ್ನು ವಿವಾಹವಾದರು. ಬೋನಿ ಕಪೂರ್ ಅವರ ಮಕ್ಕಳಾದ ಅರ್ಜುನ್ ಕಪೂರ್, ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಮೂವರೂ ಚಿತ್ರರಂಗದಲ್ಲಿದ್ದಾರೆ. ಹಾಗಾಗಿ ಈ ಮೂವರೂ ಸದಾ ಮಾಧ್ಯಮಗಳ ಲೈಮ್ ಲೈಟ್ ನಲ್ಲಿಯೇ ಇರುತ್ತಾರೆ.

ಆದರೆ ಈ ಮೂವರಿಗಿಂತ ಅನ್ಶುಲಾ ಕಪೂರ್ ಸಂಪೂರ್ಣ ಭಿನ್ನ. ಅವರು ಚಿತ್ರರಂಗದಲ್ಲಿಲ್ಲ. ಹಾಗಾಗಿ ಅನ್ಶುಲಾ ಕಪೂರ್ ಬಗ್ಗೆ ಹೊರಜಗತ್ತಿಗೆ ಅಷ್ಟಾಗಿ ಗೊತ್ತಿಲ್ಲ. ಆದರೆ, ಮಾಧ್ಯಮಗಳಲ್ಲಿ ಹೆಚ್ಚು ಗಮನ ಸೆಳೆಯದ ಅನ್ಶುಲಾ ಕಪೂರ್ ಹೆಸರು ಈಗ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಅವರು ದುಬಾರಿ ಕಾರನ್ನು ಖರೀದಿಸಿರುವುದು. ಅನ್ಶುಲಾ ಕಪೂರ್ ಅವರು ಲೆಕ್ಸಸ್ RX 350h ಖರೀದಿಸಿದ್ದಾರೆ.

ಅನ್ಶುಲಾ ಕಪೂರ್ ಖರೀದಿಸಿದ ಲೆಕ್ಸಸ್ RX 350h ಎಸ್‍ಯುವಿಯ ಬೆಲೆಯು ರೂ.95.80 ಲಕ್ಷದಿಂದ ರೂ.1.20 ಕೋಟಿಯಾಗಿದ್ದು, ಇದು ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಲೆಕ್ಸಸ್ RX 350h ಎಸ್‍ಯುವಿಯಲ್ಲಿ 2.5-ಲೀಟರ್, 4-ಸಿಲಿಂಡರ್ ನ್ಯಾಚುರಲ್-ಆಸ್ಪೈರಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 190 ಎಚ್‌ಪಿ ಮತ್ತು 242 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಇ-ಸಿವಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಈ ಸೆಡಾನ್ ಪ್ಲಗ್-ಇನ್ ಹೈಬ್ರಿಡ್ ಅಲ್ಲ, ಆದರೆ ಸೆಲ್ಫೆ ಚಾರ್ಜಿಂಗ್ ಹೈಬ್ರಿಡ್ ವಾಹನವಾಗಿದೆ. ಈ ಐಷಾರಾಮಿ ಹೈಬ್ರಿಡ್ ಸೆಡಾನ್ ಕೇವಲ 8.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಐಷಾರಾಮಿ ಹೈಬ್ರಿಡ್ ಸೆಡಾನ್‌ನ ಟಾಪ್ ಸ್ಪೀಡ್ ಕೇವಲ 180 ಕಿ.ಮೀ.ಗೆ ಸೀಮಿತಗೊಳಿಸಿದೆ. ಆದರೆ ಇದು ಪ್ರಸ್ತುತ ರಸ್ತೆ ಮೂಲಸೌಕರ್ಯವನ್ನು ಪರಿಗಣಿಸಿ ಸರಿಯಾಗಿದೆ. ಲೆಕ್ಸಸ್ ಇಎಸ್300ಎಚ್ ಹೈಬ್ರಿಡ್ ಐಷಾರಾಮಿ ಸೆಡಾನ 22.6 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಲೆಕ್ಸಸ್ ಇಎಸ್300ಎಚ್ ಐಷಾರಾಮಿ ಕಾರು ಆಗಿದ್ದರೂ ಉತ್ತಮ ಮೈಲೇಜ್ ಅನ್ನು ಒದಗಿಸುತ್ತದೆ. ಈ ಲೆಕ್ಸಸ್ ಇಎಸ್300ಎಚ್ ಹೈಬ್ರಿಡ್ ಐಷಾರಾಮಿ ಸೆಡಾನ್ ನವೀಕರಿಸಲಾಗಿದ್ದರೂ, ಮುಂಭಾಗದ ಗ್ರಿಲ್ ಮತ್ತು ಟೈಲ್‌ಗೇಟ್‌ನಲ್ಲಿನ ಹೊಸ ಲೆಕ್ಸಸ್ ಲೋಗೋದಂತಹ ಬದಲಾವಣೆಗಳೊಂದಿಗೆ ಹೊರಭಾಗದ ಬದಲಾವಣೆಗಳು ಅಷ್ಟೇನೂ ಗಮನಾರ್ಹವಲ್ಲ. ಆದರೆ ಈ ಐಷಾರಾಮಿ ಸೆಡಾನ್‌ನ 2022ರ ಪುನರಾವರ್ತನೆಯ ಹೆಚ್ಚಿನ ಬದಲಾವಣೆಗಳು ಸೌಕರ್ಯ ಮತ್ತು ಅನುಕೂಲತೆಯನ್ನು ಸುಧಾರಿಸಲು ಕೇಂದ್ರೀಕೃತವಾಗಿವೆ.

ಈ ಕಾರಿನಲ್ಲಿ ಈಗ ಸೆಂಟರ್ ಕನ್ಸೋಲ್‌ನ ಸುತ್ತಲೂ ಸುಧಾರಿತ ಸ್ಟೋರೇಜ್ ಸ್ಪೇಸ್ ಅನ್ನು ಪಡೆಯುತ್ತದೆ ಮತ್ತು ಲೆಕ್ಸಸ್ ಡೈನಾಮಿಕ್ ವಾಯ್ಸ್ ಗುರುತಿಸುವಿಕೆ ವೈಶಿಷ್ಟ್ಯ, ಹ್ಯಾಂಡ್ಸ್-ಫ್ರೀ ಬೂಟ್ ಮತ್ತು ವೈರ್‌ಲೆಸ್ Apple CarPlay ಮತ್ತು Android Auto ಜೊತೆಗೆ ಹೊಸ ಅಪ್‌ಗ್ರೇಡ್ ಇನ್ಫೋಟೈನ್‌ಮೆಂಟ್ ಯೂನಿಟ್ ಸೇರಿದಂತೆ ನವೀಕರಿಸಿದ ಫೀಚರ್ಸ್ ಗಳನ್ನು ಹೊಂದಿವೆ.

Article Published On: Friday, January 17, 2025, 9:35 [IST]
English summary
Anshula kapoor buys new lexus rx 350h details
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+