ಟ್ಯಾಗ್ ಮಾಡಲಾದ ವಸ್ತುಗಳನ್ನು ಟ್ರಾಕ್ ಮಾಡಲು ಹೊಸ ಸಾಧನ ಬಿಡುಗಡೆಗೊಳಿಸಿದ ಆ್ಯಪಲ್

ಟ್ಯಾಗ್ ಮಾಡಲಾದ ಯಾವುದೇ ವಸ್ತುವನ್ನು ಪತ್ತೆಹಚ್ಚಲು ಜನಪ್ರಿಯ ಮೊಬೈಲ್ ತಯಾರಕ ಕಂಪನಿಯಾದ ಆ್ಯಪಲ್ ಪಾಕೆಟ್ ಗಾತ್ರದ ಸಾಧನವೊಂದನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಈ ಹೊಸ ಸಾಧನಕ್ಕೆ ಏರ್‌ಟ್ಯಾಗ್ ಎಂದು ಹೆಸರಿಟ್ಟಿದೆ.

ಟ್ಯಾಗ್ ಮಾಡಲಾದ ವಸ್ತುಗಳನ್ನು ಟ್ರಾಕ್ ಮಾಡಲು ಹೊಸ ಸಾಧನ ಬಿಡುಗಡೆಗೊಳಿಸಿದ ಆ್ಯಪಲ್

ಏರ್‌ಟ್ಯಾಗ್ ಸಾಧನವನ್ನು ಬ್ಲೂಟೂತ್ ಮೂಲಕ ಐಫೋನ್ 11 ಹಾಗೂ 12 ಫೋನ್'ಗಳಿಗೆ ಕನೆಕ್ಟ್ ಮಾಡಿ ನಂತರ ಸ್ಥಳವನ್ನು ಕಂಡುಹಿಡಿಯಲು ಅಗತ್ಯವಾದ ಮಾಹಿತಿಯನ್ನು ಕಳುಹಿಸಬೇಕಾಗುತ್ತದೆ. ಪ್ರತಿಯೊಬ್ಬರಿಗೂ ತಿಳಿದಿರುವಂತೆ ಆ್ಯಪಲ್ ಕಂಪನಿಯ ಉತ್ಪನ್ನಗಳು ದುಬಾರಿ ಬೆಲೆಯನ್ನು ಹೊಂದಿರುತ್ತವೆ.

ಟ್ಯಾಗ್ ಮಾಡಲಾದ ವಸ್ತುಗಳನ್ನು ಟ್ರಾಕ್ ಮಾಡಲು ಹೊಸ ಸಾಧನ ಬಿಡುಗಡೆಗೊಳಿಸಿದ ಆ್ಯಪಲ್

ಬೆಲೆ ಹೆಚ್ಚು ಎಂಬ ಕಾರಣಕ್ಕೆ ಆ್ಯಪಲ್ ಉತ್ಪನ್ನಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಈ ಪರಿಸ್ಥಿತಿಯಲ್ಲಿ ಟ್ರ್ಯಾಕಿಂಗ್ ಸಾಧನವು ವಸ್ತುಗಳನ್ನು ಪತ್ತೆ ಹಚ್ಚಲು ನೆರವಾಗುತ್ತದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಟ್ಯಾಗ್ ಮಾಡಲಾದ ವಸ್ತುಗಳನ್ನು ಟ್ರಾಕ್ ಮಾಡಲು ಹೊಸ ಸಾಧನ ಬಿಡುಗಡೆಗೊಳಿಸಿದ ಆ್ಯಪಲ್

ಆ್ಯಪಲ್ ಕಂಪನಿಯು ಈಗ ಆ್ಯಪಲ್ ಉತ್ಪನ್ನಗಳನ್ನು ಮಾತ್ರವಲ್ಲದೆ ಕಾರಿನಲ್ಲಿರುವ ಇತರ ಬೆಲೆ ಬಾಳುವ ವಸ್ತುಗಳನ್ನು ಸಹ ಟ್ರ್ಯಾಕ್ ಮಾಡುವ ಉತ್ಪನ್ನವನ್ನು ಅಭಿವೃದ್ಧಿಪಡಿಸಿದೆ.

ಟ್ಯಾಗ್ ಮಾಡಲಾದ ವಸ್ತುಗಳನ್ನು ಟ್ರಾಕ್ ಮಾಡಲು ಹೊಸ ಸಾಧನ ಬಿಡುಗಡೆಗೊಳಿಸಿದ ಆ್ಯಪಲ್

ಆ್ಯಪಲ್ ಕ್ಲೌಡ್'ನಲ್ಲಿ ಸೇವ್ ಆದ ನಂತರ ಆ್ಯಪಲ್ ಏರ್‌ಟ್ಯಾಕ್ ತನ್ನ ಇತ್ತೀಚಿನ ಲೋಕೇಶನ್ ಅನ್ನು ಐಫೋನ್‌ನೊಂದಿಗೆ ಸಂವಹನ ಮಾಡುತ್ತದೆ. ಇದರ ನಂತರ ಬಳಕೆದಾರರು ಫೈಂಡ್ ಮೈ ಐಫೋನ್ ಅಪ್ಲಿಕೇಶನ್ ಬಳಸಿ ಏರ್‌ಟ್ಯಾಗ್‌ ಕೊನೆಯ ಬಾರಿ ಸೇವ್ ಆದ ಲೋಕೇಶನ್ ತಿಳಿಯಬಹುದು.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಟ್ಯಾಗ್ ಮಾಡಲಾದ ವಸ್ತುಗಳನ್ನು ಟ್ರಾಕ್ ಮಾಡಲು ಹೊಸ ಸಾಧನ ಬಿಡುಗಡೆಗೊಳಿಸಿದ ಆ್ಯಪಲ್

ವಾಹನವನ್ನು ಟ್ರ್ಯಾಕ್ ಮಾಡಲು ಸಹ ಏರ್‌ಟ್ಯಾಗ್ ಸಾಧನವನ್ನು ಬಳಸಬಹುದೆಂದು ಆ್ಯಪಲ್ ಕಂಪನಿ ಹೇಳಿಕೊಂಡಿದೆ. ಇದೇ ವೇಳೆ ಕಾರನ್ನು ದೊಡ್ಡ ಪಾರ್ಕಿಂಗ್ ಸ್ಥಳಗಳಲ್ಲಿ ಹುಡುಕಲು ಈ ಸಾಧನವು ನೆರವಾಗುತ್ತದೆ.

ಟ್ಯಾಗ್ ಮಾಡಲಾದ ವಸ್ತುಗಳನ್ನು ಟ್ರಾಕ್ ಮಾಡಲು ಹೊಸ ಸಾಧನ ಬಿಡುಗಡೆಗೊಳಿಸಿದ ಆ್ಯಪಲ್

ಈ ಏರ್‌ಟ್ಯಾಗ್‌ನಲ್ಲಿ ಬಳಸಿರುವ ಬಲಶಾಲಿಯಾದ ಹಾರ್ಡ್ ವೇರ್ ಕಾರಣದಿಂದಾಗಿ ಆ್ಯಪಲ್ ಏರ್‌ಟ್ಯಾಗ್‌ನ ಬ್ಯಾಟರಿ ಸುಮಾರು 1 ವರ್ಷ ಇರುತ್ತದೆ. ಕಂಪನಿಯು ನೀಡಿರುವ ಮಾಹಿತಿಯ ಪ್ರಕಾರ ಆ್ಯಪಲ್ ಏರ್‌ಟ್ಯಾಗ್ ಮಾರಾಟವು ಈ ತಿಂಗಳ 30ರಿಂದ ಆರಂಭವಾಗಲಿದೆ.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಟ್ಯಾಗ್ ಮಾಡಲಾದ ವಸ್ತುಗಳನ್ನು ಟ್ರಾಕ್ ಮಾಡಲು ಹೊಸ ಸಾಧನ ಬಿಡುಗಡೆಗೊಳಿಸಿದ ಆ್ಯಪಲ್

ಆ್ಯಪಲ್ ಏರ್‌ಟ್ಯಾಗ್‌ನ ಬೆಲೆ ರೂ.3,190ಗಳಿಂದ ಆರಂಭವಾಗಲಿದೆ. ಈ ಟ್ಯಾಗ್‌ನ ನಾಲ್ಕು ಯುನಿಟ್ ಪ್ಯಾಕ್‌ನ ಬೆಲೆ ರೂ.10,900ಗಳಾಗಿದೆ. ಕೀ, ಪರ್ಸ್'ಗಳಂತಹ ಪ್ರಮುಖ ವಸ್ತುಗಳನ್ನು ಆ್ಯಪಲ್ ಏರ್‌ಟ್ಯಾಗ್ ಮೂಲಕ ಸುಲಭವಾಗಿ ಪತ್ತೆಹಚ್ಚಬಹುದು.

ಟ್ಯಾಗ್ ಮಾಡಲಾದ ವಸ್ತುಗಳನ್ನು ಟ್ರಾಕ್ ಮಾಡಲು ಹೊಸ ಸಾಧನ ಬಿಡುಗಡೆಗೊಳಿಸಿದ ಆ್ಯಪಲ್

ಬೈಕ್ ಅಥವಾ ಕಾರನ್ನು ಟ್ರ್ಯಾಕ್ ಮಾಡಲು ಸಹ ಈ ಏರ್‌ಟ್ಯಾಗ್ ಬಳಸಬಹುದು. ಆದರೆ ಐಫೋನ್ ವ್ಯಾಪ್ತಿಯಲ್ಲಿರುವವರೆಗೆ ಮಾತ್ರ ಅವುಗಳನ್ನು ಟ್ರ್ಯಾಕ್ ಮಾಡಬಹುದು. ಅವುಗಳನ್ನು ಟ್ಯ್ರಾಕ್ ಮಾಡಲು ಯಾವುದೇ ಐಫೋನ್‌ನೊಂದಿಗೆ ಕನೆಕ್ಟ್ ಮಾಡಬಹುದು.

Most Read Articles

Kannada
English summary
Apple launches new device to track tagged items. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X